ನವದೆಹಲಿ: ನಿವೇನಾದರೂ 2023ರ ಜುಲೈ 1ರ ಬಳಿಕ ವಿದೇಶ ಪ್ರವಾಸ ಪ್ಲ್ಯಾನ್ ಮಾಡಿಕೊಂಡಿದ್ದೀರಾ? ಹಾಗಿದ್ದರೆ, ಒಂದಿಷ್ಟು ಹೆಚ್ಚಿನ ದುಡ್ಡು ಹೊಂದಿಸಬೇಕಾಗುತ್ತದೆ. ಯಾಕೆಂದರೆ, ಟಿಸಿಎಸ್(ಟ್ಯಾಕ್ಸ್ ಕಲೆಕ್ಟೆಟ್ ಅಟ್ ಸೋರ್ಸ್) ನಿಯಮಗಳಲ್ಲಿ ಬದಲಾವಣೆ ಮಾಡಲಾಗಿದೆ. ಹಾಗಾಗಿ, ಹೆಚ್ಚಿನ ದುಡ್ಡನ್ನ ತೆರಬೇಕಾಗುತ್ತದೆ. ಹಾಗೆಯೇ, ವಿದೇಶಿ ವಿನಿಮಯ ನಿರ್ವಹಣಾ ನಿಯಮಗಳ ತಿದ್ದುಪಡಿ ಮಾಡಿದ್ದರಿಂದ ಅತಿ ಶ್ರೀಮಂತರು ಎಲ್ಆರ್‌ಎಸ್(Liberalised Remittance Scheme) ಮಿತಿಗಿಂತ ಹೆಚ್ಚು ವೆಚ್ಚ ಮಾಡಲು ಕಷ್ವವಾಗಬಹುದು. ಜಾಗತಿಕ ಕ್ರೆಡಿಟ್ ಕಾರ್ಡ್ ಟ್ರಾನ್ಸ್‌ಕ್ಷನ್ ಮೇಲೆ ನಿರ್ಬಂಧ ಹೇರಲಾಗಿದೆ.
ಆರ್‌ಬಿಐ ಜೊತೆಗೆ ಸಮಾಲೋಚನೆ ಮಾಡಿ ಸರ್ಕಾರವು ವಿದೇಶಿ ವಿನಿಮಯ ನಿರ್ವಹಣೆ (ಕರೆಂಟ್ ಅಕೌಂಟ್ ಟ್ರಾನ್ಸಾಕ್ಷನ್) ನಿಯಮಗಳನ್ನು ತಿದ್ದುಪಡಿ ಮಾಡುವುದರ ಮೂಲಕ ಕ್ರೆಡಿಟ್ ಕಾರ್ಡ್ ವಹಿವಾಟುಗಳನ್ನು ಸಹ ಎಲ್ ಆರ್ ಎಸ್ ಅಥವಾ ಲಿಬರಲೈಸ್ಡ್ ರವಾನೆ ಯೋಜನೆಯ ಮಿತಿ 250,000 ಡಾಲರ್ ಅಡಿಯಲ್ಲಿ ಬರುವಂತೆ ಮಾಡಿದೆ. ಹಾಗಾಗಿ, ಯಾವುದೇ ವಿದೇಶಿ ಹಣದ ರವಾನೆ ಅಥವಾ ಈ ಮಿತಿಗಿಂತ ಹೆಚ್ಚಿನ ಖರೀದಿಗೆ ಆರ್‌ಬಿಐ ಪೂರ್ವ ಅನುಮೋದನೆಯು ಇನ್ನು ಮುಂದೆ ಅಗತ್ಯವಾಗುತ್ತದೆ.
