ನವದೆಹಲಿ: ಸ್ಟೋರಿ ಹಾಗೂ ರೀಲ್ಸ್‌ಗಳಿಂದಲೇ ಜಗತ್ತಿನಾದ್ಯಂತ ಖ್ಯಾತಿ ಗಳಿಸಿರುವ ಇನ್‌ಸ್ಟಾಗ್ರಾಂ ಸರ್ವರ್ ಡೌನ್ (Instagram Down) ಆಗಿದ್ದು, ಇದರಿಂದ ಲಕ್ಷಾಂತರ ಜನ ರೀಲ್ಸ್ ಹಾಗೂ ಸ್ಟೋರಿಗಳಿಲ್ಲದೆ ಪೇಚಾಟ ಅನುಭವಿಸಿದ್ದಾರೆ. ಹೆಚ್ಚಿನ ಜನರಿಗೆ ಸ್ಟೋರಿ ಹಾಗೂ ರೀಲ್ಸ್ ಅಪ್‌ಲೋಡ್ ಮಾಡಲು ಆಗಿಲ್ಲ. ಈ ಕುರಿತು ಸಾವಿರಾರು ಜನ ಫೇಸ್‌ಬುಕ್, ಟ್ವಿಟರ್ ಸೇರಿ ಹಲವು ಜಾಲತಾಣಗಳಲ್ಲಿ ದೂರಿದ್ದಾರೆ.
ಸಾಮಾಜಿಕ ಜಾಲತಾಣಗಳ ಸರ್ವರ್ ಡೌನ್ ಸೇರಿ ಹಲವು ವಿಷಯಗಳ ಮೇಲೆ ನಿಗಾ ಇರಿಸುವ ಡೌನ್‌ಡಿಟೆಕ್ಟರ್, ಇನ್‌ಸ್ಟಾಗ್ರಾಂ ಸರ್ವರ್ ಡೌನ್ ಆಗಿರುವ ಕುರಿತು ಮಾಹಿತಿ ನೀಡಿದೆ. ಇನ್‌ಸ್ಟಾಗ್ರಾಂ ರೀಲ್ಸ್‌ಗಳ ಮೂಲಕವೇ ಸೆಲೆಬ್ರಿಟಿಗಳಾಗಿರುವವರ ರೀಲ್ಸ್‌ಗಳ ವ್ಯೂಸ್ (Views) ಸೊನ್ನೆ ಎಂಬುದಾಗಿ ತೋರಿಸುತ್ತಿದೆ. ಮೊದಲಿಗೆ ಅಮೆರಿಕ ಹಾಗೂ ಅಮೆರಿಕ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಇನ್‌ಸ್ಟಾಗ್ರಾಂ ಸರ್ವರ್ ಡೌನ್ ಆಗಿತ್ತು. ನಂತರ ಬೇರೆ ಪ್ರದೇಶಗಳಲ್ಲೂ ಈ ಸಮಸ್ಯೆ ಉಂಟಾಗಿದೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: Samantha Ruth Prabhu: 16ವರ್ಷಗಳ ಹಿಂದೆ ಸಮಂತಾ ಹೇಗಿದ್ದರು?; ಇನ್ಸ್ಟಾದಲ್ಲಿ ಹಳೇ ಫೋಟೋ ಶೇರ್ ಮಾಡಿಕೊಂಡ ನಟಿ
ಡೌನ್ ಡಿಟೆಕ್ಟರ್ ಮಾಹಿತಿ ಪ್ರಕಾರ, ಶೇ.38ರಷ್ಟು ಬಳಕೆದಾರರು ಇನ್‌ಸ್ಟಾಗ್ರಾಂ App ಬಳಸಲು ತೊಂದರೆಯಾಗಿದೆ. ಇನನು ಶೇ.33ರಷ್ಟು ಬಳಕೆದಾರರಿಗೆ ಸರ್ವರ್ ಕನೆಕ್ಷನ್ ಸಮಸ್ಯೆಯಾಗಿದೆ. ಹಾಗೆಯೇ, ಶೇ.29ರಷ್ಟು ಬಳಕೆದಾರರಿಗೆ ಲಾಗ್ ಇನ್ ಆಗುವ ವೇಳೆ ತೊಂದರೆಯುಂಟಾಗಿದೆ ಎಂದು ತಿಳಿದುಬಂದಿದೆ.
ಕೆಲ ತಿಂಗಳ ಹಿಂದೆಯೂ ಮೆಟಾ ಒಡೆತನದ ಇನ್‌ಸ್ಟಾಗ್ರಾಂ ಸರ್ವರ್ ಡೌನ್ ಆಗಿತ್ತು. ಆದಾಗ್ಯೂ, ಸರ್ವರ್ ಡೌನ್ ಆಗಿರುವ, ಅದನ್ನು ಬಗೆಹರಿಸುವ ಕುರಿತು ಇದುವರೆಗೆ ಮೆಟಾ ಆಗಲಿ, ಇನ್‌ಸ್ಟಾಗ್ರಾಂ ಆಗಲಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಇನ್‌ಸ್ಟಾಗ್ರಾಂ ಬಳಕೆದಾರರ ಖಾತೆಯನ್ನು ವೇರಿಫೈ ಮಾಡಲು ಇತ್ತೀಚೆಗೆ ಭಾರತದಲ್ಲಿ ಮೆಟಾ ದರ ನಿಗದಿ ಮಾಡಿದೆ. ವೆಬ್ ಬಳಕೆದಾರರಿಗೆ 1,099 ಹಾಗೂ ಮೊಬೈಲ್‌ನಲ್ಲಿ ಇನ್‌ಸ್ಟಾಗ್ರಾಂ ಬಳಸುವವರಿಗೆ 1,499 ರೂ. ನಿಗದಿಪಡಿಸಿದೆ. ಆದರೆ, ಇದು ಇನ್ನೂ ಜಾರಿಗೆ ಬಂದಿಲ್ಲ ಎಂದು ತಿಳಿದುಬಂದಿದೆ.