ಟೆಲ್ ಅವಿವ್: ಇಸ್ರೇಲ್‌ನಿಂದ ದಾಳಿಗೊಳಗಾಗುತ್ತಿರುವ (Israel- Palestine war, Israel- Hamas conflict)) ಉತ್ತರ ಗಾಜಾದ ಎರಡು ಪ್ರಮುಖ ಆಸ್ಪತ್ರೆಗಳು ಭಾನುವಾರ ಹೊಸ ರೋಗಿಗಳಿಗೆ ಪ್ರವೇಶವಿಲ್ಲದಂತೆ ಮುಚ್ಚಲ್ಪಟ್ಟಿವೆ. ಇಸ್ರೇಲಿ ಬಾಂಬ್ ದಾಳಿ, ಇಂಧನ ಮತ್ತು ಔಷಧದ ಕೊರತೆಯಿಂದಾಗಿ ಮುಚ್ಚಲಾಗಿದೆ. ಈಗಾಗಲೇ ಚಿಕಿತ್ಸೆ ಪಡೆಯುತ್ತಿರುವವರು ಕೂಡ ಇದರಿಂದಾಗಿ ಸಾಯಬಹುದು ಎಂದು ಸಿಬ್ಬಂದಿ ಹೇಳಿದ್ದಾರೆ.
ಪ್ಯಾಲೇಸ್ತೀನಿಯನ್ ಎನ್‌ಕ್ಲೇವ್‌ನ ಉತ್ತರದಲ್ಲಿರುವ ಆಸ್ಪತ್ರೆಗಳನ್ನು ಇಸ್ರೇಲಿ ಪಡೆಗಳು ನಿರ್ಬಂಧಿಸಿವೆ ಮತ್ತು ಒಳಗಿರುವವರ ಚಿಕಿತ್ಸೆಗೆ ಸಾಧ್ಯವಾಗುತ್ತಿಲ್ಲ ಎಂದು ವೈದ್ಯಕೀಯ ಸಿಬ್ಬಂದಿ ತಿಳಿಸಿದ್ದಾರೆ. ಈ ಪ್ರದೇಶದಲ್ಲಿ ಹಮಾಸ್ ಉಗ್ರಗಾಮಿಗಳ ಮೇಲೆ ನೆಲೆಯೂರಿವೆ, ಹೀಗಾಗಿ ಆಸ್ಪತ್ರೆಗಳನ್ನು ಸ್ಥಳಾಂತರಿಸಬೇಕು ಎಂದು ಇಸ್ರೇಲ್ ಹೇಳುತ್ತಿದೆ.
ಗಾಜಾದ ಅತಿದೊಡ್ಡ ಆಸ್ಪತ್ರೆ ಅಲ್ ಶಿಫಾ ಮತ್ತು ಮತ್ತೊಂದು ಪ್ರಮುಖ ಆಸ್ಪತ್ರೆ ಅಲ್-ಕುಡ್ಸ್ ಇಬ್ಬರೂ ಭಾನುವಾರ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸುತ್ತಿರುವುದಾಗಿ ಹೇಳಿವೆ. ಪ್ರತಿದಿನ ಹೆಚ್ಚು ಹೆಚ್ಚು ಜನರು ಕೊಲ್ಲಲ್ಪಡುತ್ತಿದ್ದಾರೆ ಮತ್ತು ಗಾಯಗೊಂಡಿದ್ದಾರೆ. ಆದರೆ ಗಾಯಾಳುಗಳು ಚಿಕಿತ್ಸೆಗೆ ಹೋಗಬಹುದಾದ ಸ್ಥಳಗಳು ಕಡಿಮೆಯಾಗುತ್ತಿವೆ.
ಆದರೆ ಈ ಆಸ್ಪತ್ರೆಗಳು ಹಾಗೂ ಶಾಲೆಗಳ ಅಡಿಯಲ್ಲಿ ಭೂಗತವಾಗಿ ಕಾರ್ಯಾಚರಿಸುತ್ತಿರುವ ಹಮಾಸ್ ಉಗ್ರರ ಸುರಂಗಗಳು ಇವೆ. ಇಸ್ರೇಲ್ ಕಾರ್ಯಾಚರಣೆಗೆ ಈ ಆಸ್ಪತ್ರೆಗಳು ಹಾಗೂ ಶಾಲೆಗಳು ಅಡ್ಡಿಯಾಗುತ್ತಿವೆ. ಹೀಗಾಗಿ ಇವುಗಳ ಸ್ಥಳಾಂತರಕ್ಕೆ ಸೈನ್ಯ ಮುಂದಾಗಿದೆ.
