Isro plans for space tourism and check details Space Tourism: ಬಾಹ್ಯಾಕಾಶ ಪ್ರವಾಸೋದ್ಯಮಕ್ಕೆ ಸಜ್ಜಾದ ಇಸ್ರೋ, ಒಂದು ಟಿಕೆಟ್ ಬೆಲೆ ಎಷ್ಟು? Vistara News
Connect with us

ದೇಶ

Space Tourism: ಬಾಹ್ಯಾಕಾಶ ಪ್ರವಾಸೋದ್ಯಮಕ್ಕೆ ಸಜ್ಜಾದ ಇಸ್ರೋ, ಒಂದು ಟಿಕೆಟ್ ಬೆಲೆ ಎಷ್ಟು?

Space Tourism: ಭಾರತದ ಹೆಮ್ಮೆಯ ಬಾಹ್ಯಾಕಾಶ ಸಂಸ್ಥೆಯಾಗಿರುವ ಇಸ್ರೋ(ISRO) ಮತ್ತೊಂದು ಸಾಹಸಕ್ಕೆ ಮುಂದಾಗಿದೆ. 2030ರ ಹೊತ್ತಿಗೆ ಇಸ್ರೋ ಬಾಹ್ಯಾಕಾಶ ಪ್ರವಾಸೋದ್ಯಮಕ್ಕೆ ಚಾಲನೆ ನೀಡಲಿದೆ. ಇಸ್ರೋ ರೂಪಿಸುವ ರಾಕೆಟ್‌ಗಳಲ್ಲಿ ಜನರು ಬಾಹ್ಯಾಕಾಶಕ್ಕೆ ಹೋಗಿ ಬರಬಹುದು.

VISTARANEWS.COM


on

Isro plans for space tourism and check details
Koo

ನವದೆಹಲಿ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ISRO) ಬಾಹ್ಯಾಕಾಶದಲ್ಲಿ ಸಾಕಷ್ಟು ಸಾಧನೆಗಳನ್ನು ಮಾಡಿ, ಜನಮನ್ನಣೆ ಗಳಿಸಿದೆ. ಇದೀಗ ಮತ್ತೊಂದು ಸಾಹಸಕ್ಕೆ ಅಣಿಯಾಗುತ್ತಿದೆ. 2030ರ ಹೊತ್ತಿಗೆ ಇಸ್ರೋ ಬಾಹ್ಯಾಕಾಶ ಪ್ರವಾಸೋದ್ಯಮ (Space Tourism) ವ್ಯವಹಾರಕ್ಕೂ ಅಡಿ ಇಡಲು ಮುಂದಾಗಿದೆ. ಸರ್ಕಾರದ ಉತ್ತೇಜನಕ್ಕೆ ಅನುಗುಣವಾಗಿ ಬಾಹ್ಯಾಕಾಶ ಪ್ರವಾಸೋದ್ಯಮಕ್ಕೆ ಬೇಕಾದ ಕಾರ್ಯಗಳನ್ನು ಮಾಡಲಾಗುತ್ತಿದೆ. ಬಾಹ್ಯಾಕಾಶ ಪ್ರವಾಸೋದ್ಯಮ ವಲಯಕ್ಕೂ ಭಾರತವು ಕಾಲಿಡಲಿದ್ದು, ಜಾಗತಿಕ ಮಾರುಕಟ್ಟೆಗೆ ಅನುಗುಣವಾಗಿ ಸ್ಪರ್ಧಾತ್ಮಕ ಶುಲ್ಕವನ್ನು ಪಡೆದುಕೊಳ್ಳಲಾಗುತ್ತದೆ ಎಂದು ಇಸ್ರೋ ಹಿರಿಯ ಅಧಿಕಾರಿಗಳ ಹೇಳಿಕೆಯನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ.

ಇಸ್ರೋ ಅಧ್ಯಕ್ಷ ಎಸ್ ಸೋಮನಾಥ್ ಅವರ ಪ್ರಕಾರ, ಬಾಹ್ಯಾಕಾಶ ಪ್ರವಾಸಕ್ಕೆ ಪ್ರತಿ ಟಿಕೆಟ್ ವೆಚ್ಚವು ಸುಮಾರು 6 ಕೋಟಿ ರೂಪಾಯಿ ಇರಲಿದೆ. ಸದ್ಯ ಅಸ್ತಿತ್ವದಲ್ಲಿ ಜಾಗತಿಕ ಕಂಪನಿಗಳು ಕೈಗೊಳ್ಳುವ ಶುಲ್ಕಕ್ಕೆ ಅನುಗುಣವಾಗಿಯೇ ಈ ದರ ಇರಲಿದೆ. ಭಾರತವು ತನ್ನದೇ ಬಾಹ್ಯಾಕಾಶ ಪ್ರವಾಸೋದ್ಯಮ ಮಾದರಿಯನ್ನು ಶೀಘ್ರವೇ ಹೊಂದಲಿದ್ದು, ಇದಕ್ಕಾಗಿ ಕೆಲಸ ನಡೆದಿದೆ. ಈ ಪ್ರವಾಸವು ಸುರಕ್ಷಿತ ಮತ್ತು ಮರುಬಳಕೆಯಾಗಿರಲಿದೆ. ಟಿಕೆಟ್ ಶುಲ್ಕವು ಅಂದಾಜು 6 ಕೋಟಿ ರೂಪಾಯಿ ಇರಲಿದೆ. ಬಾಹ್ಯಾಕಾಶ ಪ್ರವಾಸ ಕೈಗೊಳ್ಳುವ ಜನರು ತಮ್ಮನ್ನು ತಾವು ಗಗನಯಾತ್ರಿಗಳು ಎಂದು ಹೇಳಿಕೊಳ್ಳಬಹುದು ಎಂದು ಇಸ್ರೋ ಚೇರ್ಮನ್ ಎಸ್ ಸೋಮನಾಥ್ ಅವರು ತಿಳಿಸಿದ್ದಾರೆ.

ಆದರೆ, ಇಸ್ರೋ ಯಾವ ಮಾದರಿಯ ಬಾಹ್ಯಾಕಾಶ ಪ್ರವಾಸೋದ್ಯಮಕ್ಕೆ ಚಾಲನೆ ನೀಡಲಿದೆ ಎಂಬುದನ್ನು ತಿಳಿಸಿಲ್ಲ. ಇಸ್ರೋ ಕೈಗೊಳ್ಳುವ ಬಾಹ್ಯಾಕಾಶ ಪ್ರವಾಸವು ಸಬ್ ಆರ್ಬಿಟಲ್ ಅಂದರೆ ಸುಮಾರು 100 ಕಿ.ಮೀ ಎತ್ತರವರೆಗೆ. ಆಲ್ಮೋಸ್ಟ್ ಬಾಹ್ಯಾಕಾಶದ ಅಂಚಿನವರೆಗೂ ಹೋಗಬಹುದು. ಇನ್ನು ಆರ್ಬಿಟಲ್ (400 ಕಿ.ಮೀ ಎತ್ತರ) ಆಗಿರುತ್ತದೆಯೇ ಎಂಬುದನ್ನು ಸೋಮನಾಥ ಅವರು ಸ್ಪಷ್ಟಪಡಿಸಿಲ್ಲ. ಭೂಮಿಯಿಂದ ಬಾಹ್ಯಾಕಾಶದ ಅಂಚಿಗೆ ಪ್ರವಾಸ ಕೈಗೊಳ್ಳಲು ಪ್ರತಿಯೊಬ್ಬ ವ್ಯಕ್ತಿಗೆ 6 ಕೋಟಿ ರೂ. ವೆಚ್ಚವಾಗಲಿದೆ.

ಈ ರೀತಿಯ ಬಾಹ್ಯಾಕಾಶ ಪ್ರವಾಸದಲ್ಲಿ ಯಾತ್ರಿಗಳು ಬಾಹ್ಯಾಕಾಶದ ಅಂಚಿನಲ್ಲಿ ಸುಮಾರು 15 ನಿಮಿಷಗಳನ್ನು ಕಳೆಯುತ್ತಾರೆ. ಅತಿ ಕಡಿಮೆ ಗುರುತ್ವಾಕರ್ಷಣೆಯನ್ನು ಅನುಭವಿಸುತ್ತಾರೆ. ಈ ಪ್ರವಾಸಕ್ಕೆ ಬಳಸಲಾಗುವು ಫ್ಲೈಟ್‌ಗಳನ್ನು ಮರುಬಳಕೆಯ ರಾಕೆಟ್‌‌ಗಳನ್ನು ಬಳಸಿಕೊಳ್ಳಲಾಗುತ್ತದೆ. ಇದರಿಂದ ವೆಚ್ಚದಲ್ಲಿ ಸಾಕಷ್ಟು ಉಳಿತಾಯವಾಗಲಿದೆ ಎಂಬುದು ವಿಶ್ಲೇಷಕರ ಅಭಿಪ್ರಾಯವಾಗಿದೆ.

