ನವದೆಹಲಿ: ಜುಲೈ 14ರಂದು ಉಡಾವಣೆಯಾಗಿದ್ದ ಚಂದ್ರಯಾನ-3 (Chandrayaan 3)ನೌಕೆಯ ಈಗಾಗಲೇ ಭೂಮಿಯ ಐದು ಕಕ್ಷೆಗಳನ್ನು ಪೂರೈಸಿದ್ದು, ಸೋಮವಾರ ರಾತ್ರಿ ಟ್ರಾನ್ಸ್ ಲೂನಾರ್ ಇಂಜೆಕ್ಷನ್(TLI – Trans Lunar Injection) ಪ್ರಕ್ರಿಯೆಯನ್ನು ಭಾರತೀಯ ಬಾಹ್ಯಕಾಶ ಸಂಶೋಧನಾ ಸಂಸ್ಥೆ(ISRO) ಪೂರ್ಣಗೊಳಿಸಲಿದೆ. ಇದೊಂದು ಮಹತ್ವದ ಪ್ರಕ್ರಿಯೆಯಾಗಿದ್ದು, ಚಂದ್ರಯಾನ-3 ನೌಕೆಯ ಚಂದ್ರನ ಪಥವನ್ನು ಸೇರಲಿದೆ.
ಚಂದ್ರಯಾನ-3 ನೌಕೆಯ ಈ ನಿರ್ಣಾಯಕ ಪ್ರಕ್ರಿಯೆನ್ನು ಇಸ್ರೋ ಆಗಸ್ಟ್ 1ರಂದು ಮಧ್ಯರಾತ್ರಿ 12ರಿಂದ 1 ಗಂಟೆವರೆಗೆ ನಡೆಸಲು ನಿರ್ಧರಿಸಿದೆ. ಈ ಪ್ರಕ್ರಿಯೆಯು ಸುಮಾರು 28ರಿಂದ 31 ನಿಮಿಷದವರೆಗೆ ನಡೆಯಲಿದೆ. ಈ ಪ್ರಕ್ರಿಯೆ ವೇಳೆ, ಪ್ರೊಪಲ್ಷನ್ ಮಾಡ್ಯೂಲ್‌ನಲ್ಲಿ ಎಂಜಿನ್‌ಗಳ ವೇಗವನ್ನು ಹೆಚ್ಚಿಸುವ ಮೂಲಕ ಬಾಹ್ಯಾಕಾಶ ನೌಕೆಯನ್ನು ಪುನಶ್ಚೇತನಗೊಳಿಸಲಾಗುತ್ತದೆ.
ಟ್ರಾನ್ಸ್ ಲೂನಾರ್ ಇಂಜೆಕ್ಷನ್ ಮಹತ್ವದ ಪ್ರಕ್ರಿಯೆಯಾಗಿದೆ. ಈ ವೇಳೆ, ಚಂದ್ರನ ದಿಕ್ಕಿನ ಪಥದಲ್ಲಿ ನೌಕೆಯನ್ನು ಕುಳ್ಳರಿಸಲು ಟ್ರಾನ್ಸ್ ಲೂನಾರ್ ಇಂಜೆಕ್ಷನ್ ಪ್ರಕ್ರಿಯೆ ನೆರವು ನೀಡುತ್ತದೆ. ಸಾಮಾನ್ಯವಾಗಿ ಈ ಪ್ರಕ್ರಿಯೆಯನ್ನು ಕೆಮಿಕಲ್ ರಾಕೆಟ್ ಎಂಜಿನ್ ಮೂಲಕ ಮಾಡಲಾಗುತ್ತದೆ. ಇದರಲ್ಲಿ ಸ್ವಲ್ಪ ಮಟ್ಟಿಗಿನ ದಹನ ಪ್ರಕ್ರಿಯೆ ನಡೆಯುತ್ತದೆ. ಇದರಿಂದ ನೌಕೆಯನ್ನು ವೇಗಗೊಳಿಸುತ್ತದೆ.
