Site icon Vistara News

Chandrayaan 3 : ಚಂದ್ರಯಾನ 2ರ ಆರ್ಬಿಟರ್ ಕ್ಲಿಕ್ಕಿಸಿದ ಪೋಟೊ ಏಕಾಏಕಿ ಡಿಲೀಟ್; ಇದರ ಹಿಂದಿನ ಶಕ್ತಿ ಯಾವುದು?

chandrayaan 3

ನವದೆಹಲಿ: ಚಂದ್ರಯಾನ -2 ಆರ್ಬಿಟರ್ ತನ್ನ ಹೈ ಡೆಫಿನಿಷಿನ್​ ಕ್ಯಾಮೆರಾವನ್ನು ಬಳಸಿಕೊಂಡು ಚಂದ್ರನ ಮೇಲೆ ಎರಡು ದಿನದ ಹಿಂದೆ ಕಾಲಿಟ್ಟಿರುವ ಚಂದ್ರಯಾನ 3 ಲ್ಯಾಂಡರ್ ಅನ್ನು ಗುರುತಿಸಿದೆ ಎಂದು ಇಸ್ರೋ ಶುಕ್ರವಾರ ಸಾಮಾಜಿಕ ಮಾಧ್ಯಮದಲ್ಲಿ ಫೋಟೋಗಳನ್ನು ಹಂಚಿಕೊಂಡು ತಿಳಿಸಿತ್ತು. 2019 ರಲ್ಲಿ ಚಂದ್ರಯಾನ 2 ರ ಲ್ಯಾಂಡರ್ ಚಂದ್ರನ ಮೇಲೆ ಕ್ರ್ಯಾಶ್​ ಲ್ಯಾಂಡ್​ ಆದ ಬಳಿಕದಿಂದ ಅದರ ಆರ್ಬಿಟರ್ ಕಳೆದ ನಾಲ್ಕು ವರ್ಷಗಳಿಂದ ಪ್ರಮುಖ ಡೇಟಾವನ್ನು ಸಂಗ್ರಹಿಸುತ್ತಲೇ ಇದೆ. ಇದೀಗ ಲ್ಯಾಂಡರ್​ ಮೊನ್ನೆ ಮೊನ್ನೆ ಇಳಿದಿರುವ ವಿಕ್ರಮ್​ ಲ್ಯಾಂಡರ್ ಫೋಟೊವನ್ನು ಕಳುಹಿಸಿತ್ತು. ಇದೀಗ ಆ ಪೋಸ್ಟ್​ ಅನ್ನು ಇಸ್ರೊ ಡಿಲೀಟ್​ ಮಾಡಿದೆ. ಆದರೆ ಅದಕ್ಕೆ ಕಾರಣ ಕೊಟ್ಟಿಲ್ಲ.

ಚಂದ್ರಯಾನ 3 ಮಿಷನ್ನ ‘ವಿಕ್ರಮ್’ ಲ್ಯಾಂಡರ್ ಚಂದ್ರನ ಮೇಲ್ಮೈಯಲ್ಲಿ ಮೃದುವಾಗಿ ಇಳಿದ ಕೆಲವೇ ಗಂಟೆಗಳ ನಂತರ, ಇಸ್ರೋದ ತನ್ನ ಹಿಂದಿನ ಚಂದ್ರ ಮಿಷನ್​​ ಆರ್ಬಿಟರ್ ಮೂಲಕ ಅದರ ಚಿತ್ರವನ್ನು ಸೆರೆ ಹಿಡಿದಿತ್ತು. ಇದು ಪ್ರಸ್ತುತ ಚಂದ್ರನ ಮೇಲ್ಮೈನ ಉತ್ತಮ ರೆಸಲ್ಯೂಶನ್ ಫೋಟೋ ಆಗಿದೆ.

“ನಾನು ನಿನ್ನನ್ನು ಬೇಹುಗಾರಿಕೆ ಮಾಡುತ್ತೇನೆ! “ಚಂದ್ರಯಾನ -2 ಆರ್ಬಿಟರ್​, ಚಂದ್ರಯಾನ -3 ಲ್ಯಾಂಡರ್ ಅನ್ನು ಫೋಟೋಶೂಟ್ ಮಾಡಿದೆ” ಎಂದು ಇಸ್ರೋ ಎಕ್ಸ್ ನಲ್ಲಿ ಪೋಸ್ಟ್ ಮಾಡಿತ್ತು.

ಚಂದ್ರಯಾನ -2ರ ಆರ್ಬಿಟರ್ ಹೊಂದಿರುವ ಹೈ-ರೆಸಲ್ಯೂಶನ್ ಕ್ಯಾಮೆರಾ (ಒಎಚ್​​ಆರ್​​ಸಿ) – ಪ್ರಸ್ತುತ ಚಂದ್ರನ ಸುತ್ತಲೂ ಸುತ್ತುತ್ತಿರುವ ಅತ್ಯುತ್ತಮ ರೆಸಲ್ಯೂಶನ್ ಕ್ಯಾಮೆರಾ ಕಣ್ಣಾಗಿದೆ. ಆ ಕ್ಯಾಮೆರಾ ನಮ್ಮದೇ ಲ್ಯಾಂಡರ್​ನ ಚಿತ್ರವನ್ನು ಸೆರೆ ಹಿಡಿದಿತ್ತು.

