ವಾಷಿಂಗ್ಟನ್: ಹಾರುತ್ತಿದ್ದ ವಿಮಾನದಲ್ಲಿ 14 ವರ್ಷದ ಬಾಲಕಿ ಎದುರು ಹಸ್ತಮೈಥುನ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ (Masturbation On Flight) ಅಮೆರಿಕದಲ್ಲಿ ಭಾರತ ಮೂಲದ ವೈದ್ಯನನ್ನು ಪೊಲೀಸರು ಬಂಧಿಸಿದ್ದಾರೆ. ಭಾರತ ಮೂಲದ ವೈದ್ಯ ಸುದೀಪ್ತ ಮೊಹಂತಿ ಎಂಬುವನನ್ನು ಬಂಧಿಸಲಾಗಿದೆ ಎಂದು ಅಮೆರಿಕದ ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ (FBI Baston) ತಿಳಿಸಿದೆ.
2022ರ ಮೇ ತಿಂಗಳಲ್ಲಿ ಬ್ಯಾಸ್ಟನ್ನಿಂದ ಹೊನೊಲುಲುವಿಗೆ ತೆರಳುತ್ತಿದ್ದ ವಿಮಾನದಲ್ಲಿ ಡಾ.ಸುದೀಪ್ತ ಮೊಹಂತಿಯು ಹಸ್ತಮೈಥುನ ಮಾಡಿದ ಪ್ರಕರಣದ ತನಿಖೆ ಬಳಿಕ ಆತನನ್ನು ಬಂಧಿಸಲಾಗಿದೆ. ಡಾ.ಸುದೀಪ್ತ ಮೊಹಂತಿಯು ಮಹಿಳೆಯೊಬ್ಬರ ಜತೆ ಪ್ರಯಾಣಿಸುತ್ತಿದ್ದರು. ಇವರಿಬ್ಬರ ಪಕ್ಕದ ಸೀಟ್ನಲ್ಲಿ ಬಾಲಕಿಯೊಬ್ಬಳು ಕುಳಿತಿದ್ದಳು. ಬಾಲಕಿ ಕುಳಿತಿದ್ದರೂ ಹಸ್ತಮೈಥುನ ಮಾಡಿಕೊಂಡ ಪ್ರಕರಣವು ಗಂಭೀರತೆ ಪಡೆದಿತ್ತು.
ಎಫ್ಬಿಐ ಪ್ರಕಟಣೆ
ವಿಮಾನ ಪ್ರಯಾಣದ ಮಧ್ಯೆಯೇ ಮೈಮೇಲೆ ಚಾದರ ಹೊದ್ದುಕೊಂಡ ಸುದೀಪ್ತ ಮೊಹಂತಿಯು ಹಸ್ತಮೈಥುನ ಮಾಡಿಕೊಳ್ಳಲು ಆರಂಭಿಸಿದ್ದಾನೆ. ಇದೇ ವೇಳೆ ಚಾದರ ಕೆಳಗೆ ಬಿದ್ದಿದೆ. ಅಷ್ಟಾದರೂ ಮೊಹಂತಿ ಹಸ್ತಮೈಥುನ ಮುಂದುವರಿಸಿದ್ದಾಣೆ. ಇದರಿಂದ ವಿಚಲಿತಗೊಂಡ ಬಾಲಕಿಯು ತನ್ನ ಅಜ್ಜ-ಅಜ್ಜಿ ಹಾಗೂ ವಿಮಾನದ ಸಿಬ್ಬಂದಿಗೆ ದೂರು ನೀಡಿದ್ದಾಳೆ. ಅಸಭ್ಯ ವರ್ತನೆ ಕುರಿತು ಬಳಿಕ ದೂರು ದಾಖಲಾಗಿತ್ತು. ದೂರಿನ ಅನ್ವಯ ತನಿಖೆ ನಡೆಸಿದ ಎಫ್ಬಿಐ ಅಧಿಕಾರಿಗಳು ವೈದ್ಯನನ್ನು ಬಂಧಿಸಿದ್ದಾರೆ.
ಇದನ್ನೂ ಓದಿ: Masturbation Case: ಮೆಟ್ರೊ ನಿಲ್ದಾಣದಲ್ಲಿ ಮಹಿಳೆ ಎದುರು ಹಸ್ತಮೈಥುನ ಮಾಡಿಕೊಂಡವನ ಸೆರೆ ಹಿಡಿದ ಸಿಸಿಟಿವಿ!
ಡಾ.ಸುದೀಪ್ತ ಮೊಹಂತಿಯು ಮಸಾಚುಸೆಟ್ಸ್ನಲ್ಲಿ ವೈದ್ಯನಾಗಿ ಕಾರ್ಯನಿರ್ವಹಿಸುತ್ತಿದ್ದಾನೆ ಎಂದು ತಿಳಿದುಬಂದಿದೆ. “ಎಫ್ಬಿಐ ಅಧಿಕಾರಿಗಳು ಯಾವುದೇ ಪ್ರಕರಣವನ್ನು, ಅದರಲ್ಲೂ ವಿಮಾಣದಲ್ಲಿ ದುರ್ವರ್ತನೆ ತೋರಿದ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸುತ್ತದೆ. ಹಾಗಾಗಿಯೇ, ವಿಮಾನದಲ್ಲಿ ಅನುಚಿತವಾಗಿ ವರ್ತನೆ ತೋರಿದ ಡಾ.ಸುದೀಪ್ತ ಮೊಹಂತಿಯನ್ನು ಬಂಧಿಸಲಾಗಿದೆ” ಎಂದು ಎಫ್ಬಿಐ ಟ್ವೀಟ್ ಮಾಡಿದೆ. ಕೆಲ ತಿಂಗಳ ಹಿಂದಷ್ಟೇ ದೆಹಲಿಗೆ ಹೊರಟಿದ್ದ ವಿಮಾನದಲ್ಲಿ ಭಾರತದ ವ್ಯಕ್ತಿಯೊಬ್ಬ ಮಹಿಳೆ ಮೇಲೆ ಮೂತ್ರ ವಿಸರ್ಜನೆ ಮಾಡಿ ಜೈಲು ಸೇರಿದ್ದ. ವಿಮಾನದಲ್ಲಿ ಇಂತಹ ವರ್ತನೆ ತೋರುವ ಪ್ರಕರಣಗಳು ಇತ್ತೀಚೆಗೆ ಜಾಸ್ತಿಯಾಗಿವೆ.