ನವದೆಹಲಿ: ಮುಂದಿನ 48 ಗಂಟೆಗಳಲ್ಲಿ ಇಸ್ರೇಲ್ ಮೇಲೆ ಇರಾನ್ (Iran- Israel War) ನೇರ ದಾಳಿ ನಡೆಸುವ ಸಾಧ್ಯತೆಯಿದೆ ಮತ್ತು ಯಹೂದಿ ಬಹುಸಂಖ್ಯಾತರಿರುವ ರಾಷ್ಟ್ರವು ಪ್ರತಿದಾಳಿಗೆ ಸಜ್ಜಾಗಿದೆ ಎಂದು ವರದಿಯೊಂದು ತಿಳಿಸಿದೆ. ವಾಲ್ ಸ್ಟ್ರೀಟ್ ಜರ್ನಲ್ ಶುಕ್ರವಾರ ಈ ಬಗ್ಗೆ ವರದಿ ಮಾಡಿದ್ದು, ಇರಾನಿನ ಸರ್ವೊಚ್ಛ ನಾಯಕ ಅಯತೊಲ್ಲಾ ಅಲಿ ಖಮೇನಿ ಈ ಬಗ್ಗೆ ಸುಳಿವು ನೀಡಿದ್ದಾರೆ ಎನ್ನಲಾಗಿದೆ. ಗಾಜಾ ಪಟ್ಟಿಯಲ್ಲಿ ಹಮಾಸ್ ಜತೆಗೆ ಯುದ್ಧದಲ್ಲಿ ನಿರತವಾಗಿರುವ ಇಸ್ರೇಲ್, ಹಳೆಯ ಶತ್ರು ಇರಾನ್ ಗೂ ಸೆಡ್ಡು ಹೊಡೆಯಬೇಕಾಗಿದೆ. ವರದಿಯ ಪ್ರಕಾರ ಮುಂದಿನ 48 ಗಂಟೆಯೊಳಗೆ ಭೀಕರ ಯುದ್ಧವೊಂದು ಸಂಭವಿಸುವ ಸಾಧ್ಯತೆಗಳಿವೆ.
ಸಿರಿಯಾದ ಡಮಾಸ್ಕಸ್ನಲ್ಲಿರುವ ತನ್ನ ರಾಯಭಾರ ಕಚೇರಿಯ ಮೇಲೆ ನಡೆದ ಭೀಕರ ದಾಳಿಗೆ ಇಸ್ರೇಲ್ ಕಾರಣ ಎಂದು ಆರೋಪಿಸಿದ ಇರಾನ್ 48 ಗಂಟೆಗಳಲ್ಲಿ ಇಸ್ರೇಲ್ ಮೇಲೆ ನೇರ ದಾಳಿ ನಡೆಸಬಹುದು ಎಂದು ವಾಲ್ ಸ್ಟ್ರೀಟ್ ಜರ್ನಲ್ ವರದಿ ಮಾಡಿದೆ. ಇರಾನ್ ಸರ್ವೋಚ್ಚ ನಾಯಕ ಇಂತಹ ದಾಳಿಗೆ ಸಂಬಂಧಿಸಿದ ರಾಜಕೀಯ ಅಪಾಯಗಳನ್ನು ಎದುರಿಸುತ್ತಿದ್ದರೂ, ಇಸ್ರೇಲ್ ವಿರುದ್ಧ ಪ್ರತಿಕಾರ ತೀರಿಸಲು ಸಿದ್ಧತೆ ನಡೆಸುತ್ತಿದೆ ಎಂದು ವರದಿ ಹೇಳಿದೆ.
ಇದನ್ನೂ ಓದಿ: Narendra Modi : ಅಂಬೇಡ್ಕರ್ ಮತ್ತೆ ಬಂದರೂ ಸಂವಿಧಾನ ಬದಲಾವಣೆ ಅಸಾಧ್ಯ; ಮೋದಿ ಹೀಗೆ ಹೇಳಲು ಕಾರಣವೇನು?
ಸಿರಿಯಾದಲ್ಲಿನ ದಾಳಿಗೆ ಇರಾನ್ ಇಸ್ರೇಲ್ ಅನ್ನು ದೂಷಿಸಿದೆ. ಆದರೆ ಇಸ್ರೇಲ್ ದಾ ಳಿಯಲ್ಲಿ ತನ್ನ ಪಾತ್ರವನ್ನು ಸಾರ್ವಜನಿಕವಾಗಿ ಒಪ್ಪಿಕೊಂಡಿಲ್ಲ ಮತ್ತು ನಿರಾಕರಿಸಿಲ್ಲ. ಏಪ್ರಿಲ್ 1 ರಂದು ಡಮಾಸ್ಕಸ್ನಲ್ಲಿರುವ ಇರಾನ್ ರಾಯಭಾರ ಕಚೇರಿಯ ಮೇಲೆ ಇಸ್ರೇಲ್ ಯುದ್ಧ ವಿಮಾನಗಳು ದಾಳಿ ನಡೆಸಿವೆ ಎನ್ನಲಾಗಿದೆ.
