ಬೆಂಗಳೂರು: ಟೊಯೊಟಾ ಕಿರ್ಲೋಸ್ಕರ್ ಮೋಟಾರ್ (ಟಿಕೆಎಂ) ತನ್ನ ‘ಗ್ರಾಹಕ-ಮೊದಲು’ ತತ್ವಕ್ಕೆ ಅನುಗುಣವಾಗಿ ಗ್ರಾಹಕರ ಅಗತ್ಯಗಳಿಗೆ ಸ್ಪಂದಿಸಿ ಹೊಸ ಇನ್ನೋವಾ ಹೈಕ್ರಾಸ್ GX (O) ಗ್ರೇಡ್ ಅನ್ನು ಪೆಟ್ರೋಲ್ ರೂಪಾಂತರದಲ್ಲಿ ಪರಿಚಯಿಸುವುದಾಗಿ (Innova Hycross) ಘೋಷಿಸಿದೆ.
ಇನ್ನೋವಾ ಹೈಕ್ರಾಸ್ ಸರಣಿಗೆ ಇತ್ತೀಚಿನ ಸೇರ್ಪಡೆಯಾಗಿರುವ GX (O) ಗ್ರೇಡ್ 10 ಕ್ಕೂ ಹೆಚ್ಚು ಸುಧಾರಿತ ಆರಾಮದಾಯಕ ಮತ್ತು ತಂತ್ರಜ್ಞಾನ ವೈಶಿಷ್ಟ್ಯಗಳನ್ನು ಹೊಂದಿದ್ದು, ಇನ್ನೋವಾ ಹೈಕ್ರಾಸ್ ಪೆಟ್ರೋಲ್ ಜಿಎಕ್ಸ್ (ಒ) ಹೆಚ್ಚಿನ ಅಗತ್ಯತೆಗಳನ್ನು ಬಯಸುವ ಗ್ರಾಹಕರಿಗೆ ಮೌಲ್ಯಾಧಾರಿತವಾಗಿದೆ.
ಇದನ್ನೂ ಓದಿ: NEET PG-2024: ನೀಟ್ ಪಿಜಿ ಅರ್ಜಿ ಸಲ್ಲಿಕೆ ಇಂದಿನಿಂದ ಪ್ರಾರಂಭ; ಇಲ್ಲಿದೆ ನೋಂದಣಿ ಮಾಹಿತಿ
ವಿಶೇಷತೆಗಳೇನು?
ಮುಂಭಾಗದ ಎಲ್ಇಡಿ ಫಾಗ್ ಲ್ಯಾಂಪ್ಸ್ , ಮುಂಭಾಗ ಮತ್ತು ಹಿಂಭಾಗದ ಪಾರ್ಕಿಂಗ್ ಸೆನ್ಸಾರ್ಸ್, ರಿಯರ್ ಡೀಫಾಗರ್ ಫೀಚರ್‌ಗಳನ್ನು ಇದು ಒಳಗೊಂಡಿದೆ. ಸುಪೀರಿಯರ್ ಕಂಫರ್ಟ್ – ಚೆಸ್ಟ್ ನಟ್ ಥೀಮ್ ಇಂಟೀರಿಯರ್, ಸಾಫ್ಟ್ ಟಚ್ ಡ್ಯಾಶ್ ಬೋರ್ಡ್ ಮತ್ತು ಡೋರ್ ಪ್ಯಾನಲ್, ಮಿಡ್-ಗ್ರೇಡ್ ಫ್ಯಾಬ್ರಿಲ್ ಸೀಟ್ಸ್, ರಿಯರ್ ಸನ್ ಶೇಡ್ ವೈಶಿಷ್ಟ್ಯವನ್ನು ಹೊಂದಿದ್ದು, ಆಟೋ ಎಸಿ, 10.1″ ಇನ್ಫೋಟೈನ್‌ಮೆಂಟ್ ಸಿಸ್ಟಂ, ವೈರ್‌ಲೆಸ್ ಆಪಲ್ ಕಾರ್ ಪ್ಲೇ, ಪನೋರಮಿಕ್ ವ್ಯೂ ಮಾನಿಟರ್‌ಗಳನ್ನು ಒಳಗೊಂಡಿದೆ.
