Site icon Vistara News

Vedic Style Marriage: ಆರ್ಟ್ ಆಫ್ ಲಿವಿಂಗ್‌ ಆಶ್ರಮದಲ್ಲಿ ವಿದೇಶಿ ಜೋಡಿಗಳಿಗೆ ವೈದಿಕ ಪದ್ಧತಿಯಲ್ಲಿ ವಿವಾಹ!

Internationals marry in Vedic style at Art of Living Ashram

ಬೆಂಗಳೂರು: ಪ್ರಸಿದ್ಧವಾಗುತ್ತಿರುವ ವೈದಿಕ ವಿವಾಹಕ್ಕಾಗಿ(Vedic Style Marriage) ಜಪಾನ್(Japan), ಮಂಗೋಲಿಯ(Mongolia), ಅಮೆರಿಕದಿಂದ (America) ಆಗಮಿಸಿದ ಅಂತಾರಾಷ್ಟ್ರೀಯ ದಂಪತಿಗಳು ದಸರೆಯ ದಿನದಂದು ಆರ್ಟ್ ಆಫ್ ಲಿವಿಂಗ್ ಅಂತಾರಾಷ್ಟ್ರೀಯ ಕೇಂದ್ರದಲ್ಲಿ (Art of Living Ashram) ಗುರುದೇವ ಶ್ರೀ ಶ್ರೀ ರವಿಶಂಕರರ (sri sri ravi shankar) ಸಮ್ಮುಖದಲ್ಲಿ ವೈದಿಕ ಪದ್ಧತಿಯಲ್ಲಿ ವಿವಾಹವಾದರು.

ಆಧ್ಯಾತ್ಮಿಕತೆಯ, ಯೋಗದ, ಆಯುರ್ವೇದದ ಕೊಡುಗೆಯನ್ನು ಅನೇಕ ಮಿಲಿಯನ್ ಜನರಿಗೆ ತಲುಪಿಸಿರುವ ಗುರುದೇವರು, ಕಾಲಘಟ್ಟದಲ್ಲಿ ಕಳೆದುಕೊಂಡು ದುಹೋದ ಅನೇಕ ಭಾರತೀಯ ಪರಂಪರೆಗಳನ್ನು ಜೀವಂತಗೊಳಿಸಿದ್ದಾರೆ. ಆಳವಾದ ಆಧ್ಯಾತ್ಮಿಕ ಮಹತ್ವವನ್ನು ಹೊಂದಿರುವ ವೈದಿಕ ವಿವಾಹವನ್ನು ಗುರುದೇವರು ಪ್ರೋತ್ಸಾಹಿಸಿದ್ದಾರೆ. ವೈಭವಯುತವಾದ ಮದುವೆಗಳು ಪ್ರಸಿದ್ಧಿಯನ್ನು ಪಡೆದಿರುವ ಈ ಕಾಲದಲ್ಲಿ, ಮದುವೆಯ ಶಪಥಗಳ ಮೇಲೆ, ಬದ್ಧತೆಯ ಮೇಲೆ ಒತ್ತೆಯನ್ನಿಡುವ ವೈದಿಕ ವಿವಾಹಕ್ಕೆ ಪ್ರಾಮುಖ್ಯತೆಯನ್ನು ನೀಡಿದ್ದಾರೆ. ಮದುವೆಯ ಸಂದರ್ಭದಲ್ಲಿ , ಪ್ರಾಚೀನ ಶಾಸ್ತ್ರಗಳ ಪ್ರಕಾರ ಉಚ್ಚರಿಸಲಾಗುವ ವೈದಿಕ ಮಂತ್ರಗಳು, ಇಬ್ಬರು ವ್ಯಕ್ತಿಗಳನ್ನು ದೀರ್ಘಕಾಲದವರೆಗೆ ಬೆಸೆಯುವ ಬಂಧನಕ್ಕಾಗಿ ಆಗಿರುತ್ತದೆ ಮತ್ತು ಅಕ್ಕಿಯು ಕಾಳುಗಳೊಡನೆ ಬೆರೆತು ಪೂರ್ಣವಾಗುವಂತಯೇ ಚೇತನದ ಏಕತೆಯನ್ನು ಅವರಿಗೆ ನೆನಪಿಸುತ್ತವೆ.