ಸಿರಿಯಾದ ರಾಜಧಾನಿಯಲ್ಲಿರುವ ಇರಾನಿನ ದೂತಾವಾಸವನ್ನು ನೆಲಸಮಗೊಳಿಸಿದ ದಾಳಿಯಲ್ಲಿ ಇರಾನಿನ ರೆವಲ್ಯೂಷನರಿ ಗಾರ್ಡ್ಸ್ ಕಾರ್ಪ್ಸ್ ಮೊಹಮ್ಮದ್ ರೆಜಾ ಜಹೇದಿ ಮೃತಪಟ್ಟಿದ್ದಾರೆ. ಇಸ್ರೇಲ್ ದಾಳಿಯನ್ನು ತನ್ನ ವಿರುದ್ಧ ಹೋರಾಡುತ್ತಿರುವ ಉಗ್ರಗಾಮಿ ಗುಂಪುಗಳನ್ನು ಬೆಂಬಲಿಸಿದ ಇರಾನಿನ ಮಿಲಿಟರಿ ಅಧಿಕಾರಿಗಳ ವಿರುದ್ಧ ಮಾಡಿದೆ ಎಂದು ಹೇಳಲಾಗುತ್ತಿದೆ.
ಇಸ್ರೇಲ್ ಮೇಲೆ ಸನ್ನಿಹಿತ ದಾಳಿಯ ಅಪಾಯಗಳನ್ನು ಒಪ್ಪಿಕೊಡಿರುವ ಅಮೇರಿಕ, ಅಲ್ಲಿರುವ ತನ್ನ ನಾಗರಿಕರಿಗೆ ಪ್ರಯಾಣದ ಕುರಿತ ಸಲಹೆಗಳನ್ನು ಬಿಡುಗಡೆ ಮಾಡಿದೆ. ತನ್ನ ದೂತಾವಾಸದ ಮೇಲಿನ ದಾಳಿಯ ನಂತರ, ಇಸ್ರೇಲ್ ದಾಳಿಗೆ ಪ್ರತಿಕ್ರಿಯಿಸುವುದಾಗಿ ಇರಾನ್ ಪ್ರತಿಜ್ಞೆ ಮಾಡಿದೆ.
ಇಸ್ರೇಲ್ಗೆ ಶಿಕ್ಷೆಯಾಗಲೇಬೇಕು ” ಎಂದು ಇರಾನ್ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ದಾಳಿ ನಂತದ ಹೇಳಿದ್ದಾರೆ.
Iran- Israel war : ಇಸ್ರೆಲ್, ಇರಾನ್ಗೆ ಹೋಗದಂತೆ ವಿಶೇಷ ಸೂಚನೆ ನೀಡಿದ ಭಾರತ ಸರ್ಕಾರ; ಯಾಕೆ ಗೊತ್ತೇ?
ಇರಾನ್ ಹಾಗೂ ಇಸ್ರೇಲ್ ನಡುವೆ ಶಸ್ತ್ರಾಸ್ತ್ರಗಳ ದಾಳಿ (Iran- Israel war : ಇಸ್ರೆಲ್, ಇರಾನ್ಗೆ ಹೋಗದಂತೆ ವಿಶೇಷ ಸೂಚನೆ ನೀಡಿದ ಭಾರತ ಸರ್ಕಾರ; ಯಾಕೆ ಗೊತ್ತೇ?) ನಡೆಯುತ್ತಿರುವ ಕಾರಣ ಭದ್ರತಾ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಮುಂದಿನ ಸೂಚನೆ ಬರುವವರೆಗೆ ಇರಾನ್ ಅಥವಾ ಇಸ್ರೇಲ್ಗೆ ಪ್ರಯಾಣಿಸದಂತೆ ವಿದೇಶಾಂಗ ಸಚಿವಾಲಯ ಶುಕ್ರವಾರ ಎಲ್ಲಾ ಭಾರತೀಯರಿಗೆ ಸಲಹೆ ನೀಡಿದೆ. ಈಗಾಗಲೇ ಅಲ್ಲಿ ವಾಸಿಸುತ್ತಿರುವ ಭಾರತೀಯರು ಆಯಾ ರಾಯಭಾರ ಕಚೇರಿಗಳೊಂದಿಗೆ ಸಂಪರ್ಕದಲ್ಲಿರಲು ಮತ್ತು ತಮ್ಮ ಇರುವಿಕೆಯನ್ನು ದಾಖಲು ಮಾಡಲು ಹೇಳಿದೆ.
“ಈ ಪ್ರದೇಶದಲ್ಲಿ ಸದ್ಯ ಉಂಟಾಗಿರುವ ಪರಿಸ್ಥಿತಿ ಗಮನದಲ್ಲಿಟ್ಟುಕೊಂಡು, ಮುಂದಿನ ಸೂಚನೆ ಬರುವವರೆಗೆ ಎಲ್ಲಾ ಭಾರತೀಯರು ಇರಾನ್ ಅಥವಾ ಇಸ್ರೇಲ್ಗೆ ಪ್ರಯಾಣಿಸದಂತೆ ಸೂಚಿಸಲಾಗಿದೆ. ಪ್ರಸ್ತುತ ಇರಾನ್ ಅಥವಾ ಇಸ್ರೇಲ್ಗೆ ಹೋದವರು ಅಥವಾ ಅಲ್ಲಿ ವಾಸಿಸುತ್ತಿರುವ ಭಾರತೀಯ ರಾಯಭಾರ ಕಚೇರಿಗಳೊಂದಿಗೆ ಸಂಪರ್ಕದಲ್ಲಿರಬೇಕು ಎಂದು ವಿನಂತಿ ಮಾಡಲಾಗಿದೆ” ಎಂದು ವಿದೇಶಾಂಗ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.