ವಿಶ್ವಸಂಸ್ಥೆಯಲ್ಲಿ ಇಸ್ರೇಲ್ ವಿರುದ್ಧ ನಿರ್ಣಯಕ್ಕೆ ಭಾರತ ಮತ
ಇಸ್ರೇಲ್- ಹಮಾಸ್ ಸಂಘರ್ಷಕ್ಕೆ (Israel- palestine war, israel- Hamas conflict) ಸಂಬಂಧಿಸಿ, ಪೂರ್ವ ಜೆರುಸಲೆಮ್ ಸೇರಿದಂತೆ ಆಕ್ರಮಿತ ಪ್ಯಾಲೆಸ್ತೇನಿಯನ್ ಪ್ರಾಂತ್ಯದಲ್ಲಿ ಇಸ್ರೇಲಿ ವಸಾಹತು ಚಟುವಟಿಕೆಗಳನ್ನು ಖಂಡಿಸುವ ವಿಶ್ವಸಂಸ್ಥೆಯ ನಿರ್ಣಯದ ಪರವಾಗಿ 145 ದೇಶಗಳು ಮತ ಚಲಾಯಿಸಿದವು. ಇದರಲ್ಲಿ ಭಾರತವೂ ಸೇರಿದೆ.
“ಪೂರ್ವ ಜೆರುಸಲೇಂ ಮತ್ತು ಆಕ್ರಮಿತ ಸಿರಿಯನ್ ಗೋಲನ್ ಸೇರಿದಂತೆ ಪ್ಯಾಲೆಸ್ತೇನಿಯನ್ ಪ್ರದೇಶದಲ್ಲಿ ಇಸ್ರೇಲಿ ವಸಾಹತುಗಳು” ಎಂಬ ಶೀರ್ಷಿಕೆಯ ಯುಎನ್ ಕರಡು ನಿರ್ಣಯವನ್ನು ನವೆಂಬರ್ 9ರಂದು ಬಹುಮತದಿಂದ ಅಂಗೀಕರಿಸಲಾಯಿತು. ಇದರಲ್ಲಿ ಭಾರತವೂ ಸೇರಿತು. ಎರಡು ವಾರಗಳ ಹಿಂದೆ ಇಸ್ರೇಲ್- ಹಮಾಸ್ ಸಂಘರ್ಷದ ಕುರಿತು ಜೋರ್ಡಾನ್ ಮಂಡಿಸಿದ ಕರಡು ನಿರ್ಣಯಕ್ಕೆ ಭಾರತ ಗೈರುಹಾಜರಾಗಿತ್ತು.
ಏಳು ದೇಶಗಳು- ಯುನೈಟೆಡ್ ಸ್ಟೇಟ್ಸ್, ಕೆನಡಾ, ಹಂಗೇರಿ, ಇಸ್ರೇಲ್, ಮಾರ್ಷಲ್ ಐಲ್ಯಾಂಡ್ಸ್, ಮೈಕ್ರೋನೇಷಿಯಾ ಮತ್ತು ನೌರು ಫೆಡರೇಟೆಡ್ ಸ್ಟೇಟ್ಸ್ – ನಿರ್ಣಯದ ವಿರುದ್ಧ ಮತ ಚಲಾಯಿಸಿದರೆ, 18 ಮತದಾನದಿಂದ ದೂರ ಉಳಿದವು.
ಈ ನಿರ್ಣಯದೊಂದಿಗೆ, ಈ ಪ್ರದೇಶಗಳಲ್ಲಿನ ವಸಾಹತು ಚಟುವಟಿಕೆಗಳನ್ನು ಮತ್ತು ಭೂಮಿಯನ್ನು ವಶಪಡಿಸಿಕೊಳ್ಳುವುದು, ವ್ಯಕ್ತಿಗಳ ಜೀವನೋಪಾಯದ ಅಡ್ಡಿ, ನಾಗರಿಕರ ಬಲವಂತದ ವರ್ಗಾವಣೆ ಮತ್ತು ಭೂಮಿಯನ್ನು ವಶಪಡಿಸಿಕೊಳ್ಳುವುದನ್ನು ಒಳಗೊಂಡಿರುವ ಯಾವುದೇ ಚಟುವಟಿಕೆಗಳನ್ನು ವಿಶ್ವಸಂಸ್ಥೆ ಖಂಡಿಸಿತು.
