ನವದೆಹಲಿ: ಭಾರತದ ಸ್ಮಾಲ್ ಸ್ಯಾಟ್‌ಲೈಟ್ ಲಾಂಚ್ ವೆಹಿಕಲ್(SSLV) ಮತ್ತೊಮ್ಮೆ ಗಗನಕ್ಕೆ ನೆಗೆಯಲು ಸಿದ್ಧವಾಗಿದೆ. ಈ ಶುಕ್ರವಾರ (ಫೆ.10) ಎರಡನೇ ಬಾರಿಗೆ, ಮೂರು ಹೊಸ ಉಪಗ್ರಹಗಳನ್ನು ಕಕ್ಷೆಗೆ ಸೇರಿಸಲಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಸ್ಥೆ(ISRO) ಹೇಳಿದೆ. ಕಳೆದ ವರ್ಷ ಆಗಸ್ಟ್‌ನಲ್ಲಿ ವೈಫಲ್ಯ ಕಂಡ ಬಳಿಕ ಇದೇ ಮೊದಲ ಬಾರಿಗೆ ದೇಶಿ ನಿರ್ಮಿತ ರಾಕೆಟ್ ಮತ್ತೆ ಬಾಹ್ಯಾಕಾಕ್ಕೆ ನೆಗೆಯಲು ಸಜ್ಜಾಗಿದೆ.
ಸುಮಾರು 120 ಟನ್ ತೂಕದ 34 ಮೀಟರ್ ಎತ್ತರದ ರಾಕೆಟ್ ಫೆಬ್ರವರಿ 10 ರಂದು ಕರೆಕ್ಟಾಗಿ, ಬೆಳಿಗ್ಗೆ 9.18 ಗಂಟೆಗೆ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದ ಮೊದಲ ಉಡಾವಣಾ ಪ್ಯಾಡ್‌ನಿಂದ ಬಾಹ್ಯಾಕಾಶಕ್ಕೆ ಚಿಮ್ಮಲಿದೆ. EOS-07, Janus-1 ಮತ್ತು AzaadiSAT-2 ಈ ಮೂರ ಉಪಗ್ರಹಗಳನ್ನು ಹೊತ್ತೊಯ್ಯಲಿರುವ ಈ ರಾಕೆಟ್, ಅವುಗಳನ್ನು ಕಕ್ಷೆಗೆ ಸೇರಿಸಲಿದೆ.
ಇದನ್ನೂ ಓದಿ: Chandrayaan-3 | ಮುಂದಿನ ವರ್ಷ ಜೂನ್ ತಿಂಗಳಲ್ಲಿ ಚಂದ್ರಯಾನ-3ಕ್ಕೆ ಇಸ್ರೋ ಸಿದ್ಧತೆ
ಶ್ರೀಹರಿಕೋಟಾದಿಂದ ಲಾಂಚ್ ಆದ 13 ನಿಮಿಷದೊಳಗೆ ಮೊದಲ ಉಪಗ್ರಹ EOS-07 ಅನ್ನು ಕಕ್ಷೆಗೆ ಸೇರಸಲಿದೆ. ಉಳಿದ ಎರಡು ಉಪಗ್ರಹಗಳನ್ನು ತಲಾ ಒಂದು ನಿಮಿಷದ ಅಂತರದಲ್ಲಿ ಕಕ್ಷೆಗೆ ಕೂರಿಸಲಿದೆ. ಅಂದರೆ ಒಟ್ಟಾರೆ 15 ನಿಮಿಷದಲ್ಲಿ, ಭೂಮಿಯಿಂದ 450 ಕಿ.ಮೀ ಎತ್ತರದಲ್ಲಿ ಮೂರು ಉಪಗ್ರಹಗಳನ್ನು ಸರಿಯಾದ ಕಕ್ಷೆಗೆ ಸೇರಿಸಲಿದೆ ಎಂದು ಇಸ್ರೋ ತಿಳಿಸಿದೆ.