Site icon Vistara News

Gaganyaan Mission: ಅಬಾರ್ಟ್‌ ಟೆಸ್ಟ್‌ ಡೆಮೋನಲ್ಲಿ ಇಸ್ರೋ ಏನನ್ನು ಪರೀಕ್ಷಿಸಲಿದೆ? ಇಲ್ಲಿದೆ ಡಿಟೇಲ್ಸ್…

ISRO to test gaganyaan mission first abort test demo

ನವದೆಹಲಿ: ದೇಶದ ಮೊದಲ ಗಗನಯಾನಕ್ಕೆ (Gaganyaan Mission)ಸಿದ್ಧತೆಯನ್ನು ಆರಂಭಿಸಿರುವ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ISRO), ಅಕ್ಟೋಬರ್ 21ರಂದು ಮಾನವರಹಿತ ಪರೀಕ್ಷಾ ಹಾರಾಟ ನಡೆಸಲು ಮುಂದಾಗಿದೆ(unmanned test flight). ವಾಸ್ತವದಲ್ಲಿ ಇದು ಈ ಪರೀಕ್ಷೆಯು, ತುರ್ತು ಸಂದರ್ಭದಲ್ಲಿ ಮಿಷನ್ ಸ್ಥಗಿತಗೊಳಿಸುವ ಪರೀಕ್ಷೆಯಾಗಿರುತ್ತದೆ(abort test demo). ಅಂದರೆ, ಸಿಬ್ಬಂದಿಯನ್ನು ಸುರಕ್ಷಿತವಾಗಿ ಪಾರು ಮಾಡುವ ಪರೀಕ್ಷೆ ಎಂದು ಹೇಳಬಹುದು. ಹಾಗಾಗಿ, ಮಾನವಸಹಿತ ಗಗನಯಾನದತ್ತ ಈ ಪರೀಕ್ಷೆಯ ಪ್ರಮುಖ ಹೆಜ್ಜೆಯಾಗಲಿದೆ.

ಅಕ್ಟೋಬರ್ 21, ಶನಿವಾರ ಬೆಳಗ್ಗೆ 8ರಿಂದ 9 ಗಂಟೆಯಲ್ಲಿ ಶ್ರೀ ಹರಿಕೋಟದ ಎಸ್‌ಡಿಎಸ್‌ಸಿ-ಎಸ್‌ಎಚ್‌ಎಆರ್‌ ಲಾಂಚ್ ಪ್ಯಾಡ್‌ನಲ್ಲಿ ಮಾನವ ರಹಿತ ವಾಹನ ಪರೀಕ್ಷಾ ಹಾರಾಟವನ್ನು ಕೈಗೊಳ್ಳಲಾಗುತ್ತದೆ ಎಂದು ಇಸ್ರೋ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಪರೀಕ್ಷಾ ವಾಹನವು ಏಕ-ಹಂತದ ದ್ರವ ರಾಕೆಟ್ ಆಗಿದೆ ಎಂದು ಬಾಹ್ಯಾಕಾಶ ಸಂಸ್ಥೆ ತಿಳಿಸಿದೆ. ಪೇಲೋಡ್‌ಗಳು ಸಿಎಮ್ ಫೇರಿಂಗ್ ಮತ್ತು ಇಂಟರ್‌ಫೇಸ್ ಅಡಾಪ್ಟರ್‌ಗಳ ಜೊತೆಗೆ ಅವುಗಳ ವೇಗವಾಗಿ ಕಾರ್ಯನಿರ್ವಹಿಸುವ ಘನ ಮೋಟಾರ್‌ಗಳೊಂದಿಗೆ ಸಿಬ್ಬಂದಿ ಮಾಡ್ಯೂಲ್ ಮತ್ತು ಸಿಬ್ಬಂದಿ ಪಾರಾಗುವ ವ್ಯವಸ್ಥೆಯನ್ನು(crew escape system) ಒಳಗೊಂಡಿರುತ್ತವೆ.

ಗಗನಯಾನ ಮಿಷನ್‌ನಲ್ಲಿ ಎದುರಾಗುವ ಮ್ಯಾಕ್ ಸಂಖ್ಯೆ 1.2ಗೆ ಅನುಗುಣವಾಗಿ ಆರೋಹಣ ಪಥದ ಸಮಯದಲ್ಲಿ ವೆಹಿಕಲ್ ತನ್ನ ಕಾರ್ಯವನ್ನು ಸ್ಥಗಿತಗೊಳಿಸುವ ಸ್ಥಿತಿಯನ್ನು ಪರೀಕ್ಷಿಸಲಾಗುತ್ತದೆ ಎಂದು ಇಸ್ರೋ ತಿಳಿಸಿದೆ.

