ಅಂತಾರಾಷ್ಟ್ರೀಯ ಕ್ರೆಡಿಟ್ ಕಾರ್ಡ್‌ ವಹಿವಾಟಿಗೆ ಕಡಿವಾಣ, ವಿದೇಶ ಪ್ರವಾಸ ಕಷ್ಟಕರ? - Vistara News

ದೇಶ

ಅಂತಾರಾಷ್ಟ್ರೀಯ ಕ್ರೆಡಿಟ್ ಕಾರ್ಡ್‌ ವಹಿವಾಟಿಗೆ ಕಡಿವಾಣ, ವಿದೇಶ ಪ್ರವಾಸ ಕಷ್ಟಕರ?

ವಿದೇಶಿ ಹಣ ರವಾನೆ ಮತ್ತು ಅಂತಾರಾಷ್ಟ್ರೀಯ ಕ್ರೆಡಿಟ್ ಕಾರ್ಡ್ ವಹಿವಾಟು ಮೇಲೆ ನಿರ್ಬಂಧ ಹೇರಿರುವ ಕೇಂದ್ರ ಸರ್ಕಾರವು, ಎಲ್ಆರ್‌ಎಸ್ ಮಿತಿಗಿಂತ ಹೆಚ್ಚಿನ ವೆಚ್ಚಕ್ಕೆ ಆ‌ರ್‌ಬಿಐ ಅನುಮೋದನೆ ತೆಗೆದುಕೊಳ್ಳುವುದು ಕಡ್ಡಾಯ ಮಾಡಿದೆ.

VISTARANEWS.COM


on

reserve bank of india office
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನವದೆಹಲಿ: ನಿವೇನಾದರೂ 2023ರ ಜುಲೈ 1ರ ಬಳಿಕ ವಿದೇಶ ಪ್ರವಾಸ ಪ್ಲ್ಯಾನ್ ಮಾಡಿಕೊಂಡಿದ್ದೀರಾ? ಹಾಗಿದ್ದರೆ, ಒಂದಿಷ್ಟು ಹೆಚ್ಚಿನ ದುಡ್ಡು ಹೊಂದಿಸಬೇಕಾಗುತ್ತದೆ. ಯಾಕೆಂದರೆ, ಟಿಸಿಎಸ್(ಟ್ಯಾಕ್ಸ್ ಕಲೆಕ್ಟೆಟ್ ಅಟ್ ಸೋರ್ಸ್) ನಿಯಮಗಳಲ್ಲಿ ಬದಲಾವಣೆ ಮಾಡಲಾಗಿದೆ. ಹಾಗಾಗಿ, ಹೆಚ್ಚಿನ ದುಡ್ಡನ್ನ ತೆರಬೇಕಾಗುತ್ತದೆ. ಹಾಗೆಯೇ, ವಿದೇಶಿ ವಿನಿಮಯ ನಿರ್ವಹಣಾ ನಿಯಮಗಳ ತಿದ್ದುಪಡಿ ಮಾಡಿದ್ದರಿಂದ ಅತಿ ಶ್ರೀಮಂತರು ಎಲ್ಆರ್‌ಎಸ್(Liberalised Remittance Scheme) ಮಿತಿಗಿಂತ ಹೆಚ್ಚು ವೆಚ್ಚ ಮಾಡಲು ಕಷ್ವವಾಗಬಹುದು. ಜಾಗತಿಕ ಕ್ರೆಡಿಟ್ ಕಾರ್ಡ್ ಟ್ರಾನ್ಸ್‌ಕ್ಷನ್ ಮೇಲೆ ನಿರ್ಬಂಧ ಹೇರಲಾಗಿದೆ.

ಆರ್‌ಬಿಐ ಜೊತೆಗೆ ಸಮಾಲೋಚನೆ ಮಾಡಿ ಸರ್ಕಾರವು ವಿದೇಶಿ ವಿನಿಮಯ ನಿರ್ವಹಣೆ (ಕರೆಂಟ್ ಅಕೌಂಟ್ ಟ್ರಾನ್ಸಾಕ್ಷನ್) ನಿಯಮಗಳನ್ನು ತಿದ್ದುಪಡಿ ಮಾಡುವುದರ ಮೂಲಕ ಕ್ರೆಡಿಟ್ ಕಾರ್ಡ್ ವಹಿವಾಟುಗಳನ್ನು ಸಹ ಎಲ್ ಆರ್ ಎಸ್ ಅಥವಾ ಲಿಬರಲೈಸ್ಡ್ ರವಾನೆ ಯೋಜನೆಯ ಮಿತಿ 250,000 ಡಾಲರ್ ಅಡಿಯಲ್ಲಿ ಬರುವಂತೆ ಮಾಡಿದೆ. ಹಾಗಾಗಿ, ಯಾವುದೇ ವಿದೇಶಿ ಹಣದ ರವಾನೆ ಅಥವಾ ಈ ಮಿತಿಗಿಂತ ಹೆಚ್ಚಿನ ಖರೀದಿಗೆ ಆರ್‌ಬಿಐ ಪೂರ್ವ ಅನುಮೋದನೆಯು ಇನ್ನು ಮುಂದೆ ಅಗತ್ಯವಾಗುತ್ತದೆ.

ಇಲ್ಲಿಯವರೆಗೆ, ಕ್ರೆಡಿಟ್ ಕಾರ್ಡ್ ವೆಚ್ಚವನ್ನು ಎಲ್ಆರ್‌ಎಸ್ ಮಿತಿಯ ಭಾಗವಾಗಿ ಪರಿಗಣಿಸುತ್ತಿರಲಿಲ್ಲ.ಆದಾಗ್ಯೂ, ಜುಲೈ 1 ರಂದು ಬದಲಾವಣೆಗೆ ಸಿದ್ಧವಾಗಿದೆ. ಈ ಕ್ರಮವು ಕ್ರೆಡಿಟ್ ಕಾರ್ಡ್‌ಗಳ ಬಳಕೆಯ ಮೂಲಕ ಎಲ್ಆರ್ ಎಸ್ ಮಿತಿಗಳನ್ನು ತಪ್ಪಿಸುವ ಗುರಿಯನ್ನು ಹೊಂದಿದೆ ಎಂದು ತೋರುತ್ತದೆ. ಈ ಕ್ರಮವು ನಿಯಮಗಳ ಉಲ್ಲಂಘನೆಯನ್ನು ತಪ್ಪಿಸಲು ಹೆಚ್ಚು ಖರ್ಚು ಮಾಡುವವರು ತಮ್ಮ ವಿದೇಶಿ ಹಣದ ರವಾನೆಗಳನ್ನು ಹೆಚ್ಚು ಸ್ಪಷ್ಟವಾಗಿ ಯೋಜಿಸಬೇಕಾಗುತ್ತದೆ ಎಂಬುದು ತೆರಿಗೆ ತಜ್ಞರ ಅಂಬೋಣವಾಗಿದೆ. ಇದರಿಂದಾಗಿ, ವಿದೇಶಿ ಪ್ರವಾಸದಲ್ಲಿದ್ದಾಗ, ಕ್ರೆಡಿಟ್‌ ಕಾರ್ಡನ್ನು ಮಿತಿಯಲ್ಲಿ ಬಳಸಬೇಕಾಗುತ್ತದೆ. ಎಲ್ಆರ್ ಎಸ್ ಮಿತಿ ಮೀರಿ ಬಳಸಬೇಕಿದ್ದರೆ, ಆರ್ ಬಿ ಐ ಅನುಮೋದನೆ ಪಡೆದುಕೊಳ್ಳಬೇಕಾಗುತ್ತದೆ.

ವಿದೇಶಗಳಿಗೆ ಹಣವನ್ನು ಕಳುಹಿಸಲು ಬಯಸುವ ಜನರು ಎಲ್ ಆರ್ ಎಸ್ ಅಡಿಯಲ್ಲಿ 250,000 ಡಾಲರ್‌ನ ಒಟ್ಟಾರೆ ಮಿತಿಯನ್ನು ಗಮನದಲ್ಲಿಟ್ಟುಕೊಳ್ಳಬೇಕಾಗುತ್ತದೆ. ಹಾಗೆಯೇ ವಿದೇಶಿ ಕರೆನ್ಸಿ ವಹಿವಾಟುಗಳಿಗಾಗಿ ನೇರ ಹಣ ರವಾನೆ ಮತ್ತು ಕ್ರೆಡಿಟ್ ಕಾರ್ಡ್ ಬಳಕೆಯ ನಡುವಿನ ಮಿತಿಯ ಬಳಕೆಯನ್ನು ಯೋಜಿಸಬೇಕಾಗುತ್ತದೆ.