ಇದನ್ನೂ ಓದಿ: BTS 2022 | ಬಾಹ್ಯಾಕಾಶ, ರಾಕೆಟ್‌ ಸೈನ್ಸ್‌ನಲ್ಲಿ ತೊಡಗಿಸಿಕೊಂಡ 100 ನವೋದ್ಯಮಗಳಿಗೆ ಇಸ್ರೊ ನೆರವು

ವಿಜ್ಞಾನ ಮತ್ತು ತಂತ್ರಜ್ಞಾನ, ಪರಮಾಣು ಶಕ್ತಿ ಮತ್ತು ಬಾಹ್ಯಾಕಾಶ ಇಲಾಖೆಯ ರಾಜ್ಯ ಸಚಿವ ಡಾ ಜಿತೇಂದ್ರ ಸಿಂಗ್ ಫೆಬ್ರವರಿಯಲ್ಲಿ ರಾಜ್ಯಸಭೆಯಲ್ಲಿ ಪ್ರಶ್ನೆಯೊಂದಕ್ಕೆ ನೀಡಿದ ಲಿಖಿತ ಉತ್ತರದಲ್ಲಿ ಈ ಬಗ್ಗೆ ಮಾಹಿತಿ ನೀಡಿದ್ದರು. ಇಸ್ರೋ ಈಗಾಗಲೇ ಭಾರತದ ಉಪ-ಕಕ್ಷೆಯ ಬಾಹ್ಯಾಕಾಶ ಪ್ರವಾಸೋದ್ಯಮಕ್ಕೆ ಕಾರ್ಯಸಾಧ್ಯತೆಯ ಅಧ್ಯಯನವನ್ನು ಪ್ರಾರಂಭಿಸಿದೆ ಎಂದು ಹೇಳಿದ್ದರು.

ಕ್ಷಣ ಕ್ಷಣದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಫೇಸ್ ಬುಕ್ ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ವೈವಿಧ್ಯಮಯ ಸುದ್ದಿಗಳಿಗಾಗಿ ವಿಸ್ತಾರ ನ್ಯೂಸ್ ಟ್ವಿಟರ್ ಪೇಜ್ ಫಾಲೋ ಮಾಡಿ
Continue Reading
Click to comment

Leave a Reply

Your email address will not be published. Required fields are marked *

ದೇಶ

Raghav-Parineeti: ಮತ್ತೆ ಒಟ್ಟಿಗೆ ಕಾಣಿಸಿದ ರಾಘವ್‌, ಪರಿಣೀತಿ; ವಾರದಲ್ಲಿ 3ನೇ ಭೇಟಿ, ಸ್ನೇಹಾನಾ? ಪ್ರೀತಿನಾ?

Raghav-Parineeti: ಆಪ್‌ ನಾಯಕ ರಾಘವ್‌ ಚಡ್ಡಾ ಹಾಗೂ ಬಾಲಿವುಡ್‌ ನಟಿ ಪರಿಣೀತಿ ಚೋಪ್ರಾ ಅವರು ಮತ್ತೆ ಒಟ್ಟಿಗೆ ಕಾಣಿಸಿಕೊಳ್ಳುವ ಮೂಲಕ ಸುದ್ದಿಯಲ್ಲಿದ್ದಾರೆ. ಇವರಿಬ್ಬರೂ ಡೇಟಿಂಗ್‌ ಮಾಡುತ್ತಿದ್ದಾರೆ ಎಂಬ ಮಾತುಗಳಿಗೆ ವಾರದಲ್ಲಿಯೇ ನಡೆದ ಮೂರನೇ ಭೇಟಿಯು ಪುಷ್ಟಿ ನೀಡಿದೆ.

VISTARANEWS.COM


on

Edited by

Amid wedding rumours AAP MP Raghav Chadha picks up Parineeti Chopra from Delhi airport
Koo

ನವದೆಹಲಿ: ಪಂಜಾಬ್‌ ಆಪ್‌ ನಾಯಕ, ರಾಜ್ಯಸಭೆ ಸದಸ್ಯ ರಾಘವ್‌ ಚಡ್ಡಾ ಹಾಗೂ ಬಾಲಿವುಡ್‌ ನಟಿ ಪರಿಣೀತಿ ಚೋಪ್ರಾ (Raghav-Parineeti) ಅವರು ಕೆಲ ದಿನಗಳ ಹಿಂದೆ ಒಟ್ಟಿಗೆ ಕಾಣಿಸಿಕೊಂಡಿದ್ದು ಭಾರಿ ಸುದ್ದಿಯಾಗಿತ್ತು. ಇಬ್ಬರೂ ಹೋಟೆಲ್‌ನಲ್ಲಿ ಕಾಣಿಸಿಕೊಂಡ ಕಾರಣ ಇಬ್ಬರೂ ವದಂತಿಗಳಿಗೆ ಆಹಾರವಾಗಿದ್ದರು. ಈ ಕುರಿತು ರಾಘವ್‌ ಚಡ್ಡಾ ಹಾಗೂ ಪರಿಣೀತಿ ಚೋಪ್ರಾ ಅವರಿಗೆ ಪತ್ರಕರ್ತರು ಪ್ರಶ್ನೆ ಕೇಳಿದ್ದರು. ಇಬ್ಬರೂ ಪ್ರೀತಿಸುತ್ತಿದ್ದಾರೆ, ಮದುವೆಯಾಗುತ್ತಿದ್ದಾರೆ ಎಂದೇ ಹೇಳಲಾಗುತ್ತಿತ್ತು. ಆದರೆ, ಈ ಕುರಿತು ರಾಘವ್‌ ಚಡ್ಡಾ ಹಾರಿಕೆಯ ಉತ್ತರ ನೀಡಿದ್ದರು. ಈಗ ಜೋಡಿಯು ದೆಹಲಿ ವಿಮಾನ ನಿಲ್ದಾಣದಲ್ಲಿ ಮತ್ತೆ ಒಟ್ಟಿಗೆ ಕಾಣಿಸಿಕೊಂಡಿದ್ದು, ಇದು ವಾರದಲ್ಲಿ ಮೂರನೇ ಭೇಟಿಯಾಗಿದೆ. ಹಾಗಾಗಿ, ಇಬ್ಬರೂ ಜೋಡಿ ಹಕ್ಕಿಗಳಾಗಿದ್ದಾರೆ ಎಂಬ ಮಾತಿಗೆ ಹಚ್ಚಿನ ಪುಷ್ಟಿ ಬಂದಂತಾಗಿದೆ.

ಮಾರ್ಚ್‌ 29ರಂದು ದೆಹಲಿ ವಿಮಾನ ನಿಲ್ದಾಣಕ್ಕೆ ಬಂದಿಳಿದ ಪರಿಣೀತಿ ಚೋಪ್ರಾ ಅವರನ್ನು ಪಿಕ್‌ ಮಾಡಲು ಆಮ್‌ ಆದ್ಮಿ ಪಕ್ಷದ ನಾಯಕ ರಾಘವ್‌ ಚಡ್ಡಾ ವಿಮಾನ ನಿಲ್ದಾಣಕ್ಕೆ ತೆರಳಿದ್ದಾರೆ. ರಾಘವ್‌ ಚಡ್ಡಾ ಕಾರಿನಲ್ಲಿಯೇ ಪರಿಣೀತಿ ಚೋಪ್ರಾ ಅವರು ವಿಮಾನ ನಿಲ್ದಾಣದಿಂದ ತೆರಳಿದ್ದಾರೆ. ವಿಮಾನ ನಿಲ್ದಾಣದಲ್ಲಿ ಇಬ್ಬರೂ ಕಾಣಿಸಿಕೊಂಡ ಫೋಟೊಗಳು ಪಾಪರಾಜಿಗಳಿಗೆ ಸಿಕ್ಕಿದ್ದು, ಫೋಟೊಗಳು ವೈರಲ್‌ ಆಗಿವೆ. ಅಲ್ಲದೆ, ಇಬ್ಬರೂ ಪ್ರೀತಿಸುತ್ತಿದ್ದಾರೆ ಎಂಬುದಾಗಿ ಜಾಲತಾಣಗಳಲ್ಲಿ ಮತ್ತೆ ಹೇಳಲು ಆರಂಭಿಸಿದ್ದಾರೆ. ವಿಮಾನ ನಿಲ್ದಾಣದಲ್ಲಿಯೇ ಮಾಧ್ಯಮದವರು ಇಬ್ಬರನ್ನೂ ಮಾತನಾಡಿಸಲು ಯತ್ನಿಸಿದರಾದರೂ, ಜೋಡಿಯು ಪ್ರತಿಕ್ರಿಯಿಸದೆ ತೆರಳಿದೆ.

ಏರ್‌ಪೋರ್ಟ್‌ನಲ್ಲಿ ಜೋಡಿ ಹಕ್ಕಿ

ಒಟ್ಟಿಗೆ ಊಟ, ಒಂದೇ ಕಾರಿನಲ್ಲಿ ತಿರುಗಾಟ

ಕಳೆದ ಒಂದು ವಾರದಲ್ಲಿ ರಾಘವ್‌ ಚಡ್ಡಾ ಹಾಗೂ ಪರಿಣೀತಿ ಚೋಪ್ರಾ ಮೂರು ಬಾರಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಮಾರ್ಚ್‌ 22ರಂದು ರಾಘವ್‌ ಹಾಗೂ ಪರಿಣೀತಿ ಅವರು ಮುಂಬೈನ ರೆಸ್ಟೋರೆಂಟ್‌ ಒಂದರಲ್ಲಿ ಒಟ್ಟಿಗೆ ಊಟಕ್ಕೆ ತೆರಳಿದ್ದರು. ಇಬ್ಬರೂ ಒಟ್ಟಿಗೆ ಹೋಟೆಲ್‌ ಪ್ರವೇಶಿಸುವ ಹಾಗೂ ಹೋಟೆಲ್‌ನಿಂದ ಹೊರಬರುವ ವಿಡಿಯೊ ಹಾಗೂ ಫೋಟೊಗಳು ಲಭ್ಯವಾಗಿವೆ. ಇದಾದ ಮರುದಿನವೇ (ಮಾರ್ಚ್‌ 23) ಇಬ್ಬರೂ ಮತ್ತೆ ಇನ್ನೊಂದು ರೆಸ್ಟೋರೆಂಟ್‌ನಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದರು. ಹೀಗೆ ಪದೇಪದೆ ಒಟ್ಟಿಗೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಡೇಟಿಂಗ್‌ ಕುರಿತು ಮಾತುಗಳು ಕೇಳಿಬರುತ್ತಿವೆ.

