Site icon Vistara News

Vehicle Mission 2023: ಮಕ್ಕಳು ತಯಾರಿಸಿದ ಉಪಗ್ರಹ ಹೊತ್ತು ಬಾಹ್ಯಾಕಾಶಕ್ಕೆ ನೆಗೆದ ದೇಶದ ಮೊದಲ ಹೈಬ್ರಿಡ್ ರಾಕೆಟ್

India’s first hybrid rocket launched on Sunday including School children made satellites

ನವದೆಹಲಿ: ಮಾರ್ಟಿನ್ ಫೌಂಡೇಶನ್ ಡಾ. ಎಪಿಜೆ ಅಬ್ದುಲ್ ಕಲಾಂ ಇಂಟರ್ನ್ಯಾಷನಲ್ ಫೌಂಡೇಶನ್ ಮತ್ತು ಸ್ಪೇಸ್ ಝೋನ್ ಇಂಡಿಯಾ ಸಹಯೋಗದೊಂದಿಗೆ ಫೆಬ್ರವರಿ 19, ಭಾನುವಾರ ಎಪಿಜೆ ಅಬ್ದುಲ್ ಕಲಾಂ ಸ್ಯಾಟಲೈಟ್ ಲಾಂಚ್ ವೆಹಿಕಲ್ ಮಿಷನ್-2023ಕ್ಕೆ (APJ Abdul Kalam Satellite Launch Vehicle Mission-2023) ಚಾಲನೆ ನೀಡಲಾಯಿತು. ಕಾರ್ಯಕ್ರಮದಲ್ಲಿ ಪುದುಚೆರಿ ರಾಜ್ಯಪಾಲ ತಮಿಳಿಸೈ ಸೌಂದರರಾಜನ್ ಕೂಡ ಉಪಸ್ಥಿತರಿದ್ದರು. ಶಾಲಾ ಮಕ್ಕಳು ರೂಪಿಸಿರುವ ಉಪಗ್ರಹಗಳನ್ನು ಹೊತ್ತ, ದೇಶದ ಮೊದಲ ಹೈಬ್ರಿಡ್ ರಾಕೆಟ್ ಅನ್ನು ತಮಿಳುನಾಡಿನ ಚೆಂಗಲ್ಪಟ್ಟು ಜಿಲ್ಲೆಯ ಪಟ್ಟಿಪೋಲಂ ಗ್ರಾಮದಿಂದ ಉಡಾವಣೆ ಮಾಡಲಾಯಿತು(Vehicle Mission 2023).

ಡಾ. ಎಪಿಜೆ ಅಬ್ದುಲ್ ಕಲಾಮ್ ಸ್ಯಾಟ್‌ಸೈಟ್ ಲಾಂಜ್ ವೆಹಿಕಲ್ ಮಿಷನ್ 2023ರ ಭಾಗವಾಗಿ ಭಾರತದ ಮೊದಲ ಹೈಬ್ರಿಡ್ ರಾಕೆಟ್ ಭಾನುವಾರ ಉಡ್ಡಯನ ಮಾಡಲಾಯಿತು. ಈ ಮಿಷನ್ ಅಂಗವಾಗಿ ಬೃಹತ್ ಮುಂಬೈ ನಗರ ಪಾಲಿಕೆಯ 20 ಶಾಲೆಯ ವಿದ್ಯಾರ್ಥಿಗಳು ತಯಾರಿಸಿರುವ ಉಪಗ್ರಹಗಳನ್ನು ಈ ರಾಕೆಟ್ ಮೂಲಕ ಲಾಂಚ್ ಮಾಡಲಾಗಿದೆ. ಒಟ್ಟಾರೆ ದೇಶಾದ್ಯಂತದ ಶಾಲೆಗಳಿಂದ ಮಕ್ಕಳು 150 ಉಪಗ್ರಹಗಳನ್ನು ಸಿದ್ಧಪಡಿಸಿದ್ದು, ಅಷ್ಟೂ ಉಪಗ್ರಹಗಳನ್ನು ಈ ರಾಕೆಟ್ ಮೂಲಕವೇ ಕಕ್ಷೆಗೆ ಕಳುಹಿಸಲಾಗುತ್ತಿದೆ.

ಬಿಎಂಸಿ ಶಾಲೆಗಳಲ್ಲಿ ಓದುತ್ತಿರುವ ಮಕ್ಕಳು ಈ ಮಿಷನ್‌ಗೆ ಸಂಬಂಧಿಸಿದ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ತೇರ್ಗಡೆಯಾದ ನಂತರ ಮತ್ತು ಉಪಗ್ರಹ ತಯಾರಿಕೆ ಮತ್ತು ರಾಕೆಟ್ ಉಡಾವಣೆಗಳನ್ನು ಅರ್ಥಮಾಡಿಕೊಳ್ಳಲು ಆನ್‌ಲೈನ್ ತರಬೇತಿ ಮತ್ತು ಆಫ್‌ಲೈನ್ ಕಾರ್ಯಾಗಾರಗಳಲ್ಲಿ ಭಾಗವಹಿಸಿದ ನಂತರ ಅವರನ್ನು ಆಯ್ಕೆ ಮಾಡಲಾಗಿದೆ.

ಇದನ್ನೂ ಓದಿ: Chandrayaan-3 | ಮುಂದಿನ ವರ್ಷ ಜೂನ್ ತಿಂಗಳಲ್ಲಿ ಚಂದ್ರಯಾನ-3ಕ್ಕೆ ಇಸ್ರೋ ಸಿದ್ಧತೆ

ಫೆಬ್ರವರಿ 17ರಂದು ನಡೆದ ವಿವರವಾದ ತರಬೇತಿ ಕಾರ್ಯಕ್ರಮದ ಭಾಗವಾಗಲು ಇಡೀ ದೇಶದಿಂದ ಕೇವಲ 100 ಮಕ್ಕಳನ್ನು ಮಾತ್ರ ಆಯ್ಕೆ ಮಾಡಲಾಗಿತ್ತು. ನಮ್ಮ ಗುಂಪಿನ ವಿದ್ಯಾರ್ಥಿಗಳಲ್ಲಿ ಒಬ್ಬರು – ಸರ್ದಾರ್ ನಗರ ಬಿಎಂಸಿ ಶಾಲೆಯ ಸಾಹಿಲ್ ಭುವಡ್ ಆಯ್ಕೆಯಾದರು. ನಂತರ ಫೆಬ್ರವರಿ 18ರಂದು ಎಲ್ಲಾ ಇತರ ವಿದ್ಯಾರ್ಥಿಗಳಿಗೆ ಸಣ್ಣ ಕಾರ್ಯಾಗಾರವನ್ನು ನೀಡಲಾಯಿತು ಎಂದು ಮುಲುಂಡ್‌ನ ಗುರು ಗೋವಿಂದ್ ಸಿಂಗ್ ಮರಾಠಿ ಶಾಲೆಯ ವಿಜ್ಞಾನ ಶಿಕ್ಷಕಿ ರಂಜನಾ ಪಾಟೀಲ್ ಹೇಳಿದ್ದಾರೆ.

Exit mobile version