Site icon Vistara News

Viral Video : ಇದು ರಿಯಲ್‌ ಕೆಜಿಎಫ್‌ ಕತೆ; ಸಮುದ್ರಕ್ಕೆ ಜಿಗಿದು 20 ಕೋಟಿ ರೂ. ಮೌಲ್ಯದ ಚಿನ್ನ ತೆಗೆದ ವಿಡಿಯೊ ಇಲ್ಲಿದೆ ನೋಡಿ!

Indian Coast Guard Jumps To Sea

Indian officials jump into sea to find ₹20-crore gold; video goes viral

ಚೆನ್ನೈ: ಕೆಜಿಎಫ್‌ನ ನರಾಚಿಯಲ್ಲಿ ಅಗೆದ ಚಿನ್ನವನ್ನು ಸಮುದ್ರಕ್ಕೆ ಬಿಸಾಡಿದ್ದನ್ನು ಕೆಜಿಎಫ್‌ ಚಾಪ್ಟರ್‌ 2 ಸಿನಿಮಾದಲ್ಲಿ ನೋಡಿದ್ದೇವೆ. ಆದರೆ, ಭಾರತೀಯ ಕರಾವಳಿ ಕಾವಲು ಪಡೆಯ ಸಿಬ್ಬಂದಿ ಸಮುದ್ರದಾಳಕ್ಕೆ ನೆಗೆದು 20.2 ಕೋಟಿ ರೂಪಾಯಿ ಮೌಲ್ಯದ 32.689 ಕೆ.ಜಿ ಚಿನ್ನವನ್ನು ಹೊರತೆಗೆಯುವ ಮೂಲಕ ಸಾಹಸ ಮಾಡಿದ್ದಾರೆ. ಈ ವಿಡಿಯೊ ಈಗ ವೈರಲ್‌ (Viral Video) ಆಗಿದೆ.

ತಮಿಳುನಾಡು ಕರಾವಳಿಯ ಗಲ್ಫ್‌ ಆಫ್‌ ಮನ್ನಾರ್‌ ಪ್ರದೇಶದಲ್ಲಿ ಕರಾವಳಿ ಪಡೆಯ ಸಿಬ್ಬಂದಿಯು ಸಮುದ್ರಕ್ಕೆ ನೆಗೆದು ಚಿನ್ನವನ್ನು ಜಪ್ತಿ ಮಾಡಿದ್ದಾರೆ. ಅಕ್ರಮವಾಗಿ ಸಾಗಣೆ ಮಾಡಿದ ಚಿನ್ನವನ್ನು ಸಮುದ್ರದಲ್ಲಿ ಮುಳುಗಿಸಲಾಗಿತ್ತು. ಇದನ್ನು ಕರಾವಳಿ ಪಡೆಯು ಯಶಸ್ವಿಯಾಗಿ ಹೊರತೆಗೆದಿದೆ.

ಇಲ್ಲಿದೆ ವಿಡಿಯೊ

ವಿದೇಶಿಗರು ಶ್ರೀಲಂಕಾದಿಂದ ಚಿನ್ನವನ್ನು ಅಕ್ರಮವಾಗಿ ಸಾಗಣೆ ಮಾಡುತ್ತಿದ್ದಾರೆ ಎಂಬ ಕುರಿತು ಮಾಹಿತಿ ಪಡೆದ ಕರಾವಳಿ ಪಡೆಯು ಕಾರ್ಯಾಚರಣೆ ಆರಂಭಿಸಿದೆ. ಮೊದಲಿಗೆ ಮೇ 30ರಂದು ಮೀನುಗಾರಿಕೆಯ ಹಡಗೊಂದನ್ನು ವಶಪಡಿಸಿಕೊಳ್ಳಲಾಗಿತ್ತು. ಇದಾದ ಬಳಿಕ ನಿಖರ ಮಾಹಿತಿ ಆಧರಿಸಿ ಕಾರ್ಯಾಚರಣೆ ತೀವ್ರಗೊಳಿಸಲಾಗಿದೆ. ಆಗ, ಅಕ್ರಮವಾಗಿ ಸಾಗಿಸುತ್ತಿದ್ದ ಚಿನ್ನವನ್ನು ಸಮುದ್ರದಲ್ಲಿ ಎಸೆಯಲಾಗಿದೆ ಎಂಬ ಮಾಹಿತಿ ದೊರೆತಿದೆ. ಇದಾದ ಬಳಿಕ ಚಿನ್ನವನ್ನು ಹೊರತೆಗೆಯಲಾಗಿದೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: MS Dhoni : ಎಂ.ಎಸ್.ಧೋನಿ ಭಗವದ್ಗೀತೆಯೊಂದಿಗೆ ಕಾಣಿಸಿಕೊಂಡ ಫೋಟೋ ವೈರಲ್

ಮೀನುಗಾರಿಕೆಯ ಹಡುಗಳನ್ನು ಬಳಸಿ ಕರಾವಳಿ ಪಡೆಯುವ ಬೃಹತ್‌ ಕಾರ್ಯಾಚರಣೆ ನಡೆಸಿರುವ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. ವಿಡಿಯೊ ವೈರಲ್‌ ಆಗುತ್ತಲೇ ಜನ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದ್ದಾರೆ.

Exit mobile version