Site icon Vistara News

Indo China Border : ಸಿಕ್ಕಿಂನಿಂದ 150 ಕಿ.ಮೀ ದೂರದಲ್ಲಿ ಚೀನಾದಿಂದ ಅತ್ಯಾಧುನಿಕ ಯುದ್ಧ ವಿಮಾನ ನಿಯೋಜನೆ

indo Chaina border

ನವದೆಹಲಿ: ಸಿಕ್ಕಿಂಗಿಂತ 150 ಕಿಲೋಮೀಟರ್​ ದೂರದಲ್ಲಿರುವ ವಿಮಾನ ನಿಲ್ದಾಣದಲ್ಲಿ ಚೀನಾ ತನ್ನ ಅತ್ಯಾಧುನಿಕ ಜೆ -20 ಸ್ಟೆಲ್ತ್ ಫೈಟರ್ ಜೆಟ್ ಗಳನ್ನು ನಿಯೋಜಿಸಿರುವುದು ಮೇ 27 ರಂದು ಸಂಗ್ರಹಿಸಿದ ಉಪಗ್ರಹ ಚಿತ್ರಗಳ ಮೂಲಕ ಕಂಡು ಬಂದಿದೆ. ಈ ಚಿತ್ರವನ್ನು ಜಿಯೋಸ್ಪೇಷಿಯಲ್ ಇಂಟೆಲಿಜೆನ್ಸ್ ಅನ್ನು ನೋಡುವ ಸಂಸ್ಥೆಯಾದ ಆಲ್ ಸೋರ್ಸ್ ಅನಾಲಿಸಿಸ್​​ನ ಅನುಮತಿಯೊಂದಿ ಅಭಿವೃದ್ಧಿ ಮಾಡಲಾಗಿದೆ. ಈ ಮೂಲಕ ಚೀನಾ, ಭಾರತ ಗಡಿಯಲ್ಲಿ (Indo China Border) ಅತ್ಯಂತ ಅಪಾಯಕಾರಿ ವಿಮಾನವನ್ನು ನಿಯೋಜಿಸುವ ಮೂಲಕ ಆತಂಕ ಸೃಷ್ಟಿಸುತ್ತಿದೆ.

ಟಿಬೆಟ್​​ನ ಎರಡನೇ ಅತಿದೊಡ್ಡ ನಗರವಾದ ಶಿಗಾಟ್ಸೆಗೆ ಸೇವೆ ಸಲ್ಲಿಸುವ ಮಿ ಮತ್ತು ನಾಗರಿಕ ವಿಮಾನ ನಿಲ್ದಾಣ ಇದಾಗಿದ್ದು ಆರು ಚೀನೀ ವಾಯುಪಡೆಯ ಜೆ -20 ಸ್ಟೆಲ್ತ್ ಫೈಟರ್​​ ವಿಮಾನಗಳು ಅಲ್ಲಿ ಕಂಡು ಬಂದಿದೆ. ಈ ವಿಮಾನ ನಿಲ್ದಾಣವು 12,408 ಅಡಿ ಎತ್ತರದಲ್ಲಿದೆ, ಇದು ವಿಶ್ವದ ಅತಿ ಎತ್ತರದ ವಿಮಾನ ನಿಲ್ದಾಣಗಳಲ್ಲಿ ಒಂದು. ಜೆ -20 ಯುದ್ಧ ವಿಮಾನಗಳ ನಿಯೋಜನೆಯ ಬಗ್ಗೆ ತಿಳಿದಿರುವ ಭಾರತೀಯ ವಾಯುಪಡೆ (ಐಎಎಫ್) ಈ ಸಮಯದಲ್ಲಿ ಅವುಗಳ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದೆ.

