Site icon Vistara News

India’s Aamras : ಮಾವಿನಹಣ್ಣಿನ ಖಾದ್ಯಗಳ ಟಾಪ್‌ ಟೆನ್‌ ಪಟ್ಟಿಯಲ್ಲಿ ಭಾರತದ ಆಮ್‌ರಸ್‌ ವಿಶ್ವದಲ್ಲೇ ನಂಬರ್‌ ಒನ್!

Aamras

ಭಾರತೀಯರಿಗೆ ಮಾವಿನಹಣ್ಣಿನ ಕಾಲ ಎಂದರೆ ಪರ್ವಕಾಲ. ಎಷ್ಟೇ ಸೆಖೆ ಇರಲಿ, ಬೇಸಿಗೆಯ ಬಿಸಿಯಿಂದ ಮೈಯೆಲ್ಲ ಸುಡುತ್ತಿರಲಿ, ಇದು ಮಾವಿನಹಣ್ಣಿನ ಕಾಲ ಎಂಬ ಪ್ರೀತಿಯು ಅದಕ್ಕಾಗಿ ಕಾಯುವಂತೆ ಮಾಡುತ್ತದೆ. ಸೆಖೆಗಾಲದಲ್ಲಿ ಮಾವಿನಹಣ್ಣಿಗಾಗಿ ಕಾಯುವುದು, ಮಾವಿನಹಣ್ಣಿನಲ್ಲಿ ಬಗೆಬಗೆಯ ಭಕ್ಷ್ಯಗಳನ್ನು ತಯಾರಿಸುವುದು, ಇನ್ನೂ ಕೆಲವು ತಿಂಗಳುಗಳಿಗಾಗಿ ಮಾವಿನ ಹಣ್ಣಿನಿಂದ ಕೆಲವೊಂದು ಖಾದ್ಯಗಳನ್ನು ತಯಾರಿಸಿ ಇಡುವುದು ಎಲ್ಲವೂ ಪ್ರತಿ ಮನೆಯಲ್ಲೂ ಸಂಭ್ರಮವೇ. ಭಾರತದಲ್ಲಿ ಹಣ್ಣುಗಳ ರಾಜನಾಗಿ ಮೆರೆಯುವ ಈ ಮಾವಿನಹಣ್ಣು ತನ್ನ ವಿಶೇಷವಾದ ರುಚಿಯಿಂದ ತನ್ನತ್ತ ಪ್ರತಿಯೊಬ್ಬರನ್ನೂ ಸೆಳೆಯುತ್ತದೆ. ಅದರಲ್ಲೂ ನಾವು ಭಾರತೀಯರು ಮಾವಿನಹಣ್ಣಿನ ಬಗೆಬಗೆಯ ಭಕ್ಷ್ಯಗಳನ್ನು ಮಾಡಿ ತಿನ್ನುವುದರಲ್ಲಿ ಸಿದ್ಧಹಸ್ತರು. ಇಂತಹ ಪಾಕಪ್ರವೀಣರಾದ ನಮ್ಮ ಹಿರಿಮೆಗೆ ಇನ್ನೊಂದು ಗರಿ (India’s aamras) ದೊರೆತಿದೆ.

ಇದಕ್ಕಿದೆ ಗತಕಾಲದ ಇತಿಹಾಸ

ಮಾವಿನ ಹಣ್ಣಿನ ಆಮ್‌ರಸ್‌ ಎಂಬುದಕ್ಕೆ ಗತಕಾಲದ ಇತಿಹಾಸವಿದೆ. ತಂಪಾದ ಆಮ್‌ರಸ್‌ ಹೆಸರು ಹೇಳಿದರೆ ಸಾಕು ಬಾಯಲ್ಲಿ ನೀರು ಜಿನುಗೀತು. ಇಂತಹ ಆಮ್‌ರಸ್‌ಗೀಗ ಪ್ರಪಂಚದಲ್ಲೇ ನಂಬರ್‌ ವನ್‌ ಸ್ಥಾನ ದೊರೆತಿದೆ.
ಹೌದು. 2024ರ ಜೂನ್‌ ತಿಂಗಳ ಟೇಸ್ಟ್‌ ಅಟ್ಲಾಸ್‌ ಸ್ಪರ್ಧೆಯಲ್ಲಿ ವಿಶ್ವದ ಟಾಪ್‌ 10 ಮಾವಿನ ಹಣ್ಣಿನ ಭಕ್ಷ್ಯಗಳ ಪೈಕಿ ಭಾರತದ ಆಮ್‌ರಸ್‌ಗೆ ಮೊದಲೇ ಸ್ಥಾನ ದೊರೆತಿದೆ.
ಮಹಾರಾಷ್ಟ್ರ ಹಾಗೂ ಗುಜರಾತ್‌ ರಾಜ್ಯಗಳಲ್ಲಿ ಅತ್ಯಂತ ಪ್ರಸಿದ್ಧವಾದ ಆಮ್‌ರಸ್‌ ಎಂಬ ಮಾವಿನಹಣ್ಣಿನ ತಿನಿಸು ಬಹಳ ಸರಳವಾದ ಆರದೆ, ಅಮೋಘ ರುಚಿಯ ಮಾವಿನಹಣ್ಣಿನ ಭಕ್ಷ್ಯ. ಮಾವಿನಹಣ್ಣಿನ ಕಾಲದಲ್ಲಿ ಪ್ರತಿಯೊಬ್ಬರೂ ತಮ್ಮ ಮನೆಗಳಲ್ಲಿ ಇದನ್ನು ಮಾಡುವ ಜೊತೆಗೆ ಬೆಳಗಿನ ಪೂರಿಯ ಜೊತೆಗೂ ಸೈಡ್‌ ಡಿಶ್‌ ಆಗಿ ತಿನ್ನುತ್ತಾರೆ. ಮಾವಿನ ಹಣ್ಣಿನ ಪಲ್ಪ್‌ ತೆಗೆದು ಅದಕ್ಕೆ ಕೇಸರಿ, ಒಣಶುಠಿ ಪುಡಿ, ಏಲಕ್ಕಿ ಹಾಗೂ ಸಕ್ಕರೆ ಸೇರಿಸಿ ಮಾಡುವ ಸರಳವಾದ ಆಮ್‌ರಸ್‌ ಬಹಳ ರುಚಿಕರ. ಆಲ್ಫೋನ್ಸೋ, ಕೇಸರ್‌ ಮತ್ತಿತರ ಮಾವಿನಹಣ್ಣಿನಲ್ಲಿ ಈ ಆಮ್‌ರಸ್‌ ಮಾಡಿದರೆ ಸ್ವರ್ಗಕ್ಕೆ ಕಿಚ್ಚು ಹಚ್ಚೆಂದ ಎಂದರೆ ತಪ್ಪಾಗದು. ಅಷ್ಟು ರುಚಿಕರ. ಇಂತಹ ಆಮ್‌ರಸ್‌ ವಿಶ್ವದಲ್ಲೇ ಮೊದಲ ಸ್ಥಾನ ಗಳಿಸಿದ್ದರಲ್ಲಿ ಅಚ್ಚರಿಯೇನಿಲ್ಲ.

