Site icon Vistara News

Girlfriend: ‘ಬಾಡಿಗೆ ಗರ್ಲ್‌ಫ್ರೆಂಡ್‌’ ಆಗಲು ಸಿದ್ಧಳೆಂದ ಯುವತಿ; ಈಕೆಯ ‘ದರಪಟ್ಟಿ’ ನೋಡಿ,‌ ನೀವೂ ಟ್ರೈ ಮಾಡಿ

Girlfriend

Indian Woman Wants Men to Hire Her as Rental Girlfriend, Shares 'Rate Chart' in Instagram Reel

ನವದೆಹಲಿ: ಈಗಿನದ್ದು ಬಾಡಿಗೆ ಜಮಾನ. ಮನೆ, ಕಾರು, ಬೈಕ್‌, ಬಟ್ಟೆ, ಆಭರಣ ಸೇರಿ ಸಾವಿರಾರು ವಸ್ತುಗಳು ಬಾಡಿಗೆಗೆ ಸಿಗುತ್ತವೆ. ಯಾರಾದರೂ ಸತ್ತಾಗ ಅಳಲು ಕೂಡ ‘ಬಾಡಿಗೆ ಜನ’ರಿದ್ದಾರೆ. ಅಷ್ಟರ ಮಟ್ಟಿಗೆ ನಮ್ಮ ‘ಬಾಡಿ’ಗೆ ಅನುಕೂಲವಾಗಲು ‘ಬಾಡಿಗೆಗೆ’ ಸಿಗುತ್ತವೆ. ಆದರೆ, ದೇಶದಲ್ಲಿ ಇದುವರೆಗೆ ಬಾಡಿಗೆಗೆ ಗರ್ಲ್‌ಫ್ರೆಂಡ್‌ ಸಿಗುತ್ತಿರಲಿಲ್ಲ. ಯಾರನ್ನೂ ಪಟಾಯಿಸಲು ಆಗದೆ, ಒಬ್ಬಂಟಿಯಾಗಿ ಇರಲೂ ಆಗದೆ ಯುವಕರು ಪರದಾಡುವಂತಾಗಿದೆ. ಆದರೆ, ಇನ್ನು ಮುಂದೆ ಬಾಡಿಗೆಗೆ ಗರ್ಲ್‌ಫ್ರೆಂಡ್‌ (Girlfriend) ಕೂಡ ಸಿಗಲಿದ್ದಾಳೆ. ಹೌದು, “ನನ್ನನ್ನು ಒಂದು ದಿನದ ಮಟ್ಟಿಗೆ ನಿಮ್ಮ ಗರ್ಲ್‌ಫ್ರೆಂಡ್‌ ಆಗಿ ಬಾಡಿಗೆಗೆ ಪಡೆಯಿರಿ” ಎಂದು ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್‌ ಹಂಚಿಕೊಂಡಿದ್ದಾಳೆ. ಆಕೆಯ ವಿಡಿಯೊ ಈಗ ಭಾರಿ ವೈರಲ್‌ (Viral Video) ಆಗಿದೆ.

ಯುವತಿಯೊಬ್ಬಳು ತನ್ನ ಹಾಗೂ ದರಪಟ್ಟಿಯ ವಿಡಿಯೊ ಹಂಚಿಕೊಂಡಿದ್ದಾಳೆ. “ನಾನು ಒಂದು ದಿನದ ಮಟ್ಟಿಗೆ ನಿಮ್ಮ ಗರ್ಲ್‌ಫ್ರೆಂಡ್‌ ಆಗಿ ಬಾಡಿಗೆಗೆ ಇರಬಲ್ಲೆ. ಯಾರು ಬೇಕಾದರೂ ನನ್ನನ್ನು ಗರ್ಲ್‌ಫ್ರೆಂಡ್‌ ಆಗಿ ಬಾಡಿಗೆಗೆ ಪಡೆಯಬಹುದು. ಆ ಮೂಲಕ ಸ್ಮರಣೀಯ ದಿನವನ್ನು, ಅತ್ಯುತ್ತಮ ನೆನಪುಗಳನ್ನು ಸೃಷ್ಟಿಸಿಕೊಳ್ಳಬಹುದು” ಎಂಬುದಾಗಿ ದಿವ್ಯಾ ಗಿರಿ ಎಂಬ ಇನ್‌ಸ್ಟಾಗ್ರಾಂ ಖಾತೆಯಿಂದ ಪೋಸ್ಟ್‌ ಮಾಡಲಾಗಿದೆ. ನೂರಾರು ಜನ ಪೋಸ್ಟ್‌ಗೆ ಪ್ರತಿಕ್ರಿಯೆ ಕೂಡ ನೀಡಿದ್ದಾರೆ.