ಹಾರಿಕೆಯ ಉತ್ತರ ನೀಡಿದ್ದ ಚಡ್ಡಾ

ಪರಿಣೀತಿ ಜತೆಗಿನ ಡೇಟಂಗ್‌ ಕುರಿತು ಇತ್ತೀಚೆಗೆ ಸುದ್ದಿಗಾರರು ಪ್ರಶ್ನೆ ಕೇಳುತ್ತಲೇ ನಾಚಿ ನೀರಾಗಿದ್ದ ರಾಘವ್‌ ಚಡ್ಡಾ, “ನನಗೆ ಪರಿಣೀತಿ ಬಗ್ಗೆ ಅಲ್ಲ, ರಾಜನೀತಿ ಬಗ್ಗೆ ಪ್ರಶ್ನೆ ಕೇಳಿ” ಎಂದು ನಕ್ಕಿದ್ದರು. ಹಾಗೆಯೇ, ನೀವು ಮದುವೆ ಆಗುವುದು ಯಾವಾಗ ಎಂದು ಕೇಳಿದ ಪ್ರಶ್ನೆಗೆ, “ನಾನು ಮದುವೆಯಾಗುವಾಗ ನಿಮಗೆ ಖಂಡಿತವಾಗಿಯೂ ತಿಳಿಸುತ್ತೇನೆ” ಎಂದು ಹೇಳುವ ಮೂಲಕ ಜಾರಿಕೊಂಡಿದ್ದರು.

ಪಂಜಾಬ್‌ ಆಪ್‌ ನಾಯಕ, ರಾಜ್ಯಸಭೆಯ ಯುವ ಸದಸ್ಯರಾಗಿರುವ ಚಡ್ಡಾ ಹಾಗೂ ಪರಿಣೀತಿ ಚೋಪ್ರಾ ಅವರು ಲಂಡನ್‌ ಸ್ಕೂಲ್‌ ಆಫ್‌ ಎಕನಾಮಿಕ್ಸ್‌ನಲ್ಲಿ ಒಟ್ಟಿಗೆ ಓದಿದ್ದಾರೆ. ಹಾಗಾಗಿ, ಇಬ್ಬರಿಗೂ ಮೊದಲಿನಿಂದಲೂ ಪರಿಚಯ ಇದೆ ಎಂದು ತಿಳಿದುಬಂದಿದೆ. ಆದರೆ, ಮೂಲಗಳ ಪ್ರಕಾರ, ಅವರಿಬ್ಬರೂ ಪರಸ್ಪರ ಪ್ರೀತಿಸುತ್ತಿದ್ದಾರೆ ಎಂದು ತಿಳಿದುಬಂದಿದೆ. ಇತ್ತೀಚೆಗೆ ಇಬ್ಬರೂ ಆತ್ಮೀಯರಾಗಿದ್ದಾರೆ. ಹಾಗಾಗಿ, ಡೇಟಿಂಗ್‌ ಮಾಡುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಇದನ್ನೂ ಓದಿ: Raghav Chadha: ಆಪ್‌ ನಾಯಕ ರಾಘವ್‌ ಚಡ್ಡಾ, ಪರಿಣೀತಿ ಚೋಪ್ರಾ ಈಗ ಜೋಡಿ ಹಕ್ಕಿ? ಜತೆಗೇ ಸುತ್ತಿ ಚಡ್ಡಾ ಹೇಳಿದ್ದೇನು?

Continue Reading

ದೇಶ

Google Layoffs: ಗೂಗಲ್‌ನಿಂದ ವಜಾಗೊಂಡ ನೌಕರರಿಗೆ ಸಿಗಲಿದೆ 2.6 ಕೋಟಿ ರೂ., ಇವರಿಗೆ ಬೇರೆ ನೌಕರಿಯೇ ಬೇಕಿಲ್ಲ

Google Layoffs: ಐರ್ಲೆಂಡ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಕೆಲ ನೌಕರರಿಗೆ ಮಾತ್ರ ಕೋಟ್ಯಂತರ ರೂಪಾಯಿ Severance Pay ಸಿಗಲಿದೆ. ಆದರೂ, ಗೂಗಲ್‌ನಿಂದ ವಜಾಗೊಂಡ ಯಾವ ನೌಕರನಿಗೂ ಕಂಪನಿಯು ಕಡಿಮೆ ಮೊತ್ತ ನೀಡಿ ಕಳುಹಿಸುತ್ತಿಲ್ಲ ಎಂಬುದು ಗಮನಾರ್ಹ.

VISTARANEWS.COM


on

Edited by

Google Layoffs Some employees may get up to Rs 260 crore in severance pay
Koo

ನವದೆಹಲಿ: ಟ್ವಿಟರ್‌, ಮೆಟಾ, ಮೈಕ್ರೋಸಾಫ್ಟ್‌, ಅಮೆಜಾನ್‌, ಆಕ್ಷೆಂಚರ್‌, ಫೋರ್ಡ್‌ ಸೇರಿ ಜಗತ್ತಿನ ಅಗ್ರ, ಬಹುರಾಷ್ಟ್ರೀಯ ಕಂಪನಿಗಳು ಸಾವಿರಾರು ಉದ್ಯೋಗಿಗಳನ್ನು ಮನೆಗೆ ಕಳುಹಿಸಿವೆ. ಜಾಗತಿಕ ಆರ್ಥಿಕ ಹಿಂಜರಿತದ ಭೀತಿ, ಕೊರೊನಾ ಸಮಯದಲ್ಲಿ ಉಂಟಾದ ನಷ್ಟ ತೂಗಿಸುವಿಕೆ ಸೇರಿ ಹಲವು ಕಾರಣಗಳಿಂದಾಗಿ ಸಾಲು ಸಾಲಾಗಿ ಕಂಪನಿಗಳು ನೌಕರರನ್ನು ವಜಾಗೊಳಿಸುತ್ತಿವೆ. ಇದರಿಂದಾಗಿ ಜಾಗತಿಕ ಕಂಪನಿಗಳಲ್ಲಿ ಕೆಲಸ ಮಾಡುತ್ತಿರುವವರೂ ಭೀತಿಯಲ್ಲಿಯೇ ಕಾರ್ಯನಿರ್ವಹಿಸುವ ಪರಿಸ್ಥಿತಿ ಎದುರಾಗಿದೆ. ಆದರೆ, ಗೂಗಲ್‌ ಕಂಪನಿಯಿಂದ (Google Layoffs) ವಜಾಗೊಂಡವರು ಮಾತ್ರ ಹೆಚ್ಚು ಯೋಚನೆ ಮಾಡಬೇಕಿಲ್ಲ. ಏಕೆಂದರೆ, ಅವರಿಗೆ ಸಿಗುವ ಬೇರ್ಪಡಿಸುವಿಕೆ ಮೊತ್ತ ಅಥವಾ ಕಂಪನಿಯು ಉದ್ಯೋಗಿಯನ್ನು ವಜಾಗೊಳಿಸಿದ ಬಳಿಕ ನೀಡುವ ಹಣಕಾಸು ಪರಿಹಾರದ ಪ್ಯಾಕೇಜ್‌ (Severance Pay) ಅಷ್ಟರಮಟ್ಟಿಗೆ ಇದೆ.

ಹೌದು, ಗೂಗಲ್‌ ಇತ್ತೀಚೆಗೆ ಜಾಗತಿಕವಾಗಿ 12 ಸಾವಿರ ಉದ್ಯೋಗಿಗಳನ್ನು ವಜಾಗೊಳಿಸುವುದಾಗಿ ಘೋಷಿಸಿದೆ. ಇವರಲ್ಲಿ ಐರ್ಲೆಂಡ್‌ನಲ್ಲಿ ಕೆಲಸ ಮಾಡುತ್ತಿದ್ದ 240 ಉದ್ಯೋಗಿಗಳು ಕೂಡ ಇದ್ದು, ಅವರಿಗೆ ವಜಾಗೊಳಿಸುವ ಕುರಿತು ಮಾಹಿತಿ ನೀಡಲಾಗಿದೆ. ಸೇಲ್ಸ್‌ ವಿಭಾಗದ 85, ಟೆಕ್ನಾಲಜಿ ವಿಭಾಗದ 80 ಉದ್ಯೋಗಿಗಳು ಕೆಲಸ ಕಳೆದುಕೊಳ್ಳಲಿದ್ದಾರೆ. ಆದರೆ, ಇವರಲ್ಲಿಯೇ ಕೆಲವು ಮಂದಿಗೆ ಹಣಕಾಸು ಪರಿಹಾರದ ಪ್ಯಾಕೇಜ್‌ 2.6 ಕೋಟಿ ರೂಪಾಯಿವರೆಗೆ ಸಿಗಲಿದೆ. ಹಾಗಾಗಿ, ವಜಾಗೊಂಡಿರುವ ನೌಕರರಿಗೆ ಸಿಗುವ ಮೊತ್ತವನ್ನು ನೋಡಿದರೆ ಅವರು ಬೇರೆ ಕೆಲಸ ಹುಡುಕುವ ಪ್ರಮೇಯವೇ ಬರುವುದಿಲ್ಲ ಎಂಬುದಾಗಿ ಅಭಿಪ್ರಾಯ ವ್ಯಕ್ತವಾಗಿದೆ.

