Site icon Vistara News

Israel Palestine War: ಹಮಾಸ್ ಉಗ್ರರ ಪರ ಪೋಸ್ಟ್;‌ ಉತ್ತರ ಪ್ರದೇಶದಲ್ಲಿ ಮೌಲ್ವಿಯ ಬಂಧನ

Israel Attack On Gaza

700 Palestinians Killed In Overnight Israeli Strikes, Says Gaza

ಲಖನೌ: ಇಸ್ರೇಲ್‌ ಮೇಲೆ ಸುಮಾರು 5 ಸಾವಿರ ರಾಕೆಟ್‌ಗಳ ಮೂಲಕ ದಾಳಿ ಆರಂಭಿಸಿ, 4 ಸಾವಿರ ಜನರ ಸಾವಿಗೆ ಕಾರಣವಾಗಿರುವ ಪ್ಯಾಲೆಸ್ತೀನ್‌ನ ಹಮಾಸ್‌ ಉಗ್ರರ ವಿರುದ್ಧ ವಿಶ್ವಾದ್ಯಂತ ಆಕ್ರೋಶ (Israel Palestine War) ವ್ಯಕ್ತವಾಗುತ್ತಿದೆ. ಹಮಾಸ್‌ ಉಗ್ರರ (Hamas Terrorists) ಮೇಲಿನ ಸಿಟ್ಟಿಗಾಗಿ ಇಡೀ ಗಾಜಾ ಪಟ್ಟಿಯನ್ನೇ ನಾಶಪಡಿಸುತ್ತೇವೆ ಎಂಬುದಾಗಿ ಇಸ್ರೇಲ್‌ ಘೋಷಿಸಿದೆ. ಇಸ್ರೇಲ್‌ಗೆ ಅಮೆರಿಕ, ಬ್ರಿಟನ್‌ ಶಸ್ತ್ರಾಸ್ತ್ರ ನೀಡಿದರೆ, ಭಾರತವೂ ಇಸ್ರೇಲ್‌ ಪರ ನಿಂತಿದೆ. ಆದರೆ, ಉತ್ತರ ಪ್ರದೇಶದಲ್ಲಿ (Uttar Pradesh) ಮೌಲ್ವಿಯೊಬ್ಬ ಹಮಾಸ್‌ ಉಗ್ರರ ಪರವಾಗಿ ಪೋಸ್ಟ್‌ ಹಂಚಿಕೊಂಡ ಹಿನ್ನೆಲೆಯಲ್ಲಿ ಬಂಧಿಸಲಾಗಿದೆ. ಅಲ್ಲದೆ, ಇದೇ ಕಾರಣಕ್ಕಾಗಿ ಇಬ್ಬರ ವಿರುದ್ಧ ಕೇಸ್‌ ದಾಖಲಿಸಲಾಗಿದೆ.

ಅಕ್ಟೋಬರ್‌ 8ರಂದು ಹಮೀರ್‌ಪುರ ಜಿಲ್ಲೆಯ ಆತಿಫ್‌ ಚೌಧರಿ ಎಂಬ ಮೌಲ್ವಿಯು ಪ್ಯಾಲೆಸ್ತೀನ್‌ ಉಗ್ರರ ಪರವಾಗಿ ಪೋಸ್ಟ್‌ ಹಂಚಿಕೊಂಡಿದ್ದಾನೆ. ಇದನ್ನೇ ಸುಹೇಲ್‌ ಅನ್ಸಾರಿ ಎಂಬಾತನೂ ಪೋಸ್ಟ್‌ ಮಾಡಿದ್ದಾನೆ. ಪ್ಯಾಲೆಸ್ತೀನ್‌ ಪರವಾಗಿರುವ ಪೋಸ್ಟ್‌ ಭಾರಿ ಶೇರ್‌ ಆಗಿದ್ದು, ವಾಟ್ಸ್‌ಆ್ಯಪ್‌ನಲ್ಲೂ ಭಾರಿ ಪ್ರಮಾಣದಲ್ಲಿ ಹರಿದಾಡಿದೆ. ಹಾಗಾಗಿ, ಆತಿಫ್‌ ಚೌಧರಿಯನ್ನು ಪೊಲೀಸರು ಬಂಧಿಸಿದ್ದಾರೆ. ಹಾಗೆಯೇ, ಸುಹೇಲ್‌ ಅನ್ಸಾರಿ ಹಾಗೂ ಪೋಸ್ಟ್‌ ಹಂಚಿಕೊಂಡ ಮತ್ತೊಬ್ಬ ಯುವಕನ ವಿರುದ್ಧ ಕೇಸ್‌ ದಾಖಲಿಸಿದ್ದಾರೆ.

