ನವದೆಹಲಿ: ಕೇಂದ್ರದಲ್ಲಿ ಅಧಿಕಾರದಲ್ಲಿದ್ದಾಗ ಕಾಂಗ್ರೆಸ್, ಸಂವಿಧಾನದ 356 ಆರ್ಟಿಕಲ್ ಬಳಸಿಕೊಂಡು 90 ರಾಜ್ಯ ಸರ್ಕಾರಗಳನ್ನು ವಿಸರ್ಜಿಸಿತು. ಸಂವಿಧಾನದ ಈ ವಿಧಿಯನ್ನು ಇಂದಿರಾ ಗಾಂಧಿ ಅವರು 50 ಬಾರಿ ಬಳಸಿದ್ದಾರೆಂದು ಪ್ರಧಾನಿ ನರೇಂದ್ರ ಮೋದಿ ಅವರು ಕಾಂಗ್ರೆಸ್ ಪಕ್ಷವನ್ನು ತಿವಿದರು(PM Modi Speech in Rajya Sabha:).
ರಾಜ್ಯಸಭೆಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ಕೈಗೊಂಡಿರುವ ಸಾಧನೆಗಳ ಬಗ್ಗೆ ಮಾಹಿತಿ ನೀಡಿದರು. ಕೇಂದ್ರ ಸರ್ಕಾರವು ತನ್ನ ನೀತಿಗಳಲ್ಲಿ ಬದಲಾವಣೆ ತಂದು, ಡ್ರೋನ್ ತಂತ್ರಜ್ಞಾನವನ್ನು ಸಾಮಾನ್ಯನಿಗೂ ಉಪಯೋಗವಾಗುವಂತೆ ಮಾಡಿದೆ. ಪ್ರತಿಪಕ್ಷಗಳು ವಿಜ್ಞಾನ ಮತ್ತು ತಂತ್ರಜ್ಞಾನದ ವಿರುದ್ಧವಾಗಿದ್ದು, ಅವರಿದೆ ದೇಶದ ಬಗ್ಗೆ ಕಾಳಜಿಯೇ ಇಲ್ಲ. ಕೇವಲ ರಾಜಕಾರಣ ಬಗ್ಗೆ ಮಾತ್ರವೇ ಯೋಚಿಸುತ್ತಾರೆ ಎಂದು ವಾಗ್ದಾಳಿ ನಡೆಸಿದರು.
ಇಂದು, ಸುಮಾರು 350 ಕಂಪನಿಗಳು ರಕ್ಷಣಾ ವಲಯದಲ್ಲಿ ಕೆಲಸ ಮಾಡುತ್ತಿವೆ. ಈ ವಲಯದಲ್ಲಿ ನಮ್ಮ ದೇಶದ ಹೆಚ್ಚು ಕಡಿಮೆ ಒಂದು ಲಕ್ಷ ಕೋಟಿ ರೂ. ರಫ್ತು ಮಾಡುತ್ತಿದೆ. ಚಿಲ್ಲರೆಯಿಂದ ಪ್ರವಾಸೋದ್ಯಮದ ತನಕ ಎಲ್ಲ ಕ್ಷೇತ್ರಗಳು ಅಭಿವೃದ್ಧಿಯಾಗುತ್ತಿವೆ ಎಂದು ಮೋದಿ ಅವರು ಹೇಳಿದರು.
ಇದನ್ನೂ ಓದಿ: PM Modi Speech In Rajya Sabha: ನೀವು ಕೆಸರೆರಚಿದಷ್ಟು ಕಮಲ ಅರಳುತ್ತಲೇ ಇರುತ್ತದೆ, ಮೋದಿ ವಾಗ್ಝರಿ
ನಮ್ಮ ಮಾರುಕಟ್ಟೆಯಲ್ಲಿ ತಮ್ಮ ಔಷಧಗಳ ಮಾರಾಟಕ್ಕೆ ವಿದೇಶಗಳಿಂದ ಒತ್ತಡವಿತ್ತು. ಈ ಬಗ್ಗೆ ಲೇಖನಗಳನ್ನು ಬರೆಯಲಾಯಿತು, ಟಿವಿಗೆ ಸಂದರ್ಶನಗಳನ್ನು ನೀಡಲಾಯಿತು. ನಿನ್ನೆಯ ತನಕವೂ ನಮ್ಮ ವಿಜ್ಞಾನಿಗಳನ್ನು ಅವಮಾನಿಸುವ ಕೆಲಸವು ನಡೆದಿದೆ. ಆದರೆ, ನನ್ನ ದೇಶದ ವಿಜ್ಞಾನಿಗಳು ತಯಾರಿಸಿದ ಲಸಿಕೆಗಳಿಗೆ ಮಾನ್ಯತೆ ದೊರೆತಿದ್ದು, ಸುಮಾರು 150 ದೇಶಗಳಿಗೆ ಲಾಭವಾಗಿದೆ ಎಂದು ತಿಳಿಸಿದರು.