7 ಡೈನಾಮಿಕ್ ಬಣ್ಣಗಳಲ್ಲಿ ಲಭ್ಯ
7 ಮತ್ತು 8 ಸೀಟರ್ ಆಯ್ಕೆಗಳಲ್ಲಿ ಲಭ್ಯವಿರುವ GX (O) ಗ್ರೇಡ್ 7 ಡೈನಾಮಿಕ್ ಬಣ್ಣಗಳಲ್ಲಿ ಲಭ್ಯವಿದೆ. ಬ್ಲ್ಯಾಕಿಶ್ ಅಗೆಹಾ ಗ್ಲಾಸ್ ಫ್ಲೇಕ್, ಪ್ಲಾಟಿನಂ ವೈಟ್ ಪರ್ಲ್ , ಆಟಿಟ್ಯೂಡ್ ಬ್ಲ್ಯಾಕ್ ಮೈಕಾ, ಸ್ಪಾರ್ಕ್ಲಿಂಗ್ ಬ್ಲ್ಯಾಕ್ ಕ್ರಿಸ್ಟಲ್ ಶೈನ್, ಸಿಲ್ವರ್ ಮೆಟಾಲಿಕ್, ಸೂಪರ್ ವೈಟ್ ಮತ್ತು ಅವಂಟ್ ಗ್ರೇಡ್ ಬ್ರೋನ್ಜ್ ಮೆಟಾಲಿಕ್ ಕಲರ್ ಗಳಲ್ಲಿ ದೊರೆಯಲಿದೆ.
ಈ ಕುರಿತು ಟೊಯೊಟಾ ಕಿರ್ಲೋಸ್ಕರ್ ಮೋಟಾರ್‌ನ ಸೇಲ್ಸ್-ಸರ್ವೀಸ್-ಯೂಸ್ಡ್ ಕಾರ್ ಬಿಸಿನೆಸ್‌ನ ಉಪಾಧ್ಯಕ್ಷ ಶಬರಿ ಮನೋಹರ್ ಮಾತನಾಡಿ, ನಿರಂತರವಾಗಿ ಮಾರುಕಟ್ಟೆಯ ಅಗತ್ಯಗಳನ್ನು ಆಲಿಸುತ್ತೇವೆ. ಇದರಿಂದಾಗಿ ನಾವು ನೀಡುವ ಪ್ರತಿಯೊಂದು ವಾಹನವು ನಮ್ಮ ಗ್ರಾಹಕರ ವಿಕಸನಗೊಳ್ಳುವ ಅಗತ್ಯಗಳಿಗೆ ಹೊಂದಿಕೆಯಾಗುತ್ತದೆ. ಹೊಸ ಇನ್ನೋವಾ ಹೈಕ್ರಾಸ್ ಪೆಟ್ರೋಲ್ GX (O) ಗ್ರೇಡ್ ಈ ತತ್ವಕ್ಕೆ ನಿದರ್ಶನವಾಗಿದೆ.
ಇದನ್ನೂ ಓದಿ: Dinesh Karthik: ಕಾರ್ತಿಕ್ಗೆ ಟಿ20 ವಿಶ್ವಕಪ್ನಲ್ಲಿ ಅವಕಾಶ ನೀಡಿ; ದಿಗ್ಗಜ ಕ್ರಿಕೆಟಿಗರ ಒತ್ತಾಯ
ಇದು ಹೆಚ್ಚಿನ ಆರಾಮದಾಯಕ ಮತ್ತು ಸುಧಾರಿತ ತಂತ್ರಜ್ಞಾನವನ್ನು ಐಷಾರಾಮಿ ಮತ್ತು ದಕ್ಷತೆಯೊಂದಿಗೆ ಎಚ್ಚರಿಕೆಯಿಂದ ಬೆರೆಸುತ್ತದೆ. ಕಾರ್ಯಕ್ಷಮತೆಯು ಉನ್ನತ ದರ್ಜೆಯದ್ದಾಗಿದ್ದು, 10ಕ್ಕೂ ಹೆಚ್ಚು ವೈಶಿಷ್ಟ್ಯಗಳು ತಮ್ಮ ವಿಕಸನಗೊಳ್ಳುತ್ತಿರುವ ಲೈಫ್‌ಸ್ಟೈಲ್ ಅವಶ್ಯಕತೆಗಳನ್ನು ಪೂರೈಸುವ ಗುರಿಯನ್ನು ಹೊಂದಿರುವ ಆಕರ್ಷಕ ಪ್ರಸ್ತಾಪದೊಂದಿಗೆ ಸಂಪೂರ್ಣವಾಗಿ ಲೋಡ್ ಮಾಡಲಾದ ಪೆಟ್ರೋಲ್ ಆವೃತ್ತಿಯನ್ನು ಹುಡುಕುತ್ತಿರುವ ಗ್ರಾಹಕರಿಂದ ಹೆಚ್ಚಿನ ಸ್ಪಂದನೆ ದೊರೆಯುವ ನಿರೀಕ್ಷೆ ಇದೆ ಎಂದು ತಿಳಿಸಿದ್ದಾರೆ.
