Site icon Vistara News

ಮೋದಿಗೆ ಇಸ್ರೇಲ್ ಪಿಎಂ ಫೋನ್ ಕಾಲ್!, ಇಸ್ರೇಲ್‌ಗೇ ಬೆಂಬಲ ಎಂದ ಭಾರತ

Narendra Modi And Benjamin Netanyahu

ನವದೆಹಲಿ: ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು (Israel pm Benjamin Netanyahu) ಅವರು ಪ್ರಧಾನಿ ನರೇಂದ್ರ ಮೋದಿ (Indian PM Narendra Modi) ಅವರಿಗೆ ದೂರವಾಣಿ ಕರೆ ಮಾಡಿ, ಇಸ್ರೇಲ್ ಮತ್ತು ಹಮಾಸ್ ಮಧ್ಯೆ ನಡೆಯುತ್ತಿರುವ ಕಾಳಗದ ಕುರಿತು ವಿಸ್ತಾರ ಮಾಹಿತಿ ನೀಡಿದ್ದಾರೆ(Israel Palestine War). ಈ ವಿಷಯವನ್ನು ಸ್ವತಃ ಪ್ರಧಾನಿ ನರೇಂದ್ರ ಮೋದಿ ಅವರೇ ಹಂಚಿಕೊಂಡಿದ್ದಾರೆ. ಇಸ್ರೇಲ್- ಹಮಾಸ್ ಯುದ್ಧದಲ್ಲಿ ಮೃತಪಟ್ಟವರ ಸಂಖ್ಯೆ ಈಗ 1600ಕ್ಕೆ ಏರಿಕೆಯಾಗಿದೆ. ತಮ್ಮ ದೂರವಾಣಿ ಸಂಭಾಷಣೆ ವೇಳೆ, ಈ ಸಂಕಷ್ಟದ ಸ್ಥಿತಿಯ್ಲಲಿ ಭಾರತವು ಇಸ್ರೇಲ್ ಜತೆಗೆ ನಿಲ್ಲಲಿದೆ. ಭಾರತವು ಎಲ್ಲಾ ರೀತಿಯ ಭಯೋತ್ಪಾದನೆಯನ್ನು (Terrorism) ಬಲವಾಗಿ ಖಂಡಿಸುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಇಸ್ರೇಲ್ ಪ್ರಧಾನಿ ಅವರಿಗೆ ತಿಳಿಸಿದ್ದಾರೆ.

ಈ ಕುರಿತು ಎಕ್ಸ್ ವೇದಿಕೆಯಲ್ಲಿ ಮಾಹಿತಿ ಹಂಚಿಕೊಂಡಿರುವ ಪ್ರಧಾನಿ ನರೇಂದ್ರ ಮೋದಿ ಅವರು, ದೂರವಾಣಿ ಕರೆಗಾಗಿ ನಾನು ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರಿಗೆ ಧನ್ಯವಾದಗಳು. ಈಗ ನಡೆಯುತ್ತಿರುವ ಪರಿಸ್ಥಿತಿಯ ಬಗ್ಗೆ ಮಾಹಿತಿ ನೀಡಿದ್ದಾರೆ. ಈ ಕಷ್ಟದ ಸಮಯದಲ್ಲಿ ಭಾರತದ ಜನರು ಇಸ್ರೇಲ್ ಪರವಾಗಿ ಸ್ಥಿರವಾಗಿ ನಿಲ್ಲಲಿದ್ದಾರೆ. ಭಾರತವು ಅದರ ಎಲ್ಲಾ ರೂಪಗಳು ಮತ್ತು ಅಭಿವ್ಯಕ್ತಿಗಳಲ್ಲಿ ಭಯೋತ್ಪಾದನೆಯನ್ನು ಬಲವಾಗಿ ಮತ್ತು ನಿಸ್ಸಂದಿಗ್ಧವಾಗಿ ಖಂಡಿಸುತ್ತದೆ ಎಂದು ಹೇಳಿದ್ದಾರೆ.