ವಜಾಗೊಳ್ಳುತ್ತಿರುವ ನೌಕರರಿಗೆ ಕಂಪನಿಯು Severance Pay ನೀಡುವುದಾಗಿ ಭರವಸೆ ನೀಡಿದೆ. ಐರ್ಲೆಂಡ್‌ನಲ್ಲಿ 2003ರಲ್ಲಿ ಕಚೇರಿಯನ್ನು ತೆರೆದಿದ್ದು, ಕಚೇರಿ ಆರಂಭವಾದಾಗಿನಿಂದ ಇದುವರೆಗೆ ಕಾರ್ಯನಿರ್ವಹಿಸಿದ ನೌಕರರಿಗೆ ಇಷ್ಟು ಮೊತ್ತದ ಪ್ಯಾಕೇಜ್‌ ಸಿಗಲಿದೆ. ಹೀಗೆ, ಸುದೀರ್ಘ ಅವಧಿಗೆ ಕಾರ್ಯನಿರ್ವಹಿಸಿದ ನೌಕರರಿಗೆ ಪ್ರತಿವರ್ಷದಂತೆ ಲೆಕ್ಕ ಹಾಕಿ ಆರು ವಾರಗಳ ಹೆಚ್ಚುವಳಿ ಸಂಬಳ, 30 ದಿನಗಳ ಗಳಿಕೆ ರಜೆ ಸೇರಿ ಅವರ ಫೈನಲ್‌ ಸೆಟಲ್‌ಮೆಂಟ್‌ ಮೊತ್ತವು 2.6 ಕೋಟಿ ಆಗಲಿದೆ ಎಂದು ತಿಳಿದುಬಂದಿದೆ.

ಅಮೆರಿಕದ ನೌಕರರಿಗೂ ಸಿಗಲಿದೆ ಹೆಚ್ಚಿನ ಮೊತ್ತ

ಅಮೆರಿಕದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಗೂಗಲ್‌ ಉದ್ಯೋಗಿಗಳಿಗೂ ಹೆಚ್ಚಿನ ಪ್ರಮಾಣದ Severance Pay ಪ್ಯಾಕೇಜ್‌ ಸಿಗಲಿದೆ. ಅಮೆರಿಕದಲ್ಲಿ ಕಾರ್ಯನಿರ್ವಹಿಸುತ್ತಿದ್ದ ನೌಕರರಿಗೆ 16 ವಾರಗಳ ಸಂಬಳ, 16 ವಾರದ ಜಿಎಸ್‌ಯು ವೆಸ್ಟಿಂಗ್‌, 2022ರ ಬೋನಸ್‌, ಆರು ತಿಂಗಳವರೆಗೆ ವಿಮೆ ವಿಸ್ತರಣೆ, ವಲಸೆ ಬಂದವರು ಬೇರೆ ದೇಶಗಳಿಗೆ ತೆರಳಲು ಅಥವಾ ತಮ್ಮ ದೇಶಗಳಿಗೆ ಮರಳಲು ನೆರವು ಒದಗಿಸುವುದು ಸೇರಿ ಹತ್ತಾರು ಸೌಲಭ್ಯ ನೀಡಿದೆ. ಆದರೆ, ಐರ್ಲೆಂಡ್‌ನಲ್ಲಿ ಕೆಲಸ ಮಾಡುತ್ತಿದ್ದ ಉದ್ಯೋಗಿಗಳಿಗೆ ಮಾತ್ರ ಹೆಚ್ಚಿನ ಮೊತ್ತ ನೀಡಲಾಗಿದೆ.

ಕಳೆದ ಜನವರಿಯಲ್ಲಿ ಗೂಗಲ್‌ ಸಿಇಒ ಸುಂದರ್‌ ಪಿಚೈ ಅವರು ಉದ್ಯೋಗಿಗಳಿಗೆ ಇ-ಮೇಲ್‌ ಕಳುಹಿಸುವ ಮೂಲಕ ಕೆಲಸದಿಂದ ವಜಾಗೊಳಿಸುತ್ತಿರುವ ತೀರ್ಮಾನವನ್ನು ಪ್ರಕಟಿಸಿದ್ದರು. ಹಾಗೆಯೇ, “ಇಂತಹ ಕಠಿಣ ತೀರ್ಮಾನದಿಂದ ನನ್ನ ಮನಸ್ಸಿಗೆ ನೋವಾಗಿದ್ದು, ಇದರ ಸಂಪೂರ್ಣ ಹೊಣೆಯನ್ನು ನಾನೇ ಹೊರುತ್ತೇನೆ” ಎಂದು ಹೇಳಿದ್ದರು. ಭಾರತದ 450 ಜನ ಗೂಗಲ್‌ನಿಂದ ವಜಾಗೊಂಡಿದ್ದಾರೆ.

ಇದನ್ನೂ ಓದಿ: xooglers: ಗೂಗಲ್‌ನಿಂದ ಕೆಲಸ ಕಳೆದುಕೊಂಡ 7 ಮಂದಿ ಹೊಸ ಕಂಪನಿಯನ್ನೇ ಆರಂಭಿಸಿದರು!

Continue Reading

ಕರ್ನಾಟಕ

ವಿಸ್ತಾರ TOP 10 NEWS: ಕರ್ನಾಟಕದ ರಾಜಕೀಯ ಪಲ್ಸ್‌ನಿಂದ, ಸಿದ್ದುಗೆ ವರುಣ ಟೆನ್ಶನ್‌ವರೆಗಿನ ಪ್ರಮುಖ ಸುದ್ದಿಗಳಿವು

ರಾಜ್ಯ, ದೇಶ, ಅಂತಾರಾಷ್ಟ್ರೀಯ ಮಟ್ಟದಲ್ಲಿ ನಡೆದ ದಿನದ ಪ್ರಮುಖ ಬೆಳವಣಿಗೆಗಳಲ್ಲಿ ಪ್ರಮುಖ ಸುದ್ದಿಗಳ ಗುಚ್ಛವೇವಿಸ್ತಾರ TOP 10 NEWS

VISTARANEWS.COM


on

Edited by

top 10 News
Koo

1. Pulse of Karnataka 2: ಹಳೆ ಮೈಸೂರು, ಕರಾವಳಿ, ಮಲೆನಾಡು, ಮಧ್ಯಕರ್ನಾಟಕದ ಜನರ ನಾಡಿ ಮಿಡಿತ
ವಿಸ್ತಾರ ನ್ಯೂಸ್, ರಾಜ್ಯದ ಪ್ರತಿಷ್ಟಿತ ಪೊಲಿಟಿಕಲ್ ಅನಾಲಿಸಿಸ್ ಸಂಸ್ಥೆಯಾದ ಅಖಾಡ ಜತೆಗೂಡಿ ರಾಜ್ಯದ ಮೂಲೆಮೂಲೆಗೆ ತೆರಳಿ ಸ್ಥಳೀಯರ ಪಲ್ಸ್ ಅರಿಯುವ ಕೆಲಸ ಮಾಡಿದೆ. ಮಾರ್ಚ್‌ ಮೊದಲ ವಾರದಲ್ಲಿ ಪ್ರಕಟವಾಗಿದ್ದ ಮೊದಲ ಆವೃತ್ತಿ ನಂತರ ಇದೀಗ ಪಲ್ಸ್ ಆಫ್ ಕರ್ನಾಟಕ ಎರಡನೇ ಆವೃತ್ತಿ ಪ್ರಸಾರ ಆರಂಭವಾಗಿದೆ. ಮೊದಲ ದಿನದಂದು ಹಳೆ ಮೈಸೂರು, ಕರಾವಳಿ, ಮಲೆನಾಡು, ಮಧ್ಯಕರ್ನಾಟಕದ ಜನರ ನಾಡಿ ಮಿಡಿತವನ್ನು ಪ್ರಕಟಿಸಲಾಗಿದೆ. ಮುಂದಿನ ಎರಡು ದಿನಗಳಲ್ಲಿ ಕರ್ನಾಟಕದ ಎಲ್ಲ ಪ್ರದೇಶದ ಚಿತ್ರಣವನ್ನು ನೀಡಲಾಗುತ್ತದೆ.
Pulse of Karnataka 2: ಹಳೆ ಮೈಸೂರು ವಲಯ: JDS ಭದ್ರಕೋಟೆಯಲ್ಲಿ ಸಿದ್ದರಾಮಯ್ಯ ಆಗುವರೇ ಕಿಂಗ್?‌
Pulse of Karnataka 2: ಮಧ್ಯ ಕರ್ನಾಟಕ: ಸೀರೆ, ಮಿಕ್ಸಿ, ಕುಕ್ಕರ್‌ ನೀಡಿದರೆ ಮತಗಳು ಸಿಗುತ್ತವೆಯೇ?
Pulse of Karnataka 2: ಕರಾವಳಿ-ಮಲೆನಾಡು: ಬಿಜೆಪಿಗೆ ಮತ ಸೆಳೆಯಲು ಬಿ.ಎಸ್‌. ಯಡಿಯೂರಪ್ಪ ಎಷ್ಟು ಅನಿವಾರ್ಯ?

