Site icon Vistara News

ISRO: ನೆಕ್ಸ್ಟ್ ಜೆನ್ ನ್ಯಾವಿಗೇಷನ್ ಉಪಗ್ರಹ ಹೊತ್ತ ಇಸ್ರೋದ ಜಿಎಸ್ಎಲ್‌ವಿ ರಾಕೆಟ್ ಯಶಸ್ವಿ ಉಡಾವಣೆ

advanced navigation satellite GSLV-F12 and NVS-01

ನವದೆಹಲಿ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಸೋಮವಾರ ಆಂಧ್ರ ಪ್ರದೇಶದ ಶ್ರೀಹರಿಕೋಟಾ ಉಡ್ಡಯನ ಸ್ಥಳದಿಂದ ಜಿಎಸ್ಎಲ್‌ವಿ ರಾಕೆಟ್‌ವನ್ನು ಯಶಸ್ವಿಯಾಗಿ ಲಾಂಚ್ ಮಾಡಿತು. ಈ ರಾಕೆಟ್ ಎರಡನೇ ತಲೆಮಾರಿನ ನ್ಯಾವಿಗೇಷನ್ ಸ್ಯಾಟಲೈಟ್ ಸರಣಿಯ ಎನ್‌ವಿಎಸ್-1 ಉಪಗ್ರಹವನ್ನು ಹೊಂದಿದ್ದು, ರಾಕೆಟ್ ಲಾಂಚ್ 20 ನಿಮಿಷದ ಬಳಿಕ ಉಪಗ್ರಹವನ್ನು, 251 ಕಿ.ಮೀ ಎತ್ತರದಲ್ಲಿ ಜಿಯೋಸಿಂಕ್ರೋನಸ್ ಟ್ರಾನ್ಸಫರ್ ಆರ್ಬಿಟ್(GTO)ನಲ್ಲಿ ಪ್ರತಿಷ್ಠಾಪಿಸಲಿದೆ ಎಂದು ಇಸ್ರೋ ಹೇಳಿದೆ.

ಎನ್‌ವಿಎಸ್-01 ಹೊತ್ತ ರಾಕೆಟ್ ಉಡಾವಣೆ

ಬೆಂಗಳೂರಲ್ಲಿ ಕೇಂದ್ರ ಕಚೇರಿಯನ್ನು ಹೊಂದಿರುವ ಇಸ್ರೋ, ಎರಡನೇ ತಲೆಮಾರಿನ ನ್ಯಾವಿಗೇಶನ್ ಉಪಗ್ರಹ ಸರಣಿಯನ್ನು ಪ್ರಾರಂಭಿಸುತ್ತಿದೆ, ಇದು NavIC (ನ್ಯಾವಿಗೇಷನ್ ವಿತ್ ಇಂಡಿಯನ್ ಕಾನ್ಸ್ಟೆಲೇಷನ್) ಸೇವೆಗಳ ನಿರಂತರತೆಯನ್ನು ಖಚಿತಪಡಿಸುವ ಮಹತ್ವದ ಉಡಾವಣೆಯಾಗಿದೆ. ಜಿಪಿಎಸ್‌ನಂತೆಯೇ ಭಾರತೀಯ ಪ್ರಾದೇಶಿಕ ಉಪಗ್ರಹ ನ್ಯಾವಿಗೇಷನ್ ಸಿಸ್ಟಮ್ ಕೂಡ ನಿಖರ ಮತ್ತು ನೈಜ ಸೇವೆಯನ್ನು ಒದಗಿಸುತ್ತದೆ. ನಾವಿಕ್ ಸಿಗ್ನಲ್‌ಗಳನ್ನು ಬಳಕೆದಾರರು 20-ಮೀಟರ್‌ಗಳಿಗಿಂತ ಉತ್ತಮವಾಗಿ ಮತ್ತು 50 ನ್ಯಾನೊಸೆಕೆಂಡ್‌ಗಳಿಗಿಂತ ಉತ್ತಮ ಸಮಯದ ನಿಖರತೆಯನ್ನು ಒದಗಿಸಲು ವಿನ್ಯಾಸಗೊಳಿಸಲಾಗಿದೆ.

ಇಸ್ರೋ ಪ್ರಕಾರ, ಎನ್‌ವಿಎಸ್-1 ಎರಡನೇ ತಲೆಮಾರಿನ ಉಪಗ್ರಹಗಳಲ್ಲಿ ಮೊದಲನೆಯದಾಗಿದ್ದು, ನ್ಯಾವಿಗೇಷನ್‌ ಸೇವೆಗೆ ಕಲ್ಪಿಸಲಾಗಿದೆ. ಎನ್‌ವಿಎಸ್ ಸರಣಿಯ ಉಪಗ್ರಹಗಳು ನಾವಿಕ್‌ವನ್ನು ಸುಧಾರಿತ ವೈಶಿಷ್ಟ್ಯಗಳೊಂದಿಗೆ ಉಳಿಸಿಕೊಳ್ಳುತ್ತವೆ ಮತ್ತು ಹೆಚ್ಚಿಸುತ್ತವೆ.

ಜಿಎಸ್‌ಎಲ್‌ವಿ ರಾಕೆಟ್ ಯಶಸ್ವಿಯ ಉಡಾವಣೆ

ಈ ಸುದ್ದಿಯನ್ನೂ ಓದಿ: LVM3 Rocket: 36 ಉಪಗ್ರಹಗಳನ್ನೊಳಗೊಂಡ ಎಲ್​ವಿಎಂ3 ರಾಕೆಟ್​​ನ್ನು ಯಶಸ್ವಿಯಾಗಿ ಉಡಾವಣೆ ಮಾಡಿದ ಇಸ್ರೋ

ಟೆರೆಸ್ಟ್ರಿಯಲ್, ವೈಮಾನಿಕ ಮತ್ತು ಸಮುದ್ರ ಸಂಚರಣೆ, ನಿಖರವಾದ ಕೃಷಿ, ಮೊಬೈಲ್ ಸಾಧನಗಳಲ್ಲಿ ಸ್ಥಳ ಆಧಾರಿತ ಸೇವೆಗಳು ಮತ್ತು ಸಮುದ್ರ ಮೀನುಗಾರಿಕೆಯಂತಹ ವೈಶಿಷ್ಟ್ಯಗಳನ್ನು ನಾವಿಕ್ ಸರಣಿಯು ಒಳಗೊಂಡಿದೆ. ಈ ಮಿಷನ್ ದೇಶಿಯ ಕ್ರಯೋಜೆನಿಕ್ ಹಂತದೊಂದಿಗೆ ಜಿಎಸ್‌ಎಲ್‌ವಿಯ ಆರನೇ ಕಾರ್ಯಾಚರಣೆಯ ಉಡ್ಡಯನವಾಗಿದೆ. ಎನ್‌ವಿಎಸ್-01ರ ಮಿಷನ್ ಜೀವನ ಅವಧಿ 12 ವರ್ಷಗಳಿಗಿಂತ ಹೆಚ್ಚು ಎಂದು ಇಸ್ರೋ ಹೇಳಿದೆ.

ಅತ್ಯಾಧುನಿಕ ಎನ್‌ವಿಎಸ್-01 ಉಪಗ್ರಹ ಕುರಿತು ಇಸ್ರೋ ಟ್ವೀಟ್

ವಿಜ್ಞಾನದ ಇನ್ನಷ್ಟು ಕುತೂಹಲಕರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version