Site icon Vistara News

Sheikh Hasina: ಇಂದಿರಾ ಗಾಂಧಿ ಮಹಾನ್ ನಾಯಕಿ, ನಾನು ಸಾಮಾನ್ಯ ವ್ಯಕ್ತಿ; ಶೇಖ್ ಹಸೀನಾ

Indira Gandhi is great, i am not Says Bangladesh PM Sheikh Hasina

ಢಾಕಾ: ಭಾರತದ ಉಕ್ಕಿನ ಮಹಿಳೆಯ ಇಂದಿರಾ ಗಾಂಧಿ ಜತೆಗಿನ ತಮ್ಮ ಹೋಲಿಕೆಯನ್ನು ನಯವಾಗಿಯೇ ತಳ್ಳಿ ಹಾಕಿರುವ ಬಾಂಗ್ಲಾದೇಶದ ಸಾರ್ವತ್ರಿಕ ಚುನಾವಣೆ (Bangladesh Election) ಗೆದ್ದಿರುವ ಪ್ರಧಾನಿ ಶೇಖ್ ಹಸೀನಾ ಅವರು(PM Shaikh Hasina), ಇಂದಿರಾ ಗಾಂಧಿ ಶ್ರೇಷ್ಠ ಮಹಿಳೆ(Indira Gandhi is great); ನಾನಲ್ಲ. ನಾನು ಸಾಮಾನ್ಯ ವ್ಯಕ್ತಿ ಎಂದು ಹೇಳಿಕೊಂಡಿದ್ದಾರೆ. 5ನೇ ಅವಧಿಗೆ ಬಾಂಗ್ಲಾದೇಶ ಪ್ರಧಾನಿಯಾಗಲಿರುವ ಶೇಖ್ ಹಸೀನಾ ಅವರು ಸುದ್ದಿಗಾರರೊಂದಿಗೆ ಮಾತನಾಡಿ ಅನೇಕ ವಿಷಯಗಳನ್ನು ಹಂಚಿಕೊಂಡರು.

ನನ್ನ ದೇಶದ ಜನರನ್ನು ತಾಯಿ ವಾತ್ಸಲ್ಯದಿಂದ ನೋಡಿಕೊಳ್ಳುತ್ತಿರುವ ನನಗೆ ಕೆಲಸ ಮಾಡಲು, ಹೆಣ್ಣು ಎಂಬ ಕಾರಣಕ್ಕೆ ಯಾವುದೇ ಅಡ್ಡಿಯಾಗಿಲ್ಲ. ನೀವು ದೇಶವನ್ನು ನಡೆಸುವಾಗ, ನೀವು ಮಹಿಳೆಯೇ ಪುರುಷನೋ ಎಂಬ ಕುರಿತು ವಿಚಾರ ಮಾಡಲು ಹೋಗಲೇಬಾರದು. ನಾನು ಅಧಿಕಾರಕ್ಕೆ ಬಂದಾಗ ಸಾಕಷ್ಟು ಸಂಗತಿಗಳ ಬಗ್ಗೆ ಕೇಳಲ್ಪಟ್ಟಿದ್ದೇನೆ. ಆದರೆ, ನಾನು ಕೆಲಸ ಮಾಡುವೆ; ಕೆಲಸ ಮಾಡಲು ಆರಂಭಿಸಿದಾಗ ನಾನು ಮಹಿಳೆ ಎಂದೂ ಭಾವಿಸಿಕೊಳ್ಳಲು ಹೋಗಲಿಲ್ಲ. ಹಾಗಂತ ನನಗೆ ನಿರ್ಬಂಧಗಳಿದ್ದವಾ? ಇಲ್ಲ ಎಂದು ಶೇಖ್ ಹಸೀನಾ ಅವರು ಹೇಳಿದ್ದಾರೆ.

ನಾನು ನನ್ನ ಜನರಿಗಾಗಿ ಕೆಲಸ ಮಾಡಲು ಪ್ರಯತ್ನಿಸುತ್ತೇನೆ. ಹೌದು, ನಾನು ನಿಮಗೆ ಒಂದು ವಿಷಯವನ್ನು ಹೇಳಬಲ್ಲೆ. ಒಬ್ಬ ಮಹಿಳೆ ತಾಯಿಯಾಗಿ (ಅವರು) ಕುಟುಂಬಗಳನ್ನು ನೋಡಿಕೊಳ್ಳುತ್ತಾರೆ, ಮಕ್ಕಳನ್ನು ನೋಡಿಕೊಳ್ಳುತ್ತಾರೆ, (ನಾನು) ಮಕ್ಕಳನ್ನು ಬೆಳೆಸಿದೆ. ಮಾತೃ ವಾತ್ಸಲ್ಯದಿಂದ ನಾನು ನನ್ನ ಜನರನ್ನು ನೋಡಿಕೊಳ್ಳುತ್ತೇನೆ.ನಾನು ಅವರಿಗೆ ಸಹಾಯ ಮಾಡಲುಪ್ರಯತ್ನಿಸುತ್ತೇನೆ ಎಂದು ಶೇಖ್ ಹಸೀನಾ ಅವರು ದೇಶವನ್ನು ಮುನ್ನಡೆಸುವ ಮಹಿಳೆಯಾಗಿ ಅವರು ಅನುಭವಿಸಿದ ನಿರ್ಬಂಧಗಳ ಬಗ್ಗೆ ಕೇಳಿದಾಗ ಅವರು ಉತ್ತರಿಸಿದರು.