ಸಿಬ್ಬಂದಿ ಪಾರಾಗುವ ವ್ಯವಸ್ಥೆಯು, ಸಿಬ್ಬಂದಿ ಮಾಡ್ಯೂಲ್ ಅನ್ನು 17 ಕಿ.ಮೀ ಎತ್ತರದಲ್ಲಿ ಟೆಸ್ಟ್ ವೆಹಿಕಲ್‌ನಿಂದ ಪ್ರತ್ಯೇಕಗೊಳಿಸುತ್ತದೆ. ತರುವಾಯ, ಸಿಇಎಸ್‌ ಬೇರ್ಪಡುವುದು ಮತ್ತು ಪ್ಯಾರಾಚೂಟ್‌ಗಳ ಸರಣಿಯ ನಿಯೋಜನೆಯೊಂದಿಗೆ ಅಬಾರ್ಟ್ ಅನುಕ್ರಮವನ್ನು ಸ್ವಯಂವಾಗಿ ಕಾರ್ಯಗತಗೊಳಿಸಲಾಗುತ್ತದೆ. ಅಂತಿಮವಾಗಿ ಶ್ರೀಹರಿಕೋಟಾ ಕರಾವಳಿಯಿಂದ ಸುಮಾರು 10 ಕಿಮೀ ಸಮುದ್ರದಲ್ಲಿ ಸಿಬ್ಬಂದಿ ಎಸ್ಕೇಪ್ ಸಿಸ್ಟಮ್ ಮಾಡ್ಯೂಲ್ ಅನ್ನು ಸುರಕ್ಷಿತವಾಗಿ ಇಳಿಸುವ ಮೂಲಕ ಈ ಪರೀಕ್ಷೆ ಕೊನೆಗೊಳ್ಳಲಿದೆ ಎಂದು ಇಸ್ರೋ ಹೇಳಿದೆ.

ಜನವರಿ ಮಧ್ಯದಲ್ಲಿ ಹಾಲೋ ಕಕ್ಷೆ ಸೇರಲಿದೆ ಆದಿತ್ಯ ಎಲ್ 1

ಸೂರ್ಯನ ಅಧ್ಯಯನಕ್ಕೆ (Sun Study) ಕೈಗೊಳ್ಳಲಾಗಿರುವ ಆದಿತ್ಯ ಎಲ್‌ 1 ಮಿಷನ್ (Aditya L1 Mission) ಯಶಸ್ಸಿನ ಹಾದಿಯಲ್ಲಿದ್ದು, ಆದಿತ್ಯ ಎಲ್ 1 ಬಾಹ್ಯಾಕಾಶ ನೌಕೆ (Aditya L1 Spacecraft) ಜನವರಿಯಲ್ಲಿ ಹಾಲೋ ಕಕ್ಷೆಯನ್ನು (Halo Orbit) ಸೇರಲಿದೆ ಎಂದು ಇಸ್ರೋ ಹೇಳಿದೆ. ಈ ಕುರಿತು ಮಾಹಿತಿ ನೀಡಿರುವ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ISRO) ಮುಖ್ಯಸ್ಥ ಎಸ್ ಸೋಮನಾಥ (S Somanath) ಅವರು, ಭಾರತದ ಚೊಚ್ಚಲ ಬಾಹ್ಯಾಕಾಶ ಆಧಾರಿತ ಸೌರ ಮಿಷನ್ ಆದಿತ್ಯ-ಎಲ್ 1 ಬಾಹ್ಯಾಕಾಶ ನೌಕೆಯು ಸುಗಮವಾಗಿ ಸಾಗುತ್ತಿದೆ ಮತ್ತು ಜನವರಿ ಮಧ್ಯದ ವೇಳೆಗೆ ಲಾಗ್ರೇಂಜ್ ಪಾಯಿಂಟ್ 1 (L1) ತಲುಪಲಿದೆ ಎಂದಿದ್ದಾರೆ.

ಈ ಸುದ್ದಿಯನ್ನೂ ಓದಿ: Aditya L1 Mission: ಸುಸ್ಥಿತಿಯಲ್ಲಿದೆ ಆದಿತ್ಯ ಎಲ್1 ಬಾಹ್ಯಾಕಾಶ ನೌಕೆ, ನಿರ್ದಿಷ್ಟ ಗುರಿಯತ್ತ ದಾಪುಗಾಲು; ಇಸ್ರೋ

ತಮಿಳುನಾಡಿನ ಮದುರೈನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಇಸ್ರೋ ಮುಖ್ಯಸ್ಥ ಎಸ್ ಸೋಮನಾಥ ಅವರು, ಮಿಷನ್ ತುಂಬಾ ಚೆನ್ನಾಗಿ ಕೆಲಸ ಮಾಡುತ್ತಿದೆ. ಪ್ರಸ್ತುತ ಭೂಮಿಯಿಂದ ಎಲ್1 ಪಾಯಿಂಟ್‌ಗೆ ಪ್ರಯಾಣಿಸಲು ಸುಮಾರು 110 ದಿನಗಳನ್ನು ತೆಗೆದುಕೊಳ್ಳುತ್ತದೆ. ಆದ್ದರಿಂದ ಜನವರಿ ಮಧ್ಯದ ವೇಳೆಗೆ, ಬಾಹ್ಯಾಕಾಶ ನೌಕೆ ಎಲ್1 ಹಂತವನ್ನು ತಲುಪಲಿದೆ. ನಂತರ ಆ ಹಂತದಲ್ಲಿ, ನಾವು ಲಗ್ರೇಂಜ್ ಪಾಯಿಂಟ್‌ಗೆ ಅಳವಡಿಕೆ ಮಾಡುತ್ತೇವೆ. ಅದನ್ನು ಹಾಲೋ ಆರ್ಬಿಟ್ ಎಂದು ಕರೆಯಲಾಗುತ್ತದೆ. ಅದೊಂದು ದೊಡ್ಡ ಕಕ್ಷೆ. ಆದ್ದರಿಂದ ಅದು ಜನವರಿ ಮಧ್ಯದ ವೇಳೆಗೆ ಸಂಭವಿಸುತ್ತದೆ ಎಂದು ತಿಳಿಸಿದ್ದಾರೆ.

ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version