ಎಕ್ಸ್ ಶೋರೂಂ ಬೆಲೆಗಳ ವಿವರಗಳು
Variant Ex Showroom Price (W.E.F 15th Apr 2024) Hycross Petrol GX (O) – 8-Seater 20.99 ಲಕ್ಷ ರೂ, ಮತ್ತು Hycross Petrol GX (O) – 7-Seater 21.13 ಲಕ್ಷ ರೂಗಳು ಆಗಿದೆ.
ಹೆಚ್ಚಿನ ಕಾರ್ಯಕ್ಷಮತೆ
ಇನ್ನೋವಾ ಹೈಕ್ರಾಸ್ 2 ಲೀ ಟಿಎನ್‌ಜಿಎ ಗ್ಯಾಸೋಲಿನ್ ಎಂಜಿನ್ ಹೊಂದಿದ್ದು, 128 ಕಿಲೋವ್ಯಾಟ್ (174 ಪಿಎಸ್) ಮತ್ತು 205 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ, ಲಾಂಚ್ ಗೇರ್ ಕಾರ್ಯ ವಿಧಾನದೊಂದಿಗೆ ಡೈರೆಕ್ಟ್ ಶಿಫ್ಟ್ ಸಿವಿಟಿ ಮತ್ತು ಸುಗಮ ಹಾಗೂ ಸ್ಪಂದಿಸುವ ವೇಗವರ್ಧನೆಗಾಗಿ 10 ಸ್ಪೀಡ್ ಸೀಕ್ವೆನ್ಸಿಯಲ್ ಶಿಫ್ಟ್ ಜತೆಗೆ 16.13 ಕಿ.ಮೀ ಬೆಸ್ಕ್ ಇನ್‌ಕ್ಲಾಸ್ ಫ್ಯೂಯಲ್ ಎಕಾನಮಿಯನ್ನು ಹೊಂದಿದೆ.
ಇದನ್ನೂ ಓದಿ: Gold Rate Today: ಏರಿಕೆಯಲ್ಲಿ ದಾಖಲೆ ಬರೆಯುತ್ತಲೇ ಇದೆ ಚಿನ್ನದ ದರ! ಇಂದಿನ ಬೆಲೆ ₹74,130 !
ಟಫ್ ಎಕ್ಸ್‌ಟೀರಿಯರ್
ಹೊಸ ಗ್ರೇಡ್ ಬೋಲ್ಡ್ ಮತ್ತು ಮಸ್ಕ್ಯುಲಾರ್ ಎಸ್‌ಯುವಿ ತರಹದ ಎಕ್ಸ್‌ಟೀರಿಯರ್ ಅನ್ನು ಹೊಂದಿದೆ. 16-ಇಂಚಿನ ಸಿಲ್ವರ್ ಅಲಾಯ್ ವೀಲ್ಸ್, ಎಲ್ಇಡಿ ಸ್ಟಾಪ್ ಲ್ಯಾಂಪ್‌ನೊಂದಿಗೆ ರೂಫ್ ಎಂಡ್ ಸ್ಪಾಯ್ಲರ್ ಮತ್ತು ಎಲ್‌ಇಡಿ ಸ್ಪಾಟ್ ಲ್ಯಾಂಪ್ ಜತೆಗೆ ರೂಫ್ ಎಂಡ್ ಸ್ಪಾಯ್ಲರ್, ಆಟೋ ಫೋಲ್ಡ್ ಓಆರ್‌ವಿಎಂ, ಎಲೆಕ್ಟ್ರಿಕ್ ಅಡ್ಜಸ್ಟ್ ಮತ್ತು ಟರ್ನ್ ಇಂಡಿಕೇಟರ್ ವೈಶಿಷ್ಟ್ಯಗಳನ್ನು ಹೊಂದಿದೆ.
ಐಷಾರಾಮಿ ಮತ್ತು ಆರಾಮದಾಯಕ ಇಂಟೀರಿಯರ್
ಇನ್ನೋವಾ ಹೈಕ್ರಾಸ್ GX (O) ಸುಧಾರಿತ ಕ್ಯಾಬಿನ್ ಸೌಂದರ್ಯವನ್ನು ಹೊಂದಿದೆ. ಡಾರ್ಕ್ ಚೆಸ್ಟ್ನಟ್ ಕ್ವಿಲ್ಟೆಡ್ ಲೆದರ್ ಸೀಟುಗಳೊಂದಿಗೆ ಸಾಫ್ಟ್ ಟಚ್ ಲೆದರ್ ಮತ್ತು ಮೆಟಾಲಿಕ್ ಡೆಕೋರೇಟೆಡ್ ಲೈನಿಂಗ್ ಅನ್ನು ಒಳಗೊಂಡಿದೆ.
