ನವದೆಹಲಿ: ಎನ್‌ಎಸ್‌ವಿ-01 (NSV-01) ಸ್ಯಾಟಲೈಟ್ ಯಶಸ್ವಿ ಉಡಾವಣೆ ಬೆನ್ನಲ್ಲೇ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಜುಲೈ ತಿಂಗಳಲ್ಲಿ ಚಂದ್ರಯಾನ-3ಕ್ಕೆ (Chandrayaan-3) ಸಿದ್ಧತೆ ಮಾಡಿಕೊಂಡಿದೆ. ಇಸ್ರೋ ಚೇರ್ಮನ್ ಎಸ್ ಸೋಮನಾಥ (S Somanath) ಅವರು ಸೋಮವಾರ ಈ ವಿಷಯವನ್ನು ಖಚಿತಪಡಿಸಿದ್ದಾರೆ. ಈ ವರ್ಷದ ಜುಲೈ ತಿಂಗಳಲ್ಲಿ ಚಂದ್ರಯಾನ-3 ಯೋಜನೆಯನ್ನು ಕೈಗೊಳ್ಳಲಾಗುವುದು ಎಂದು ಎಸ್ ಸೋಮನಾಥ ಅವರು ಹೇಳಿದ್ದಾರೆ.
ಚಂದ್ರಯಾನ-3 ಪ್ರಾಜೆಕ್ಟ್ ಚಂದ್ರಯಾನ – 2 ಯೋಜನೆಯ ಮುಂದುವರಿದ ಭಾಗವಾಗಿದೆ. ಚಂದ್ರಯಾನ-3 ಕೂಡ ಚಂದ್ರನ ಮೇಲೆ ಸುರಕ್ಷಿತ ಲ್ಯಾಂಡಿಂಗ್ ಮತ್ತು ರೋವಿಂಗ್‌ನ ಎಂಡ್ ಟು ಎಂಡ್ ಸಾಮರ್ಥ್ಯವನ್ನು ಹೊಂದಿದೆ. ಇದರಲ್ಲಿ ಲ್ಯಾಂಡರ್ ಮತ್ತು ರೋವರ್ ಇರಲಿದೆ. ಆಂಧ್ರ ಪ್ರದೇಶದ ಸತೀಶ್ ಧವನ್ ಸ್ಪೇಸ್ ಸೆಂಟರ್ ಮೂಲಕ ಚಂದ್ರಯಾನ-3 ಉಡಾವಣೆ ಮಾಡಲಾಗುವುದು ಎಂದು ಅವರು ತಿಳಿಸಿದ್ದಾರೆ.
ಚಂದ್ರಯಾನ-3 ದೇಶಿ ನಿರ್ಮಿತ ಲ್ಯಾಂಡರ ಮಾಡ್ಯೂಲ್, ಪ್ರಪುಲ್ಷನ್ ಮಾಡ್ಯೂಲ್ ಮತ್ತು ರೋವರ್‌ಗಳನ್ನು ಒಳಗೊಂಡಿದೆ. ಅಂತರಗ್ರಹ ಕಾರ್ಯಾಚರಣೆಗಳಿಗೆ ಅಗತ್ಯವಿರುವ ಹೊಸ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸಲು ಮತ್ತು ಪ್ರದರ್ಶಿಸುವ ಗುರಿಯನ್ನು ಈ ಯೋಜನೆ ಹೊಂದಿದೆ. ಲ್ಯಾಂಡರ್ ನಿರ್ದಿಷ್ಟ ಚಂದ್ರನ ಸ್ಥಳದಲ್ಲಿ ಸಾಫ್ಟ್ ಲ್ಯಾಂಡಿಂಗ್ ಸಾಮರ್ಥ್ಯವನ್ನು ಹೊಂದಿರುತ್ತದೆ ಮತ್ತು ರೋವರ್ ಅನ್ನು ನಿಯೋಜಿಸುತ್ತದೆ. ಇದು ಅದರ ಚಲನಶೀಲತೆಯ ಅವಧಿಯಲ್ಲಿ ಚಂದ್ರನ ಮೇಲ್ಮೈಯ ಸ್ಥಳದಲ್ಲಿ ರಾಸಾಯನಿಕ ವಿಶ್ಲೇಷಣೆಯನ್ನು ನಡೆಸುತ್ತದೆ.
ಈ ಸುದ್ದಿಯನ್ನೂ ಓದಿ: ISRO: ನೆಕ್ಸ್ಟ್ ಜೆನ್ ನ್ಯಾವಿಗೇಷನ್ ಉಪಗ್ರಹ ಹೊತ್ತ ಇಸ್ರೋದ ಜಿಎಸ್ಎಲ್‌ವಿ ರಾಕೆಟ್ ಯಶಸ್ವಿ ಉಡಾವಣೆ
ಭಾರತೀಯ ಚಂದ್ರ ಅನ್ವೇಷಣೆ ಪ್ರೋಗ್ರಾಮ್, ಇಸ್ರೋ ಕೈಗೊಳ್ಳುತ್ತಿರುವ ಬಾಹ್ಯಾಕಾಶ ಯೋಜನೆಗಳ ಭಾಗವಾಗಿದೆ. 2019ರಲ್ಲಿ ಇಸ್ರೋ ಚಂದ್ರಯಾನ 2 ಕೈಗೊಂಡಿತ್ತು. ಯಶಸ್ವಿಯಾಗಿ ಉಡಾವಣೆಯಾದರೂ, ಲ್ಯಾಂಡರ್ ಕ್ರ್ಯಾಶ್ ಇಡೀ ಮಿಷನ್ ಫೇಲ್ ಆಗಿತ್ತು. ಸಾಫ್ಟ್ ವೇರ್ ಸಮಸ್ಯೆಯಿಂದಾಗಿ ಲ್ಯಾಂಡರ್ ನಿರ್ದಿಷ್ಟ ಗತಿಗಿಂತಲೂ ವೇಗವಾಗಿ ಲ್ಯಾಂಡ್ ಆದ ಪರಿಣಾಮ ಇಡೀ ಮಿಷನ್ ವೈಫಲ್ಯ ಕಂಡಿತ್ತು.
ವಿಜ್ಞಾನದ ಇನ್ನಷ್ಟು ಕುತೂಹಲಕರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.