Site icon Vistara News

Monkeypox India | ಕೇರಳದಲ್ಲಿ ಭಾರತದ ಮೊದಲ ಮಂಕಿಪಾಕ್ಸ್‌ ಸಾವು

monkeypox

ತ್ರಿಶೂರ್: ಕೇರಳದ ಗುರುವಾಯೂರು ಸಮೀಪದ ಕುರಂಜಿಯೂರ್‌ನ 22 ವರ್ಷದ ವ್ಯಕ್ತಿಯೊಬ್ಬರು ಮಂಕಿಪಾಕ್ಸ್‌ ಕಾಯಿಲೆಯಿಂದ ಮೃತಪಟ್ಟಿದ್ದಾರೆ.

ಶನಿವಾರ ಬೆಳಗ್ಗೆ ವ್ಯಕ್ತಿ ಸಾವಿಗೀಡಾಗಿದ್ದಾರೆ. ಅವರಿಂದ ತೆಗೆದ ಮಾದರಿಗಳನ್ನು ಆಲಪ್ಪುಳದಲ್ಲಿರುವ ರಾಷ್ಟ್ರೀಯ ವೈರಾಲಜಿ ಘಟಕಕ್ಕೆ ಪರೀಕ್ಷೆಗೆ ಕಳುಹಿಸಲಾಗಿದೆ. ಈ ವ್ಯಕ್ತಿ ಯುಎಇಯಿಂದ ಎರಡು ದಿನಗಳ ಹಿಂದೆ ವಾಪಸಾಗಿದ್ದರು. ಮಂಕಿಪಾಕ್ಸ್‌ಗೆ ಸಾಮಾನ್ಯವಾಗಿ ಸಂಬಂಧಿಸಿದ ಯಾವುದೇ ಬಾಹ್ಯ ರೋಗಲಕ್ಷಣಗಳನ್ನು ಅವರು ಹೊಂದಿರಲಿಲ್ಲ. ಆದರೆ ಜುಲೈ 27ರಂದು ಅವರನ್ನು ಜ್ವರ ಎಂದು ಕುಟುಂಬಿಕರು ನಗರದ ಆಸ್ಪತ್ರೆಗೆ ದಾಖಲಿಸಿದ್ದರು. ಜ್ವರದಿಂದ ಬಳಲಿ ಅವರು ಕುಸಿದು ಬಿದ್ದಿದ್ದರು ಎಂದು ಕುಟುಂಬಿಕರು ತಿಳಿಸಿದ್ದರು.‌

ಇದನ್ನೂ ಓದಿ: CWG- 2022 | ಮಂಕಿಪಾಕ್ಸ್ ಭೀತಿ, ಸುರಕ್ಷಿತ ಲೈಂಗಿಕತೆಗೆ ಮನವಿ, 1.5 ಲಕ್ಷ ಕಾಂಡೋಮ್‌ ವಿತರಣೆ

ಆರಂಭದಲ್ಲಿ, ಅವರು ಮೆನಿಂಜೈಟಿಸ್‌ನಿಂದ (ಮೆದುಳುಪೊರೆ ಊತ) ಬಳಲುತ್ತಿದ್ದಾರೆ ಎಂದು ವೈದ್ಯರು ಶಂಕಿಸಿದ್ದರು. ಜ್ವರದ ರೋಗಲಕ್ಷಣಗಳು ಹಾಗೂ ಭ್ರಮಾತ್ಮಕ ಪ್ರಜ್ಞೆಯಿಂದ ಬಳಲುತ್ತಿದ್ದರು. ಅವರಲ್ಲಿ ಕ್ಷಯರೋಗವೂ ಇದೆ ಎಂದು ವೈದ್ಯರು ಭಾವಿಸಿದ್ದರಿಂದ ಆಸ್ಪತ್ರೆಯಲ್ಲಿ ಅವರನ್ನು ಬೇರೆಯಾಗಿಟ್ಟು ಪರೀಕ್ಷೆಗಳನ್ನು ನಡೆಸಲಾಗಿತ್ತು.

ಶನಿವಾರ ಬೆಳಗ್ಗೆ ಅವರು ಮೃತಪಟ್ಟಾಗ, ಆ ವ್ಯಕ್ತಿ ಯುಎಇಯಲ್ಲಿ ಮಂಕಿಪಾಕ್ಸ್‌ ರೋಗಿಯ ಸಂಪರ್ಕಕ್ಕೆ ಬಂದಿರುವ ಸಾಧ್ಯತೆ ಇದೆ ಎಂದು ಕುಟುಂಬಿಕರು ಮಾಹಿತಿ ನೀಡಿದ್ದರು. ಯುಎಇಯಿಂದ ಅವರ ಸ್ನೇಹಿತರು ಪರೀಕ್ಷಾ ಫಲಿತಾಂಶದ ಸ್ಕ್ರೀನ್‌ಶಾಟ್ ಕಳುಹಿಸಿದ್ದರು. ಆದರೆ ಇದರಲ್ಲಿ ಮೃತ ವ್ಯಕ್ತಿಯ ಹೆಸರು ಇಲ್ಲದಿದ್ದುದರಿಂದ, ದೃಢಪಡಿಸಿಕೊಳ್ಳಲು ವೈದ್ಯರು ಭಾರತದಲ್ಲಿ ಪರೀಕ್ಷೆಗಾಗಿ ಸ್ಯಾಂಪಲ್‌ಗಳನ್ನು ಕಳಿಸಿದ್ದಾರೆ.

ಇದನ್ನೂ ಓದಿ: Monkeypox fear | ಬೆಂಗಳೂರಿಗೆ ಬಂದಿದ್ದ ಆಫ್ರಿಕಾ ಮೂಲದ ವ್ಯಕ್ತಿಯಲ್ಲಿ ಮಂಕಿಪಾಕ್ಸ್‌ ಇಲ್ಲ

Exit mobile version