Site icon Vistara News

Salary hike | ಭಾರತದ ಉದ್ಯೋಗಿಗಳಿಗೆ ಶೇ.15ರಿಂದ 30ರಷ್ಟು ವೇತನ ಏರಿಕೆ: ಸಮೀಕ್ಷೆ

salary hike @ India

ನವದೆಹಲಿ: ಭಾರತೀಯ ನೌಕರ ವರ್ಗಕ್ಕೆ ಇದೊಂದು ಗುಡ್ ನ್ಯೂಸ್. ಆರ್ಥಿಕ ಹಿಂಜರಿತದ ಭೀತಿಯ ನಡುವೆಯೂ ಪ್ರಸಕ್ತ ಸಾಲಿನಲ್ಲಿ ಭಾರತದಲ್ಲಿ ಪ್ರತಿಭಾನ್ವಿತ ನೌಕರರು ಶೇ.15ರಿಂದ 30ರವರೆಗೆ ವೇತನ ಹೆಚ್ಚಳವನ್ನು(salary hike) ಪಡೆಯಲಿದ್ದಾರೆ ಎಂಬ ಸಂಗತಿ ಸಮೀಕ್ಷೆಯೊಂದರಿಂದ ಗೊತ್ತಾಗಿದೆ.

ಕೋರ್ನ್ ಫೆರಿ ಎಂಬ ಸಲಹಾ ಸಂಸ್ಥೆಯು ಈ ಕುರಿತು ಸಮೀಕ್ಷೆ ನಡೆಸಿದ್ದು, ಏಷ್ಯಾದಲ್ಲೇ ಭಾರತದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ವೇತನ ಹೆಚ್ಚಳವಾಗುವ ಸಾಧ್ಯತೆಗಳಿವೆ. ಕಳೆದ ವರ್ಷ ಸರಾಸರಿ ಶೇ.9.4 ರಷ್ಟು ಏರಿಕೆ ಕಂಡಿದ್ದ ಭಾರತದಲ್ಲಿ ಪ್ರಸಕ್ತ ವರ್ಷದಲ್ಲಿ ಸರಾಸರಿ ಶೇ.9.8% ರಷ್ಟು ವೇತನ ಹೆಚ್ಚಾಗುತ್ತದೆ. ಹೈಟೆಕ್ ಕೈಗಾರಿಕೆಗಳು, ಜೀವ ವಿಜ್ಞಾನಗಳು ಮತ್ತು ಆರೋಗ್ಯ ಸೇವೆ ವಲಯದಲ್ಲಿ ಸರಾಸರಿ ಶೇ.10ಕ್ಕಿಂತ ಹೆಚ್ಚಿನ ವೇತನವನ್ನು ಕಾಣಬಹುದಾಗಿದೆ.

ಭಾರತವು ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕತೆಗಳಲ್ಲಿ ಒಂದಾಗಿದೆ. ಇದು ಅತ್ಯಂತ ಹೆಚ್ಚು ಜನಸಂಖ್ಯೆ ಹೊಂದಿರುವುದರಿಂದ ಪ್ರತಿ ವರ್ಷ ಹೊಸ ಹೊಸ ಉದ್ಯೋಗಿಗಳು ಪ್ರವೇಶಿಸುವುದರಿಂದ ನಿರುದ್ಯೋಗ ಹೆಚ್ಚಳಕ್ಕೆ ಕಾರಣವಾಗಿದೆ. ಇಷ್ಟಾಗಿಯೂ ಪ್ರತಿಭಾನ್ವಿತ ಉದ್ಯೋಗಿಗಳಿಗೆ ಮನ್ನಣೆ ಇದ್ದೇ ಇದೆ ಎಂದು ಸಲಹಾ ಸಂಸ್ಥೆಯು ತನ್ನ ವರದಿಯಲ್ಲಿ ತಿಳಿಸಿದೆ.

ಇದನ್ನೂ ಓದಿ | Infosys | ಇನ್ಫೋಸಿಸ್‌ನಲ್ಲಿ ಟೆಕ್ಕಿಗಳಿಗೆ 25% ತನಕ ವೇತನ ಹೆಚ್ಚಳ ಘೋಷಣೆ

Exit mobile version