ಇದನ್ನೂ ಓದಿ: ವಿಸ್ತಾರ Money Guide | ನಿಮ್ಮ ಡೆಬಿಟ್‌, ಕ್ರೆಡಿಟ್ ಕಾರ್ಡ್‌ ಸುರಕ್ಷತೆಗೆ ಆರ್‌ಬಿಐ ಟೋಕನ್‌ ಶೀಘ್ರ, ಏನಿದು?

ಎಲ್ ಆರ್ ಎಸ್ ಅನುಸಾರ ಭಾರತೀಯ ನಿವಾಸಿಯು ವರ್ಷಕ್ಕೆ 250,000 ಡಾಲರ್ ವರೆಗೆ ಹಣ ಕಳುಹಿಸಲು ಅನುಮತಿಸುತ್ತದೆ. ಇಲ್ಲಿಯವರೆಗೆ ಕ್ರೆಡಿಟ್ ಕಾರ್ಡ್ ವಹಿವಾಟುಗಳ ಮೂಲಕ ಮಾಡಿದ ಖರೀದಿಗಳು – ಅದು ವಿದೇಶದಲ್ಲಿ ಭೌತಿಕ ಖರೀದಿಗಳು ಅಥವಾ ವಿದೇಶಿ ಸರಕುಗಳು ಅಥವಾ ಸೇವೆಗಳ ಆನ್‌ಲೈನ್ ಖರೀದಿಗಳನ್ನು ಎಲ್ಆರ್‌ಎಸ್ ಭಾಗವಾಗಿ ಪರಿಗಣಿಸುತ್ತಿರಲಿಲ್ಲ. ಆದರೆ, ಜುಲೈ 1 ರಿಂದ ಈ ನಿಯಮ ಬದಲಾಗಲಿದೆ. ಕ್ರೆಡಿಟ್ ಕಾರ್ಡ್ ವಹಿವಾಟುಗಳು ಸೇರಿದಂತೆ ಯಾವುದೇ ರೂಪದಲ್ಲಿ ಎಲ್ ಆರ್ ಆಸ್ ಮಿತಿ ಮೀರಿ ಹೆಚ್ಚಿನ ಹಣ ರವಾನೆಗೆ ಆರ್‌ಬಿಐ ಪೂರ್ವ ಅನುಮೋದನೆಯ ಅಗತ್ಯವಿದೆ.

ವಾಣಿಜ್ಯದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ದೇಶ

Poonch Terrorists: ಪೂಂಚ್‌ನಲ್ಲಿ ಸೇನೆ ಮೇಲೆ ದಾಳಿ ಮಾಡಿದ 3 ಉಗ್ರರ ಫೋಟೊ ರಿಲೀಸ್; ಹತ್ಯೆಗೆ ಪ್ಲಾನ್!

Poonch Terrorists: ಮೇ 4ರಂದು ಜಮ್ಮು-ಕಾಶ್ಮೀರದ ಪೂಂಚ್ ಜಿಲ್ಲೆಯ ಸೂರನ್ಕೋಟ್ ಪ್ರದೇಶದಲ್ಲಿ ವಾಯುಪಡೆಯ ಎರಡು ವಾಹನಗಳ ಮೇಲೆ ಭಯೋತ್ಪಾದಕರು ನಡೆಸಿದ ಭಾರಿ ಗುಂಡಿನ ದಾಳಿಯಲ್ಲಿ ಒಬ್ಬ ಯೋಧ ಹುತಾತ್ಮರಾಗಿದ್ದರು. ಅಲ್ಲದೆ, ಐವರು ಗಂಭೀರವಾಗಿ ಗಾಯಗೊಂಡಿದ್ದರು. ಈಗ ದಾಳಿ ಮಾಡಿದ ಮೂವರು ಉಗ್ರರನ್ನು ಗುರುತಿಸಲಾಗಿದ್ದು, ಎನ್‌ಕೌಂಟರ್‌ಗೆ ಯೋಜನೆ ರೂಪಿಸಲಾಗುತ್ತಿದೆ ಎಂದು ತಿಳಿದುಬಂದಿದೆ.

VISTARANEWS.COM


on

Poonch Terrorists
Koo

ಶ್ರೀನಗರ: ಜಮ್ಮು-ಕಾಶ್ಮೀರದ ಪೂಂಚ್‌ ಜಿಲ್ಲೆಯಲ್ಲಿ ಮೇ 4ರಂದು ಭಾರತೀಯ ವಾಯುಪಡೆಯ ಬೆಂಗಾವಲು ಪಡೆಯ (Indian Air Force) ಎರಡು ವಾಹನಗಳ ಮೇಲೆ ದಾಳಿ ನಡೆಸಿದ ಉಗ್ರರ (Poonch Terrorists) ಫೋಟೊಗಳು, ಅವರ ಹೆಸರು ಬಹಿರಂಗವಾಗಿದೆ. ಸಿಸಿಟಿವಿ ದೃಶ್ಯಗಳನ್ನು ಆಧರಿಸಿ ಉಗ್ರರ ಫೋಟೊಗಳನ್ನು ಬಿಡುಗಡೆ ಮಾಡಲಾಗಿದ್ದು, ಭಾರತೀಯ ಸೇನೆಯು (Indian Army) ಇವರನ್ನು ಹೊಡೆದುರುಳಿಸಲು ಪ್ಲಾನ್‌ ರೂಪಿಸುತ್ತಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.

ವಾಯುಪಡೆ ವಾಹನಗಳ ಮೇಲೆ ದಾಳಿ ಮಾಡಿದ ಮೂವರನ್ನು ಇಲಿಯಾಸ್‌ (ಪಾಕಿಸ್ತಾನ ಸೇನೆಯ ಮಾಜಿ ಕಮಾಂಡೋ), ಲಷ್ಕರೆ ತಯ್ಬಾ ಕಮಾಂಡರ್‌ ಅಬು ಹಮ್ಜಾ ಹಾಗೂ ಹದೂನ್‌ ಎಂಬುದಾಗಿ ಗುರುತಿಸಲಾಗಿದೆ. ಇಲಿಯಾಸ್‌ನ ಕೋಡ್‌ ನೇಮ್‌ (ಗೌಪ್ಯ ಹೆಸರು) ಫೌಜಿ ಎಂಬುದಾಗಿದೆ ಎಂದು ಕೂಡ ತಿಳಿದುಬಂದಿದೆ. ಜೈಶೆ ಮೊಹಮ್ಮದ್‌ ಉಗ್ರ ಸಂಘಟನೆಯ ಪೀಪಲ್ಸ್‌ ಆ್ಯಂಟಿ-ಫ್ಯಾಸಿಸ್ಟ್‌ ಫ್ರಂಟ್‌ ಎಂಬ ಅಂಗಸಂಸ್ಥೆಯ ಪರವಾಗಿ ಉಗ್ರರು ದಾಳಿ ನಡೆಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಮೇ 4ರಂದು ಜಮ್ಮು-ಕಾಶ್ಮೀರದ ಪೂಂಚ್ ಜಿಲ್ಲೆಯ ಸೂರನ್ಕೋಟ್ ಪ್ರದೇಶದಲ್ಲಿ ವಾಯುಪಡೆಯ ಎರಡು ವಾಹನಗಳ ಮೇಲೆ ಭಯೋತ್ಪಾದಕರು ನಡೆಸಿದ ಭಾರಿ ಗುಂಡಿನ ದಾಳಿಯಲ್ಲಿ ಒಬ್ಬ ಯೋಧ ಹುತಾತ್ಮರಾಗಿದ್ದರು. ಅಲ್ಲದೆ, ಐವರು ಗಂಭೀರವಾಗಿ ಗಾಯಗೊಂಡಿದ್ದರು. ಪೂಂಚ್‌ನಲ್ಲಿ ಅನುಮಾನಾಸ್ಪದ ವ್ಯಕ್ತಿಗಳು ಓಡಾಡುತ್ತಿರುವ ಬಗ್ಗೆ ಮೊದಲೇ ಸೇನೆಗೆ ಖಚಿತ ಮಾಹಿತಿ ಸಿಕ್ಕಿತ್ತು. ಈ ನಿಟ್ಟಿನಲ್ಲಿ ಅರೆ ಸೈನಿಕ ಪಡೆ ಮತ್ತು ಪೊಲೀಸರು ಅವರ ಪತ್ತೆಗೆ ಕಾರ್ಯಾಚರಣೆ ಕೈಗೆತ್ತಿಕೊಂಡಿತ್ತು. ಅಷ್ಟರಲ್ಲಿ ಈ ದುರ್ಘಟನೆ ಸಂಭವಿಸಿತ್ತು.