ಯುವತಿಯ ‘ದರ’ಪಟ್ಟಿ ಹೀಗಿದೆ…

ಒಂದು ದಿನದ ಮಟ್ಟಿಗೆ ಡೇಟ್‌ಗೆ ಕರೆದುಕೊಂಡು ಹೋಗುವುದು ಸೇರಿ ಹಲವು ಚಟುವಟಿಕೆಗಳಿಗೆ ಯುವತಿಯು ರೇಟ್‌ ಫಿಕ್ಸ್‌ ಮಾಡಿದ್ದಾಳೆ. ಸುಮ್ಮನೆ ಹೋಗಿ ಕಾಫಿ ಕುಡಿದುಕೊಂಡು ಬರಲು 1,500 ರೂ., ಸಿನಿಮಾ ನೋಡಿ, ಊಟ ಮಾಡಿಕೊಂಡು ಬರುವುದಾದರೆ 2 ಸಾವಿರ ರೂ. ಕುಟುಂಬಸ್ಥರನ್ನು ಭೇಟಿ ಮಾಡಿಸಲು 3 ಸಾವಿರ ರೂ., ಬೈಕ್‌ನಲ್ಲಿ ಸುತ್ತಾಡುವುದಾದರೆ 4 ಸಾವಿರ ರೂ., ಡೇಟಿಂಗ್‌ ಬಗ್ಗೆ ಸಾರ್ವಜನಿಕವಾಗಿ ಪೋಸ್ಟ್‌ ಮಾಡುವುದಾದರೆ 6 ಸಾವಿರ ರೂ., ಎರಡು ದಿನ ವೀಕೆಂಡ್‌ನಲ್ಲಿ ಸುತ್ತಾಡಲು 10 ಸಾವಿರ ರೂ. ಸೇರಿ ಹಲವು ಚಟುವಟಿಕೆಗಳಿಗೆ ವಿವಿಧ ಮೊತ್ತ ನಿಗದಿಪಡಿಸಿದ್ದಾಳೆ.

ಪೋಸ್ಟ್‌ ನೋಡಿದ ಜನ ಏನೆಂದರು?

ಯುವತಿಯ ಪೋಸ್ಟ್‌ ನೋಡಿದ ಒಂದಷ್ಟು ಜನ ಕಂಗಾಲಾಗಿದ್ದರೆ, ಇನ್ನೊಂದಿಷ್ಟು ಜನ ತಮಾಷೆಯಾಗಿ ಕಮೆಂಟ್‌ ಮಾಡಿದ್ದಾರೆ. “ನನ್ನ ಕಾಲೇಜಿನ ಅಸೈನ್‌ಮೆಂಟ್‌ ಮುಗಿಸಿಕೊಡಲು ಎಷ್ಟು ಚಾರ್ಜ್‌ ಮಾಡುತ್ತೀರಿ” ಎಂದು ಕಿಡಿಗೇಡಿಯೊಬ್ಬ ಕಮೆಂಟ್‌ ಮಾಡಿದ್ದಾನೆ. “ನನ್ನ ಮನೆಯ ಕಸ ಗುಡಿಸಿ, ಟಾಯ್ಲೆಟ್‌ ಕ್ಲೀನ್‌ ಮಾಡಿ, ಬಟ್ಟೆ ತೊಳೆದುಕೊಡಲು ಎಷ್ಟು ಬೇಕು” ಎಂದು ಇನ್ನೊಬ್ಬ ಟಾಂಗ್‌ ಕೊಟ್ಟಿದ್ದಾನೆ. “ಯುವತಿಯು ಭಾರತದಲ್ಲಿ ಅಲ್ಲ, ಜಪಾನ್‌ನಲ್ಲಿದ್ದೇನೆ” ಎಂದು ಭಾವಿಸಿದ್ದಾಳೆ ಎಂಬುದಾಗಿ ಮಗದೊಬ್ಬ ತಮಾಷೆ ಮಾಡಿದ್ದಾನೆ. “ಇಂಥ ಕೆಲಸ ಮಾಡುವ ಬದಲು ದುಡಿದು ತಿನ್ನು” ಎಂದು ಮತ್ತೊಬ್ಬ ಅಸಮಾಧಾನ ವ್ಯಕ್ತಪಡಿಸಿದ್ದಾನೆ. ಹೀಗೆ, ನೂರಾರು ಜನ ಕಮೆಂಟ್‌ ಮಾಡಿದ್ದಾರೆ.

ಇದನ್ನೂ ಓದಿ: Viral Video: “ನೀವು ಅಲ್ಲಿಂದ ದಾಳಿ ಮಾಡಿ..ನಾವು ಇಲ್ಲಿಂದ ಅಟ್ಯಾಕ್‌ ಮಾಡ್ತೇವೆ..ಪಾಕ್‌ ಧ್ವಂಸ ಆಗೋದು ಪಕ್ಕಾ”-ಆಫ್ಗನ್‌ ವೃದ್ಧನ ಈ ವಿಡಿಯೋ ಫುಲ್‌ ವೈರಲ್‌

Exit mobile version