ಈ ರೀತಿಯಾಗಿ ವೇಗವನ್ನು ಪಡೆದುಕೊಳ್ಳುವ ನೌಕೆಯು ಅದರ ಕಕ್ಷೆಯನ್ನು ಕಡಿಮೆ, ವೃತ್ತಾಕಾರದ ಭೂಮಿಯ ಕಕ್ಷೆಯಿಂದ ಹೆಚ್ಚು ಮತ್ತೊಂದು ಕಕ್ಷೆಗೆ ಬದಲಾಯಿಸುತ್ತದೆ. ಟಿಎಲ್ಐ ದಹನವು, ಸಂಪೂರ್ಣವಾಗಿ ಚಂದ್ರನನ್ನು ಗುರಿಯಾಗಿಸಿಕೊಂಡು ಒಂದು ನಿರ್ದಿಷ್ಟ ರೀತಿಯಲ್ಲಿ ಮುಂದುವರಿಯುತ್ತದೆ.
ಟಿಎಲ್ಐ ದಹನವು ನಿರ್ದಿಷ್ಟ ಸಮಯಕ್ಕೆ ನಿಗದಿಪಡಿಸಲಾಗಿರುತ್ತದೆ. ಚಂದ್ರನ ಸಮೀಪಿಸುತ್ತಿರುವಂತೆ ಬಾಹ್ಯಾಕಾಶ ನೌಕೆಯು ಅಪೋಜಿ(ಹತ್ತಿರದ ಬಿಂದು) ಬಳಿ ತಲಪುತ್ತದೆಯೇ ಎಂದು ಖಚಿತಪಡಿಸುತ್ತದೆ. ಬಳಿಕ, ಇದನ್ನು ಅನುಸರಿಸಿ ಬಾಹ್ಯಾಕಾಶ ನೌಕೆಯು ಚಂದ್ರನ ಕಕ್ಷೆಯನ್ನು ಪ್ರವೇಶಿಸುತ್ತದೆ. ಜುಲೈ 14 ರಂದು ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಚಂದ್ರಯಾನ-3 ಅನ್ನು ಯಶಸ್ವಿಯಾಗಿ ಉಡಾವಣೆ ಮಾಡಲಾಯಿತು. ಉಡಾವಣೆಯ ನಂತರ, ಚಂದ್ರಯಾನ 3 ನೌಕೆಯ ಐದು ಕಕ್ಷೆಯನ್ನು ಎತ್ತರಿಸುವ ಪ್ರಕ್ರಿಯೆಯನ್ನು ಯಶಸ್ವಿಯಾಗಿ ಕಾರ್ಯಗತಗೊಳಿಸಿದೆ.
ಈ ಸುದ್ದಿಯನ್ನೂ ಓದಿ: Chandrayaan 3: ಚಂದ್ರಯಾನ 3 ನೌಕೆಯ ಕೊನೆ ಕಕ್ಷೆ ಎತ್ತರಿಸುವ ಪ್ರಕ್ರಿಯೆ ಪೂರ್ಣ! ಮುಂದಿನ ಹಂತಕ್ಕೆ ಇಸ್ರೋ ಸಿದ್ಧತೆ
ಸಂಕೀರ್ಣವಾದ ಕಕ್ಷೆ ಹೆಚ್ಚಿಸುವ ಸರಣಿಯನ್ನು ಪೂರ್ಣಗೊಳಿಸಿದ ನಂತರ, ಬಾಹ್ಯಾಕಾಶ ನೌಕೆಯು ಚಂದ್ರನ ಕಕ್ಷೆಯನ್ನು ತಲುಪುವ ನಿರೀಕ್ಷೆಯಿದೆ. ಒಮ್ಮೆ ಅದು ಕಕ್ಷೆಗೆ ಪ್ರವೇಶಿಸಿದರೆ, ನೌಕೆಯು ಅದರ ಚಂದ್ರ-ಕೇಂದ್ರಿತ ಹಂತದಲ್ಲಿರುತ್ತದೆ. ಲ್ಯಾಂಡರ್‌ನ ಬೇರ್ಪಡುವಿಕೆ, ಡಿಬೂಸ್ಟ್ ತಂತ್ರಗಳ ಸೆಟ್ ಮತ್ತು ಚಂದ್ರನ ಮೇಲ್ಮೈಯಲ್ಲಿ ಮೃದುವಾದ ಲ್ಯಾಂಡಿಂಗ್‌ಗಾಗಿ ಕೊನೆಯ ಹಂತವನ್ನು ಒಳಗೊಂಡಂತೆ ಹಲವಾರು ಪ್ರಮುಖ ಘಟನೆಗಳ ಸರಣಿ ಮುಂದಿನ ಹಂತದಲ್ಲಿ ನಡೆಯುತ್ತದೆ.
ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.