Site icon Vistara News

Navaratri Special | ನವರಾತ್ರಿ ಹಿನ್ನೆಲೆ ರೈಲುಗಳಲ್ಲಿ ವಿಶೇಷ ಆಹಾರ, ಬುಕ್‌ ಮಾಡುವುದು ಹೇಗೆ? ಬೆಲೆ ಎಷ್ಟು?

IRCTC

ನವದೆಹಲಿ: ನವರಾತ್ರಿ ಹಾಗೂ ದುರ್ಗಾ ಪೂಜೆ ಹಿನ್ನೆಲೆಯಲ್ಲಿ ದೇಶದ ಜನರ ಆಹಾರ ಪದ್ಧತಿ, ಉಪವಾಸ, ಲಘು ಉಪಾಹಾರ ಸೇವನೆ, ಪ್ರಯಾಣದ ವೇಳೆ ಮನೆಯ ಊಟವನ್ನೇ ಮಾಡುವುದು ಸೇರಿ ಹಲವು ರೂಢಿ, ಸಂಪ್ರದಾಯ ಇರುತ್ತದೆ. ಇದನ್ನು ಮನಗಂಡ ರೈಲ್ವೆ ಇಲಾಖೆಯು ನವರಾತ್ರಿ ಹಿನ್ನೆಲೆಯಲ್ಲಿ ರೈಲುಗಳಲ್ಲಿ ವಿಶೇಷ ಆಹಾರ (Navaratri Special) ಒದಗಿಸುತ್ತಿದೆ. ಹಾಗಾಗಿ, ಪ್ರಯಾಣಿಕರು ರೈಲುಗಳಲ್ಲಿ ಸಂಚರಿಸುವಾಗಲೂ ವಿಶೇಷ ಆಹಾರ ಸೇವಿಸಬಹುದಾಗಿದೆ.

ಇಂಡಿಯನ್‌ ರೈಲ್ವೆ ಕೇಟರಿಂಗ್‌ ಆ್ಯಂಡ್‌ ಟೂರಿಸಂ ಕಾರ್ಪೊರೇಷನ್‌ (IRCTC) ಸೆಪ್ಟೆಂಬರ್‌ ೨೬ರಿಂದ ಅಕ್ಟೋಬರ್‌ ೫ರವರೆಗೆ ರೈಲುಗಳಲ್ಲಿ ವಿಶೇಷ ಆಹಾರ ಬುಕ್‌ ಮಾಡುವ ಅವಕಾಶ ಕಲ್ಪಿಸಿದೆ. ಆನ್‌ಲೈನ್‌ ಮೂಲಕ ಬುಕ್‌ ಮಾಡಿದರೆ ಕುಳಿತಲ್ಲಿಗೇ ಆಹಾರ ಪೂರೈಕೆಯಾಗಲಿದೆ.

ಬುಕ್‌ ಮಾಡುವುದು ಹೇಗೆ?

೧. ಫುಡ್‌ ಟ್ರ್ಯಾಕ್‌ ಆ್ಯಪ್‌ನಲ್ಲಿ ಅಥವಾ http://ecatering.irctc.co.in ಗೆ ಭೇಟಿ ನೀಡಿ ಪಿಎನ್‌ಆರ್‌ ನಂಬರ್‌ ನಮೂದಿಸುವ ಮೂಲಕ ಬುಕ್‌ ಮಾಡಬಹುದು

೨. ೧೩೨೩ ಸಂಖ್ಯೆಗೆ ಕರೆ ಮಾಡುವುದು

೩. ಪೋರ್ಟಲ್‌ ಅಥವಾ ಆ್ಯಪ್‌ನಲ್ಲಿ ನಿಮ್ಮ ಇಷ್ಟದ ಆಹಾರ ಸೆಲೆಕ್ಟ್‌ ಮಾಡಿ, ಆನ್‌ಲೈನ್‌ ಅಥವಾ ಕ್ಯಾಶ್‌ ಆನ್‌ ಡೆಲಿವರಿ ಆಯ್ಕೆ ಮಾಡಿಕೊಳ್ಳಬಹುದು

ಬೆಲೆ ಎಷ್ಟಿರಲಿದೆ?

ನವರಾತ್ರಿಯನ್ನು ಗಮನದಲ್ಲಿಟ್ಟುಕೊಂಡು ಐಆರ್‌ಸಿಟಿಸಿ ಫುಡ್‌ ಮೆನು ತಯಾರಿಸಿದೆ. ಊಟ, ತಿಂಡಿಯ ಕನಿಷ್ಠ ೯೦ ರೂ.ನಿಂದ ಆರಂಭವಾಗುತ್ತದೆ. ಸ್ಟಾರ್ಟರ್‌ ಆಗಿ ಆಲೂ ಚಾಪ್‌, ಸಾಬುದಾನ ಟಿಕ್ಕಿ ಇರಲಿದೆ. ಮೇನ್‌ ಕೋರ್ಸ್‌ನಲ್ಲಿ ಸಾಬುದಾನ ಕಿಚಡಿ, ಪನೀರ್‌ ಮಖ್‌ಮಲಿ, ಪರೋಟ ಇರಲಿವೆ. ಇದರ ಜತೆಗೆ ಕೊಫ್ತ ಕರಿ, ಸಾಬುದಾನ ಕಿಚಡಿ, ನವರಾತ್ರಿ ಥಾಲಿ ಇರಲಿದೆ.

ಇದನ್ನೂ ಓದಿ | Navaratri 2022 | ನವರಾತ್ರಿಯಲ್ಲಿ ಕನ್ಯಾ ಪೂಜೆ ಹೇಗೆ ಮಾಡಬೇಕು? ಏನು ಫಲ?

Exit mobile version