ಕಾಕ್ ಪಿಟ್ ಅನ್ನು ಸಮತಲ ಟೋನ್‌ಗಳಲ್ಲಿ ವಿನ್ಯಾಸಗೊಳಿಸಲಾಗಿದ್ದು, ಹೆಚ್ಚಿನ ಸ್ಥಳಾವಕಾಶವನ್ನು ಒದಗಿಸಲಿದೆ. ಶಕ್ತಿಯುತ ಎಕ್ಸ್‌ಟೀರಿಯರ್ ಅನ್ನು ಪ್ರತಿಬಿಂಬಿಸಲು ಸೆಂಟ್ರಲ್ ಕ್ಲಸ್ಟರ್ ಮತ್ತು ಡೋರ್ ಡೆಕೋರ್‌ಗಾಗಿ ವರ್ಟಿಕಲ್ ಟೋನ್‌ಅನ್ನು ಬಳಸಲಾಗಿದೆ.
ಸುಧಾರಿತ ಸುರಕ್ಷತಾ ಕೊಡುಗೆ
ಇನ್ನೋವಾ ಹೈಕ್ರಾಸ್ ಆಟೋ-ಹೋಲ್ಡ್‌ನೊಂದಿಗೆ ಎಲೆಕ್ಟ್ರಿಕ್ ಪಾರ್ಕಿಂಗ್ ಬ್ರೇಕ್, ಆಲ್-ವೀಲ್ ಡಿಸ್ಕ್ ಬ್ರೇಕ್ 6 ಎಸ್‌ಆರ್‌ಎಸ್ ಏರ್ ಬ್ಯಾಗ್ ಮತ್ತು ಐಎಸ್ ಒಫಿಕ್ಸ್ ಆಂಕರ್‌ಗಳು ಸೇರಿದಂತೆ ಸಮಗ್ರ ಸುರಕ್ಷತಾ ವೈಶಿಷ್ಟ್ಯಗಳನ್ನು ಸಾಟಿಯಿಲ್ಲದ ಆರಾಮದೊಂದಿಗೆ ನೀಡುತ್ತಿದೆ. ವೈಯಕ್ತಿಕ ಐಷಾರಾಮಕ್ಕಾಗಿ ಕ್ಯಾಪ್ಟನ್ ಸೀಟುಗಳನ್ನು ನೀಡುತ್ತದೆ, ಹೆಚ್ಚಿದ ಬೂಟ್ ಸ್ಪೇಸ್ ಗಾಗಿ 3ನೇ ಸಾಲಿನ ಫೋಲ್ಡ್-ಫ್ಲಾಟ್ ಸೀಟ್, ರೀಕ್ಲೈನ್ ಮೂರನೇ ಸಾಲಿನ ಸೀಟ್‌ಗಳು ಎಲ್ಲಾ ಪ್ರಯಾಣಿಕರಿಗೆ ಪ್ರತಿ ಪ್ರಯಾಣವು ಆನಂದದಾಯಕವಾಗಿರಲಿದೆ ಎಂಬುದನ್ನು ಖಚಿತಪಡಿಸುತ್ತದೆ.
ಇದನ್ನೂ ಓದಿ: Auto Fare : ಮೆಜೆಸ್ಟಿಕ್ ಟು ಲಾಲ್‌ಬಾಗ್‌ಗೆ ಆಟೋ ಚಾರ್ಜ್ 400 ರೂ; ಸೆಕೆಂಡ್‌ಗೆ 5ರೂ ಏರಿಕೆಗೆ ಪ್ರಯಾಣಿಕ ಕಕ್ಕಾಬಿಕ್ಕಿ
ಮೌಲ್ಯವರ್ಧಿತ ಸೇವೆಗಳು
ಹೊಸ ಜಿಎಕ್ಸ್ (ಒ) ಗ್ರೇಡ್ ಐದು ವರ್ಷಗಳ ಕಾಂಪ್ಲಿಮೆಂಟರಿ ರೋಡ್ ಸೈಡ್ ಅಸಿಸ್ಟೆನ್ಸ್ , ಮೂರು ವರ್ಷ ಅಥವಾ 1,00,000 ಕಿಲೋಮೀಟರ್ ಸ್ಟ್ಯಾಂಡರ್ಡ್ ವಾರಂಟಿ, ಪ್ರಮಾಣೀಕೃತ ವಿನಿಮಯ ಕಾರ್ಯಕ್ರಮದ ಜತೆಗೆ ವೈಯಕ್ತಿಕ ಅಗತ್ಯಗಳು ಮತ್ತು ಆದ್ಯತೆಗಳನ್ನು ಪೂರೈಸಲು ವಿನ್ಯಾಸಗೊಳಿಸಲಾದ ವಿಸ್ತರಿತ ವಾರಂಟಿ ಕಾರ್ಯಕ್ರಮದಂತಹ ಮೌಲ್ಯವರ್ಧಿತ ಸೇವೆಗಳ ಈ ಶ್ರೇಣಿಯಲ್ಲಿ ದೊರೆಯಲಿವೆ.