Site icon Vistara News

Ban On Rice Export: ಎಲೆಕ್ಷನ್ ಆಟ; ಅಕ್ಕಿ ರಫ್ತು ಮೇಲೆ ಕೇಂದ್ರ ನಿಷೇಧದ ಹೂಟ! ಜಾಗತಿಕ ಮಾರುಕಟ್ಟೆಯಲ್ಲಿ ದರ ಏರಿಕೆ?

Rice

ನವದೆಹಲಿ: ಸ್ಥಳೀಯ ಮಾರುಕಟ್ಟೆಯಲ್ಲಿ (Local Market) ಬೆಲೆ ಏರಿಕೆಯನ್ನು (Price Soar) ತಡೆಯುವುದಕ್ಕಾಗಿ ಒಕ್ಕೂಟ ಸರ್ಕಾರವು(Union Government of India), ಅಕ್ಕಿ ರಫ್ತು ಮೇಲೆ ನಿಷೇಧ (Ban on Rice Export) ಹೇರುವ ಸಾಧ್ಯತೆಗಳಿವೆ. ಒಂದೊಮ್ಮೆ, ನಿಷೇಧ ಜಾರಿಯಾದರೆ ಜಾಗತಿಕ ಮಾರುಕಟ್ಟೆಯಲ್ಲಿ (World Market) ಅಕ್ಕಿ ಬೆಲೆ ಗಗನಮುಖಿಯಾಗಲಿದೆ. ಎಲ್ ನಿನೋ ಪರಿಣಾಮ ಈಗಾಗಲೇ ಅಕ್ಕಿ ಉತ್ಪಾದನೆ ಕುಂಠಿತವಾಗಿದೆ. ಅದರ ಮಧ್ಯೆ, ಭಾರತವು ಅಕ್ಕಿ ರಫ್ತು ನಿರ್ಬಂಧಿಸಿದರೆ, ಜಾಗತಿಕ ಮಾರುಕಟ್ಟೆಯಲ್ಲಿ ಪರಿಣಾಮ ಬೀರಲಿದೆ. ಯಾಕೆಂದರೆ, ಇಡೀ ಜಗತ್ತಿ ಅಕ್ಕಿ ರಫ್ತು ಮಾಡುವಲ್ಲಿ ಭಾರತವು ಮಹತ್ವದ ಪಾತ್ರ ನಿರ್ವಹಿಸುತ್ತಿದೆ.

ಬಾಸ್ಮತಿಯೇತರ ಅಕ್ಕಿ ರಫ್ತು ನಿರ್ಬಂಧಕ್ಕೆ ಅಧಿಕಾರಿಗಳು ಚಿಂತನೆ ನಡೆಸಿದ್ದಾರೆ ಎಂದು ಬ್ಲೂಮ್‌ಬರ್ಗ್ ವರದಿ ಮಾಡಿದೆ. ಇದೇ ವರದಿಯನ್ನು ಅನೇಕ ಮಾಧ್ಯಮಗಳು ಉಲ್ಲೇಖಿಸಿ ಸುದ್ದಿ ಮಾಡಿವೆ. ಮುಂಬರುವ ಚುನಾವಣೆಗಳ ಮೇಲೆ ಬೆಲೆ ಏರಿಕೆ ಪರಿಣಾಮ ಬೀರಲಿದೆ ಮತ್ತು ಹಣದುಬ್ಬರ ನಿಯಂತ್ರಣವಾಗಿದೆ. ಹಾಗಾಗಿ, ಅಕ್ಕಿ ರಫ್ತು ನಿರ್ಬಂಧಿಸಿ, ಸ್ಥಳೀಯ ಮಾರುಕಟ್ಟೆಯಲ್ಲಿ ಅಕ್ಕಿ ದರವನ್ನು ನಿಯಂತ್ರಣಕ್ಕೆ ತರುವುದು ಸರ್ಕಾರದ ಉದ್ದೇಶವಾಗಿದೆ.

ಅಕ್ಕಿ ರಫ್ತು ನಿಷೇಧಿಸುವ ಭಾರತದ ನಿರ್ಧಾರವು ಜಾಗತಿಕ ಮಾರುಕಟ್ಟೆಯ ಮೇಲೆ ಗಮನಾರ್ಹ ಪರಿಣಾಮವನ್ನು ಬೀರುತ್ತದೆ. ಈ ನಿರ್ಧಾರವು ಜಾರಿಯಾದರೆ ಭಾರತದಿಂದ ರಫ್ತಾಗುವ ಶೇ.80 ಅಕ್ಕಿ ವಹಿವಾಟು ಮೇಲೆ ಪ್ರತಿಕೂಲ ಪರಿಣಾಮ ಬೀರಲಿದೆ. ರಫ್ತು ನಿರ್ಬಂಧವು ಸ್ಥಳೀಯ ಮಾರುಕಟ್ಟೆಯಲ್ಲಿ ದರಗಳನ್ನುಕಡಿಮೆಗೊಳಿಸಬಹುದಾದರೂ, ಜಾಗತಿಕ ವೆಚ್ಚಗಳು ಇನ್ನಷ್ಟು ಹೆಚ್ಚಾಗುವ ಅಪಾಯವನ್ನು ಇದು ಹೊಂದಿದೆ.