2. ಕೋಲಾರ ಬಳಿಕ ವರುಣದಲ್ಲೂ ಸಿದ್ದುಗೆ ಟೆನ್ಶನ್; ವಿಜಯೇಂದ್ರ ಕಣಕ್ಕಿಳಿಸಲು ಬಿಜೆಪಿ ಮಾಸ್ಟರ್​ ಪ್ಲ್ಯಾನ್?
ಬೆಂಗಳೂರು:
ಕಾಂಗ್ರೆಸ್‌ ನಾಯಕ ಸಿದ್ದರಾಮಯ್ಯ ಅವರಿಗೆ ಕೋಲಾರ ಬಳಿಕ ಇದೀಗ ಸುರಕ್ಷಿತ ಎಂದು ಹೇಳಲಾದ ವರುಣದಲ್ಲೂ ಟೆನ್ಶನ್‌ ಶುರುವಾಗಿದೆ. ಇದಕ್ಕೆ ಕಾರಣ ಬಿಜೆಪಿ ಮಾಡಿಕೊಂಡಿದೆ ಎನ್ನಲಾದ ಮಾಸ್ಟರ್‌ ಪ್ಲ್ಯಾನ್‌. ಇಲ್ಲಿ ಬಿಜೆಪಿಯು ರಾಜ್ಯ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರನ್ನು ಕಣಕ್ಕಿಳಿಸುವ ತಂತ್ರ ಹೂಡಿದೆ ಎನ್ನಲಾಗಿದೆ. ಇದೇ ಸಂಕೇತವನ್ನು ಬಿಎಸ್‌ವೈ ಕೂಡಾ ನೀಡಿದ್ದಾರೆ.ವಿಜಯೇಂದ್ರ ಆರ್‌ಎಸ್‌ಎಸ್‌ ಕಚೇರಿಗೆ ಭೇಟಿ ನೀಡಿದ್ದು, ಈ ಬೆಳವಣಿಗೆಗೆ ಪುಷ್ಟಿ ನೀಡಿದೆ. ಪೂರ್ಣ ವರದಿಗೆ ಕ್ಲಿಕ್‌ ಈ ಲಿಂಕ್‌ ಕ್ಲಿಕ್‌ ಮಾಡಿ
ಪೂರಕ ವರದಿ : ಸಿದ್ದರಾಮಯ್ಯ ವಿರುದ್ಧ ವಿಜಯೇಂದ್ರ ಸ್ಪರ್ಧೆಗೆ ಬಿಜೆಪಿ ಚಿಂತನೆ: ಖಚಿತಪಡಿಸಿದ ಬಿ.ಎಸ್‌.ವೈ

3. ಕ್ರೈಸ್ತ, ಜೈನರಿಗೆ ಮೀಸಲಾತಿ ಮುಂದುವರಿಕೆ; ಮುಸ್ಲಿಮರು ಮಾತ್ರ ಹೊರಕ್ಕೆ: ವರ್ಗೀಕರಣದ ಕುರಿತು ಚರ್ಚೆ
ಎಸ್‌ಸಿಎಸ್‌ಟಿ ಸಮುದಾಯಕ್ಕೆ ಒಳಮೀಸಲಾತಿ ಹಂಚಿಕೆ ನಂತರ ಒಕ್ಕಲಿಗೆ ಹಾಗೂ ವೀರಶೈವ ಲಿಂಗಾಯತರ ಮೀಸಲಾತಿ ಕುರಿತು ರಾಜ್ಯ ಸರ್ಕಾರ ಆದೇಶ ಹೊರಡಿಸಿದ್ದು, ಇದರ ಕುರಿತು ಕೆಲವು ಜಿಜ್ಞಾಸೆಗಳು ಮೂಡಿವೆ. ಸಂವಿಧಾನಬಾಹಿರ ಎಂದು ಮುಸ್ಲಿಮರನ್ನು ಮೀಸಲಿನಿಂದ ಹೊರಗಿಟ್ಟ ಸರ್ಕಾರ, ಜೈನ್‌ ಹಾಗೂ ಕ್ರಿಶ್ಚಿಯನ್ನರನ್ನು ಹಾಗೆಯೇ ಉಳಿಸಿಕೊಂಡಿದೆ. ಸರ್ಕಾರದ ಈ ಸರ್ಕಸ್‌ ಭಾರಿ ಚರ್ಚೆಗೆ ಕಾರಣವಾಗಿದೆ. ಪೂರ್ಣ ವರದಿಗೆ ಕ್ಲಿಕ್‌ ಮಾಡಿ
ಪೂರಕ ವರದಿ : ಮುಸ್ಲಿಂ ಬಾಂಧವರಿಗೆ ಬಿಜೆಪಿ ಅನ್ಯಾಯ ಮಾಡಿಲ್ಲ: ಮನವೊಲಿಸುತ್ತೇವೆ ಎಂದ ಯಡಿಯೂರಪ್ಪ

4.ವಿಸ್ತಾರ Special: ಬಿಜೆಪಿ ಇತಿಹಾಸದಲ್ಲೇ ಮೊದಲು: ಅಭ್ಯರ್ಥಿ ಆಯ್ಕೆಗೆ ಶುಕ್ರವಾರ ಆಂತರಿಕ ಚುನಾವಣೆ
ವಿಧಾನಸಭೆ ಚುನಾವಣೆಯಲ್ಲಿ ಗೆಲ್ಲಬೇಕು ಎಂಬ ಹಿನ್ನೆಲೆಯಲ್ಲಿ ಬಿಜೆಪಿ ತನ್ನ ಇತಿಹಾಸದಲ್ಲೆ ಮೊಟ್ಟ ಮೊದಲ ಬಾರಿಗೆ ಹೊಸ ಪ್ರಯತ್ನಕ್ಕೆ ಕೈ ಹಾಕಿದೆ. ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಸಲುವಾಗಿ ಕಾರ್ಯಕರ್ತರ ಆಂತರಿಕ ಚುನಾವಣೆಯನ್ನು ಶುಕ್ರವಾರ ರಾಜ್ಯಾದ್ಯಂತ ನಡೆಸಲಿದೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

5. ಚುನಾವಣಾ ಅಕ್ರಮ: ತುಮಕೂರು ಗ್ರಾಮಾಂತರ ಜೆಡಿಸ್‌ ಶಾಸಕ ಗೌರಿಶಂಕರ್‌ ಶಾಸಕತ್ವದಿಂದ ಅನರ್ಹ
ವಿಧಾನಸಭಾ ಚುನಾವಣೆ ಹೊಸ್ತಿಲಲ್ಲಿ ಜಾತ್ಯತೀತ ಜನತಾದಳಕ್ಕೆ ತೀವ್ರ ಹಿನ್ನಡೆಯಾಗಿದೆ. ತುಮಕೂರು ಗ್ರಾಮಾಂತರದ ಜೆಡಿಎಸ್‌ ಶಾಸಕ ಗೌರಿಶಂಕರ್‌ ಅವರನ್ನು ರಾಜ್ಯ ಹೈಕೋರ್ಟ್‌ ಶಾಸಕತ್ವದಿಂದ ಅನರ್ಹಗೊಳಿಸಿದೆ. ಆದರೆ, ಈ ಆದೇಶ ಈ ಅವಧಿಗೆ ಮಾತ್ರ ಸೀಮಿತವಾಗಿದ್ದು, ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡಲಾಗಿದೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

6. ಹಿಂದಿ ಹೇರಿಕೆ ವಿರೋಧಕ್ಕೆ ಮಣಿದ ಕೇಂದ್ರ, ಮೊಸರು ಪ್ಯಾಕೆಟ್‌ನಲ್ಲಿ ‘ದಹಿ’ ಎಂಬ ಮುದ್ರಣ ಆದೇಶ ವಾಪಸ್
ಕೇಂದ್ರ ಸರ್ಕಾರದ ಹಿಂದಿ ಹೇರಿಕೆ ಯತ್ನಕ್ಕೆ ಕರ್ನಾಟಕ ಹಾಗೂ ತಮಿಳುನಾಡು ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಮೊಸರಿನ ಮೇಲೆ ಹಿಂದಿಯ ದಹಿ (Dahi Row) ಎಂಬುದಾಗಿ ಮುದ್ರಿಸಬೇಕು ಎಂಬ ಆದೇಶವನ್ನು ಆಹಾರ ಸುರಕ್ಷತಾ ಮತ್ತು ಗುಣಮಟ್ಟ ಪ್ರಾಧಿಕಾರ(FSSAI)ವು ಹಿಂಪಡೆದಿದೆ. ಆ ಮೂಲಕ ಕರ್ನಾಟಕ ಹಾಗೂ ತಮಿಳುನಾಡು ಸೇರಿ ಹಲವೆಡೆ ವ್ಯಕ್ತವಾದ ವಿರೋಧಕ್ಕೆ ಕೇಂದ್ರ ಸರ್ಕಾರ ಮಣಿದಂತಾಗಿದೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