ಈ ಚಿತ್ರವನ್ನು ಯಾವುದೇ ಕಾರಣ ನೀಡದೇ ಕೆಲವೇ ನಿಮಿಷಗಳಲ್ಲಿ ಡಿಲೀಟ್​ ಮಾಡಲಾಗಿದೆ. ಚಂದ್ರಯಾನ -3 ಮಿಷನ್​​ನ ಪ್ರತ್ಯೇಕ ಎಕ್ಸ್ ಖಾತೆಯೂ ಇದೇ ರೀತಿಯ ಪೋಸ್ಟ್ ಅನ್ನು ಹಂಚಿಕೊಂಡಿತ್ತು. ಆ ಹ್ಯಾಂಡಲ್​ನಲ್ಲಿ ಚಿತ್ರ ಲಭ್ಯವಿದೆ.

ಇದನ್ನೂ ಓದಿ: Chandrayaan 3: ವಿಕ್ರಮ್ ಲ್ಯಾಂಡರ್ ಕಣ್ಣಿನಲ್ಲಿ ಸೆರೆಯಾದ ಲ್ಯಾಂಡಿಂಗ್ ವೇಳೆಯ ರೋಚಕ ಚಂದಿರ!

ಪ್ರಜ್ಱನ್​ ರೋವರ್ ಅನ್ನು ಹೊಟ್ಟೆಯಲ್ಲಿ ಹೊಂದಿರುವ ವಿಕ್ರಮ್ ಲ್ಯಾಂಡರ್ ಚಂದ್ರನ ಮೇಲ್ಮೈಯನ್ನು ಸ್ಪರ್ಶಿಸುವ ಮೂಲಕ ಈ ಸಾಧನೆ ಮಾಡಿದ ನಾಲ್ಕನೇ ದೇಶ ಎಂಬ ಕೀರ್ತಿಗೆ ಪಾತ್ರವಾಗಿದೆ. ಭೂಮಿಯ ಏಕೈಕ ನೈಸರ್ಗಿಕ ಉಪಗ್ರಹದ ಅಜ್ಞಾತ ದಕ್ಷಿಣ ಧ್ರುವವನ್ನು ತಲುಪಿದ ಮೊದಲ ದೇಶವಾಗಿದೆ.

ಸಂಶೋಧನೆ ಆರಂಭ

ಲ್ಯಾಂಡರ್ ಮಾಡ್ಯೂಲ್ (ಎಲ್ಎಂ) ಪೇಲೋಡ್​ಗಳನ್ನಿ ಆನ್ ಮಾಡಲಾಗಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಈ ಹಿಂದೆ ತಿಳಿಸಿತ್ತು.

ಎಲ್ಲಾ ಚಟುವಟಿಕೆಗಳು ನಿಗದಿತ ಸಮಯಕ್ಕೆ ನಡೆಯುತ್ತಿವೆ. ಎಲ್ಲಾ ವ್ಯವಸ್ಥೆಗಳು ಸಲೀಸಾಗಿ ಕೆಲಸ ಮಾಡುತ್ತಿದೆ. ಲ್ಯಾಂಡರ್ ಮಾಡ್ಯೂಲ್ ಪೇಲೋಡ್ ಗಳಾದ ಐಎಲ್​ಎಸ್ ಎ, ರಂಭಾ ಮತ್ತು ಚಾಸ್ಟೆ ಇಂದು ಆನ್ ಆಗಿವೆ. ರೋವರ್ ಮೊಬಿಲಿಟಿ ಕಾರ್ಯಾಚರಣೆಗಳು ಪ್ರಾರಂಭವಾಗಿವೆ. ಪ್ರೊಪಲ್ಷನ್ ಮಾಡ್ಯೂಲ್​​ನಲ್ಲಿ ಶೇಪ್ ಪೇಲೋಡ್ ಅನ್ನು ಭಾನುವಾರ ಆನ್ ಮಾಡಲಾಗಿದೆ ಎಂದು ಇಸ್ರೊ ಪೋಸ್ಟ್​ ಮಾಡಿ ತಿಳಿಸಿದೆ.

ರೋವರ್ ಚಲನೆ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಇಸ್ರೋ ಅಧ್ಯಕ್ಷ ಎಸ್ ಸೋಮನಾಥ್ ಹೇಳಿದ್ದಾರೆ.

ಲ್ಯಾಂಡರ್ ಉದ್ದೇಶಿತ ಸ್ಥಳದಲ್ಲಿಯೇ ಇಳಿದಿದೆ. ಲ್ಯಾಂಡಿಂಗ್ ಸ್ಥಳವನ್ನು 4.5 ಕಿಮೀ x 2.5 ಕಿಮೀ ಎಂದು ಗುರುತಿಸಲಾಗಿದೆ. ಆ ಜಾಗವೇ ನಿಖರ ಲ್ಯಾಂಡಿಂಗ್ ಸ್ಥಳವೆಂದು ಗುರುತಿಸಲಾಗಿದೆ. ಆ ಸ್ಥಳದಿಂದ 200 ಮೀಟರ್ ವ್ಯಾಪ್ತಿಯೊಳಗೆ ಇಳಿಯಿತು. ಇದರರ್ಥ ಇದು ಲ್ಯಾಂಡಿಂಗ್​ಗೆ ಗುರುತಿಸಲಾದ ಪ್ರದೇಶದೊಳಗೆ ಇದೆ ಎಂದು ಸೋಮನಾಥ್ ಪಿಟಿಐಗೆ ತಿಳಿಸಿದ್ದಾರೆ.

Exit mobile version