ಇಲ್ಲಿಯವರೆಗೆ, ಕ್ರೆಡಿಟ್ ಕಾರ್ಡ್ ವೆಚ್ಚವನ್ನು ಎಲ್ಆರ್‌ಎಸ್ ಮಿತಿಯ ಭಾಗವಾಗಿ ಪರಿಗಣಿಸುತ್ತಿರಲಿಲ್ಲ.ಆದಾಗ್ಯೂ, ಜುಲೈ 1 ರಂದು ಬದಲಾವಣೆಗೆ ಸಿದ್ಧವಾಗಿದೆ. ಈ ಕ್ರಮವು ಕ್ರೆಡಿಟ್ ಕಾರ್ಡ್‌ಗಳ ಬಳಕೆಯ ಮೂಲಕ ಎಲ್ಆರ್ ಎಸ್ ಮಿತಿಗಳನ್ನು ತಪ್ಪಿಸುವ ಗುರಿಯನ್ನು ಹೊಂದಿದೆ ಎಂದು ತೋರುತ್ತದೆ. ಈ ಕ್ರಮವು ನಿಯಮಗಳ ಉಲ್ಲಂಘನೆಯನ್ನು ತಪ್ಪಿಸಲು ಹೆಚ್ಚು ಖರ್ಚು ಮಾಡುವವರು ತಮ್ಮ ವಿದೇಶಿ ಹಣದ ರವಾನೆಗಳನ್ನು ಹೆಚ್ಚು ಸ್ಪಷ್ಟವಾಗಿ ಯೋಜಿಸಬೇಕಾಗುತ್ತದೆ ಎಂಬುದು ತೆರಿಗೆ ತಜ್ಞರ ಅಂಬೋಣವಾಗಿದೆ. ಇದರಿಂದಾಗಿ, ವಿದೇಶಿ ಪ್ರವಾಸದಲ್ಲಿದ್ದಾಗ, ಕ್ರೆಡಿಟ್ ಕಾರ್ಡನ್ನು ಮಿತಿಯಲ್ಲಿ ಬಳಸಬೇಕಾಗುತ್ತದೆ. ಎಲ್ಆರ್ ಎಸ್ ಮಿತಿ ಮೀರಿ ಬಳಸಬೇಕಿದ್ದರೆ, ಆರ್ ಬಿ ಐ ಅನುಮೋದನೆ ಪಡೆದುಕೊಳ್ಳಬೇಕಾಗುತ್ತದೆ.
ವಿದೇಶಗಳಿಗೆ ಹಣವನ್ನು ಕಳುಹಿಸಲು ಬಯಸುವ ಜನರು ಎಲ್ ಆರ್ ಎಸ್ ಅಡಿಯಲ್ಲಿ 250,000 ಡಾಲರ್‌ನ ಒಟ್ಟಾರೆ ಮಿತಿಯನ್ನು ಗಮನದಲ್ಲಿಟ್ಟುಕೊಳ್ಳಬೇಕಾಗುತ್ತದೆ. ಹಾಗೆಯೇ ವಿದೇಶಿ ಕರೆನ್ಸಿ ವಹಿವಾಟುಗಳಿಗಾಗಿ ನೇರ ಹಣ ರವಾನೆ ಮತ್ತು ಕ್ರೆಡಿಟ್ ಕಾರ್ಡ್ ಬಳಕೆಯ ನಡುವಿನ ಮಿತಿಯ ಬಳಕೆಯನ್ನು ಯೋಜಿಸಬೇಕಾಗುತ್ತದೆ.
ಇದನ್ನೂ ಓದಿ: ವಿಸ್ತಾರ Money Guide | ನಿಮ್ಮ ಡೆಬಿಟ್, ಕ್ರೆಡಿಟ್ ಕಾರ್ಡ್ ಸುರಕ್ಷತೆಗೆ ಆರ್‌ಬಿಐ ಟೋಕನ್ ಶೀಘ್ರ, ಏನಿದು?
ಎಲ್ ಆರ್ ಎಸ್ ಅನುಸಾರ ಭಾರತೀಯ ನಿವಾಸಿಯು ವರ್ಷಕ್ಕೆ 250,000 ಡಾಲರ್ ವರೆಗೆ ಹಣ ಕಳುಹಿಸಲು ಅನುಮತಿಸುತ್ತದೆ. ಇಲ್ಲಿಯವರೆಗೆ ಕ್ರೆಡಿಟ್ ಕಾರ್ಡ್ ವಹಿವಾಟುಗಳ ಮೂಲಕ ಮಾಡಿದ ಖರೀದಿಗಳು – ಅದು ವಿದೇಶದಲ್ಲಿ ಭೌತಿಕ ಖರೀದಿಗಳು ಅಥವಾ ವಿದೇಶಿ ಸರಕುಗಳು ಅಥವಾ ಸೇವೆಗಳ ಆನ್‌ಲೈನ್ ಖರೀದಿಗಳನ್ನು ಎಲ್ಆರ್‌ಎಸ್ ಭಾಗವಾಗಿ ಪರಿಗಣಿಸುತ್ತಿರಲಿಲ್ಲ. ಆದರೆ, ಜುಲೈ 1 ರಿಂದ ಈ ನಿಯಮ ಬದಲಾಗಲಿದೆ. ಕ್ರೆಡಿಟ್ ಕಾರ್ಡ್ ವಹಿವಾಟುಗಳು ಸೇರಿದಂತೆ ಯಾವುದೇ ರೂಪದಲ್ಲಿ ಎಲ್ ಆರ್ ಆಸ್ ಮಿತಿ ಮೀರಿ ಹೆಚ್ಚಿನ ಹಣ ರವಾನೆಗೆ ಆರ್‌ಬಿಐ ಪೂರ್ವ ಅನುಮೋದನೆಯ ಅಗತ್ಯವಿದೆ.
ವಾಣಿಜ್ಯದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.