ಬೆಂಗಳೂರು, ಕರ್ನಾಟಕ: ಭಾರತದ ಹೆಮ್ಮೆಯ ಬಾಹ್ಯಾಕಾಶ ಸಂಸ್ಥೆಯಾದ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ತೆ(ISRO) 2013ರ ಸಾಲಿನ ಇಸ್ರೋ ಯಂಗ್ ಸೈಂಟಿಸ್ಟ್ ಪ್ರೋಗ್ರಾಮ್ ಯುವಿಕಾ(YUVIKA)ಗೆ ನೋಂದಣಿಯನ್ನು ಆರಂಭಿಸಿದೆ. ಮಾರ್ಚ್ 20ರಿಂದ ಈ ಪ್ರಕ್ರಿಯೆಗೆ ಚಾಲನೆ ದೊರೆತಿದೆ. ಆಸಕ್ತ ವಿದ್ಯಾರ್ಥಿಗಳು ನೋಂದಣಿ ಮಾಡಿಕೊಳ್ಳಬಹುದು(ISRO YUVIKA).
ಆಸಕ್ತ ವಿದ್ಯಾರ್ಥಿಗಳು ಅರ್ಹತೆ, ಅಪ್ಲಿಕೇಶನ್ ಹಂತಗಳು ಮತ್ತು ಇತರ ವಿವರಗಳನ್ನು ಇಸ್ರೋದ ಅಧಿಕೃತ ಜಾಲತಾಣದಲ್ಲಿ ಪರಿಶೀಲಿಸಬಹುದು. ಯುವಿಕಾ 2023 ಸಾಲಿನ ಕಾರ್ಯಕ್ರಮಕ್ಕೆ ನೋಂದಣಿ ಪ್ರಕ್ರಿಯೆಯು ಮಾರ್ಚ್ 20ರಿಂದ ಆರಂಭವಾಗಿ ಏಪ್ರಿಲ್ 30ರವರೆಗೂ ಇರುತ್ತದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು isro.gov.in/YUVIKAನಲ್ಲಿ ನೋಂದಾಯಿಸಿಕೊಳ್ಳಬೇಕು.
ಇಸ್ರೋ ವೆಬ್‌ಸೈಟ್‌ನಲ್ಲಿರುವ ಮಾಹಿತಿಯ ಪ್ರಕಾರ, ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯು ಶಾಲಾ ಮಕ್ಕಳಿಗಾಗಿ ಯುವ ವಿಜ್ಞಾನಿ ಕಾರ್ಯಕ್ರಮ ಯುವಿಕಾ ಎಂಬ ವಿಶೇಷ ಕಾರ್ಯಕ್ರಮವನ್ನು ಆಯೋಜಿಸುತ್ತದೆ. ಇದು ವಿದ್ಯಾರ್ಥಿಗಳಿಗೆ ಬಾಹ್ಯಾಕಾಶ ತಂತ್ರಜ್ಞಾನ, ಬಾಹ್ಯಾಕಾಶ ವಿಜ್ಞಾನ ಮತ್ತು ಬಾಹ್ಯಾಕಾಶ ಅಪ್ಲಿಕೇಶನ್‌ಗಳ ಕುರಿತು ಮೂಲಭೂತ ಜ್ಞಾನವನ್ನು ಒದಗಿಸುತ್ತದೆ. ನಮ್ಮ ರಾಷ್ಟ್ರದ ಭವಿಷ್ಯದ ನಿರ್ಮಿಸುವ ಉತ್ಸಾಹ ಇರುವ ಯುವಜನರಲ್ಲಿ ಬಾಹ್ಯಾಕಾಶ ವಿಜ್ಞಾನ ಮತ್ತು ತಂತ್ರಜ್ಞಾನದ ಕ್ಷೇತ್ರದಲ್ಲಿನ ಟ್ರೆಂಡ್‌ಗಳು ಮಾಹಿತಿ ನೀಡಲು ಈ ಕಾರ್ಯಕ್ರಮವನ್ನು ಇಸ್ರೋ ರೂಪಿಸುತ್ತದೆ.
ಇದನ್ನೂ ಓದಿ: Space Tourism: ಬಾಹ್ಯಾಕಾಶ ಪ್ರವಾಸೋದ್ಯಮಕ್ಕೆ ಸಜ್ಜಾದ ಇಸ್ರೋ, ಒಂದು ಟಿಕೆಟ್ ಬೆಲೆ ಎಷ್ಟು?
ಈ ಕಾರ್ಯಕ್ರಮವು ಹೆಚ್ಚಿನ ವಿದ್ಯಾರ್ಥಿಗಳನ್ನು ವಿಜ್ಞಾನ, ತಂತ್ರಜ್ಞಾನ, ಎಂಜಿನಿಯರಿಂಗ್‌ನಲ್ಲಿ ಮುಂದುವರಿಸಲು ಪ್ರೋತ್ಸಾಹಿಸುತ್ತದೆ. ಗಣಿತಶಾಸ್ತ್ರ (STEM) ಆಧಾರಿತ ಸಂಶೋಧನೆ/ವೃತ್ತಿಗಲ್ಲಿ ವಿದ್ಯಾರ್ಥಿಗಳನ್ನು ತೊಡಗಿಸಿಕೊಳ್ಳಲು ಪ್ರೇರೇಪಿಸುತ್ತದೆ. 2023 ಜನವರಿ 1ಕ್ಕೆ ಅನ್ವಯಾಗುವಂತೆ 9ನೇ ತರಗತಿಯಲ್ಲಿ ಓದುತ್ತಿರುವವರು ಇಸ್ರೋ ಯುವಿಕಾ 2023ಕ್ಕೆ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ಹೆಚ್ಚಿನ ಮಾಹಿತಿಗೆ isro.gov.in/YUVIKA.html ವೆಬ್ಸೈಟ್‌ಗೆ ಭೇಟೆ ನೀಡಿ.