ಬೆಂಗಳೂರು: ಭಾರತೀಯ ಬಾಹ್ಯಾಕಾಶ ಸಂಸ್ಥೆ(ISRO) ಮುಂಬರುವ ಜೂನ್ ತಿಂಗಳಲ್ಲಿ ಚಂದ್ರಯಾನ-3 ಕೈಗೊಳ್ಳಲಿದ್ದು, ಅದಕ್ಕೆ ಪೂರ್ವಭಾವಿಯಾಗಿ ಪರೀಕ್ಷೆಗಳನ್ನು ನಡೆಸುತ್ತಿದೆ. ಇದೀಗ ಇಸ್ರೋ, ಚಂದ್ರಯಾನ-3ಕ್ಕೆ ಬಳಕೆಯಾಗಲಿರುವ ರಾಕೆಟ್ ಎಂಜಿನ್ ಅನ್ನು ಯಶಸ್ವಿಯಾಗಿ ಪರೀಕ್ಷೆ ನಡೆಸಿದೆ. ಚಂದ್ರಯಾನ-3ರ ಉಡಾವಣಾ ವಾಹನ ಕ್ರಯೋಜೆನಿಕ್‌ಗೆ ಶಕ್ತಿ ತುಂಬುವ ಸಿಇ-20 ಕ್ರಯೋಜೆನಿಕ್ ಎಂಜಿನ್ ಪರೀಕ್ಷೆಯನ್ನು ಕೈಗೊಳ್ಳಲಾಗಿದೆ.
ತಮಿಳುನಾಡಿನ ಮಹೇಂದ್ರಗಿರಿಯ ಇಸ್ರೋ ಪ್ರಪಲ್ಷನ್ ಕಾಂಪ್ಲೆಕ್ಸ್‌ನಲ್ಲಿರುವ ಹೈ ಅಲ್ಟಿಟ್ಯೂಡ್ ಟೆಸ್ಟ್ ಫೆಸಿಲಿಟಿಯಲ್ಲಿ ಫೆಬ್ರವರಿ 24ರಂದು 25 ಸೆಕೆಂಡುಗಳ ಕಾಲ ಈ ಎಂಜಿನ್ ಪರೀಕ್ಷೆಯನ್ನು ನಡೆಸಲಾಯಿತು ಎಂದು ಬೆಂಗಳೂರಲ್ಲಿ ಕೇಂದ್ರ ಕಚೇರಿಯನ್ನು ಹೊಂದಿರುವ ಇಸ್ರೋ ಹೇಳಿದೆ.
ಇದನ್ನೂ ಓದಿ: ವಿಸ್ತಾರ ಸಂಪಾದಕೀಯ: ಬಾಹ್ಯಾಕಾಶ ಸೇರಿದ ಮಕ್ಕಳ ಉಪಗ್ರಹಗಳು, ಭಾರತದ ಸಾಧನೆಗೆ ಮತ್ತೊಂದು ಗರಿ
ಪರೀಕ್ಷೆ ವೇಳೆ ಎಲ್ಲ ಪ್ರಪಲ್ಷನ್ ಪ್ಯಾರಾಮೀಟರ್‌ಗಳ ಕಾರ್ಯನಿರ್ವಹಣೆ ತೃಪ್ತಿಕರವಾಗಿತ್ತು ಮತ್ತು ಮುನ್ಸೂಚನೆಗಳಗೆ ತಕ್ಕಂತೆ ಹೊಂದಾಣಿಕೆ ಕಂಡು ಬಂತು. ಸಂಪೂರ್ಣ ಫ್ಲೈಟ್ ಕ್ರಯೋಜೆನಿಕ್ ಎಂಜಿನಿಗಾಗಿ, ಪ್ರೊಪೆಲ್ಲಂಟ್ ಟ್ಯಾಂಕ್‌ಗಳು, ಸ್ಟೇಜ್ ಸ್ಟ್ರಕ್ಚರ್‌ಗಳು ಮತ್ತು ಸಂಬಂಧಿತ ದ್ರವ ರೇಖೆಗಳೊಂದಿಗೆ ಸಂಯೋಜಿಸಲಾಗುವುದು ಎಂದು ಇಸ್ರೋ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಈ ಪರೀಕ್ಷೆಯು ಉಪಗ್ರಹಗಳ ಉಡಾವಣೆಯಲ್ಲಿ ಪ್ರಮುಖ ಮೈಲಿಗಲ್ಲಾಗಲಿದೆ ಎಂದು ಇಸ್ರೋ ಹೇಳಿದೆ.