Site icon Vistara News

Govt Websites: 12000 ಸರ್ಕಾರಿ ವೆಬ್‌ಸೈಟ್ ಟಾರ್ಗೆಟ್ ಮಾಡಿದ ಇಂಡೋನೇಷ್ಯಾ ಹ್ಯಾಕರ್ಸ್

hackers

ನವದೆಹಲಿ: ಭಾರತ ಸರ್ಕಾರದ ಸುಮಾರು 12000 ಜಾಲತಾಣಗಳ (Govt Websites) ಮೇಲೆ ಇಂಡೋನೇಷ್ಯಾ ಹ್ಯಾಕರ್ಸ್ ಕಣ್ಣು ಬಿದ್ದಿದ್ದು, ಮಾಹಿತಿಯನ್ನು ಕದಿಯುವ ಸಾಧ್ಯತೆ ಇದೆ ಎಂದು ಎಚ್ಚರಿಕೆ ನೀಡಲಾಗಿದೆ. ಜಾಲತಾಣಗಳನ್ನು ಹ್ಯಾಕ್ ಆಗದಂತೆ ನೋಡಿಕೊಳ್ಳಲು ಅಧಿಕಾರಿಗಳಿಗೆ ಕೇಂದ್ರ ಸರ್ಕಾರ ಸೂಚಿಸಿದೆ ಎಂಬ ಮಾಹಿತಿಯನ್ನು ಮನೀ ಕಂಟ್ರೋಲ್ ವರದಿ ಮಾಡಿದೆ(Hackers From Indonesia).

ಇಂಡೋನೇಷ್ಯಾ ಹ್ಯಾಕರ್ಸ್ ಗ್ರೂಪ್, ಭಾರತ ಸರ್ಕಾರದ 12000 ಜಾಲತಾಗಳ ಟಾರ್ಗೆಟ್‌ ಮಾಡಿರುವ ಮಾಹಿತಿಯನ್ನು ಇಂಡಿಯನ್ ಸೈಬರ್‌ಕ್ರೈಮ್ ಕೋರ್ಡಿನೇಷನ್ ಸೆಂಟರ್(I4C) ನೀಡಿದೆ. ಈ ಸಂಸ್ಥೆಯು ಕೇಂದ್ರ ಗೃಹ ಇಲಾಖೆಯಡಿಯಲ್ಲಿ ಕೆಲಸ ಮಾಡುತ್ತದೆ. ಹ್ಯಾಕರ್ ಗುಂಪು ಸರ್ಕಾರಿ ಜಾಲತಾಣಗಳನ್ನು ಡಿಒಎಸ್(denial of service) ಮತ್ತು ಡಿಡಿಒಎಸ್ (distributed denial of service) ಮೂಲಕ ಹ್ಯಾಕ್ ಮಾಡುವ ಸಾಧ್ಯತೆ ಇದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಸಂಸ್ಥೆ ನೀಡಿರುವ ಎಚ್ಚರಿಕೆಯ ಗಂಭೀರ ಸ್ವರೂಪದ್ದಾಗಿದೆ. ಹಾಗಾಗಿ, ಸರ್ಕಾರಿ ನೌಕರರಿಗೆ ಕೆಲವು ಟಿಪ್ಸ್‌ಗಳನ್ನು ನೀಡಲಾಗಿದೆ. ಅಪರಿಚಿತರ ಇಮೇಲ್‌ಗಳನ್ನು ಕ್ಲಿಕ್ ಮಾಡಬೇಡಿ ಅಥವಾ ತೆರೆಯಬೇಡಿ, ಎಲ್ಲಾ ಸರ್ಕಾರಿ ವ್ಯವಸ್ಥೆಗಳು ತಮ್ಮ ಸಾಫ್ಟ್‌ವೇರ್ ಆವೃತ್ತಿಗಳಲ್ಲಿ ಅಪ್-ಟು-ಡೇಟ್ ಆಗಿವೆ ಎಂದು ಖಚಿತಪಡಿಸಿಕೊಳ್ಳಿ ಎಂದು ಸರ್ಕಾರಿ ನೌಕರರಿಗೆ ತಿಳಿಸಲಾಗಿದೆ. ದೃಢವಾದ ಸೈಬರ್ ಭದ್ರತೆಯನ್ನು ಹೊಂದಿರುವುದು ವ್ಯಾಪಾರಕ್ಕೆ ಮಾತ್ರವಲ್ಲದೆ ಪ್ರಮುಖ ಸರ್ಕಾರಿ ಸಂಸ್ಥೆಗಳಿಗೂ ಪ್ರಮುಖವಾಗಿದೆ ಎಂದು ಹೇಳಲಾಗಿದೆ.

ಇದನ್ನೂ ಓದಿ: ICMR Website | ಏಮ್ಸ್‌ಗಿಂತ ಮುಂಚೆ ಐಸಿಎಂಆರ್ ವೆಬ್‌ಸೈಟ್ ಹ್ಯಾಕ್ ಮಾಡಲು 6 ಸಾವಿರ ಬಾರಿ ಪ್ರಯತ್ನ!

ಈ ಹಿಂದೆ ಅಖಿಲ ಭಾರತೀಯ ವೈದ್ಯ ವಿಜ್ಞಾನ ಸಂಸ್ಥೆ(AIIMS) ಸರ್ವರ್‌ಗಳನ್ನು ಹ್ಯಾಕ್ ಮಾಡಲಾಗಿತ್ತು. ಕೆಲವು ವಾರಗಳವರೆಗೂ ಆಸ್ಪತ್ರೆಯ ಡೇಟಾ ಬೇಸ್ ಸಿಗದಂತೆ ಮಾಡಲಾಗಿತ್ತು. ಇದರಿಂದಾಗಿ ಆಸ್ಪತ್ರೆಯ ರೋಗಿಗಳು ತೀವರ್ ತೊಂದರೆ ಅನುಭವಿಸಿದರು. ಅಲ್ಲದೇ, ಆಸ್ಪತ್ರೆಯ ನಿರ್ವಹಣೆಯೇ ಕಷ್ಟಕರವಾಗಿತ್ತು. ಇಡೀ ಆರೋಗ್ಯ ವ್ಯವಸ್ಥೆಗೆ ಪೆಟ್ಟು ಬಿದ್ದಿತ್ತು. ಚೀನಾ ಮತ್ತು ಪಾಕಿಸ್ತಾನ ಸೇರಿದಂತೆ ಕೆಲವು ರಾಷ್ಟ್ರಗಳ ಹ್ಯಾಕರ್ಸ್ ಗ್ರೂಪ್ ಆಗಾಗ ಭಾರತ ಸರ್ಕಾರಿ ಜಾಲತಾಣಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸುತ್ತಿರುತ್ತಾರೆ.

Exit mobile version