Site icon Vistara News

Desalination: ನಾಳೆಯಿಂದಲೇ ಲಕ್ಷದ್ವೀಪದಲ್ಲಿ ‘ನಿರ್ಲವಣೀಕರಣ’ ಕಾರ್ಯಕ್ಕೆ ಇಸ್ರೇಲ್‌ ಚಾಲನೆ!

Lakshadweep

Lakshadweep to Get Rs 4,500 Crore Makeover to Take On Maldives as Top Tourist Destination

ನವದೆಹಲಿ: ಲಕ್ಷದ್ವೀಪಕ್ಕೆ (Lakshadweep) ಸಂಬಂಧಿಸಿದಂತೆ ಭಾರತ ಮತ್ತು ಮಾಲ್ಡೀವ್ಸ್ (India and Maldives) ನಡುವೆ ರಾಜತಾಂತ್ರಿಕ ಬಿಕ್ಕಟ್ಟು (Diplomatic Crisis) ಸೃಷ್ಟಿಯಾದ ಬೆನ್ನಲ್ಲೇ, ಭಾರತೀಯರು ಖುಷಿಪಡುವ ಸಂಗತಿಯೊಂದು ಬಂದಿದೆ. ಲಕ್ಷದ್ವೀಪದಲ್ಲಿ ನಿರ್ಲವಣೀಕರಣ(ನೀರಿನಿಂದ ಉಪ್ಪನ್ನು ಬೇರ್ಪಡಿಸುವ ಪ್ರಕ್ರಿಯೆ – Desalination) ಕಾರ್ಯವನ್ನು ಆರಂಭಿಸುವುದಾಗಿ ಇಸ್ರೇಲ್ (Israel) ಸೋಮವಾರ ಘೋಷಿಸಿದೆ. ಒಂದೊಮ್ಮೆ, ಈ ಕಾರ್ಯಕ್ರಮವು ಯಶಸ್ವಿಯಾದರೆ, ಭಾರತದ ಲಕ್ಷದ್ವೀಪ ಸಮೂಹದ ಪ್ರವಾಸೋದ್ಯಮಕ್ಕೆ (Lakshadweep Tourism) ಹೆಚ್ಚಿನ ಬಲ ಬರಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಎಕ್ಸ್‌ ವೇದಿಕೆಯಲ್ಲಿ ಹಂಚಿಕೊಳ್ಳಲಾಗಿರುವ ಪೋಸ್ಟ್‌ನಲ್ಲಿ ಇಸ್ರೇಲಿ ರಾಯಭಾರ ಕಚೇರಿಯು, ಕೇಂದ್ರ ಸರ್ಕಾರದ ಕೋರಿಕೆಯ ಮೆರೆಗೆ ನಿರ್ಲವಣೀಕರಣ ಕಾರ್ಯಕ್ರಮವನ್ನು ಪ್ರಾರಂಭಿಸಲು ನಾವು ಕಳೆದ ವರ್ಷದಿಂದ ಲಕ್ಷದ್ವೀಪದಲ್ಲಿದ್ದೇವೆ. ಈ ಪ್ರಾಜೆಕ್ಟ್ ಕುರಿತು ನಾಳೆಯಿಂದಲೇ ನಾವು ಕೆಲಸ ಆರಂಭಿಸುತ್ತಿದ್ದೇವೆ ಎಂದು ಹೇಳಿಕೊಂಡಿದೆ.

ಲಕ್ಷದ್ವೀಪದಲ್ಲಿರುವ ಪ್ರಾಚೀನ ಭಾರತೀಯ ಕಡಲತೀರಗಳ ಫೋಟೋಗಳನ್ನು ಹಂಚಿಕೊಂಡಿರುವ ರಾಯಭಾರ ಕಚೇರಿಯು ಲಕ್ಷದ್ವೀಪಗಳ ಪ್ರಾಚೀನ ಮತ್ತು ಭವ್ಯವಾದ ನೀರೊಳಗಿನ ಸೌಂದರ್ಯವನ್ನು ಇನ್ನೂ ವೀಕ್ಷಿಸಲು ಸಾಧ್ಯವಾಗದವರಿಗೆ, ಈ ದ್ವೀಪದ ಮೋಡಿಮಾಡುವ ಆಕರ್ಷಣೆಯನ್ನು ತೋರಿಸುವ ಕೆಲವು ಚಿತ್ರಗಳು ಇಲ್ಲಿವೆ ಎಂದು ಬರೆದುಕೊಂಡಿದೆ.

ಮೊಹಮ್ಮದ್ ಮುಯಿಜು ಸರ್ಕಾರದ ಕೆಲವು ಮಂತ್ರಿಗಳು ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ಅವಹೇಳನಕಾರಿ ಹೇಳಿಕೆಗಳ ಬಗ್ಗೆ ಭಾರತ ಮತ್ತು ಮಾಲ್ಡೀವ್ಸ್ ನಡುವೆ ರಾಜತಾಂತ್ರಿಕ ಬಿಕ್ಕಟ್ಟು ಸೃಷ್ಟಿದ ಸಂದರ್ಭದಲ್ಲೇ ಇಸ್ರೇಲ್‌ನ ಈ ನಿರ್ಲವಣೀಕರಣ ಕಾರ್ಯಕ್ರಮ ಆರಂಭಿಸುವ ಹೇಳಿಕೆ ಹೊರ ಬಿದ್ದಿರುವುದು ಹಲವು ಚರ್ಚೆಗಳಿಗೆ ಕಾರಣವಾಗಿದೆ.

ಈ ಸುದ್ದಿಯನ್ನೂ ಓದಿ: Lakshadweep: ಮಾಲ್ಡೀವ್ಸ್‌ ಬಿಡಿ, ಲಕ್ಷದ್ವೀಪದಲ್ಲಿ ನೋಡಲೇಬೇಕಾದ ತಾಣಗಳ ಪರಿಚಯ ಇಲ್ಲಿದೆ

Exit mobile version