ಮಾವಿನಕಾಯಿಯ ಚಟ್ನಿಗೂ ಸ್ಥಾನ

ಮಾವಿನಕಾಯಿಯ ಚಟ್ನಿಯೂ ಟೇಸ್ಟ್‌ ಅಟ್ಲಾಸ್‌ನ ಈ ಸ್ಪರ್ಧೆಯಲ್ಲಿ ಐದನೇ ಸ್ಥಾನ ಪಡೆದಿದೆ. ವಿಶ್ವದ ಅತ್ಯಂತ ರುಚಿಕರ ಡಿಪ್‌ಗಳ ಪೈಕಿ ಮಾವಿನಹಣ್ಣಿನ ಚಟ್ನಿ ಐದನೇ ಸ್ಥಾನ ಪಡೆದಿದ್ದು ವಿಶೇಷ. ಮಾವಿನಹಣ್ಣು, ಬೆಳ್ಳುಳ್ಳಿ, ಕೆಂಪು ಮೆಣಸಿನಕಾಯಿ, ಜೀರಿಗೆ, ಕೊತ್ತಂಬರಿ, ಅರಿಶಿನ, ಲವಂಗ, ಚಕ್ಕೆ, ಏಲಕ್ಕಿ, ಸಕ್ಕರೆ ಹಾಗೂ ವಿನೆಗರ್‌ ಸೇರಿಸಿ ಈ ಚಟ್ನಿಯನ್ನು ಮಾಡಲಾಗುತ್ತದೆಯಂತೆ. ಈ ವಿಶೇಷ ಬಗೆಯ ಚಟ್ನಿಗೆ ವಿಶೇಷ ಸ್ಥಾನ ಲಭಿಸಿದೆ.
ಇನ್ನುಳಿದಂತೆ, ಟಾಪ್‌ ಟೆನ್‌ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿ ಥಾಯ್ಲೆಂಡಿನ ಮ್ಯಾಂಗೋ ಸ್ಟಿಕಿ ರೈಸ್‌, ಮೂರನೇ ಸ್ಥಾನದಲ್ಲಿ ಸೋರ್ಬೆಟಿಸ್‌, ನಾಲ್ಕನೇ ಸ್ಥಾನದಲ್ಲಿ ಇಂಡೋನೇಷ್ಯಾದ ರುಜಕ್‌, ಐದನೇ ಸ್ಥಾನದಲ್ಲಿ ಮಾವಿನಹಣ್ಣಿನ ಚಟ್ನಿ ಇವೆ. ನಂತರದ ಸ್ಥಾನಗಳಲ್ಲಿ ಹಾಂಗ್‌ಕಾಂಗ್‌ನ ಮ್ಯಾಂಗೋ ಪೊಮೇಲೋ ಸಾಗೋ, ಚೈನಾದ ಮಂಗುವೋ ಬುಡಿಂಗ್‌, ಇಂಡೋನೇಷ್ಯಾದ ರುಜಕ್‌ ಸಿಂಗುರ್, ಚೈನಾದ ಬಾವೋಬಿಂಗ್‌, ಥಾಯ್ಲೆಂಡಿನ ಮಾಮುಂಗ್‌ ನಾಮ್‌ ಪ್ಲಾವಾನ್‌ ಟಾಪ್‌ ಟೆನ್‌ ಪಟ್ಟಿಯಲ್ಲಿ ಸ್ಥಾನ ಗಳಿಸಿವೆ. ಮಾವಿನಹಣ್ಣಿನ ವಿಶೇಷಚವಾದ ಚಟ್ನಿಯೂ ಕೂಡಾ ಈ ಪಟ್ಟುಯಲ್ಲಿ ಐದನೇ ಸ್ಥಾನ ಗಳಿಸಿರುವುದು ವಿಶೇಷ.

Exit mobile version