Site icon Vistara News

SSLV Rocket: ಎಸ್‌ಎಸ್ಎಲ್‌ವಿ ಸಂಪೂರ್ಣವಾಗಿ ಖಾಸಗಿಗೆ ವರ್ಗಾಯಿಸಲು ಇಸ್ರೋ ನಿರ್ಧಾರ

SSLV

ನವದೆಹಲಿ: ಚಂದ್ರಯಾನ-3 ಲಾಂಚ್‌ಗೆ ಸಿದ್ಧತೆ ನಡೆಸುತ್ತಿರುವ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಮತ್ತೊಂದು ಪ್ರಮುಖ ನಿರ್ಧಾರವನ್ನು ಪ್ರಕಟಿಸಿದೆ. ಶೀಘ್ರವೇ ತನ್ನ ಸ್ಮಾರ್ಟ್‌ ಸ್ಯಾಟಲೈಟ್ ಲಾಂಚ್ ವೆಹಿಕಲ್( Small Satellite launching vehicle – SSLV Rocket) ರಾಕೆಟ್ ಅನ್ನು ಖಾಸಗಿ ವಲಯಕ್ಕೆ ವರ್ಗಾಯಿಸಲಿದೆ. ಸುಮಾರು 500 ಕೆಜಿ ತೂಕದ ಉಪಗ್ರಹಗಳನ್ನು ಕೆಳ ಹಂತದ ಕಕ್ಷೆಗೆ ಸೇರಿಸುವ ಸಾಮರ್ಥವನ್ನು ಹೊಂದಿರುವ ಈ ರಾಕೆಟ್‌ಗಳನ್ನು ಇಸ್ರೋ ಖಾಸಗಿ ಸೇವೆಗೆ ಒದಗಿಸಲು ಮುಂದಾಗಿದೆ. ಹರಾಜು ಮೂಲಕ ಖಾಸಗಿ ವಲಯಕ್ಕೆ ಈ ಎಸ್‌ಎಸ್ಎಲ್‌ವಿಗಳನ್ನು ವರ್ಗಾಯಿಸಲಿದೆ ಎಂದು ಸಂಸ್ಥೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಸಣ್ಣ ಉಪಗ್ರಹಗಳ ಉಡವಾಣಾ ವಾಹಕ(ಎಸ್‌ಎಸ್‌ಎಲ್‌ ವಿ)ಗಳ ನಿರ್ಮಾಣ ಮಾತ್ರವಲ್ಲದೇ ಸಂಪೂರ್ಣವಾಗಿ ಅವುಗಳನ್ನು ಖಾಸಗಿ ಕ್ಷೇತ್ರಕ್ಕೆ ವರ್ಗಾಯಿಸಲಿದ್ದೇವೆ ಎಂದು ಇಸ್ರೋದ ಅಧಿಕಾರಿಯು ತಿಳಿಸಿದ್ದಾರೆ. ಕಳೆದ ಆಗಸ್ಟ್‌ನಲ್ಲಿ ಈ ಎಸ್ಎಸ್ಎಲ್‌ವಿಯನ್ನು ಉಡಾವಣೆ ಮಾಡಲಾಗಿತ್ತಾದರೂ ತಾಂತ್ರಿಕ ಕಾರಣದಿಂದಾಗಿ ವೈಫಲ್ಯ ಕಂಡಿತ್ತು. ರಾಕೆಟ್‌ನ ಎರಡನೇ ಹಂತದ ಬೇರ್ಪಡುವಿಕೆ ಸಂದರ್ಭದಲ್ಲಿ ಬೇ ಡೆಕ್‌ನಲ್ಲಿದ್ದ ಉಪಕರಣವು ಕೆಲವು ಸಮಯದವರೆಗೆ ಕಂಪನದಿಂದಾಗಿ ಇಡೀ ರಾಕೆಟ್ ವೈಫಲ್ಯ ಕಂಡಿತ್ತು.

ಈ ಸುದ್ದಿಯನ್ನೂ ಓದಿ: Chandrayaan 3: ಚಂದ್ರಯಾನ-3 ಲಾಂಚ್ ವೀಕ್ಷಿಸಲು ಜನರಿಗೆ ಇಸ್ರೋ ಆಹ್ವಾನ! ಎಲ್ಲಿ, ಹೇಗೆ ನೋಡುವುದು?

ಆಗಸ್ಟ್‌ ತಿಂಗಳಲ್ಲಿ ಸಂಭವಿಸಿದ ವೈಫಲ್ಯ ಕುರಿತು ಆಳವಾಗಿ ವಿಶ್ಲೇಷಣೆ ಮಾಡಿದ ಇಸ್ರೋ ತಪ್ಪನ್ನು ಸರಿಪಡಿಸಿದೆ. ಬಳಿಕ ಫೆಬ್ರವರಿಯಲ್ಲಿ ಎಸ್ಎಸ್ಎಲ್‌ವಿಯನ್ನು ಯಶಸ್ವಿಯಾಗಿ ಲಾಂಚ್ ಮಾಡಿತ್ತು.

ಎಸ್ಎಸ್‌ಎಲ್‌ವಿಯು ಇಸ್ರೋದ ಇಒಎಸ್-07 ಉಪಗ್ರಹ, ಅಮೆರಿಕ ಮೂಲದ ಸಂಸ್ಥೆ ಅಂಟಾರಿಸ್ ಜೀನಸ್ 1, ಚೆನೈ ಮೂಲದ ಬಾಹ್ಯಾಕಾಶ ಸ್ಟಾರ್ಟ್ ಅಪ್ ಸಂಸ್ಥೆಯ ಸ್ಪೇಸ್ ಕಿಡ್ಸ್‌ನ ಅಜಾದಿಸ್ಯಾಟ್-2 ಉಪಗ್ರಹಗಳನ್ನು 450 ಕಿ ಮೀ ವೃತ್ತಾಕಾರದ ಕಕ್ಷೆಗೆ ಯಶಸ್ವಿಯಾಗಿ ಸೇರಿಸಿದೆ.

ವಿಜ್ಞಾನದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version