Site icon Vistara News

Tiranga On Burj Khalifa: ಬುರ್ಜ್‌ ಖಲೀಫಾ ಮೇಲೆ ಕಂಗೊಳಿಸಿದ ತಿರಂಗಾ, ತನ್ನ ಧ್ವಜ ಇಲ್ಲದ್ದಕ್ಕೆ ಪಾಕ್‌ಗೆ ಭಾರಿ ಮುಖಭಂಗ?

Tricolour On Burj Khalifa

Indian Flag Displayed At Burj Khalifa After Video of Pakistani Meltdown on Independence Day

ದುಬೈ: ವಿಶ್ವದ ಅತಿ ಎತ್ತರದ ಕಟ್ಟಡ ಎಂದೇ ಖ್ಯಾತಿಯಾಗಿರುವ ದುಬೈನ ಬುರ್ಜ್‌ ಖಲೀಫಾ ಮೇಲೆ ಭಾರತದ ತ್ರಿವರ್ಣ ಧ್ವಜದ ಚಿತ್ತಾರ ಮೂಡಿದೆ. ಭಾರತದ 77ನೇ ಸ್ವಾತಂತ್ರ್ಯ ದಿನಾಚರಣೆ (Independence Day 2023) ಹಿನ್ನೆಲೆಯಲ್ಲಿ ಬುರ್ಜ್‌ ಖಲೀಫಾ ಕಟ್ಟಡದ ಮೇಲೆ ತಿರಂಗಾ ಧ್ವಜವನ್ನು (Tiranga On Burj Khalifa) ಬೆಳಕಿನಲ್ಲಿ ಚಿತ್ತಾರ ಮೂಡಿಸಿರುವ ವಿಡಿಯೊ ಭಾರಿ ವೈರಲ್‌ ಆಗಿದೆ. ಭಾರತೀಯರಿಂದ ಭಾರಿ ಮೆಚ್ಚುಗೆಯೂ ವ್ಯಕ್ತವಾಗಿದೆ. ಪಾಕಿಸ್ತಾನದ ರಾಷ್ಟ್ರಧ್ವಜದ ಬೆಳಕಿನ ಚಿತ್ತಾರ ಮೂಡಿಸದ ಹಿನ್ನೆಲೆಯಲ್ಲಿ ಬುರ್ಜ್‌ ಖಲೀಫಾ ಬಳಿ ಪಾಕಿಸ್ತಾನಿಯರು ಗಲಾಟೆ ಮಾಡಿದ ಮರುದಿನವೇ ತಿರಂಗಾ ಮೂಡಿದೆ. ಇದು ಪಾಕಿಸ್ತಾನಿಯರು ಇನ್ನಷ್ಟು ಕುದಿಯಲು ಕಾರಣವಾಗಿದೆ ಎಂದು ತಿಳಿದುಬಂದಿದೆ. ಹಾಗೆಯೇ, ಪಾಕಿಸ್ತಾನಕ್ಕೆ ಮೊದಲಿಗೆ ಭಾರಿ ಮುಖಭಂಗವಾಗಿದೆ ಎಂದು ತಿಳಿದುಬಂದಿದೆ.

ಬೃಹತ್‌ ಬುರ್ಜ್‌ ಖಲೀಫಾ ಮೇಲೆ ಭಾರತದ ತಿರಂಗಾ ಮೂಡುವ ವಿಡಿಯೊವನ್ನು ಮುಫದ್ದಲ್‌ ವೋಹ್ರಾ ಎಂಬುವರು ಸಾಮಾಜಿಕ ಜಾಲತಾಣವಾದ ಎಕ್ಸ್‌ನಲ್ಲಿ (ಮೊದಲು ಟ್ವಿಟರ್)‌ ಹಂಚಿಕೊಂಡಿದ್ದಾರೆ. ಬ್ಯಾಕ್‌ಗ್ರೌಂಡ್‌ನಲ್ಲಿ ಜನಗಣಮನ ಹಾಡು ಕೂಡ ಕೇಳಿದ್ದು, ಜನ ಭಾರಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. “ಬುರ್ಜ್‌ ಖಲೀಫಾ ಮೇಲೆ ಭಾರತದ ತಿರಂಗಾ ಮೂಡುವುದನ್ನು ನೋಡಿದರೆ ಮೈನವಿರೇಳಿಸುತ್ತದೆ” ಎಂದು ಹಲವರು ಕಮೆಂಟ್‌ ಮಾಡಿದ್ದಾರೆ. ಹೆಚ್ಚಿನ ಭಾರತೀಯರು ಇದೊಂದು ಅದ್ಭುತ ಕ್ಷಣ ಎಂದಿದ್ದಾರೆ.

