ನವದೆಹಲಿ: ಸ್ವಯಂಚಾಲಿತ ವ್ಯಾಪಾರದ ಅಪ್ಲಿಕೇಶನ್‌ಗಳನ್ನು(automated trading applications) ಅನುಮೋದಿಸುವ ಅಥವಾ ಹೂಡಿಕೆ ಮಾಡುವ ಬಗೆಗಿನ ವರದಿಗಳನ್ನು ಇನ್ಫೋಸಿಸ್ ಸಹ ಸಂಸ್ಥಾಪಕ ಎನ್ ಆರ್ ನಾರಾಯಣ ಮೂರ್ತಿ (Infosys co-founder N R Narayana Murthy) ಅವರು ವರದಿಗಳನ್ನು ಗುರುವಾರ ನಿರಾಕರಿಸಿದ್ದಾರೆ. ಈ ರೀತಿಯ ಸುಳ್ಳು ಸುದ್ದಿಗಳು (Fake News) ವಂಚನೆಯ ವೆಬ್‌ಸೈಟ್‌ಗಳಲ್ಲಿ ಕಾಣಿಸಿಕೊಂಡಿವೆ ಎಂದು ಅವರು ತಿಳಿಸಿದ್ದಾರೆ.
PUBLIC WARNING ISSUED IN RESPECT OF FAKE VIDEOS AND POSTS ON SOCIAL MEDIA AND INTERNET ABOUT ME
— Narayana Murthy (@Infosys_nmurthy) December 14, 2023
ಇತ್ತೀಚಿನ ತಿಂಗಳುಗಳಲ್ಲಿ ಬಿಟಿಸಿ ಎಐ, ಎವೆಕ್ಸ್, ಬ್ರಿಟಿಷ್ ಬಿಟ್‌ಕಾಯಿನ್ ಪ್ರಾಫಿಟ್, ಬಿಟ್ ಲೈಟ್ ಸಿಂಕ್, ಬಿಟ್ ಮೊಮೆಂಟಮ್, ಕ್ಯಾಪಿಟಾಲಿಕ್ಸ್ ವೆಂಚರ್ಸ್ ಇತ್ಯಾದಿ ಎಂಬ ಹೆಸರಿನ ಸ್ವಯಂಚಾಲಿತ ವ್ಯಾಪಾರ ಅಪ್ಲಿಕೇಶನ್‌ಗಳನ್ನು ನಾನು ಅನುಮೋದಿಸಿದ್ದೇನೆ ಅಥವಾ ಅವುಗಳಲ್ಲಿ ಹೂಡಿಕೆ ಮಾಡಿದ್ದೇನೆ ಎಂದು ಸಾಮಾಜಿಕ ಮಾಧ್ಯಮಗಳು ಮತ್ತು ಇಂಟರ್ನೆಟ್‌ನಲ್ಲಿ ಲಭ್ಯವಿರುವ ವಿವಿಧ ವೆಬ್‌ಪುಟಗಳಲ್ಲಿ ಹಲವಾರು ನಕಲಿ ಸುದ್ದಿಗಳನ್ನು ಪ್ರಚಾರ ಮಾಡಲಾಗಿದೆ. ಈ ಅಪ್ಲಿಕೇಶನ್‌ಗಳು ಅಥವಾ ವೆಬ್‌ಸೈಟ್‌ಗಳೊಂದಿಗಿನ ಯಾವುದೇ ಅನುಮೋದನೆ, ಸಂಬಂಧವನ್ನು ನಾನು ಸ್ಪಷ್ಟವಾಗಿ ನಿರಾಕರಿಸುತ್ತೇನೆ ಎಂದು ನಾರಾಯಣ ಮೂರ್ತಿ ಅವರು ಎಕ್ಸ್ ವೇದಿಕೆಯಲ್ಲಿ ಹಂಚಿಕೊಂಡಿರುವ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.
ಈ ವಿಷಯಕ್ಕೆ ಸಂಬಂಧಿಸಿದ ಕೆಲವು ಸುದ್ದಿಗಳು ಕೆಲವು ವಂಚನೆಯ ವೆಬ್‌ಸೈಟ್‌ಗಳಲ್ಲಿ ಕಾಣಿಸಿಕೊಂಡಿದ್ದು, ಅವು ಜನಪ್ರಿಯ ಪತ್ರಿಕೆಗಳ ವೆಬ್‌ಸೈಟ್‌ಗಳ ರೀತಿಯಲ್ಲಿವೆ. ಕೆಲವು ಡೀಪ್ ಫೇಕ್ ಚಿತ್ರಗಳು ಹಾಗೂ ನಕಲಿ ವಿಡಿಯೋಗಳನ್ನು ಬಳಸಿಕೊಂಡು ನಕಲಿ ಸಂದರ್ಶನಗಳನ್ನೂ ಪ್ರಕಟಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಈ ರೀತಿಯ ವಂಚನೆಯ ವೆಬ್‌ಸೈಟ್‌ಗಳ ಆಮಿಷಕ್ಕೆ ಬಲಿ ಬೀಳದಂತೆ ನಾನು ಸಾರ್ವಜನಿಕರಿಗೆ ಎಚ್ಚರಿಸುತ್ತಿದ್ದೇನೆ. ಅವರು ನಿಮಗೆ ಮಾರಲು ಮುಂದಾಗುತ್ತಿರುವ ಯಾವುದೇ ಉತ್ಪನ್ನ ಮತ್ತು ಸೇವೆ ಆಮಿಷಕ್ಕೆ ಒಳಗಗಾಬೇಡಿ. ಅಂಥ ಯಾವುದೇ ವಂಚನೆ ಕಂಡು ಬಂದರೆ ಕೂಡಲೇ ಸಂಬಂಧಿಸಿದ ನಿಯಂತ್ರಣಾ ಸಂಸ್ಥೆಗಳಿಗೆ ರಿಪೋರ್ಟ್ ಮಾಡಿದೆ ಎಂದು ಇನ್ಪೋಸಿಸ್ ಸಹ ಸಂಸ್ಥಾಪಕ ನಾರಾಯಣ ಮೂರ್ತಿ ಅವರು ತಮ್ಮ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.
ಈ ಸುದ್ದಿಯನ್ನೂ ಓದಿ: NR Narayana Murthy: “70 ಅಲ್ಲ, 90 ಗಂಟೆ ಕೆಲಸ…ʼʼ ನಾರಾಯಣ ಮೂರ್ತಿ ಇನ್ನೊಂದು ಬಾಂಬ್