ಸಿಸಿಟಿವಿ ದೃಶ್ಯಗಳು ಹಾಗೂ ಫೋಟೊಗಳನ್ನು ಪರಿಶೀಲನೆ ಮಾಡುತ್ತಿರುವ ಭಾರತೀಯ ಸೇನೆಯು ರಾಜೌರಿ ಹಾಗೂ ಪೂಂಚ್‌ನ ಅರಣ್ಯ ಪ್ರದೇಶದಲ್ಲಿ‌ ಮೂವರ ಹತ್ಯೆಗಾಗಿ ಬೃಹತ್ ಕಾರ್ಯಾಚರಣೆ ಕೈಗೊಳ್ಳಲು ಸಿದ್ಧತೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ. ಇನ್ನೂ ಕೆಲವೆಡೆ ಕಾರ್ಯಾಚರಣೆಯನ್ನು ಆರಂಭಿಸಲಾಗಿದೆ ಎಂದು ಹೇಳಲಾಗುತ್ತಿದೆ. ಪೂಂಚ್‌ ದಾಳಿಯ ಬಳಿಕ ಕುಲ್ಗಾಮ್‌ನಲ್ಲಿ ಲಷ್ಕರೆ ತಯ್ಬಾದ ಮೂವರು ಉಗ್ರರನ್ನು ಹೊಡೆದುರುಳಿಸುವ ಮೂಲಕ ಯೋಧರು ಸೇಡು ತೀರಿಸಿಕೊಂಡಿದ್ದರು. ಮೇ 6ರಂದು ಕುಲ್ಗಾಮ್‌ನಲ್ಲಿ ಲಷ್ಕರೆ ತಯ್ಬಾ ಉಗ್ರ ಸಂಘಟನೆಯ ಕಮಾಂಡರ್‌, ಮೋಸ್ಟ್‌ ವಾಂಟೆಡ್‌ ಉಗ್ರ ಸೇರಿ ಒಟ್ಟು ಮೂವರು ಹತ್ಯೆಗೈದಿದ್ದರು.

ಇದನ್ನೂ ಓದಿ: Kulgam: ಪೂಂಚ್‌ ದಾಳಿಗೆ ಸೇನೆ ಸೇಡು; ಒಬ್ಬ ಲಷ್ಕರ್‌ ಕಮಾಂಡರ್‌ ಸೇರಿ ಮೂವರು ಉಗ್ರರ ಖತಂ

Continue Reading

ದೇಶ

Dogs Attack: ನಾಯಿಗಳು ದಾಳಿ ಮಾಡಲು ಬಂದರೆ ಏನು ಮಾಡಬೇಕು? ಹೇಗೆ ರಕ್ಷಿಸಿಕೊಳ್ಳಬೇಕು?

ಹೆಚ್ಚುತ್ತಿರುವ ಬೀದಿನಾಯಿಗಳು ಆಕ್ರಮಣ ಸಾಮಾಜಿಕವಾಗಿ ಆತಂಕಕ್ಕೆ ಕಾರಣವಾಗಿದೆ. ಬೀದಿ ನಾಯಿಗಳು ದಾಳಿಗೆ ಅನೇಕ ಕಾರಣಗಳಿರುತ್ತವೆ. ಬೀದಿ ನಾಯಿಗಳು (Dogs Attack) ಏಕೆ ದಾಳಿ ಮಾಡುತ್ತವೆ, ನಾಯಿಗಳ ಬಗ್ಗೆ ಕಾನೂನು ಏನು ಹೇಳುತ್ತದೆ ಮತ್ತು ಅಂತಹ ದಾಳಿಗಳಿಗೆ ಯಾರು ಹೊಣೆಗಾರರಾಗುತ್ತಾರೆ ಎಂಬುದರ ಕುರಿತು ಮಾಹಿತಿ ಇಲ್ಲಿದೆ.

VISTARANEWS.COM


on

By

Dogs Attack
Koo

ಚೆನ್ನೈನ (chennai) ಸಾರ್ವಜನಿಕ ಪ್ರದೇಶದಲ್ಲಿ ಇತ್ತೀಚೆಗೆ ಎರಡು ಸಾಕು ನಾಯಿಗಳು ದಾಳಿ (Dogs Attack) ನಡೆಸಿದ್ದರಿಂದ ಐದು ವರ್ಷದ ಬಾಲಕಿ ಗಂಭೀರವಾಗಿ ಗಾಯಗೊಂಡು ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಾಯಿತು. ಕಳೆದ ಫೆಬ್ರವರಿಯಲ್ಲಿ ದೆಹಲಿಯ (delhi) ತುಘಲಕ್ ಲೇನ್‌ನ ಧೋಬಿ ಘಾಟ್ ಪ್ರದೇಶದಲ್ಲಿ ಎರಡು ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ಗುಂಪೊಂದು ದಾಳಿ ನಡೆಸಿ ಕೊಂದು ಹಾಕಿತ್ತು. ಕಳೆದ ವರ್ಷ, ವಾಘ್ ಬಕ್ರಿ ಟೀ ಗ್ರೂಪ್‌ನ (Wagh Bakri Tea Group) ಕಾರ್ಯನಿರ್ವಾಹಕ ನಿರ್ದೇಶಕ ಪರಾಗ್ ದೇಸಾಯಿ ಅವರು ಬೀದಿ ನಾಯಿಗಳ ದಾಳಿಗೆ ಒಳಗಾಗಿ ಸಾವನ್ನಪ್ಪಿದ್ದರು.

ಇದು ಕೆಲವು ಉದಾಹರಣೆಯಷ್ಟೇ. ದೇಶದ ಹಲವಾರು ಭಾಗಗಳಲ್ಲಿ ನಾಯಿಗಳ ದಾಳಿಯಿಂದ ಅನೇಕ ಮಂದಿ ಸಾವನ್ನಪ್ಪಿದ್ದಾರೆ ಹಾಗೂ ಗಾಯಗೊಂಡಿದ್ದಾರೆ. ಇದು ಸಮಾಜಿಕವಾಗಿ ಆತಂಕಕ್ಕೆ ಕಾರಣವಾಗಿದೆ. ಬೀದಿನಾಯಿಗಳು ದುರ್ಬಲ ಜನರನ್ನು, ಹೆಚ್ಚಾಗಿ ಮಕ್ಕಳು ಮತ್ತು ಹಿರಿಯ ನಾಗರಿಕರ ಮೇಲೆ ದಾಳಿ ನಡೆಸುತ್ತವೆ. ಬೀದಿ ನಾಯಿಗಳು ಏಕೆ ದಾಳಿ ಮಾಡುತ್ತವೆ, ನಾಯಿಗಳ ಬಗ್ಗೆ ಕಾನೂನು ಏನು ಹೇಳುತ್ತದೆ ಮತ್ತು ಅಂತಹ ದಾಳಿಗಳಿಗೆ ಯಾರು ಹೊಣೆಗಾರರಾಗುತ್ತಾರೆ ಎಂಬುದರ ಕುರಿತು ಮಾಹಿತಿ ಇಲ್ಲಿದೆ.

ದಾಳಿಗೆ ಏನು ಕಾರಣ?