ಪಾಕಿಸ್ತಾನಿಯರ ಆಕ್ರೋಶ ಏಕೆ?

ಭಾರತಕ್ಕಿಂತ ಒಂದು ದಿನ ಮೊದಲು ಅಂದರೆ, ಆಗಸ್ಟ್‌ 14ರ ಮಧ್ಯರಾತ್ರಿ ಪಾಕಿಸ್ತಾನವು ಸ್ವಾತಂತ್ರ್ಯ ದಿನ ಆಚರಿಸುತ್ತದೆ. ಹಾಗಾಗಿ, ಬುರ್ಜ್‌ ಖಲೀಫಾ ಮೇಲೆ ಪಾಕಿಸ್ತಾನದ ರಾಷ್ಟ್ರಧ್ವಜದ ಬೆಳಕಿನ ಚಿತ್ತಾರ ಮೂಡಲಿದೆ ಎಂಬ ವಿಶ್ವಾಸದಿಂದ ನೂರಾರು ಪಾಕಿಸ್ತಾನಿಯರು ಆಗಸ್ಟ್‌ 14ರಂದು ಮಧ್ಯರಾತ್ರಿ ಬುರ್ಜ್‌ ಖಲೀಫಾ ಬಳಿ ಸೇರಿದ್ದರು. ಆದರೆ, ಮಧ್ಯರಾತ್ರಿ ಬುರ್ಜ್‌ ಖಲೀಫಾ ಮೇಲೆ ಪಾಕ್‌ ರಾಷ್ಟ್ರಧ್ವಜದ ಚಿತ್ರ ಮೂಡದ ಕಾರಣ ಅವರು ಅಸಮಾಧಾನ ವ್ಯಕ್ತಪಡಿಸಿದ್ದರು. ಆಕ್ರೋಶ ಹೊರಹಾಕಿದ್ದರು.‌

ಇದನ್ನೂ ಓದಿ: Independence Day 2023: ವಿಶ್ವಕರ್ಮ ಯೋಜನೆ, ಮಹಿಳಾ ಸ್ವಸಹಾಯ ಸಂಘ ಘೋಷಿಸಿದ ಮೋದಿ; ಏನಿವು? ಯಾರಿಗೆ ಉಪಯೋಗ?

ಬುರ್ಜ್‌ ಖಲೀಫಾ ಇನ್‌ಸ್ಟಾಗ್ರಾಂ ಪೋಸ್ಟ್

ಬಳಿಕ ಮೂಡಿದ ಪಾಕ್‌ ಧ್ವಜ

ವಾಸ್ತವದಲ್ಲಿ, ಪಾಕಿಸ್ತಾನದ ರಾಷ್ಟ್ರಧ್ವಜವು ಬುರ್ಜ್‌ ಖಲೀಫಾ ಮೇಲೆ ಮೂಡಿದೆ. ಈ ಕುರಿತು ಬುರ್ಜ್‌ ಖಲೀಫಾ ಇನ್‌ಸ್ಟಾಗ್ರಾಂನಲ್ಲಿ ಪಾಕ್‌ ಧ್ವಜ ಮೂಡಿದ ವಿಡಿಯೊವನ್ನು ಹಂಚಿಕೊಂಡಿದೆ. “ಪಾಕಿಸ್ತಾನದ ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆಯಲ್ಲಿ ಬುರ್ಜ್‌ ಖಲೀಫಾ ಮೇಲೆ ಅದರ ಧ್ವಜದ ಬೆಳಕಿನ ಚಿತ್ತಾರ ಮೂಡಿಸಲಾಗಿದೆ. ಪಾಕಿಸ್ತಾನಕ್ಕೆ ಸ್ವಾತಂತ್ರ್ಯ ದಿನದ ಶುಭಾಶಯಗಳು” ಎಂದು ಪೋಸ್ಟ್‌ ಮಾಡಲಾಗಿದೆ. ಆದರೆ, ಚಿತ್ತಾರ ಮೂಡಿದ ಸಮಯದ ಬಗ್ಗೆ ನಿಖರ ಮಾಹಿತಿ ಇಲ್ಲ.

Exit mobile version