ಮಹಿಳಾ ಪ್ರಧಾನಿ, ಅಧ್ಯಕ್ಷರಾದ ಭಾರತದ ಇಂದಿರಾ ಗಾಂಧಿ, ಶ್ರೀಲಂಕಾದ ಸಿರಿಮಾವೋ ಭಂಡಾರನಾಯಕಿ ಮತ್ತು ಇಸ್ರೇಲ್‌ನ ಗೋಲ್ಡಾ ಮೀರ್ ಅವರೊಂದಿಗೆ ಶೇಖ್ ಹಸೀನಾ ಅವರನ್ನು ಹೋಲಿಕೆ ಮಾಡಲಾಗುತ್ತಿದೆ ಎಂಬ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ನೀವು ಹೇಳಿದ ಇಂದಿರಾ ಗಾಂಧಿ, ಸಿರಿಮಾವೋ ಭಂಡಾರನಾಯಕಿ ಅಥವಾ ಗೋಲ್ಡಾ ಮೀರ್ ಅವರು ಮಹಾನ್ ನಾಯಕಿಯರು. ನಾನಲ್ಲ. ನಾನು ತುಂಬಾ ಸಾಮಾನ್ಯಳು. ನಾನೊಬ್ಬ ಸಾಮಾನ್ಯ ವ್ಯಕ್ತಿಯಷ್ಟೇ. ನಾನು ಈಗಲೂ ಸಾಮಾನ್ಯ ವ್ಯಕ್ತಿಯೆಂದೇ ಭಾವಿಸುತ್ತೇನೆ ಎಂದು ಹೇಳಿದ್ದಾರೆ.

ನನಗೆ ಹೆಚ್ಚು ಸಿಕ್ಕಿಲ್ಲ ಎಂದು ನಾನು ಹೇಳುತ್ತಿಲ್ಲ. ಆದರೆ ಒಂದು ವಿಷಯ, ನಾನು ಯಾವಾಗಲೂ ನನ್ನ ಜನರಿಗಾಗಿ ಕೆಲಸ ಮಾಡುವುದು ನನ್ನ ಜವಾಬ್ದಾರಿ ಎಂದು ಭಾವಿಸುತ್ತೇನೆ. ಹಾಗಾಗಿ ಇದು ನನಗೆ ದೊರೆತ ಸ್ಥಾನ ಎಂದೂ ನಾನು ಭಾವಿಸುವುದಿಲ್ಲ. ಇದು ನನ್ನ ದೇಶ, ನನ್ನ ಜನರಿಗೆ ಸೇವೆ ಸಲ್ಲಿಸಲು ಮತ್ತು ಅವರು ಉತ್ತಮ ಜೀವನವನ್ನು ಪಡೆಯುವುದನ್ನು ಖಚಿತಪಡಿಸಿಕೊಳ್ಳಲು ದೊರೆತ ಒಂದು ಅವಕಾಶ ಎಂದು ಭಾವಿಸುತ್ತೇನೆ ಎಂದು ಶೇಖ್ ಹಸೀನಾ ಅವರು ಹೇಳಿದ್ದಾರೆ.

ಪ್ರಮುಖ ಪ್ರತಿಪಕ್ಷಗಳು ಬಹಿಷ್ಕರಿಸಿದ ಚುನಾವಣೆಯಲ್ಲಿ ಮೂರನೇ ಎರಡರಷ್ಟು ಸ್ಥಾನಗಳನ್ನು ಗೆದ್ದ ಬಗ್ಗೆ ಮಾತನಾಡಿದ ಶೇಖ್ ಹಸೀನಾ ಅವರು, “ನಮ್ಮ ಜನ ನನಗೆ ಈ ಅವಕಾಶ ಕೊಟ್ಟಿದ್ದಾರೆ. ಪದೇ ಪದೇ ಜನರು ನನಗೆ ಮತ ಹಾಕುತ್ತಿದ್ದಾರೆ, ಹಾಗಾಗಿ ನಾನು ಇಲ್ಲಿದ್ದೇನೆ. ನಾನು ಅನೇಕ ಬಾರಿ ಬದುಕುಳಿದಿದ್ದೇನೆ ಮತ್ತು ಅಲ್ಲಾ ನನಗೆ ಈ ಅವಕಾಶವನ್ನು ಕೊಟ್ಟಿದ್ದಾನೆ ಎಂದು ನಾನು ಭಾವಿಸುತ್ತೇನೆ ಎಂದು ಹೇಳಿದ್ದಾರೆ.

ಈ ಸುದ್ದಿಯನ್ನೂ ಓದಿ: Bangladesh election: ಬಾಂಗ್ಲಾದೇಶದಲ್ಲಿ 5ನೇ ಅವಧಿಗೆ ಚುನಾವಣೆ ಗೆದ್ದ ಶೇಖ್ ಹಸೀನಾ!

Exit mobile version