ಭಾರತದಲ್ಲಿ ಪ್ರಾಣಿಗಳ ಆರೋಗ್ಯ ರಕ್ಷಣೆ ಮತ್ತು ನಿಯಂತ್ರಣಕ್ಕೆ ಸರಿಯಾದ ಕಾರ್ಯವಿಧಾನಗಳಿಲ್ಲ. ಸರಿಯಾದ ಪ್ರಾಣಿ ನಿಯಂತ್ರಣ ಕ್ರಮಗಳ ಕೊರತೆಯು ಬೃಹತ್ ಸಂಖ್ಯಾ ಸ್ಫೋಟಕ್ಕೆ ಮತ್ತು ಮನುಷ್ಯರೊಂದಿಗೆ ಘರ್ಷಣೆಗೆ ಕಾರಣವಾಗಿದೆ. ಇದಲ್ಲದೆ, ಸಾಂಕ್ರಾಮಿಕ ಕಾಯಿಲೆ, ಆಹಾರದ ಕೊರತೆಯಿಂದಾಗಿ ನಾಯಿಗಳು ಉಗ್ರವಾಗುತ್ತದೆ.

ನಾಯಿಗಳ ಸಂಖ್ಯೆ

ಅಂಕಿಅಂಶಗಳ ಪ್ರಕಾರ ಭಾರತದಲ್ಲಿ ಸಾಕು ನಾಯಿಗಳ ಒಟ್ಟಾರೆ ಸಂಖ್ಯೆಯು 2021ರಲ್ಲಿ 27 ಮಿಲಿಯನ್‌ಗಿಂತಲೂ ಹೆಚ್ಚಿದೆ. 2026ರ ವೇಳೆಗೆ ಇವುಗಳ ಸಂಖ್ಯೆಯು 43 ಮಿಲಿಯನ್‌ಗಿಂತಲೂ ಹೆಚ್ಚು ತಲುಪುವ ಸಾಧ್ಯತೆಯಿದೆ.
ಜಾಗತಿಕ ಪಿಇಟಿ ಆರೋಗ್ಯ ಮತ್ತು ಪೌಷ್ಟಿಕಾಂಶ ಕಂಪನಿಯಾದ ಮಾರ್ಸ್ ಪೆಟ್‌ಕೇರ್‌ನ ಸ್ಟೇಟ್ ಆಫ್ ಪೆಟ್ ಹೋಮ್‌ಲೆಸ್‌ನೆಸ್ ಇಂಡೆಕ್ಸ್ 2021ರ ಪ್ರಕಾರ ಭಾರತದಲ್ಲಿ ಬೀದಿ ನಾಯಿಗಳ ಸಂಖ್ಯೆಯು ಸುಮಾರು 62 ಮಿಲಿಯನ್ ಆಗಿದೆ.

ನಾಯಿ ಕಡಿತ ಪ್ರಕರಣ

2019ರಲ್ಲಿ ದೇಶದಲ್ಲಿ 4,146 ನಾಯಿ ಕಡಿತದ ಪ್ರಕರಣಗಳು ಮಾನವ ಸಾವಿಗೆ ಕಾರಣವಾಗಿವೆ ಎಂದು ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ ಅಂಕಿಅಂಶಗಳನ್ನು ತೋರಿಸುತ್ತದೆ. ಇನ್ನೊಂದು ಮಾಹಿತಿ ಪ್ರಕಾರ ದೇಶದಲ್ಲಿ 2019 ರಿಂದ 1.5 ಕೋಟಿ ನಾಯಿ ಕಡಿತದ ಪ್ರಕರಣಗಳು ನಡೆದಿದೆ. ಅತೀ ಹೆಚ್ಚು ನಾಯಿಗಳು ಉತ್ತರ ಪ್ರದೇಶದಲ್ಲಿದ್ದು, 27.52 ಲಕ್ಷ ನಾಯಿಗಳನ್ನು ಹೊಂದಿದೆ. ತಮಿಳುನಾಡಿನಲ್ಲಿ 20.7 ಲಕ್ಷ ಮತ್ತು ಮಹಾರಾಷ್ಟ್ರ ದಲ್ಲಿ 15.75 ಲಕ್ಷ ನಾಯಿಗಳನ್ನು ಹೊಂದಿದೆ.

ನಾಯಿ ದಾಳಿಗೆ ಯಾರು ಹೊಣೆ?

ಬೀದಿ ನಾಯಿಗಳು ವ್ಯಘ್ರಗೊಂಡಿರಬಹುದು, ನೊಂದಿರಬಹುದು, ಹಸಿದಿರಬಹುದು, ಆಘಾತಕ್ಕೊಳಗಾಗಿರಬಹುದು, ಆತಂಕಕ್ಕೊಳಗಾಗಬಹುದು ಅಥವಾ ತಮ್ಮ ಮರಿಗಳನ್ನು ರಕ್ಷಿಸಿಕೊಳ್ಳಲು ದಾಳಿ ನಡೆಸುತ್ತವೆ. ಸರ್ಕಾರ ಮತ್ತು ಪ್ರಾಣಿ ಕಲ್ಯಾಣ ಸಂಸ್ಥೆಗಳ ನಿರ್ಲಕ್ಷ್ಯ ಮತ್ತು ವೈಯಕ್ತಿಕ ನಿರಾಸಕ್ತಿ ಸೇರಿದಂತೆ ಹಲವಾರು ಅಂಶಗಳ ಪರಿಣಾಮವಾಗಿ ಬೀದಿ ನಾಯಿಗಳ ದಾಳಿ ನಡೆಸುತ್ತವೆ.


ಸಾಕುಪ್ರಾಣಿಗಳನ್ನು ರಕ್ಷಣೆ ಕಾನೂನು

ಯಾವುದೇ ಪ್ರಾಣಿಯನ್ನು ದೀರ್ಘ ಕಾಲ ಸರಪಳಿಯಲ್ಲಿ ಬಂಧಿಸುವುದು ಕ್ರೌರ್ಯಕ್ಕೆ ಸಮಾನ. ಇದಕ್ಕೆ ದಂಡ ಅಥವಾ 3 ತಿಂಗಳವರೆಗೆ ಜೈಲು ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ.

ಮಾಲೀಕರು ತಮ್ಮ ಸಾಕುಪ್ರಾಣಿಗಳಿಗೆ ಸಾಕಷ್ಟು ಆಹಾರ, ಪಾನೀಯ ಅಥವಾ ಆಶ್ರಯವನ್ನು ಒದಗಿಸಲು ವಿಫಲವಾದರೆ ಅವರು ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯಿದೆ 1960 ರ ಸೆಕ್ಷನ್ 11 (1) (h) ಪ್ರಕಾರ ಶಿಕ್ಷೆಗೆ ಗುರಿಯಾಗುತ್ತಾರೆ. ಇದು 1960 ಶಿಕ್ಷಾರ್ಹ ಅಪರಾಧವಾಗಿದೆ. ಯಾವುದೇ ವ್ಯಕ್ತಿಯು, ಯಾವುದೇ ಸಮಂಜಸವಾದ ಕಾರಣವಿಲ್ಲದೆ ಪ್ರಾಣಿಯು ಹಸಿವು ಅಥವಾ ಬಾಯಾರಿಕೆಯಿಂದ ನೋವನ್ನು ಅನುಭವಿಸುವ ಪರಿಸ್ಥಿತಿಯಲ್ಲಿ ಪ್ರಾಣಿಯನ್ನು ತ್ಯಜಿಸಿದರೆ ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ. ಸೋಂಕಿತ, ರೋಗಗ್ರಸ್ತ ಅಥವಾ ಅಂಗವಿಕಲ ಪ್ರಾಣಿಯನ್ನು ಯಾವುದೇ ಅನುಮತಿಯಿಲ್ಲದೆ ಬೀದಿಗೆ ಬಿಟ್ಟರೆ ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ. ಸಾಕುಪ್ರಾಣಿಗಳ ಮಾಲೀಕರನ್ನು ಬೆದರಿಸುವುದು, ಅಥವಾ ಆರೈಕೆ ಮಾಡದಂತೆ ತಡೆಯುವುದು IPC ಯ ಸೆಕ್ಷನ್ 503 ರ ಅಡಿಯಲ್ಲಿ ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ.

ನಾಯಿಗಳು ದಾಳಿ ಮಾಡಿದಾಗ ಏನು ಮಾಡಬೇಕು?

