ಲಂಡನ್: ಬ್ರಿಟನ್‌ನ ಪ್ರತಿಷ್ಠಿತ ಆಕ್ಸ್‌ಫರ್ಡ್ ಯುನಿವರ್ಸಿಟಿ ಹಾಸ್ಪಿಟಲ್ಸ್ ಎನ್‌ಎಚ್‌ಎಸ್ ಫೌಂಡೇಷನ್ ಟ್ರಸ್ಟ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ (CEO) ಭಾರತ ಮೂಲದ ಮೇಘನಾ ಪಂಡಿತ್ (Meghana Pandit) ಆಯ್ಕೆಯಾಗುವ ಮೂಲಕ ಇತಿಹಾಸ ಸೃಷ್ಟಿಸಿದ್ದಾರೆ. ಟ್ರಸ್ಟ್‌ನ ಸಿಇಒ ಆದ ಮೊದಲ ಮಹಿಳೆ ಹಾಗೂ ಯಾವುದೇ ರಾಷ್ಟ್ರೀಯ ಆರೋಗ್ಯ ಸೇವೆ (NHS) ಸಂಸ್ಥೆಯ ಅಧ್ಯಕ್ಷೆಯಾದ ಮೊದಲ ಅನಿವಾಸಿ ಭಾರತೀಯ ಮಹಿಳೆ ಎನಿಸಿದ್ದಾರೆ.
ಬಾಂಬೆ ವಿಶ್ವವಿದ್ಯಾಲಯದಲ್ಲಿ ಎಂಬಿಬಿಎಸ್ ಓದಿರುವ ಮೇಘನಾ ಪಂಡಿತ್ ಅವರು ಬ್ರಿಟನ್‌ನಲ್ಲಿ ನೆಲೆಸಿದ್ದಾರೆ. ಇವರು ಈಗಾಗಲೇ ಆಕ್ಸ್‌ಫರ್ಡ್ ಯುನಿವರ್ಸಿಟಿ ಹಾಸ್ಪಿಟಲ್ಸ್‌ನ ಹಂಗಾಮಿ ಸಿಇಒ ಆಗಿ ೨೦೨೨ರ ಜುಲೈನಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ಈಗ ಇವರಿಗೆ ಪೂರ್ಣಾವಧಿಯ ಸಿಇಒ ಆಗಿ ನೇಮಕ ಮಾಡಲಾಗಿದೆ. ಮಾರ್ಚ್ ೧ರಿಂದ ಮೇಘನಾ ಪಂಡಿತ್ ಅವರ ಕಾರ್ಯಭಾರ ಆರಂಭವಾಗಲಿದೆ.
ಆಕ್ಸ್‌ಫರ್ಡ್ ಯುನಿರ್ವಸಿಟಿ ಹಾಸ್ಪಿಟಲ್ಸ್ ಟ್ವೀಟ್
ಇದನ್ನೂ ಓದಿ: Vivek Ramaswamy: ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಭಾರತ ಮೂಲದ ವಿವೇಕ್ ರಾಮಸ್ವಾಮಿ ಸ್ಪರ್ಧೆ?
ವೃತ್ತಿಯಲ್ಲಿ ಪ್ರೊಫೆಸರ್ ಆಗಿರುವ ಮೇಘನಾ ಪಂಡಿತ್, ಬ್ರಿಟನ್‌ನಲ್ಲಿ ಇದುವರೆಗೆ ಹಲವು ಹುದ್ದೆ ನಿಭಾಯಿಸಿದ್ದಾರೆ. “ಬ್ರಿಟನ್‌ನ ಪ್ರತಿಷ್ಠಿತ ಸಂಸ್ಥೆಯ ಸಿಇಒ ಆಗಿ ಆಯ್ಕೆಯಾಗಿರುವುದು ಸಂತಸ ತಂದಿದೆ. ನನ್ನನ್ನು ಇಂತಹ ಮಹೋನ್ನತ ಹುದ್ದೆಗೆ ಆಯ್ಕೆ ಮಾಡಿದ ಟ್ರಸ್ಟ್‌ನ ಎಲ್ಲ ಸದಸ್ಯರಿಗೆ ಧನ್ಯವಾದಗಳು. ಹೊಸ ಜವಾಬ್ದಾರಿಯೊಂದಿಗೆ ಮುನ್ನಡೆಯಲು ಖುಷಿಯಾಗುತ್ತಿದೆ” ಎಂದು ಮೇಘನಾ ಪಂಡಿತ್ ಸಂತಸ ವ್ಯಕ್ತಪಡಿಸಿದ್ದಾರೆ.