ಗಾಜಾ ಮೇಲೆ ಇಸ್ರೇಲ್‌ ದಾಳಿಯ ಭೀಕರತೆ

ಆತಿಫ್‌ ಚೌದರಿಯು ಹೈದರಿಯಾ ನಿವಾಸಿಯಾಗಿದ್ದು, ಸುಹೇಲ್‌ ಅನ್ಸಾರಿಯು ಚೌಧರನ ನಿವಾಸಿಯಾಗಿದ್ದಾರೆ. “ಅಕ್ಟೋಬರ್‌ 8ರಂದು ಸಾಮಾಜಿಕ ಜಾಲತಾಣಗಳಲ್ಲಿ ಅಪ್‌ಲೋಡ್‌ ಆದ ಪೋಸ್ಟ್‌, ಅಕ್ಟೋಬರ್‌ 12ರಂದು ವೈರಲ್‌ ಆಗಿದೆ. ಪೋಸ್ಟ್‌ ಹಂಚಿಕೊಂಡವರು ಪ್ಯಾಲೆಸ್ತೀನ್‌ ಪರವಾಗಿ ಬರೆದಿದ್ದಲ್ಲದೆ, ಅವಾಚ್ಯ ಶಬ್ದಗಳನ್ನು ಬಳಸಿದ್ದಾರೆ. ಹಾಗಾಗಿ, ಒಬ್ಬನನ್ನು ಬಂಧಿಸಲಾಗಿದ್ದು, ಇಬ್ಬರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ” ಎಂದು ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: Israel Palestine War: ಅವಳಿ ಮಕ್ಕಳ ಪ್ರಾಣ ಉಳಿಸಲು ತಮ್ಮ ಜೀವವನ್ನೇ ಬಲಿ ಕೊಟ್ಟ ಇಸ್ರೇಲ್‌ ದಂಪತಿ!

ಮೌಲ್ವಿಯ ಬಂಧನ ಏಕೆ?

ಮೌಲ್ವಿ ಆತಿಫ್‌ ಚೌಧರಿ ಹಾಗೂ ಸುಹೇಲ್‌ ಅನ್ಸಾರಿ ಮಾಡಿದ ಪೋಸ್ಟ್‌ಗಳು ಭಾರಿ ವೈರಲ್‌ ಆಗುತ್ತಲೇ ಪರ ವಿರೋಧ ಚರ್ಚೆ ಶುರುವಾಗಿದೆ. ಹಾಗಾಗಿ, ವ್ಯಕ್ತಿಯೊಬ್ಬರು ಇವರ ವಿರುದ್ಧ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಇಸ್ರೇಲ್-ಪ್ಯಾಲೆಸ್ತೀನ್‌ ವಿಚಾರಕ್ಕೆ ಸಂಬಂಧಿಸಿದಂತೆ ಸ್ಥಳೀಯವಾಗಿ ಗಲಭೆಗೆ ಪ್ರಚೋದನೆ ನೀಡಲಾಗುತ್ತಿದೆ ಎಂದು ದೂರು ದಾಖಲಿಸಲಾಗಿದೆ. ಹಾಗಾಗಿ, ಪೊಲೀಸರು ಮೌಲ್ವಿಯನ್ನು ಬಂಧಿಸಿ, ಇಬ್ಬರ ವಿರುದ್ಧ ಕೇಸ್‌ ದಾಖಲಿಸಿದ್ದಾರೆ ಎಂದು ತಿಳಿದುಬಂದಿದೆ.

24 ಗಂಟೆಯಲ್ಲಿ 324 ಜನರನ್ನು ಕೊಂದ ಇಸ್ರೇಲ್‌

ಇಸ್ರೇಲ್‌ ಸೇನೆಯು ಯುದ್ಧ ಟ್ಯಾಂಕರ್‌, ಬಂಕರ್‌ ಹಾಗೂ ರಾಕೆಟ್‌ಗಳ ಮೂಲಕ ಗಾಜಾಪಟ್ಟಿ ಮೇಲೆ ನಿರಂತರವಾಗಿ ದಾಳಿ ಮಾಡುತ್ತಿದೆ. ಕಳೆದ 24 ಗಂಟೆಯಲ್ಲಿಯೇ ಇಸ್ರೇಲ್‌ ಮಾಡಿದ ದಾಳಿಗೆ ಗಾಜಾ ನಗರದ 324 ಮಂದಿ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಇಡೀ ಹಮಾಸ್‌ ಉಗ್ರರನ್ನೇ ನಿರ್ನಾಮ ಮಾಡಲಾಗುವುದು ಎಂದು ಈಗಾಗಲೇ ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಘೋಷಣೆ ಮಾಡಿದ್ದಾರೆ.

Exit mobile version