ಜಾಗತಿಕ ಜನಸಂಖ್ಯೆಯ ಸರಿಸುಮಾರು ಅರ್ಧದಷ್ಟು ಜನರಿಗೆ ಅಕ್ಕಿ ನಿರ್ಣಾಯಕ ಆಹಾರ ಕ್ರಮವಾಗಿದೆ. ಪ್ರಪಂಚದ ಒಟ್ಟು ಅಕ್ಕಿ ಬಳಕೆಯ ಪೈಕಿ ಏಷ್ಯಾವೊಂದೇ ಶೇ.90ರಷ್ಟು ಬಳಸುತ್ತದೆ. ಹಾಗಾಗಿ, ಭಾರತ ಸರ್ಕಾರವು ಏನಾದರೂ ಅಕ್ಕಿ ರಫ್ತು ನಿಷೇಧ ಮಾಡಿದರೆ, ಜಾಗತಿಕವಾಗಿ ದರ ಏರಿಕೆಯಾಗುವುದು ಬಹುತೇಕ ಖಚಿತವಾಗಿದೆ.

ಜಾಗತಿಕ ಅಕ್ಕಿ ವ್ಯಾಪಾರದಲ್ಲಿ ಭಾರತವು ಪ್ರಮುಖ ರಾಷ್ಟ್ರವಾಗಿದೆ. ಶೇ.40ರಷ್ಟು ಪಾಲು ಹೊಂದಿದೆ. ಇತ್ತೀಚಿನ ದಿನಗಳಲ್ಲಿ, ಕೆಲವು ಅಕ್ಕಿ ತಳಿಗಳ ವ್ಯಾಪಾರದ ಮೇಲೆ ನಿಯಂತ್ರಣವನ್ನು ಬಲಪಡಿಸಲು ಸರ್ಕಾರವು ಕ್ರಮಗಳನ್ನು ತೆಗೆದುಕೊಂಡಿದೆ. ಭಾರತವು 2022 ರಲ್ಲಿ ಬ್ರೋಕನ್ ರೈಸ್ (ನುಚ್ಚು ಅಕ್ಕಿ) ರಫ್ತಿನ ಮೇಲೆ ನಿಷೇಧವನ್ನು ಜಾರಿ ಮಾಡಿತ್ತು. ಅಲ್ಲದೇ, ಬಿಳಿ ಮತ್ತು ಕಂದು ಅಕ್ಕಿ ಸಾಗಣೆ ಮೇಲೆ ಶೇ.20ರಷ್ಟು ಸುಂಕವನ್ನು ಹೇರಿತ್ತು. ರಷ್ಯಾ-ಉಕ್ರೇನ್ ಯುದ್ಧದ ಪರಿಣಾಮ ಗೋಧಿ ಮತ್ತು ಜೋಳ ಸಾಗಣೆ ಸಾಧ್ಯವಾಗದ್ದರಿಂದ ಹೆಚ್ಚು ತೊಂದರೆಯಾಗಿತ್ತು.

ಈ ಸುದ್ದಿಯನ್ನೂ ಓದಿ: CM Siddaramaiah: ರಾಜ್ಯಕ್ಕೆ ಅಕ್ಕಿಗಾಗಿ ಮುಂದುವರಿದ ಜಟಾಪಟಿ, ಸಿಗದ ಕೇಂದ್ರ ಆಹಾರ ಸಚಿವ, ಅನ್ನಭಾಗ್ಯ ಫಲಾನುಭವಿಗಳು ಅತಂತ್ರ

ಈ ಮಧ್ಯೆ ಅತಿ ಹೆಚ್ಚು ಅಕ್ಕಿ ಆಮದು ಮಾಡಿಕೊಳ್ಳುವ ಇಂಡೋನೇಷ್ಯಾ, ಚೀನಾ ಮತ್ತು ಫಿಲಿಪ್ಪೀನ್ಸ್ ಭಾರೀ ಪ್ರಮಾಣದಲ್ಲಿ ಈ ಬಾರಿ ಅಕ್ಕಿಯನ್ನು ದಾಸ್ತಾನು ಮಾಡಿಕೊಂಡಿವೆ. ಕಳೆದ ಏಳು ವರ್ಷದಲ್ಲೇ ಇದೇ ಮೊದಲ ಬಾರಿಗೆ ಉಷ್ಣ ವಲಯದ ಫೆಸಿಪಿಕ್‌ನಲ್ಲಿ ಎಲ್‌ ನಿನೋ ಪರಿಣಾಮ ಕಾಣಿಸಿಕೊಂಡಿದೆ. ಹಾಗಾಗಿ, ಈ ರಾಷ್ಟ್ರಗಳು ಹೆಚ್ಚಿನ ಪ್ರಮಾಣದಲ್ಲಿ ಅಕ್ಕಿಯನ್ನು ದಾಸ್ತಾನು ಮಾಡಿಕೊಳ್ಳುತ್ತಿವೆ. ಎಲ್‌ ನಿನೋ ಬೆಳವಣಿಗೆಯಿಂದಾಗಿ ಕ್ಷಾಮ ಸೃಷ್ಟಿಯಾಗುವ ಸಾಧ್ಯತೆಗಳು ಹೆಚ್ಚಾಗಿವೆ.

ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version