ಅಕ್ಟೋಬರ್ 28ರಂದು, ಜೋರ್ಡಾನ್-ಕರಡು ನಿರ್ಣಯದಿಂದ ಭಾರತ ದೂರವುಳಿದಿತ್ತು. ಅದು ತಕ್ಷಣ ಯುದ್ಧ ನಿಲುಗಡೆಗೆ ಹಾಗೂ ಶಾಶ್ವತ ಮಾನವ ಹಕ್ಕು ಒಪ್ಪಂದಕ್ಕೆ ಕರೆ ನೀಡಿತ್ತು. ಆ ನಿರ್ಣಯವು ಉಗ್ರಗಾಮಿ ಗುಂಪು ಹಮಾಸ್ ಬಗ್ಗೆ ಯಾವುದೇ ಉಲ್ಲೇಖವನ್ನು ಮಾಡಿರಲಿಲ್ಲ.
ಜೋರ್ಡಾನ್ ನಿರ್ಣಯದ ಪರವಾಗಿ 121 ಮತಗಳು, 44 ಗೈರುಹಾಜರಿಗಳು ಮತ್ತು ವಿರುದ್ಧವಾಗಿ 14 ಮತಗಳು ಬಿದ್ದಿದ್ದವು. ಗಾಜಾ ಪಟ್ಟಿಯಾದ್ಯಂತ ನಾಗರಿಕರಿಗೆ ಅಗತ್ಯ ಸರಕುಗಳು ಮತ್ತು ಸೇವೆಗಳನ್ನು ತಕ್ಷಣ, ನಿರಂತರ, ಸಾಕಷ್ಟು ಮತ್ತು ಅಡೆತಡೆಯಿಲ್ಲದೆ ಒದಗಿಸುವಂತೆ ಒತ್ತಾಯಿಸಿತು. “ನಾಗರಿಕರ ರಕ್ಷಣೆ, ಕಾನೂನು ಮತ್ತು ಮಾನವೀಯ ಜವಾಬ್ದಾರಿಗಳನ್ನು ಎತ್ತಿಹಿಡಿಯುವುದು” ಎಂಬ ಶೀರ್ಷಿಕೆಯ ನಿರ್ಣಯ ಅದಾಗಿತ್ತು.
ನವೆಂಬರ್ 9ರಂದು ಭಾರತದ ಮತದಾನ ಇಸ್ರೇಲ್- ಪ್ಯಾಲೆಸ್ತೀನ್ ಸಮಸ್ಯೆಯ ಕುರಿತು ದೆಹಲಿಯ ಸಾಂಪ್ರದಾಯಿಕ ಸ್ಥಾನವನ್ನು ಪ್ರತಿಬಿಂಬಿಸುತ್ತದೆ. ಅಲ್ಲಿ ಅದು ಇಸ್ರೇಲ್- ಪ್ಯಾಲೆಸ್ತೀನ್ ಶಾಂತಿ, ಮಾತುಕತೆಯ ಪರಿಹಾರವನ್ನು ಬೆಂಬಲಿಸಿದೆ. ಇದು ಸುರಕ್ಷಿತ ಗಡಿಗಳಿಂದ ಕೂಡಿದ ಸಾರ್ವಭೌಮ, ಸ್ವತಂತ್ರ ಮತ್ತು ಕಾರ್ಯಸಾಧ್ಯವಾದ ಪ್ಯಾಲೆಸ್ತೀನ್ ದೇಶವನ್ನು ಗುರುತಿಸುವಂತಿದೆ.
ಅಕ್ಟೋಬರ್ 28ರಂದು ನಡೆದ ಮತದಾನದ ವಿವರಣೆಯಲ್ಲಿ ಭಾರತ ಗೈರುಹಾಜರಾಗಿತ್ತು. ಆ ಸಮಯದಲ್ಲಿ, ಭಾರತವು ʼʼಭಯೋತ್ಪಾದನೆಯು ʼದುಷ್ಕೃತ್ಯʼ ಮತ್ತು ಅದಕ್ಕೆ ಯಾವುದೇ ಗಡಿ, ರಾಷ್ಟ್ರೀಯತೆ ಅಥವಾ ಜನಾಂಗ ಇಲ್ಲ. ಭಯೋತ್ಪಾದಕ ಕೃತ್ಯಗಳಿಗೆ ಜಗತ್ತು ಯಾವುದೇ ಸಮರ್ಥನೆ ನೀಡಬಾರದುʼʼ ಎಂದು ಹೇಳಿತ್ತು.
ಇದನ್ನೂ ಓದಿ: Israel- Palestine War: 1 ಲಕ್ಷ ಪ್ಯಾಲೆಸ್ತೀನ್ ಕಾರ್ಮಿಕರ ಬದಲಿಗೆ ಭಾರತೀಯರ ನೇಮಕ: ಇಸ್ರೇಲ್