ವಾಷಿಂಗ್ಟನ್: ಅಮೆರಿಕದ ಮಸಾಚುಸೆಟ್ಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (MIT) ಸಂಸ್ಥೆಯಲ್ಲಿ ಕಂಪ್ಯೂಟರ್ ಸೈನ್ಸ್ ಹಾಗೂ ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಪ್ರೊಫೆಸರ್ ಆಗಿರುವ ಭಾರತ ಮೂಲದ ಹರಿ ಬಾಲಕೃಷ್ಣನ್ (Hari Balakrishnan) ಅವರು ಅಮೆರಿಕದ ಪ್ರತಿಷ್ಠಿತ ಮಾರ್ಕೋನಿ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
“ಅಡ್ವಾನ್ಸ್ಡ್ ಇನ್ಫಾರ್ಮೇಷನ್ ಆ್ಯಂಡ್ ಕಮ್ಯುನಿಕೇಷನ್ ಟೆಕ್ನಾಲಜಿಯಲ್ಲಿ ಡಿಜಿಟಲ್ ಒಳಗೊಳ್ಳುವಿಕೆಯನ್ನು ಹೆಚ್ಚಿಸುವಲ್ಲಿ, ಇವುಗಳ ಮೂಲಕ ಸಾಮಾಜಿಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಲ್ಲಿ ಮಹತ್ವದ ಪಾತ್ರ ನಿರ್ವಹಿಸಿದ ಹರಿ ಬಾಲಕೃಷ್ಣನ್ ಅವರಿಗೆ 2023ನೇ ಸಾಲಿನ ಮಾರ್ಕೋನಿ ಪ್ರಶಸ್ತಿ ಘೋಷಿಸಲಾಗಿದೆ” ಎಂದು ಮಾರ್ಕೋನಿ ಸೊಸೈಟಿ ತಿಳಿಸಿದೆ. ಅಕ್ಟೋಬರ್ 27ರಂದು ವಾಷಿಂಗ್ಟನ್‌ನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.
ಹರಿ ಬಾಲಕೃಷ್ಣನ್ ಸಂತಸ
ಪ್ರಶಸ್ತಿ ಲಭಿಸಿರುವ ಕುರಿತು ಮಾತನಾಡಿದ ಹರಿ ಬಾಲಕೃಷ್ಣನ್, “ಮಾರ್ಕೋನಿ ಪ್ರಶಸ್ತಿ ಘೋಷಿಸಿರುವುದಕ್ಕೆ ಮಾರ್ಕೋನಿ ಸೊಸೈಟಿಗೆ ಧನ್ಯವಾದಗಳು. ಪ್ರತಿಷ್ಠಿತ ಪ್ರಶಸ್ತಿ ಲಭಿಸಿರುವುದು ಸಂತಸ ತಂದಿದೆ” ಎಂದು ಹೇಳಿದ್ದಾರೆ. ತಮಿಳುನಾಡು ಮೂಲದ ಹರಿ, ಮದ್ರಾಸ್ ಐಐಟಿಯಲ್ಲಿ ಬಿ ಟೆಕ್ ಪದವಿ ಪಡೆದಿದ್ದಾರೆ. ಸದ್ಯ ಇವರು ಅಮೆರಿಕದಲ್ಲಿಯೇ ನೆಲೆಸಿದ್ದಾರೆ.
ಇದನ್ನೂ ಓದಿ: ಹಿರಿಯ ಸಾಹಿತಿ ವೈದೇಹಿ ಅವರಿಗೆ ಪ್ರತಿಷ್ಠಿತ ನೃಪತುಂಗ ಪ್ರಶಸ್ತಿ, ಐವರು ಸಾಧಕರಿಗೆ ಮಯೂರವರ್ಮ ಪ್ರಶಸ್ತಿ