ಜೆ -20 ಸ್ಟೆಲ್ತ್ ಫೈಟರ್ ಇಲ್ಲಿಯವರೆಗೆ ಚೀನಾದ ಅತ್ಯಂತ ಸುಧಾರಿತ ಕಾರ್ಯಾಚರಣೆಯ ಯುದ್ಧ ವಿಮಾನ. ಈ ವಿಮಾನಗಳು ಮುಖ್ಯವಾಗಿ ಚೀನಾದ ಪೂರ್ವ ಪ್ರಾಂತ್ಯಗಳಲ್ಲಿ ನೆಲೆಗೊಳಿಸಲಾಗಿದೆ ಎಂದು ಆಲ್ ಸೋರ್ಸ್ ಅನಾಲಿಸಿಸ್​ನ ತಂತ್ರಜ್ಞಾನ ಮತ್ತು ವಿಶ್ಲೇಷಣೆಯ ಉಪಾಧ್ಯಕ್ಷ ಹೇಳಿದ್ದಾರೆ. “ಈ ವಿಮಾನಗಳು ಟಿಬೆಟ್​ನ ಶಿಗಾಟ್ಸೆಯಲ್ಲಿ ಕಾಣಿಸಿಕೊಂಡಿರುವುದು ವಿಷೇಷ. ಯಾಕೆಂದರೆ ಅವುಗಳನ್ನು ತಮ್ಮ ಸಾಮಾನ್ಯ ಕಾರ್ಯಾಚರಣೆಯ ಪ್ರದೇಶಗಳ ಹೊರಗೆ ಮತ್ತು ಭಾರತೀಯ ಗಡಿಯ ಸಮೀಪದಲ್ಲಿ ನಿಯೋಜಿಸಿರುವುದು ಅಚ್ಚರಿಯಾಗಿದೆ.

ಭಾರತವು ತನ್ನ 36 ಫ್ರೆಂಚ್ ನಿರ್ಮಿತ ರಫೇಲ್ ಯುದ್ಧ ವಿಮಾನಗಳೊಂದಿಗೆ ಜೆ -20 ಅನ್ನು ಎದುರಿಸಬೇಕಾಗುತ್ತದೆ. ಅವುಗಳಲ್ಲಿ ಎಂಟು ಪ್ರಸ್ತುತ ಯುನೈಟೆಡ್ ಸ್ಟೇಟ್ಸ್ ಏರ್ ಫೋರ್ಸ್ ನ (ಯುಎಸ್ಎಎಫ್) ಸುಧಾರಿತ ವಾಯು ಯುದ್ಧ ರಿಹರ್ಸಲ್​​ಗಾಗಿ ಅಲಾಸ್ಕಾಕ್ಕೆ ಹಾರಿವೆ. ಗಮನಾರ್ಹವಾಗಿ, ಚೀನಾದ ಜೆ -20 ಪತ್ತೆಯಾದ ಶಿಗಾಟ್ಸೆ ಪಶ್ಚಿಮ ಬಂಗಾಳದ ಹಸಿಮಾರಾದಿಂದ (ಕೆಳಗೆ) 290 ಕಿ.ಮೀ ಗಿಂತ ಕಡಿಮೆ ದೂರದಲ್ಲಿದೆ. ಅಲ್ಲಿ ಭಾರತವು ತನ್ನ 16 ರಾಫೆಲ್​ ಎರಡನೇ ಸ್ಕ್ವಾಡ್ರನ್ ಅನ್ನು ನೆಲೆಗೊಳಿಸಲಾಗುತ್ತದೆ.

ಇದನ್ನೂ ಓದಿ: Azam Khan : ಸಮಾಜವಾದಿ ಪಕ್ಷದ ನಾಯಕ ಅಜಂ ಖಾನ್ ಗೆ 10 ವರ್ಷ ಜೈಲು, 14 ಲಕ್ಷ ದಂಡ

ಟಿಬೆನಲ್ಲಿ ಜೆ – 20 ವಿಮಾನವನ್ನು ಅನ್ನು ನಿಯೋಜಿಸುತ್ತಿರುವುದು ಇದೇ ಮೊದಲಲ್ಲ. 2020 ಮತ್ತು 2023 ರ ನಡುವೆ ಚೀನಾದ ಹೋಟಾನ್ ಪ್ರಾಂತ್ಯದ ಕ್ಸಿನ್ಜಿಯಾಂಗ್ನಲ್ಲಿ ಜೆಟ್​ಗಳನ್ನು ಇಡಲಾಗಿತ್ತು. ಆದಾಗ್ಯೂ, ಇದು ಜೆ -20ನ ವಿಚಾರದಲ್ಲಿ ಅತ್ಯಂತ ಸೂಕ್ಷ್ಮ ನಿಯೋಜನೆ ಎಂದು ನಂಬಲಾಗಿದೆ.