ನಾಯಿಗಳು ದಾಳಿ ಮಾಡಲು ಬಂದರೆ ಓಡಬೇಡಿ, ಕಿರುಚಬೇಡಿ. ಬದಲಾಗಿ ನಿಶ್ಚಲವಾಗಿರಿ. ಓಡಿದರೆ, ಕಿರುಚಿದರೆ ನಾಯಿ ದಾಳಿಗೆ ಪ್ರೋತ್ಸಾಹ ನೀಡಿದಂತಾಗುತ್ತದೆ.

ಕೋಲಿನಿಂದ ನಾಯಿಯನ್ನು ಬೆದರಿಸಬೇಡಿ. ಇದರಿಂದ ಅವು ಅಕ್ರಮಣಕಾರಿಯಾಗುತ್ತದೆ. ಬೀದಿಯಲ್ಲಿ ನಾಯಿಗಳಿಗೆ ಬಿಸ್ಕತ್ತುಗಳನ್ನು ನೀಡಿ. ಇದರಿಂದ ಅವುಗಳು ನಿಮ್ಮನ್ನು ಸ್ನೇಹಿತರಂತೆ ನೋಡುತ್ತದೆ.

ಇದನ್ನೂ ಓದಿ: Hindu Population: ಹಿಂದೂಗಳ ಜನಸಂಖ್ಯೆ ಶೇ.7.8 ಕುಸಿತ; ಮುಸ್ಲಿಮರ ಸಂಖ್ಯೆ ಶೇ.43.15 ಏರಿಕೆ!

ನಾಯಿಗಳು ದೊಡ್ಡ ಗುಂಪಿನಲ್ಲಿದ್ದರೆ ಅವುಗಳೊಂದಿಗೆ ಗುರಾಯಿಸಿ ನೋಡಬೇಡಿ. ನೇರವಾಗಿ ನಡೆಯಿರಿ. ನಾಯಿಗಳನ್ನು ಕಂಡು ಹಿಂತಿರುಗಿ ಓಡಬೇಡಿ. ಭಯವಾದರೆ ಬೇರೆ ಮಾರ್ಗವನ್ನು ಬಳಸಿ.

ನಿಮ್ಮನ್ನು ರಕ್ಷಿಸಿಕೊಳ್ಳಲು ಚೀಲವನ್ನು ಬಳಸಿ. ಹೊಟ್ಟೆ ಮತ್ತು ಕುತ್ತಿಗೆಯಂತಹ ಪ್ರಮುಖ ಅಂಗಗಳ ಮೇಲೆ ನಾಯಿಗಳು ದಾಳಿ ನಡೆಸುತ್ತವೆ. ಈ ಸಂದರ್ಭದಲ್ಲಿ ಚೀಲ ಅಥವಾ ಯಾವುದಾದರೂ ವಸ್ತುವನ್ನು ಅಡ್ಡವಾಗಿ ಹಿಡಿದು ರಕ್ಷಣೆಗೆ ಬಳಸಿ. ಶಾಂತವಾಗಿರಲು ಪ್ರಯತ್ನಿಸಿ.

ನಾಯಿಗಳು ದಾಳಿಗೆ ಮುಂದಾದಾಗ ನೇರವಾಗಿ ನಿಂತುಕೊಳ್ಳಿ. ತಲೆಯ ಮೇಲೆ ಕೈಗಳನ್ನು ಎತ್ತಿ. ಆತ್ಮವಿಶ್ವಾಸದಿಂದಿರಿ. ಆಗ ನಾಯಿಗಳೇ ಹೆದರಿ ಹಿಂದೆ ಸರಿಯುತ್ತವೆ.

Continue Reading

ದೇಶ

Covishield: ಭಾರತದಲ್ಲಿ ಕೋವಿಶೀಲ್ಡ್‌ ಸೈಡ್‌ ಎಫೆಕ್ಟ್‌ನ ಎಲ್ಲ ಮಾಹಿತಿ ಬಹಿರಂಗ ಎಂದ ಕಂಪನಿ, ಉತ್ಪಾದನೆಯೂ ಸ್ಥಗಿತ!

Covishield: ಅಸ್ಟ್ರಾಜೆನಿಕಾ ಸಹಯೋಗದಲ್ಲಿಯೇ ಸೀರಂ ಇನ್‌ಸ್ಟಿಟ್ಯೂಟ್‌ ಆಫ್‌ ಇಂಡಿಯಾ ಕೋವಿಶೀಲ್ಡ್‌ಅನ್ನು ಭಾರತದಲ್ಲಿ ಉತ್ಪಾದನೆ ಮಾಡಿದೆ. ಜಾಗತಿಕವಾಗಿ ಅಡ್ಡ ಪರಿಣಾಮದ ಕುರಿತು ಚರ್ಚಿಸುತ್ತಿರುವ ಬೆನ್ನಲ್ಲೇ ಕಂಪನಿಯು ಸ್ಪಷ್ಟನೆ ನೀಡಿದೆ. ಲಸಿಕೆಯ ಅಡ್ಡ ಪರಿಣಾಮಗಳ ಕುರಿತು ಲಸಿಕೆ ವಿತರಿಸುವಾಗಲೇ ಮಾಹಿತಿ ನೀಡಲಾಗಿದೆ. ಈಗ ಯಾವುದೇ ಮಾಹಿತಿ ಹಂಚಿಕೊಳ್ಳಲು ಬಾಕಿ ಇಲ್ಲ ಎಂಬುದಾಗಿ ಕಂಪನಿ ತಿಳಿಸಿದೆ.

VISTARANEWS.COM


on

Covishield
Koo

ಪುಣೆ: ಲಸಿಕೆಯ ಅಡ್ಡಪರಿಣಾಮದ ಕುರಿತು ಭಾರತ ಸೇರಿ ಜಗತ್ತಿನಾದ್ಯಂತ ಟೀಕೆಗಳು ವ್ಯಕ್ತವಾಗುತ್ತಿರುವ ಬೆನ್ನಲ್ಲೇ ಬ್ರಿಟಿಷ್ ಔಷಧೀಯ ದೈತ್ಯ ಅಸ್ಟ್ರಾಜೆನಿಕಾ (AstraZeneca) ಕಂಪನಿಯು ಕೊರೊನಾ ನಿರೋಧಕ ಲಸಿಕೆ ಕೋವಿಶೀಲ್ಡ್ (Covishield Vaccine)‌ ಅನ್ನು ಜಾಗತಿಕ ಮಟ್ಟದಲ್ಲಿ ಹಿಂಪಡೆಯಲು ಮುಂದಾಗಿದೆ. ಇದರ ಬೆನ್ನಲ್ಲೇ, ಭಾರತದಲ್ಲಿ ಕೋವಿಶೀಲ್ಡ್‌ ಲಸಿಕೆಯನ್ನು ಉತ್ಪಾದಿಸಿದ್ದ ಸೀರಂ ಇನ್‌ಸ್ಟಿಟ್ಯೂಟ್‌ ಆಫ್‌ ಇಂಡಿಯಾ (SII) ಕಂಪನಿಯು, “ಭಾರತದಲ್ಲಿ ಕೋವಿಶೀಲ್ಡ್‌ ಲಸಿಕೆಯ ಅಡ್ಡ ಪರಿಣಾಮದ ಕುರಿತು ಇದಕ್ಕೂ ಮೊದಲೇ ಬಹಿರಂಗಪಡಿಸಲಾಗಿದೆ” ಎಂದು ಸ್ಪಷ್ಟಪಡಿಸಿದೆ.