7. ಮೋದಿ ಓಡಿಸಿ, ದೇಶ ಉಳಿಸಿ ಬಳಿಕ ದೇಶಾದ್ಯಂತ ಆಪ್‌ನಿಂದ ಪೋಸ್ಟರ್ ಕ್ಯಾಂಪೇನ್ ಶುರು!
ನವದೆಹಲಿ: ಮೋದಿಯನ್ನು ಓಡಿಸಿ, ದೇಶವನ್ನು ಉಳಿಸಿ ಅಭಿಯಾನದ ಬಳಿಕ ಆಮ್ ಆದ್ಮಿ ಪಾರ್ಟಿ, ದೇಶಾದ್ಯಂತ ಪ್ರಧಾನಿ ನರೇಂದ್ರ ಮೋದಿ (PM Narendra Modi) ವಿರುದ್ಧ ಪೋಸ್ಟರ್ ಕ್ಯಾಂಪೇನ್ ಗುರುವಾರ ಆರಂಭಿಸಿದೆ. ಒಟ್ಟು 11 ಭಾಷೆಗಳಲ್ಲಿ ದೇಶಾದ್ಯಂತ ಮೋದಿ ವಿರೋಧಿ ಪೋಸ್ಟರ್‌ಗಳನ್ನು ಪ್ರದರ್ಶಿಸಿದೆ. ಈ ಹಿಂದೆ, ಮೋದಿಯನ್ನು ಓಡಿಸಿ, ದೇಶವನ್ನು ಉಳಿಸಿ ಪೋಸ್ಟರ್‌ಗಳನ್ನು ದಿಲ್ಲಿಯ ಬೀದಿಗಳಲ್ಲಿ ಅಂಟಿಸಲಾಗಿತ್ತು. ಈ ಸಂಬಂಧ ದಿಲ್ಲಿ ಪೊಲೀಸರು ಹಲವರನ್ನು ಬಂಧಿಸಿದ್ದಾರೆ. ನೂರು ಎಫ್ಐಆರ್‌ಗಳನ್ನು ದಾಖಲಿಸಿದ್ದಾರೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

8. IPL 2023: ಆರ್​ಸಿಬಿಗೆ ಆಘಾತ; ಮೊದಲ ಪಂದ್ಯಕ್ಕೆ ಸ್ಟಾರ್​ ಆಟಗಾರರು ಅಲಭ್ಯ
ಕಳೆದ 15 ಆವೃತ್ತಿಯ ಐಪಿಎಲ್​ನಲ್ಲಿ ಈ ಸಲ ಕಪ್ ನಮ್ದೇ ಎಂದು ಹೇಳುತ್ತಲೇ ಬಂದಿರುವ ಆರ್​ಸಿಬಿ ಒಂದು ಬಾರಿಯೂ ಕಪ್​ ಗೆಲ್ಲುವಲ್ಲಿ ಯಶಸ್ಸು ಕಂಡಿಲ್ಲ. ಈ ಬಾರಿಯಾದರೂ ಕಪ್​ ಗೆಲ್ಲಬೇಕೆಂದಿದ್ದ ಆರ್​ಸಿಬಿಗೆ ಗಾಯದ ಸಮಸ್ಯೆಯೊಂದು ಅಡ್ಡಿಯಾದಂತೆ ತೋರುತ್ತಿದೆ. ಆರ್​ಸಿಬಿ ತನ್ನ ಐಪಿಎಲ್​ ಅಭಿಯಾನವನ್ನು ಏಪ್ರಿಲ್​ 2 ರಂದು ಮುಂಬೈ ಇಂಡಿಯನ್ಸ್​ ವಿರುದ್ಧ ಕಣಕ್ಕಿಳಿಯುವ ಮೂಲಕ ಆರಂಭಿಸಲಿದೆ. ಆದರೆ ಈ ಪಂದ್ಯಕ್ಕೆ ಸ್ಟಾರ್​ ಆಟಗಾರರಿಬ್ಬರು ಅಲಭ್ಯರಾಗಲಿದ್ದಾರೆ ಎಂದು ತಂಡದ ಮೂಲಗಳು ತಿಳಿಸಿವೆ. ಪೂರ್ಣ ವರದಿಗೆ ಲಿಂಕ್‌ ಕ್ಲಿಕ್‌ ಮಾಡಿ

9. Import duty exemption : ಅಪರೂಪದ ಕಾಯಿಲೆಗಳ ಚಿಕಿತ್ಸೆಗೆ ಬಳಸುವ ಎಲ್ಲ ಔಷಧಗಳ ದರ ಇಳಿಕೆ
ಕೇಂದ್ರ ಸರ್ಕಾರವು ಅಪರೂಪದ ಕಾಯಿಲೆಗಳ ಚಿಕಿತ್ಸೆಗೆ ಬಳಸುವ ಎಲ್ಲ ಔಷಧ ಹಾಗೂ ಆಹಾರಗಳ ದರ ಇಳಿಕೆಗೆ ಪೂರಕವಾಗಿ, ಅವುಗಳಿಗೆ ಆಮದು ಸುಂಕದಿಂದ ವಿನಾಯಿತಿ (Import duty exemption) ನೀಡಿದೆ. ಏಪ್ರಿಲ್‌ 1ರಿಂದ ಈ ಆಮದು ಸುಂಕ ವಿನಾಯಿತಿ ಅನ್ವಯವಾಗಲಿದೆ. ಪೂರ್ಣ ವರದಿಗೆ ಕ್ಲಿಕ್‌ ಮಾಡಿ

10. ‘ಲೋಕವನ್ನೇ ಗೆದ್ದವನೆ’; ಮೋದಿ ಭಾವಚಿತ್ರಕ್ಕೆ ಮುತ್ತು ಕೊಟ್ಟ ಕರ್ನಾಟಕದ ರೈತ, ವಿಡಿಯೊ ವೈರಲ್
‌ಕೇಂದ್ರ ಸರ್ಕಾರದ ವಿರುದ್ಧ ಪ್ರತಿಪಕ್ಷಗಳು ಎಷ್ಟೇ ಟೀಕೆ ಮಾಡಿದರೂ, ಬೆಲೆಯೇರಿಕೆ ಬಗ್ಗೆ ಆಕ್ರೋಶ ವ್ಯಕ್ತವಾಗುತ್ತಿದ್ದರೂ, ಪ್ರಧಾನಿ ಮೋದಿ ಅವರ ಮೇಲೆ ಜನರಿಗಿರುವ ಪ್ರೀತಿ, ಬೆಂಬಲದಲ್ಲಿ ಮಾತ್ರ ಕಡಿಮೆಯಾಗಿಲ್ಲ. ದೇಶದ ಯಾವುದೇ ಮೂಲೆಗೆ ಹೋದರೂ ನರೇಂದ್ರ ಮೋದಿ ಅವರಿಗೆ ಜನ ಭಾರಿ ಬೆಂಬಲ ವ್ಯಕ್ತಪಡಿಸುತ್ತಾರೆ. ಗಂಟೆಗಟ್ಟಲೆ ನಿಂತು, ಜನರ ಗದ್ದಲದ ಮಧ್ಯೆಯೂ ಮೋದಿ ಅವರನ್ನು ಕಣ್ತುಂಬಿಕೊಳ್ಳುತ್ತಾರೆ. ಮೋದಿ ಮೋದಿ ಎಂದು ಘೋಷಣೆ ಕೂಗುತ್ತಾರೆ. ಇದಕ್ಕೆ ನಿದರ್ಶನ ಎಂಬಂತೆ ಕರ್ನಾಟಕದ ರೈತರೊಬ್ಬರು ಬಸ್‌ ಮೇಲಿರುವ ಮೋದಿ ಅವರ ಭಾವಚಿತ್ರಕ್ಕೆ ಮುತ್ತು ಕೊಟ್ಟಿದ್ದಾರೆ. ಈ ವಿಡಿಯೊ ಈಗ ವೈರಲ್‌ ಆಗಿದೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

ಇನ್ನಷ್ಟು ಪ್ರಮುಖ ಸುದ್ದಿಗಳು

  1. Indore Temple Tragedy: ಇಂದೋರ್‌ ದೇಗುಲದಲ್ಲಿ ಮೆಟ್ಟಿಲುಬಾವಿ ಕುಸಿದು 13 ಜನ ಸಾವು; ಮೋದಿ ಸಂತಾಪ
  2. World Master Athletics: 95ನೇ ವಯಸ್ಸಿನಲ್ಲಿ ಮೂರು ಚಿನ್ನ ಗೆದ್ದು ಇತಿಹಾಸ ನಿರ್ಮಿಸಿದ ಭಗವಾನಿ ದೇವಿ
  3. ವಿಧಾನಸಭೆಯಲ್ಲಿ ಕುಳಿತು ಬ್ಲ್ಯೂ ಫಿಲಂ ವೀಕ್ಷಿಸಿದ ತ್ರಿಪುರಾ ಬಿಜೆಪಿ ಶಾಸಕ, ಉಗಿದು ಉಪ್ಪಿನಕಾಯಿ ಹಾಕಿದ ಜನ
  4. ಧವಳ ಧಾರಿಣಿ ಅಂಕಣ: ರಾಮನೆನ್ನುವ ನಿತ್ಯ ಆದರ್ಶ
  5. ರಾಜ ಮಾರ್ಗ ಅಂಕಣ : ಎಸ್ಸೆಸ್ಸೆಲ್ಸಿ ಪರೀಕ್ಷೆ ತಯಾರಿ ಭಾಗ-6, ನಿಮ್ಮದೂ ಒಂದು ಯಶೋಗಾಥೆ ಯಾಕಾಗಬಾರದು?
Continue Reading

