Site icon Vistara News

Chandrayaan 3: ಚಂದ್ರಯಾನ-3 ಲಾಂಚ್ ವೀಕ್ಷಿಸಲು ಜನರಿಗೆ ಇಸ್ರೋ ಆಹ್ವಾನ! ಎಲ್ಲಿ, ಹೇಗೆ ನೋಡುವುದು?

Chandrayaan 3 Mission

ನವದೆಹಲಿ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ISRO) ಭಾರೀ ನಿರೀಕ್ಷೆಯ ಚಂದ್ರಯಾನ-3 (Chandrayaan 3) ಮಿಷನ್‌ ಲಾಂಚ್‌ಗೆ ದಿನ ಗಣನೆ ಆರಂಭವಾಗಿದೆ. ವಿಶೇಷ ಎಂದರೆ, ಚಂದ್ರಯಾನ 3 ಹೊತ್ತ ಎಲ್‌ವಿಎಂ3-4ಎಂ ರಾಕೆಟ್‍‌ ಉಡಾವಣೆಯ (Rocket Launch) ಕ್ಷಣಗಳನ್ನು ಸಾರ್ವಜನಿಕರು ಕೂಡ ಕಣ್ತುಂಬಿಕೊಳ್ಳಬಹುದು. ಜುಲೈ 14ರಂದು ಆಂಧ್ರ ಪ್ರದೇಶದ (Andhra Pradesh) ಶ್ರೀಹರಿಕೋಟ (Sriharikota) ಸತೀಶ್ ಧವನ್ ಸ್ಪೇಸ್ ಸೆಂಟರ್‌ (Satish Dhawan Space Centre) ಮೂಲಕ ಚಂದ್ರಯಾನ-3 ಲಾಂಚ್ ಆಗಲಿದೆ.

ಚಂದ್ರಯಾನ-2 ವಿಫಲವಾದ ಹಿನ್ನೆಲೆಯಲ್ಲಿ ಇಸ್ರೋ ಈಗ ಚಂದ್ರಯಾನ-3 ಮಿಷನ್ ಕೈಗೆತ್ತಿಕೊಂಡಿದೆ. ಈಗಾಗಲೇ ಈ ಮಿಷನ್ ಲಾಂಚ್ ಆಗಬೇಕಿತ್ತು. ಆದರೆ, ಕೋವಿಡ್ ಕಾರಣದಿಂದಾಗಿ ವಿಳಂಬವಾಗಿದೆ. ಜುಲೈ 14ರಂದು ಲಾಂಚ್ ಆದರೂ ಚಂದ್ರಯಾನ- 3 ಚಂದ್ರನ ಮೇಲೆ ಆಗಸ್ಟ್ 23 ಅಥವಾ 24 ರಂದು ಲ್ಯಾಂಡ್ ಆಗುವ ಸಾಧ್ಯತೆ ಇದೆ.

Chandrayaan 3 ಲಾಂಚ್ ಎಲ್ಲಿ ಮತ್ತು ಹೇಗೆ ನೋಡುವುದು?

ಶ್ರೀಹರಿಕೋಟದ ಎಸ್‌ಡಿಎಸ್‌ಸಿ-ಎಸ್‌ಎಚ್‌ಎಆರ್‌ನ ಲಾಂಚ್ ವ್ಯೂ ಗ್ಯಾಲರಿ ಮೂಲಕ ಚಂದ್ರಯಾನ-3 ಲಾಂಚ್ ಕ್ಷಣದಗಳನ್ನು ವೀಕ್ಷಿಸಲು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಸಾರ್ವಜನಿಕರಿಗೆ ಆಹ್ವಾನಿಸಿದೆ. ಚಂದ್ರಯಾನ-3 ಲಾಂಚ್ ವೀಕ್ಷಣೆಗೆ ನೋಂದಣಿ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ.

ಈ ಸುದ್ದಿಯನ್ನೂ ಓದಿ: ಚಂದ್ರಯಾನ-3 ರಾಕೆಟ್ ಎಂಜಿನ್ ಪರೀಕ್ಷೆ ಯಶಸ್ವಿ: ಇಸ್ರೋ

ಆಧಾರ್, ಡಿಎಲ್ ಅಥವಾ ಸರ್ಕಾರ ನೀಡಿದ ಯಾವುದೇ ಐಡಿ ಕಾರ್ಡ್, ಮೊಬೈಲ್, ಇಮೇಲ್ ಐಡಿ ಹೊಂದಿರಬೇಕು. ಹಾಗೆಯೇ, ಕೋವಿಡ್ ಎರಡು ಡೋಸ್‌ಗಳನ್ನು ಹಾಕಿಸಿಕೊಂಡಿರಬೇಕು. ಅಂಥವರಿಗೆ ಮಾತ್ರವೇ ಅವಕಾಶ ಇರಲಿದೆ.

ಆನ್‌ಲೈನ್‌ನಲ್ಲಿ ಚಂದ್ರಯಾನ-3 ಲಾಂಚ್ ವೀಕ್ಷಿಸಿ

ಒಂದೊಮ್ಮೆ ಇಸ್ರೋ ಲಾಂಚಿಂಗ್‌ ಸೆಂಟರ್‌ನಲ್ಲಿ ವೀಕ್ಷಿಸಲು ಸಾಧ್ಯವಾಗದೇ ಹೋದರೆ ಸಾರ್ವಜನಿಕರು ಆನ್‌ಲೈನ್ ಮೂಲಕ ಈ ಕ್ಷಣಗಳನ್ನು ಕಣ್ತುಂಬಿಕೊಳ್ಳಬಹುದಾಗಿದೆ. ಇಸ್ರೋ ಆಫಿಷಿಯಲ್ ಯುಟ್ಯೂಬ್ ಚಾನೆಲ್ ಮೂಲಕ ವೀಕ್ಷಣೆ ಮಾಡಬಹುದಾಗಿದೆ. ಚಂದ್ರಯಾನ-3 ಲಾಂಚ್ ಆನ್ ಲೈನ್ ವೀಕ್ಷಣೆಗೆ ಇಲ್ಲಿ ಕ್ಲಿಕ್ ಮಾಡಿ. ಅಷ್ಟೇ ಅಲ್ಲದೇ, ಇಸ್ರೋ ಅಧಿಕೃತ ಜಾಲತಾಣ ಮೂಲಕ ವೀಕ್ಷಣೆ ಮಾಡಬಹುದಾಗಿದೆ.

ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version