“ಆಶೀರ್ವಾದದ ಮಳೆಯೇ ನಮ್ಮ ಮೇಲೆ ಸುರಿದಂತಹ ಅನುಭವವಾಯಿತು. ಇಂದು ನಮ್ಮಿಬ್ಬರಿಗೂ ನವನವೀನವಾದ ಆರಂಭ” ಎಂದರು ಮಂಗೋಲಿಯಾದ ಬಯಸ್ಗಲನ್ ಮತ್ತು ಸುರೇಂಜರ್ಗಳ್. “ನಾವು 8 ವರ್ಷಗಳಿಂದ ಜೊತೆಯಾಗಿದ್ದೇವೆ. ನನ್ನ ಸಂಗಾತಿಯು ಸದಾ ವೈದಿಕ ಶೈಲಿಯ ವಿವಾಹಕ್ಕಾಗಿ ಬಯಸುತ್ತಿದ್ದರಿಂದ, ನಮಗೆ ಇದೇ ಸೂಕ್ತ ಎಂದು ನಮಗೆ ತಿಳಿದಿತ್ತು. ಪಂಡಿತರು ಮಂತ್ರಪಠಣ ಮಾಡಿದ ರೀತಿ,ಗುರುದೇವರಿಂದ ಆಶೀರ್ವಾದ, ಇದಕ್ಕಿಂತಲೂ ಬಯಸಲು ಹೆಚ್ಚಾಗಿ ನಮ್ಮ ಬಳಿ ಏನೂ ಇಲ್ಲ” ಎಂದರು ದಕ್ಷಿಣ ಆಫ್ರಿಕಾದ ಕೇಪ್ ಟೌನಿನ ರೇ ಮೋಂಗಿ ಹಾಗೂ ಲಾರೆನ್ ಡರ್ಬಿ ಲೂಯಿಸ್.

ಈ ಸುದ್ದಿಯನ್ನೂ ಓದಿ: ಅಂತರ್ಜಾತಿ ವಿವಾಹಗಳು ಹೆಚ್ಚು ನಡೆಯಲಿ: ಮಾಜಿ ಸಿಎಂ ಸಿದ್ದರಾಯಯ್ಯ

ಇದಕ್ಕೂ ಮೊದಲು ಆರ್ಟ್ ಆಫ್ ಲಿವಿಂಗ್ ನ ಅಂತಾರಾಷ್ಟ್ರೀಯ ಕೇಂದ್ರದಲ್ಲಿ ನಡೆದ ಒಂಭತ್ತು ದಿವಸಗಳ ನವರಾತ್ರಿಯ ಮಹೋತ್ಸವದಲ್ಲಿ ಹೋಮಗಳು, ಸಂಗೀತ, ನೃತ್ಯದ ಕಾರ್ಯಕ್ರಮಗಳು ನಡೆದವು. ನವರಾತ್ರಿಯ ಮಹೋತ್ಸವಕ್ಕಾಗಿ ಅನೇಕ ಲಕ್ಷ ಜನರು ಆಶ್ರಮಕ್ಕೆ ಆಗಮಿಸಿದರು. ಜಗನ್ಮಾತೆಯ ಆಶೀರ್ವಾದಕ್ಕಾಗಿ ಅಷ್ಪಮಿಯಂದು ಮಾಡಲಾದ ಚಂಡಿ ಹೋಮವನ್ನು ಭಾರತದ 100 ಸ್ಥಳಗಳಲ್ಲಿ ಮಾಡಲಾಯಿತು ಹಾಗೂ ನೇಪಾಳ, ಯುಎಇ, ಮಾರಿಷಿಸ್ ಮತ್ತು ಕೆನಡಾದಲ್ಲಿ ದುರ್ಗಾ ಹೋಮವನ್ನು ಮಾಡಲಾಯಿತು.

ಆಶ್ರಮದಲ್ಲಿ ನಡೆದ ಚಂಡಿ ಹೋಮದ ನಂತರ 1.2 ಲಕ್ಷ ಜನರಿಗೆ ಊಟವನ್ನು ಬಡಿಸಲಾಯಿತು. ಆಶ್ರಮದ ಅಡುಗೆ ಮನೆಯಲ್ಲಿ ತಯಾರಿಸಲಾದ ಸ್ವಾದಿಷ್ಟವಾದ 17 ಬಗೆಯ ಸಸ್ಯಾಹಾರಗಳಿದ್ದವು. ನವರಾತ್ರಿಯ ಮಹೋತ್ಸವದ ಕೆಲವು ಚಿತ್ರಗಳನ್ನು ಇಲ್ಲಿ ಕೊಡಲಾಗಿದೆ.

ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version