2017ರಿಂದ ಚೀನಾ ವಾಯುಸೇನೆ ಸೇರಿದ ಜೆ 20

ಮೈಟಿ ಡ್ರ್ಯಾಗನ್ ಎಂದೂ ಕರೆಯಲ್ಪಡುವ ಚೆಂಗ್ಡು ಜೆ -20 ಅವಳಿ ಎಂಜಿನ್ ಸ್ಟೆಲ್ತ್ ಫೈಟರ್ ಆಗಿದ್ದು, ಇದನ್ನು 2017 ರಲ್ಲಿ ಸೇವೆಗೆ ಪರಿಚಯಿಸಲಾಯಿತು. ಕೆಲವು ವರದಿಗಳು ಚೀನಾ ಈಗಾಗಲೇ 250 ಸ್ಟೆಲ್ತ್ ಫೈಟರ್​ಗಳನ್ನು ನಿಯೋಜಿಸಿದೆ. ಇದು ಅತಿ ವೇಗದ ವಿಮಾನವಾಗಿದ್ದ ರಾಡಾರ್​ ಮೂಲಕ ಗಮನಿಸುವುದು ಕಷ್ಟ.

ಯುದ್ಧ ವಿಮಾನದ ಸೇರ್ಪಡೆಯೊಂದಿಗೆ, ಚೀನಾ ಸ್ಟೆಲ್ತ್ ಫೈಟರ್ಗಳನ್ನು ಕಾರ್ಯಾಚರಣೆಯಲ್ಲಿ ನಿಯೋಜಿಸಿದ ವಿಶ್ವದ ಮೂರನೇ ದೇಶವಾಗಿ ಹೊರಹೊಮ್ಮಿತು. ಈ ಜೆಟ್ ಅನ್ನು ನಿರಂತರವಾಗಿ ಅಭಿವೃದ್ಧಿ ಮಾಡಲಾಗುತ್ತಿದೆ. ಇದರ ಪ್ರಾಥಮಿಕ ಜವಾಬ್ದಾರಿ ಯುದ್ಧ. ಇದು 300 ಕಿ.ಮೀ ದೂರದಲ್ಲಿರುವ ವೈಮಾನಿಕ ಗುರಿಗಳನ್ನು ಹೊಡೆಯುವ ಸಾಮರ್ಥ್ಯವನ್ನು ಹೊಂದಿದೆ ಎಂದು ನಂಬಲಾಗಿದೆ.

ಕಳೆದ ಐದು ವರ್ಷಗಳಲ್ಲಿ ಚೀನಾ ಟಿಬೆಟ್ ಮತ್ತು ಭಾರತ ಗಡಿಯ ಬಳಿಯ ಇತರ ಪ್ರದೇಶಗಳಲ್ಲಿ ತನ್ನ ವಾಯು ಶಕ್ತಿ ಸಾಮರ್ಥ್ಯವನ್ನು ಸ್ಥಿರವಾಗಿ ಹೆಚ್ಚಿಸಿದೆ. ಇದು ಪ್ರಾಥಮಿಕವಾಗಿ ಹೊಸ ವಾಯುನೆಲೆಗಳ ನಿರ್ಮಾಣ ಮತ್ತು ಅಸ್ತಿತ್ವದಲ್ಲಿರುವ ವಾಯುನೆಲೆಗಳಲ್ಲಿ ಮೂಲಸೌಕರ್ಯಗಳನ್ನು ಮೇಲ್ದರ್ಜೆಗೇರಿಸುವುದನ್ನು ಸೇರಿಕೊಂಡಿದೆ ಚೀನಾ ಜೆ -20 ಮತ್ತು ಅದರ ಎಚ್ -6 ಪರಮಾಣು ಸಾಮರ್ಥ್ಯದ ಬಾಂಬರ್ ಗಳಂತಹ ವಿಮಾನಗಳನ್ನು ಈ ಗಡಿ ಪ್ರದೇಶಗಳಲ್ಲಿ ನಿಯೋಜಿಸುತ್ತಿದೆ.

Exit mobile version