ಅಸ್ಟ್ರಾಜೆನಿಕಾ ಸಹಯೋಗದಲ್ಲಿಯೇ ಸೀರಂ ಇನ್‌ಸ್ಟಿಟ್ಯೂಟ್‌ ಆಫ್‌ ಇಂಡಿಯಾ ಕೋವಿಶೀಲ್ಡ್‌ಅನ್ನು ಭಾರತದಲ್ಲಿ ಉತ್ಪಾದನೆ ಮಾಡಿದೆ. ಜಾಗತಿಕವಾಗಿ ಅಡ್ಡ ಪರಿಣಾಮದ ಕುರಿತು ಚರ್ಚಿಸುತ್ತಿರುವ ಬೆನ್ನಲ್ಲೇ ಕಂಪನಿಯು ಸ್ಪಷ್ಟನೆ ನೀಡಿದೆ. “ಥ್ರಂಬೋಸಿಸ್ ವಿಥ್ ಥ್ರಂಬೋಸೈಟೋಪೆನಿಯಾ ಸಿಂಡ್ರೋಮ್ (Thrombosis with Thrombocytopenia Syndrome – TTS ಸೇರಿ ಎಲ್ಲ ವಿರಳ ಅಡ್ಡ ಪರಿಣಾಮಗಳ ಕುರಿತು ಈಗಾಗಲೇ ಮಾಹಿತಿ ಬಹಿರಂಗಪಡಿಸಲಾಗಿದೆ” ಎಂದು ಸೀರಂ ಸಂಸ್ಥೆಯ ವಕ್ತಾರರೊಬ್ಬರು ಪ್ರಕಟಣೆ ತಿಳಿಸಿದ್ದಾರೆ.

2021ರಲ್ಲೇ ಉತ್ಪಾದನೆ ಸ್ಥಗಿತ

ಕೊರೊನಾ ಸಾಂಕ್ರಾಮಿಕದ ಸಂದರ್ಭದಲ್ಲಿ ದೇಶದಲ್ಲಿ ಕೋವಿಶೀಲ್ಡ್‌ ಲಸಿಕೆಯನ್ನು ಕೋಟ್ಯಂತರ ಡೋಸ್‌ಗಳನ್ನು ಜನರಿಗೆ ನೀಡಲಾಗಿದೆ. ಕೊರೊನಾ ಬಿಕ್ಕಟ್ಟಿನ ಬಳಿಕ ಅಂದರೆ, 2021ರ ಡಿಸೆಂಬರ್‌ನಿಂದಲೇ ಭಾರತದಲ್ಲಿ ಕೋವಿಶೀಲ್ಡ್‌ ಲಸಿಕೆಯ ಉತ್ಪಾದನೆಯನ್ನು ನಿಲ್ಲಿಸಲಾಗಿದೆ ಎಂಬುದಾಗಿ ಸೀರಂ ಇನ್‌ಸ್ಟಿಟ್ಯೂಟ್‌ ಆಫ್‌ ಇಂಡಿಯಾ ಮಾಹಿತಿ ನೀಡಿದೆ. ಅಷ್ಟೇ ಅಲ್ಲ, ಲಸಿಕೆಯ ಬಾಟಲಿ ಮೇಲೆಯೇ ಅಡ್ಡ ಪರಿಣಾಮದ ಕುರಿತು ಎಚ್ಚರಿಕೆ ನೀಡಿತ್ತು.

ಕೋವಿಶೀಲ್ಡ್‌ ಲಸಿಕೆ ಥ್ರಂಬೋಸಿಸ್ ವಿಥ್ ಥ್ರಂಬೋಸೈಟೋಪೆನಿಯಾ ಸಿಂಡ್ರೋಮ್ (Thrombosis with Thrombocytopenia Syndrome – TTS) ಎಂಬ ಅಪರೂಪದ ಅಡ್ಡ ಪರಿಣಾಮವನ್ನು ಉಂಟುಮಾಡಬಹುದು ಎಂಬುದನ್ನು ಈ ಹಿಂದೆ ಕೋರ್ಟ್‌ನಲ್ಲಿ ಒಪ್ಪಿಕೊಂಡಿದ್ದ ಅಸ್ಟ್ರಾಜೆನಿಕಾ ಕಂಪನಿಯು ಈಗ ವ್ಯಾಪಾರ ಉದ್ದೇಶದಿಂದ ಎಲ್ಲ ಮಾರುಕಟ್ಟೆಗಳಿಂದ ತನ್ನ ಈ ಲಸಿಕೆಯನ್ನು ತೆಗೆದು ಹಾಕುವುದಾಗಿ ಘೋಷಿಸಿದೆ.

ತಜ್ಞರು ಹೇಳುವುದಿಷ್ಟು

ಭಾರತದಲ್ಲಿ ಕೋವಿಶೀಲ್ಡ್‌ ಲಸಿಕೆ ತೆಗೆದುಕೊಂಡವರಲ್ಲಿ ರಕ್ತ ಹೆಪ್ಪುಗಟ್ಟುವ ಅಡ್ಡ ಪರಿಣಾಮದ ಅಪಾಯದ ಸಾಧ್ಯತೆಗಳು ತೀರಾ ಕಡಿಮೆ ಎಂದು ಭಾರತದ ಹಿರಿಯ ಸಾಂಕ್ರಾಮಿಕ ರೋಗಶಾಸ್ತ್ರಜ್ಞ, ಮಾಜಿ ICMR ವಿಜ್ಞಾನಿ ಡಾ. ರಾಮನ್ ಗಂಗಾಖೇಡ್ಕರ್ ಅವರು ಕೆಲ ದಿನಗಳ ಹಿಂದಷ್ಟೇ ಹೇಳಿದ್ದಾರೆ. ಕೋವಿಶೀಲ್ಡ್ ಅನ್ನು ಸ್ವೀಕರಿಸುವ 10 ಲಕ್ಷ ಜನರಲ್ಲಿ ಏಳರಿಂದ ಎಂಟು ವ್ಯಕ್ತಿಗಳು ಮಾತ್ರ ಥ್ರಂಬೋಸಿಸ್ ಥ್ರಂಬೋಸೈಟೋಪೆನಿಯಾ ಸಿಂಡ್ರೋಮ್ (ಟಿಟಿಎಸ್) ಎಂದು ಕರೆಯಲ್ಪಡುವ ಅಪರೂಪದ ಅಡ್ಡ ಪರಿಣಾಮವನ್ನು ಅನುಭವಿಸುತ್ತಾರೆ. ಭಾರತದಲ್ಲಿ ಇದರ ಪ್ರಮಾಣ ಇನ್ನೂ ಕಡಿಮೆ ಎಂದವರು ತಿಳಿಸಿದ್ದಾರೆ.

ಇದನ್ನೂ ಓದಿ: Covishield vaccine: ಕೋವಿಶೀಲ್ಡ್‌ ಲಸಿಕೆಯಿಂದ ಸೈಡ್‌ ಎಫೆಕ್ಟ್‌ – ಆರೋಗ್ಯ ಸಚಿವ ದಿನೇಶ್ ಗುಂಡೂರಾವ್

Continue Reading

ದೇಶ

Zomato: ಜೊಮ್ಯಾಟೊ ಹೊಸ ತಂತ್ರಜ್ಞಾನ; ಮನೆ ಹೊರಗೆ ಕಾಲಿಡುವ ಮುನ್ನ ಇದನ್ನು ನೋಡಲೇಬೇಕು!

Zomato: ಜೊಮ್ಯಾಟೊದ ಹೊಸ ವೆಬ್‌ಸೈಟ್‌ ಎಲ್ಲರಿಗೂ ಉಚಿತವಾಗಿ ಲಭ್ಯವಿದೆ. ಜೊಮ್ಯಾಟೊ ಫುಡ್‌ ಡೆಲಿವರಿ ಅಗ್ರಿಗೇಟರ್‌ ಆಗಿದ್ದು, ಇಂತಹ ಅಗ್ರಿಗೇಟರ್‌ಗಳು ದೇಶಾದ್ಯಂತ ಜೊಮ್ಯಾಟೊದ ವೆಬ್‌ಸೈಟ್‌ ಮೂಲಕ ಹವಾಮಾನದ ಕುರಿತ ಮಾಹಿತಿಯನ್ನು ಅರಿತುಕೊಂಡು, ತಮ್ಮ ವ್ಯಾಪಾರ, ಡೆಲಿವರಿ ಮುಂದುವರಿಸಲು ಭಾರಿ ಅನುಕೂಲವಾಗಲಿದೆ ಎಂದು ತಿಳಿದುಬಂದಿದೆ.