ಭಾರತವು ಐತಿಹಾಸಿಕವಾಗಿ ಪ್ಯಾಲೇಸ್ಟಿನಿಯನ್ ಬೆಂಬಲಿಸುತ್ತಾ ಬಂದಿದೆ. ಹಾಗಾಗಿ, ಈಗ ಭಾರತ ಇಸ್ರೇಲ್‌ಗೆ ನೀಡುತ್ತಿರುವ ಬೆಂಬಲವ ಭಾರೀ ಮಹತ್ವದ್ದಾಗಿದೆ. ಭಾರತವು ಇತ್ತೀಚಿನ ವರ್ಷಗಳಲ್ಲಿ ಇಸ್ರೇಲ್‌ಗೆ ಹತ್ತಿರವಾಗುತ್ತಿದೆ. ಭಾರತವು ಮಧ್ಯಪ್ರಾಚ್ಯದಲ್ಲಿ ದೊಡ್ಡ ಪಾತ್ರವನ್ನು ವಹಿಸಲು ತನ್ನನ್ನು ತಾನು ಸನ್ನದ್ಧವಾಗುತ್ತಿರುವ ಸಮಯದಲ್ಲಿ ಯುದ್ಧವು ಬಂದಿದೆ ಮತ್ತು ಅದು ಈಗ ಕಷ್ಟಕರವಾದ ರಾಜತಾಂತ್ರಿಕ ಪರಿಸ್ಥಿತಿಯನ್ನು ಸೃಷ್ಟಿಸಿದೆ ಎಂದು ಹೇಳಬಹುದು.

ಈ ಸುದ್ದಿಯನ್ನೂ ಓದಿ: Israel Palestine War: 1,500 ಹಮಾಸ್ ಉಗ್ರರ ಹೆಣ ಕೆಡವಿದ ಇಸ್ರೇಲ್‌

ಈ ಮಧ್ಯೆ, ಅಮೆರಿಕ, ಇಂಗ್ಲೆಂಡ್, ಜರ್ಮನಿ, ಫ್ರಾನ್ಸ್ ಮತ್ತು ಇಟಲಿಗಳು ಜಂಟಿ ಹೇಳಿಕೆಯನ್ನು ನೀಡಿ, ತಮ್ಮೆ ಬೆಂಬಲವನ್ನು ಇಸ್ರೇಲ್‌ಗೆ ನೀಡಿವೆ. ಹಮಾಸ್ ದಾಳಿಯನ್ನು ಉಗ್ರವಾಗಿ ಖಂಡಿಸವೆ. ಆದರೆ, ಮತ್ತೊಂದೆಡೆ, ಇಂದಿನ ಪರಿಸ್ಥಿತಿಗೆ ಇಸ್ರೇಲ್‌ನ ನೀತಿಯೇ ಕಾರಣ ಎಂದು ಮಧ್ಯ ಪ್ರಾಚ್ಯ ರಾಷ್ಟ್ರಗಳು ದೂರಿವೆ.

ಭಾರತವು ಇಸ್ರೇಲ್ ಮತ್ತು ಪ್ಯಾಲೆಸ್ತೀನ್ ಎರಡೂ ರಾಷ್ಟ್ರಗಳ ಸ್ನೇಹಿತ ರಾಷ್ಟ್ರವಾಗಿದೆ. ಈಗ ಎದ್ದಿರುವ ಬಿಕ್ಕಟ್ಟು ಪರಿಹರಿಸಲು ಸಹಾಯ ಮಾಡಬೇಕು ಎಂದು ಪ್ಯಾಲೆಸ್ತೀನ್ ರಾಯಭಾರಿ ಹೇಳಿಕೆಯ ಬೆನ್ನಲ್ಲೇ ಇಸ್ರೇಲ್ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕೆ ಮಾಡಿರುವುದು ಮಹತ್ವವನ್ನು ಪಡೆದುಕೊಂಡಿದೆ.

ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version