Site icon Vistara News

US Midterm Elections | ಅಮೆರಿಕ ಚುನಾವಣೆಯಲ್ಲಿ ಗೆದ್ದು ಇತಿಹಾಸ ಬರೆದ 23 ವರ್ಷದ ಭಾರತ ಮೂಲದ ನಬೀಲಾ ಸೈಯದ್

Nabeela

ವಾಷಿಂಗ್ಟನ್‌: ಅಮೆರಿಕದಲ್ಲಿ ಇತ್ತೀಚೆಗೆ ನಡೆದ ಮಧ್ಯಂತರ ಚುನಾವಣೆಯಲ್ಲಿ ಭಾರತದ ಮೂಲದ, ಕೇವಲ 23 ವರ್ಷದ ನಬೀಲಾ ಸೈಯದ್‌ (Nabeela Syed) ಇತಿಹಾಸ ಸೃಷ್ಟಿಸಿದ್ದಾರೆ. ಮಧ್ಯಂತರ ಚುನಾವಣೆಯಲ್ಲಿ ಡೆಮಾಕ್ರಟಿಕ್‌ ಪಕ್ಷದ ನಬೀಲಾ ಸೈಯದ್‌ ಅವರು ಗೆಲುವು ಸಾಧಿಸಿದ್ದು, ಅಮೆರಿಕದ ಜನಪ್ರತಿನಿಧಿಗಳ ಸಭೆ (House Of Representatives)ಗೆ ಆಯ್ಕೆಯಾದ ಅತಿ ಕಿರಿಯ ಸದಸ್ಯೆ ಎನಿಸಿದ್ದಾರೆ.

ರಿಪಬ್ಲಿಕ್‌ ಪಕ್ಷದ ಕ್ರಿಸ್‌ ಬೋಸ್‌ ಅವರ ವಿರುದ್ಧ ಗೆಲುವು ಸಾಧಿಸಿದ್ದಾರೆ. ಶೇ.52.3ರಷ್ಟು ಮತ ಪಡೆಯುವ ಮೂಲಕ ಮುನ್ನಡೆ ಸಾಧಿಸಿದ್ದಾರೆ. ಈ ಕುರಿತು ನಬೀಲಾ ಸೈಯದ್‌ ಅವರೇ ಮಾಹಿತಿ ನೀಡಿದ್ದು, “ನನ್ನ ಹೆಸರು ನಬೀಲಾ ಸೈಯದ್.‌ ನಾನು 23 ವರ್ಷದ ಮುಸ್ಲಿಂ ಯುವತಿ. ನಾನು ಭಾರತ ಮೂಲದವಳಾಗಿದ್ದೇನೆ. ಸಬ್‌ಅರ್ಬನ್‌ ಜಿಲ್ಲೆಯಲ್ಲಿ ನಾನು ಗೆಲುವು ಸಾಧಿಸಿದ್ದೇನೆ” ಎಂದು ತಿಳಿಸಿದ್ದಾರೆ.

“ನಾನು ಜನವರಿಯಲ್ಲಿ ಪ್ರಮಾಣವಚನ ಸ್ವೀಕರಿಸಲಿದ್ದೇನೆ. ನಾನು ಹೌಸ್‌ ಆಫ್‌ ರೆಪ್ರೆಸೆಂಟೇಟಿವ್ಸ್‌ನ ಕಿರಿಯ ಸದಸ್ಯೆ ಎನಿಸಲಿದ್ದೇನೆ. ಇಂತಹ ಗೆಲುವಿಗೆ ಕಾರಣವಾದ ಎಲ್ಲರಿಗೂ ಧನ್ಯವಾದಗಳು. ಪ್ರಜಾಪ್ರಭುತ್ವವನ್ನು ಬಲಪಡಿಸುವ ದಿಸೆಯಲ್ಲಿ ಕಾರ್ಯನಿರ್ವಹಿಸುತ್ತೇನೆ” ಎಂದಿದ್ದಾರೆ.

ಇದನ್ನೂ ಓದಿ | US Midterm Elections | ಜನಪ್ರತಿನಿಧಿಗಳ ಸಭೆಯ 199 ಸೀಟುಗಳು ರಿಪಬ್ಲಿಕ್, 172 ಡೆಮಾಕ್ರಟಿಕ್ ಪಾಲು!

Exit mobile version