ದೇಶ

New Parliament Building: ಸಂಸತ್‌ ಭವನಕ್ಕೆ ಮೋದಿ ಭೇಟಿ; ಹೇಗೆ ಸಾಗುತ್ತಿದೆ ಕಾಮಗಾರಿ? ಇಲ್ಲಿವೆ ಫೋಟೊಗಳು

New Parliament Building: ದೆಹಲಿಯಲ್ಲಿ ನಿರ್ಮಾಣವಾಗುತ್ತಿರುವ ಭವ್ಯ ಸಂಸತ್‌ ಭವನಕ್ಕೆ ಮೋದಿ ಅವರು 2020ರಲ್ಲಿ ಶಂಕುಸ್ಥಾಪನೆ ನೆರವೇರಿಸಿದ್ದಾರೆ. ನಿರ್ಮಾಣಕ್ಕೆ 971 ಕೋಟಿ ರೂ. ವ್ಯಯಿಸಲಾಗುತ್ತಿದ್ದು, ಶೀಘ್ರದಲ್ಲಿಯೇ ಉದ್ಘಾಟನೆ ಮಾಡುವ ಸಾಧ್ಯತೆ ಇದೆ.

VISTARANEWS.COM


on

Edited by

Narendra Modi Visits New Parliament Building Inspects Various Works For Over An Hour
Koo

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಿರ್ಮಾಣವಾಗುತ್ತಿರುವ ನೂತನ ಸಂಸತ್‌ ಭವನಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ದಿಢೀರ್‌ ಭೇಟಿ ನೀಡಿ, ಕಾಮಗಾರಿಯನ್ನು ಪರಿಶೀಲಿಸಿದ್ದಾರೆ. ಲೋಕಸಭೆ ಸ್ಪೀಕರ್‌ ಓಂ ಬಿರ್ಲಾ ಅವರೊಂದಿಗೆ ಸಂಸತ್‌ ಭವನಕ್ಕೆ ಭೇಟಿ ನೀಡಿದ ಅವರು, ಒಂದು ಗಂಟೆಗೂ ಹೆಚ್ಚು ಸಮಯವನ್ನು ಅಲ್ಲಿಯೇ ಕಳೆದಿದ್ದಾರೆ. ಕಾಮಗಾರಿ ಪರಿಶೀಲನೆ ಜತೆಗೆ ನಿರ್ಮಾಣ ಕಾರ್ಮಿಕರ ಜತೆ ಮಾತುಕತೆಯನ್ನೂ ನಡೆಸಿದ್ದಾರೆ. ಸಂಸತ್ತಿನ ಉಭಯ ಸದನಗಳಿಗೆ ತೆರಳಿ ಕಾಮಗಾರಿ ಪರಿಶೀಲನೆ, ಅತ್ಯಾಧುನಿಕ ಸೌಕರ್ಯಗಳ ಕುರಿತು ಮಾಹಿತಿ ಪಡೆದಿದ್ದಾರೆ. ಅವರು ಸಂಸತ್‌ ಭವನಕ್ಕೆ ಭೇಟಿ ನೀಡಿದ ಫೋಟೊಗಳು ಇಲ್ಲಿವೆ.

ಕಾಮಗಾರಿ ಪರಿಶೀಲನೆ
ಕಾರ್ಮಿಕರೊಂದಿಗೆ ಮಾತುಕತೆ
ಸ್ಪೀಕರ್‌ ಕುಳಿತುಕೊಳ್ಳುವ ಜಾಗದ ಪರಿಶೀಲನೆ
ಸಂಸತ್‌ ಕಲಾಪ ನಡೆಯುವ ಸ್ಥಳ
ಕಾಮಗಾರಿ ಕುರಿತು ಮಾಹಿತಿ ಸಂಗ್ರಹ
ಸಂಸತ್‌ ಸದಸ್ಯರು ಕುಳಿತುಕೊಳ್ಳುವ ಆಸನಗಳು
ಸಂಸತ್‌ ಭವನದಲ್ಲಿ ಮೋದಿ ಸಂಚಾರ
ಅಧಿಕಾರಿಗಳಿಗೆ ಸೂಚನೆ ನೀಡಿದ ಮೋದಿ

ಇದನ್ನೂ ಓದಿ: New Parliament House : ಹೊಸ ಸಂಸತ್‌ ಭವನದಲ್ಲಿ ಮಿಂಚಲಿವೆ 5000 ಬಗೆಯ ಕಲಾಕೃತಿಗಳು

Continue Reading
Advertisement
Man commits suicide after wife commits suicide in Srirangapatna
ಕರ್ನಾಟಕ2 hours ago

Suicide Case: ಕೌಟುಂಬಿಕ ಕಲಹ; ಪತ್ನಿ ಆತ್ಮಹತ್ಯೆ ಕಂಡು ಪತಿಯೂ ನೇಣಿಗೆ ಶರಣು

Amid wedding rumours, AAP MP Raghav Chadha picks up Parineeti Chopra from Delhi airport
ದೇಶ3 hours ago

Raghav-Parineeti: ಮತ್ತೆ ಒಟ್ಟಿಗೆ ಕಾಣಿಸಿದ ರಾಘವ್‌, ಪರಿಣೀತಿ; ವಾರದಲ್ಲಿ 3ನೇ ಭೇಟಿ, ಸ್ನೇಹಾನಾ? ಪ್ರೀತಿನಾ?

Do you know how much marks Virat Kohli got in iron pea maths?
ಕ್ರಿಕೆಟ್3 hours ago

Virat Kohli : ಕಬ್ಬಿಣದ ಕಡಲೆ ಗಣಿತದಲ್ಲಿ ವಿರಾಟ್​ ಕೊಹ್ಲಿ ಪಡೆದ ಮಾರ್ಕ್​ ಎಷ್ಟು ಗೊತ್ತಾ?

Manmohan Lalwani says Solar powered system best tool to cross digital gap
ಕರ್ನಾಟಕ3 hours ago

SELCO India: ಡಿಜಿಟಲ್ ಕಂದಕ ದಾಟಲು ಸೌರಚಾಲಿತ ವ್ಯವಸ್ಥೆ ಅತ್ಯುತ್ತಮ ಸಾಧನ: ಮನಮೋಹನ್ ಲಾಲ್ವಾನಿ

Four farmers seriously injured in lathi charge by forest department personnel
ಕರ್ನಾಟಕ3 hours ago

Tumkur News: ಒತ್ತುವರಿ ತೆರವಿಗೆ ಆಕ್ಷೇಪಿಸಿದ್ದಕ್ಕೆ ಲಾಠಿ ಚಾರ್ಜ್ ಮಾಡಿದ ಅರಣ್ಯ ಸಿಬ್ಬಂದಿ; 4 ರೈತರಿಗೆ ಗಂಭೀರ ಗಾಯ

Bengaluru company to gift ChatGPT Plus subscription to employees after seeing rise in productivity
ಕರ್ನಾಟಕ3 hours ago

ChatGPT Subscription: ದಕ್ಷತೆ ಹೆಚ್ಚಳ; ನೌಕರರಿಗೆ ಚಾಟ್‌ಜಿಪಿಟಿ ಉಚಿತ ಸಬ್‌ಸ್ಕ್ರಿಪ್ಶನ್‌ ನೀಡಿದ ಬೆಂಗಳೂರು ಕಂಪನಿ

No prejudice about Hindi, such imposition is not worth it
ಪ್ರಮುಖ ಸುದ್ದಿ3 hours ago

ವಿಸ್ತಾರ ಸಂಪಾದಕೀಯ: ಹಿಂದಿ ಬಗ್ಗೆ ಪೂರ್ವಗ್ರಹ ಬೇಡ, ಹಾಗಂತ ಹೇರಿಕೆ ಸಲ್ಲದು

Google Layoffs: Some employees may get up to Rs 2.60 crore in severance pay
ದೇಶ3 hours ago

Google Layoffs: ಗೂಗಲ್‌ನಿಂದ ವಜಾಗೊಂಡ ನೌಕರರಿಗೆ ಸಿಗಲಿದೆ 2.6 ಕೋಟಿ ರೂ., ಇವರಿಗೆ ಬೇರೆ ನೌಕರಿಯೇ ಬೇಕಿಲ್ಲ

Former bowler of Rajasthan Royals who joined Chennai Super Kings
ಕ್ರಿಕೆಟ್4 hours ago