VISTARANEWS.COM


on

Zomato
Koo

ನವದೆಹಲಿ: ಆನ್‌ಲೈನ್‌ ಮೂಲಕ ಆಹಾರ ಪೂರೈಕೆ ಮಾಡುವಲ್ಲಿ ದೇಶಾದ್ಯಂತ ಖ್ಯಾತಿಯಾಗಿರುವ ಜೊಮ್ಯಾಟೊ ಕಂಪನಿ ಈಗ ಹೊಸ ಸಾಹಸಕ್ಕೆ ಮುಂದಾಗಿದೆ. ಹೌದು, ಹವಾಮಾನದ ಕುರಿತು ನಿಖರ ಮಾಹಿತಿ ನೀಡುವ, ದೇಶದ ಮೊದಲ ಕ್ರೌಡ್‌-ಸಪೋರ್ಟೆಡ್‌ ವೆದರ್‌ ಇನ್‌ಫ್ರಾಸ್ಟ್ರಕ್ಚರ್‌ಗೆ (First Crowd-Supported Weather Infrastructure) ಜೊಮ್ಯಾಟೊ (Zomato) ಸಿಇಒ ದೀಪಿಂದರ್‌ ಗೋಯಲ್‌ (Deepinder Goyal) ಚಾಲನೆ ನೀಡಿದ್ದಾರೆ. ಇದರಿಂದ ದೇಶದ ಪ್ರಮುಖ ನಗರಗಳ ಹವಾಮಾನವನ್ನು ಪರಿಶೀಲನೆ ಮಾಡಬಹುದಾಗಿದೆ.

ವೆದರ್‌ಯುನಿಯನ್.ಕಾಮ್‌ (ಇಲ್ಲಿ ಕ್ಲಿಕ್‌ ಮಾಡಿ-Weatherunion.com) ಎಂಬ ವೆಬ್‌ಸೈಟ್‌ಗೆ ದೀಪಿಂದರ್‌ ಗೋಯಲ್‌ ಬುಧವಾರ (ಮೇ 8) ಚಾಲನೆ ನೀಡಿದ್ದಾರೆ. ದೇಶಾದ್ಯಂತ 650 ಹವಾಮಾನ ಸ್ಟೇಷನ್‌ಗಳನ್ನು ಸ್ಥಾಪಿಸಲಾಗಿದ್ದು, ಇದು ದೇಶದಲ್ಲಿಯೇ ಹವಾಮಾನ ಕುರಿತು ಮಾಹಿತಿ ಒದಗಿಸುವ ಮೊದಲ ಖಾಸಗಿ ಮೂಲ ಸೌಕರ್ಯ ಎಂದು ಹೇಳಲಾಗುತ್ತಿದೆ. ಇದು ಸಾಮಾನ್ಯ ಜನರ ಜತೆಗೆ ಉದ್ಯಮಿಗಳಿಗೆ, ಸ್ಟಾರ್ಟ್‌ಅಪ್‌ಗಳಿಗೆ ಭಾರಿ ಅನುಕೂಲವಾಗಲಿದೆ ಎಂದು ಹೇಳಲಾಗುತ್ತಿದೆ.

45 ನಗರಗಳಲ್ಲಿ ಈಗ ಲಭ್ಯ

“ಜೊಮ್ಯಾಟೊ ಚಾಲನೆ ನೀಡಿರುವ ವೆದರ್‌ ವೆಬ್‌ಸೈಟ್‌ ಈಗ ಬೆಂಗಳೂರು ಸೇರಿ ದೇಶದ ಪ್ರಮುಖ 45 ನಗರಗಳಲ್ಲಿ ಲಭ್ಯವಿದೆ. Weatherunion.comಗೆ ಭೇಟಿ ನೀಡುವ ಮೂಲಕ ತಾಪಮಾನ, ಮಳೆ ಪ್ರಮಾಣ, ಸೆಕೆ, ಗಾಳಿಯ ವೇಗ, ಮಳೆ ಮುನ್ಸೂಚನೆ ಸೇರಿ ಹವಾಮಾನಕ್ಕೆ ಸಂಬಂಧಿಸಿದ ಎಲ್ಲ ಮಾಹಿತಿಯನ್ನು ಒದಗಿಸಲಿದೆ. ಸದ್ಯ, 45 ನಗರಗಳಲ್ಲಿ ಚಾಲನೆ ನೀಡಲಾಗಿದ್ದು, ಮುಂದಿನ ದಿನಗಳಲ್ಲಿ ದೇಶಾದ್ಯಂತ ವಿಸ್ತರಣೆ ಮಾಡುವ ಯೋಜನೆ ಇದೆ” ಎಂದು ಜೊಮ್ಯಾಟೊ ಸಂಸ್ಥಾಪಕರೂ ಆದ ದೀಪಿಂದರ್‌ ಗೋಯಲ್‌ ಮಾಹಿತಿ ನೀಡಿದ್ದಾರೆ.

ಎಲ್ಲರಿಗೂ ಫ್ರೀ ಫ್ರೀ

ಜೊಮ್ಯಾಟೊದ ಹೊಸ ವೆಬ್‌ಸೈಟ್‌ ಎಲ್ಲರಿಗೂ ಉಚಿತವಾಗಿ ಲಭ್ಯವಿದೆ. ಜೊಮ್ಯಾಟೊ ಫುಡ್‌ ಡೆಲಿವರಿ ಅಗ್ರಿಗೇಟರ್‌ ಆಗಿದ್ದು, ಇಂತಹ ಅಗ್ರಿಗೇಟರ್‌ಗಳು ದೇಶಾದ್ಯಂತ ಜೊಮ್ಯಾಟೊದ ವೆಬ್‌ಸೈಟ್‌ ಮೂಲಕ ಹವಾಮಾನದ ಕುರಿತ ಮಾಹಿತಿಯನ್ನು ಅರಿತುಕೊಂಡು, ತಮ್ಮ ವ್ಯಾಪಾರ, ಡೆಲಿವರಿ ಮುಂದುವರಿಸಲು ಭಾರಿ ಅನುಕೂಲವಾಗಲಿದೆ ಎಂದು ತಿಳಿದುಬಂದಿದೆ. ಈಗಾಗಲೇ ಹವಾಮಾನ ಕುರಿತು ಮಾಹಿತಿ ಒದಗಿಸುವ ಅಪ್ಲಿಕೇಶನ್‌ಗಳು, ವೆಬ್‌ಸೈಟ್‌ಗಳು ಇದ್ದರೂ, ವಿಭಿನ್ನವಾದ ಹಾಗೂ ವೇಗವಾದ ಮಾಹಿತಿ ನೀಡಲು ಜೊಮ್ಯಾಟೊ ವೆಬ್‌ಸೈಟ್‌ ಅಭಿವೃದ್ಧಿಪಡಿಸಿದೆ ಎನ್ನಲಾಗಿದೆ. ಒಂದು ನಿಮಿಷಕ್ಕೊಮ್ಮೆ ಹವಾಮಾನದ ಕುರಿತು ಮಾಹಿತಿ ಒದಗಿಸುವ ಸೌಲಭ್ಯವಿದ್ದು, ವೆದರ್‌ ಸ್ಟೇಷನ್‌ಗಳ ಸಂಖ್ಯೆಯನ್ನೂ ಇನ್ನಷ್ಟು ಹೆಚ್ಚಿಸುವ ಗುರಿ ಹೊಂದಿದೆ.

ಇದನ್ನೂ ಓದಿ: Zomato Pure Veg: ʼಜೊಮ್ಯಾಟೋ ಪ್ಯೂರ್‌ ವೆಜ್‌ʼ ಡೆಲಿವರಿಗೆ ಅಪಹಾಸ್ಯ? ʼಜಾಹೀರಾತು ಮಾಲೀಕ ನಾನಲ್ಲʼ ಎಂದ ಸ್ವಿಗ್ಗಿ!

Continue Reading
Advertisement
Virat Kohli
ಕ್ರೀಡೆ10 mins ago

Virat Kohli: ಪಂಜಾಬಿ ಮಾತನಾಡಿದ ವಿರಾಟ್​ ಕೊಹ್ಲಿ; ವಿಡಿಯೊ ವೈರಲ್​

Poonch Terrorists
ದೇಶ13 mins ago

Poonch Terrorists: ಪೂಂಚ್‌ನಲ್ಲಿ ಸೇನೆ ಮೇಲೆ ದಾಳಿ ಮಾಡಿದ 3 ಉಗ್ರರ ಫೋಟೊ ರಿಲೀಸ್; ಹತ್ಯೆಗೆ ಪ್ಲಾನ್!

Prajwal Revanna Case
ಕರ್ನಾಟಕ17 mins ago

Prajwal Revanna Case: ಎಸ್‌ಐಟಿ ಮೇಲೆ ಕೇಸ್‌ ಹಾಕ್ತೇನೆ, ಶೀಘ್ರವೇ ಪೆನ್‌ಡ್ರೈವ್‌ ಪ್ರೊಡ್ಯುಸರ್‌ ಹೆಸರು ಹೇಳ್ತೇನೆ ಎಂದ ದೇವರಾಜೇಗೌಡ

Lok Sabha Election 2024 Pralhada Joshi who came out of the election frenzy
ಹುಬ್ಬಳ್ಳಿ32 mins ago

Lok Sabha Election 2024: ಅಬ್ಬಾ! ಅಂತೂ ಮುಗೀತು ಪುಟ್ಟಾ ಮಹಾಯುದ್ಧ ಎಂದ ಪ್ರಲ್ಹಾದ್‌ ಜೋಶಿ!

Dogs Attack
ದೇಶ44 mins ago

Dogs Attack: ನಾಯಿಗಳು ದಾಳಿ ಮಾಡಲು ಬಂದರೆ ಏನು ಮಾಡಬೇಕು? ಹೇಗೆ ರಕ್ಷಿಸಿಕೊಳ್ಳಬೇಕು?

Covishield
ದೇಶ53 mins ago

Covishield: ಭಾರತದಲ್ಲಿ ಕೋವಿಶೀಲ್ಡ್‌ ಸೈಡ್‌ ಎಫೆಕ್ಟ್‌ನ ಎಲ್ಲ ಮಾಹಿತಿ ಬಹಿರಂಗ ಎಂದ ಕಂಪನಿ, ಉತ್ಪಾದನೆಯೂ ಸ್ಥಗಿತ!

RCB vs PBKS
ಕ್ರೀಡೆ1 hour ago

RCB vs PBKS: ಪಂಜಾಬ್​-ಆರ್​ಸಿಬಿ ಸೆಣಸಾಟ; ಸೋತವರು ಟೂರ್ನಿಯಿಂದ ಔಟ್​

Prajwal Revanna Case JDS delegation moves Womens Commission to arrest pen drive allottees
ಕ್ರೈಂ1 hour ago

Prajwal Revanna Case: ಪೆನ್‌ಡ್ರೈವ್ ಹಂಚಿಕೆದಾರರ ಬಂಧಿಸಿ; ಸಿಎಂ, ಡಿಸಿಎಂ ವಿರುದ್ಧ ಮಹಿಳಾ ಜೆಡಿಎಸ್‌ ಗರಂ!

Zomato
ದೇಶ2 hours ago

Zomato: ಜೊಮ್ಯಾಟೊ ಹೊಸ ತಂತ್ರಜ್ಞಾನ; ಮನೆ ಹೊರಗೆ ಕಾಲಿಡುವ ಮುನ್ನ ಇದನ್ನು ನೋಡಲೇಬೇಕು!

Hindu population
ದೇಶ2 hours ago

Hindu Population: ಹಿಂದೂಗಳ ಜನಸಂಖ್ಯೆ ಶೇ.7.8 ಕುಸಿತ; ಮುಸ್ಲಿಮರ ಸಂಖ್ಯೆ ಶೇ.43.15 ಏರಿಕೆ!

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Dina Bhavishya
ಭವಿಷ್ಯ17 hours ago

Dina Bhavishya : ಅಮಾವಾಸ್ಯೆ ದಿನ ಈ ರಾಶಿಯವರಿಗೆ ಅದೃಷ್ಟ; ಹಣ ಗಳಿಕೆಗೆ ಪುಷ್ಟಿ

Prajwal Revanna Case HD Revanna has severe chest pain Admission in Victoria
ರಾಜಕೀಯ1 day ago

Prajwal Revanna Case: ಎಚ್.ಡಿ. ರೇವಣ್ಣಗೆ ಹೆಚ್ಚಾದ ಎದೆ ನೋವು; ಸಲೈನ್‌ ಹಾಕಿ ಕಳಿಸಿದ ವೈದ್ಯರು

Karnataka Weather Forecast
ಮಳೆ1 day ago

Karnataka Weather : ಹಾಸನ, ಚಿಕ್ಕಮಗಳೂರಲ್ಲಿ ಆಲಿಕಲ್ಲು ಸಹಿತ ಭಾರಿ ಮಳೆ; ನಾಳೆ ಬಿರುಗಾಳಿ ಎಚ್ಚರಿಕೆ

Prajwal Revanna Case Government work against Revanna HD Kumaraswamy gives details of the case
ರಾಜಕೀಯ1 day ago

Prajwal Revanna Case: ರೇವಣ್ಣರಿಗೆ ಖೆಡ್ಡಾ ತೋಡಿದ್ದು ಸರ್ಕಾರ; ಎಲ್ಲೆಲ್ಲಿ ಏನೇನು ಮಾಡಲಾಯಿತೆಂಬ ಇಂಚಿಂಚು ಡಿಟೇಲ್ಸ್‌ ಕೊಟ್ಟ ಎಚ್‌ಡಿಕೆ!

Prajwal Revanna Case 2nd accused in KR Nagar victim abduction case sent to SIT custody Trouble for Revanna
ಕ್ರೈಂ2 days ago

Prajwal Revanna Case: ಕೆ.ಆರ್.‌ ನಗರ ಸಂತ್ರಸ್ತೆ ಕಿಡ್ನ್ಯಾಪ್‌ ಕೇಸ್‌ನ 2ನೇ ಆರೋಪಿ SIT ಕಸ್ಟಡಿಗೆ; ರೇವಣ್ಣಗೆ ಸಂಕಷ್ಟ?

karnataka weather forecast
ಮಳೆ2 days ago

Karnataka Weather : ಬೆಂಗಳೂರು ಸೇರಿ ಹಲವೆಡೆ ಮತ್ತೆ ಅಬ್ಬರಿಸುತ್ತಿರುವ ಮಳೆ; ಇನ್ನೊಂದು ವಾರ ಅಲರ್ಟ್‌

Prajwal Revanna Case DK Shivakumar behind Prajwal video leak Devaraje Gowda demands CBI probe
ಕ್ರೈಂ2 days ago

Prajwal Revanna Case: ಪ್ರಜ್ವಲ್‌ ವಿಡಿಯೊ ಲೀಕ್‌ ಹಿಂದೆ ಇರೋದು ಡಿಕೆಶಿ; ದಾಖಲೆ ತೋರಿಸಿ, ಸಿಬಿಐಗೆ ಕೇಸ್‌ ವಹಿಸಲು ದೇವರಾಜೇಗೌಡ ಆಗ್ರಹ

Dina bhavishya
ಭವಿಷ್ಯ3 days ago

Dina Bhavishya : ಈ ರಾಶಿಯವರಿಗೆ ಇಂದು ಹುಡುಕಿಕೊಂಡು ಬರಲಿವೆ ಹೊಸ ಅವಕಾಶಗಳು

Prajwal Revanna Case HD Revanna sent to judicial custody Shift to Parappana Agrahara
ಕ್ರೈಂ3 days ago

Prajwal Revanna Case: ಎಸ್‌ಐಟಿ ಕಸ್ಟಡಿಗೆ ಮಾಜಿ ಸಚಿವ ಎಚ್‌.ಡಿ. ರೇವಣ್ಣ; ಮತ್ತೆ ತೀವ್ರ ವಿಚಾರಣೆ

Prajwal Revanna Case No evidence against me its a conspiracy says HD Revanna
ಕರ್ನಾಟಕ3 days ago

Prajwal Revanna Case: ನನ್ನ ವಿರುದ್ಧ ಯಾವುದೇ ಸಾಕ್ಷಿಗಳಿಲ್ಲ, ಇದೊಂದು ಷಡ್ಯಂತ್ರ: ಎಚ್‌.ಡಿ. ರೇವಣ್ಣ ಫಸ್ಟ್‌ ರಿಯಾಕ್ಷನ್‌!

ಟ್ರೆಂಡಿಂಗ್‌