IPL 2023 : ಚೆನ್ನೈ ಸೂಪರ್​ ಕಿಂಗ್ಸ್​ ಬಳಗ ಸೇರಿದ ರಾಜಸ್ಥಾನ್​ ರಾಯಲ್ಸ್​ನ ಮಾಜಿ ಬೌಲರ್​

ಕರ್ನಾಟಕ5 hours ago

Prof. Madhav Kulkarni: ಖ್ಯಾತ ಲೇಖಕ, ವಿಮರ್ಶಕ ಪ್ರೊ. ಮಾಧವ ಕುಲಕರ್ಣಿ ಇನ್ನಿಲ್ಲ

7th Pay Commission
ನೌಕರರ ಕಾರ್ನರ್5 months ago

7th Pay Commission | ಸದ್ಯವೇ 7ನೇ ವೇತನ ಆಯೋಗ ರಚಿಸಿ ಆದೇಶ; ಮುಖ್ಯಮಂತ್ರಿ ಭರವಸೆ

DCC Bank Recruitment 2023
ಉದ್ಯೋಗ2 months ago

DCC Bank Recruitment 2023 : ಬೆಂಗಳೂರು ಡಿಸಿಸಿ ಬ್ಯಾಂಕ್‌ನಲ್ಲಿ 96 ಹುದ್ದೆಗಳಿಗೆ ನೇಮಕ; ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನ

Govt employees ssociation
ಕರ್ನಾಟಕ2 months ago

7th pay commission | ಸರ್ಕಾರಿ ನೌಕರರಿಗೆ ವಾರಕ್ಕೆ 5 ದಿನ ಕೆಲಸ, ಹಳೆ ಪಿಂಚಣಿ ಯೋಜನೆ; ವೇತನ ಆಯೋಗದ ಮುಂದೆ ಬೇಡಿಕೆ ಪಟ್ಟಿ

Village Accountant Recruitment
ಉದ್ಯೋಗ2 months ago

Village Accountant Recruitment : ರಾಜ್ಯದಲ್ಲಿ 2007 ಗ್ರಾಮ ಲೆಕ್ಕಿಗರ ಹುದ್ದೆ ಖಾಲಿ; ಯಾವ ಜಿಲ್ಲೆಯಲ್ಲಿ ಎಷ್ಟು ಹುದ್ದೆಗಳಿವೆ ನೋಡಿ

Entitled leave for employees involved in strike Order from Govt
ನೌಕರರ ಕಾರ್ನರ್4 weeks ago

Govt Employees Strike : ಮುಷ್ಕರದಲ್ಲಿ ಭಾಗಿಯಾದ ನೌಕರರಿಗೆ ವೇತನ ಸಹಿತ ರಜೆ; ಸದ್ಯವೇ ಸರ್ಕಾರದಿಂದ ಆದೇಶ

betel nut smuggling Areca News
ಕರ್ನಾಟಕ3 months ago

Areca News | ಅಕ್ರಮ ಅಡಿಕೆ ಆಮದಿನ ಕಿಂಗ್‌ಪಿನ್‌ ಅರೆಸ್ಟ್‌; ಇನ್ನಾದರೂ ಏರೀತೆ ಅಡಿಕೆಯ ಬೆಲೆ?

Teacher Transfer
ನೌಕರರ ಕಾರ್ನರ್5 months ago

ಸೇವಾ ನಿರತ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಬಡ್ತಿ; ಸದ್ಯವೇ ಸರ್ಕಾರದಿಂದ ಗುಡ್‌ ನ್ಯೂಸ್‌?

7th Pay Commission
ಕರ್ನಾಟಕ5 months ago

7th Pay Commission | 7 ವೇತನ ಆಯೋಗ ರಚನೆಯ ಘೋಷಣೆ; ಹರ್ಷ ವ್ಯಕ್ತಪಡಿಸುತ್ತಿರುವ ಸರ್ಕಾರಿ ನೌಕರರು

Land Surveyor Recruitment
ಉದ್ಯೋಗ2 months ago

Land Surveyor Recruitment : 2000 ಭೂಮಾಪಕರ ನೇಮಕಕ್ಕೆ ಅರ್ಜಿ ಆಹ್ವಾನ; ಇಲ್ಲಿದೆ ಸಂಪೂರ್ಣ ಮಾಹಿತಿ

Post Office Recruitment 2023
ಉದ್ಯೋಗ2 months ago

India Post GDS Recruitment 2023 : ಅಂಚೆ ಇಲಾಖೆಯಲ್ಲಿ 40,889 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ, ವಿದ್ಯಾರ್ಹತೆ ಎಸ್ಸೆಸ್ಸೆಲ್ಸಿ

ಕರ್ನಾಟಕ8 hours ago

Ram Navami 2023: ಕರುನಾಡಿನೆಲ್ಲೆಡೆ ಶ್ರೀರಾಮ ನಾಮಸ್ಮರಣೆ; ಕಲಬುರಗಿಯಲ್ಲಿ ಮಜ್ಜಿಗೆ, ಪಾನಕ ವಿತರಿಸಿದ ಮುಸ್ಲಿಮರು

Siddalinga Swamiji of Siddaganga Mutt saw a cow and came running away Video goes viral
ಕರ್ನಾಟಕ14 hours ago

Sri Siddalinga Swamiji: ಸಿದ್ದಗಂಗಾ ಮಠದ ಸಿದ್ದಲಿಂಗ ಸ್ವಾಮೀಜಿ ಕಂಡು ಓಡೋಡಿ ಬಂದ ಹಸು; ವಿಡಿಯೊ ವೈರಲ್‌

amit shah convoy
ಕರ್ನಾಟಕ4 days ago

Amit Shah: ಬೆಂಗಳೂರಿನಲ್ಲಿ ಅಮಿತ್‌ ಶಾ ಕಾನ್‌ವೇಯಲ್ಲಿ ಭದ್ರತಾ ವೈಫಲ್ಯ; ಇಬ್ಬರು ವಿದ್ಯಾರ್ಥಿಗಳ ವಿಚಾರಣೆ

rapido bike vs auto-Bike taxi drivers go on strike against auto drivers harassment
ಕರ್ನಾಟಕ4 days ago

Rapido Bike Vs Auto: ಆಟೋ ಚಾಲಕರ ದೌರ್ಜನ್ಯದ ವಿರುದ್ಧ ಸಿಡಿದೆದ್ದ ಬೈಕ್‌ ಟ್ಯಾಕ್ಸಿ ಚಾಲಕರು; ರಕ್ಷಣೆಗಾಗಿ ಪ್ರತಿಭಟನೆ

ಕರ್ನಾಟಕ1 week ago

Halal Ban: ಯುಗಾದಿಗೆ ಹಲಾಲ್‌ ಕಟ್‌ ಬಹಿಷ್ಕರಿಸಿ, ಜಟ್ಕಾ ಮಾಂಸ ಖರೀದಿ; ಮತ್ತೆ ಬೀದಿಗಿಳಿದ ಹಿಂದು ಕಾರ್ಯಕರ್ತರು

Did Dinesh Gundu Rao distribute damaged sarees in Gandhinagar for Ugadi festival?
ಕರ್ನಾಟಕ1 week ago

Damaged Saree: ಯುಗಾದಿ ಹಬ್ಬಕ್ಕೆ ಗಾಂಧಿನಗರದಲ್ಲಿ ಹರಿದ ಸೀರೆ ಕೊಟ್ಟರಾ ದಿನೇಶ್‌ ಗುಂಡೂರಾವ್‌? ಸೀರೆ ನೀಡಿ ಮಹಿಳೆಯರ ಕಿಡಿ

ಕರ್ನಾಟಕ1 week ago

Chikkaballapura BMTC: ಬೆಂಗಳೂರಿಂದ ಚಿಕ್ಕಬಳ್ಳಾಪುರಕ್ಕೆ ಬಿಎಂಟಿಸಿ ವೋಲ್ವೋ ಬಸ್‌ ಸಂಚಾರ ಶುರು; ಟೈಮಿಂಗ್‌ ಏನು?

BMTC bus window shattered as police refused to allow auto drivers rally
ಕರ್ನಾಟಕ2 weeks ago

Auto Strike In Bengaluru: ಆಟೋ ಚಾಲಕರ ರ‍್ಯಾಲಿಗೆ ಅವಕಾಶ ನೀಡದ ಖಾಕಿ ಪಡೆ; ಬಿಎಂಟಿಸಿ ಬಸ್ ಗಾಜು ಒಡೆದು ಆಕ್ರೋಶ

Drivers oppose Rapido bike taxi in bengaluru Extra BMTC buses ply on road, auto stopped plying
ಕರ್ನಾಟಕ2 weeks ago

Auto Strike: ರ‍್ಯಾಪಿಡೋ ಬೈಕ್‌ ಟ್ಯಾಕ್ಸಿಗೆ ವಿರೋಧ; ಆಟೋ ಓಡಾಟಕ್ಕೆ ಬ್ರೇಕ್‌, ರೋಡಿಗಿಳಿದ ಹೆಚ್ಚುವರಿ ಬಿಎಂಟಿಸಿ ಬಸ್‌

someone cant tell the truth that Tipu used to charge high taxes on Hindus says Hariprakash konemane
ಕರ್ನಾಟಕ2 weeks ago

ಇತಿಹಾಸ ವಸ್ತುನಿಷ್ಠವಾಗಿರಬೇಕು, ನಿಸ್ವಾರ್ಥದಿಂದ ಬರೆಯುವವರನ್ನು ಗೌರವಿಸಬೇಕು: ಹರಿಪ್ರಕಾಶ್‌ ಕೋಣೆಮನೆ

ಟ್ರೆಂಡಿಂಗ್‌

error: Content is protected !!