Site icon Vistara News

TCS Hiring Scam: 16 ನೌಕರರನ್ನು ವಜಾಗೊಳಿಸಿದ ಟಿಸಿಎಸ್, ಏನಿದು ಭಾರಿ ಹಗರಣ?

TCS Company

IT company TCS fires 16 employees, bars 6 vendors In Hiring Scam

ಬೆಂಗಳೂರು: ಖಾಸಗಿ ಕಂಪನಿಗಳಲ್ಲಿ ಉದ್ಯೋಗ ಗಿಟ್ಟಿಸಿಕೊಳ್ಳಲು ರೆಫರೆನ್ಸ್‌ ಇರಬೇಕು, ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬೇಕು. ಇಲ್ಲವೇ ಯಾವುದಾದರೂ ಏಜೆನ್ಸಿ ಮೂಲಕ ಕಂಪನಿಗಳಲ್ಲಿ ಕೆಲಸ ಗಿಟ್ಟಿಸಿಕೊಳ್ಳಬೇಕು. ಸಾಮಾನ್ಯವಾಗಿ ಖಾಸಗಿ ಕಂಪನಿಗಳಲ್ಲಿ ಉದ್ಯೋಗಕ್ಕೆ ಸೇರಲು ಲಂಚ ನೀಡುವ ಕೆಟ್ಟ ಪದ್ಧತಿ ಇರುವುದಿಲ್ಲ. ಆದರೆ, ಪ್ರಮುಖ ಐಟಿ ಸಂಸ್ಥೆಯಾದ ಟಾಟಾ ಕನ್ಸಲ್ಟನ್ಸಿ ಸರ್ವಿಸಸ್‌ನಲ್ಲಿ (Tata Consultancy Services) ‘ಉದ್ಯೋಗಕ್ಕಾಗಿ ಲಂಚ’ ಹಗರಣ (TCS Hiring Scam) ನಡೆದಿದ್ದು, ಟಿಸಿಎಸ್‌ ಕಂಪನಿಯು 16 ಉದ್ಯೋಗಿಗಳನ್ನು ವಜಾಗೊಳಿಸಿದೆ.

ಟಿಸಿಎಸ್‌ ಕಂಪನಿ ಜತೆಗೆ ವ್ಯವಹಾರ ನಡೆಸಲು ಉದ್ಯೋಗ ಕೊಡಿಸುವ ಕಂಪನಿಗಳು (Staffing Companies) ಟಿಸಿಎಸ್‌ನ ಹಿರಿಯ ಅಧಿಕಾರಿಗಳಿಗೆ ಲಂಚ ನೀಡಿದ ಪ್ರಕರಣದ ಕುರಿತು ಕಂಪನಿಯು ವಿಸ್ತೃತ ತನಿಖೆ ನಡೆಸಿದ ಬಳಿಕ ಕ್ರಮ ತೆಗೆದುಕೊಂಡಿದೆ. “ವಿಸ್ತೃತವಾದ ತನಿಖೆಯ ಬಳಿಕ ಕಂಪನಿಯ 16 ಉದ್ಯೋಗಿಗಳನ್ನು ವಜಾಗೊಳಿಸಲಾಗಿದೆ. ಹಾಗೆಯೇ, ಮೂವರು ಉದ್ಯೋಗಿಗಳನ್ನು ಸಂಪನ್ಮೂಲ ನಿರ್ವಹಣೆಯ ಜವಾಬ್ದಾರಿಯಿಂದ ವಿಮುಕ್ತಿಗೊಳಿಸಲಾಗಿದೆ” ಎಂದು ಟಿಸಿಎಸ್‌ ಕಂಪನಿಯು ಪ್ರಕಟಣೆ ತಿಳಿಸಿದೆ.

6 ಕಂಪನಿಗಳ ಜತೆ ವ್ಯವಹಾರ ಕಟ್‌

ಉದ್ಯೋಗಿಗಳನ್ನು ಕೆಲಸದಿಂದ ವಜಾಗೊಳಿಸುವುದು ಮಾತ್ರವಲ್ಲ, ಟಿಸಿಎಸ್‌ನ ಹಿರಿಯ ಅಧಿಕಾರಿಗಳಿಗೆ ಲಂಚ ನೀಡಿದ ಆರು ಕಂಪನಿಗಳ ಜತೆ ವ್ಯವಹಾರವನ್ನೂ ನಿಲ್ಲಿಸಿರುವುದಾಗಿ ಕಂಪನಿ ತಿಳಿಸಿದೆ. ಟಿಸಿಎಸ್‌ ಕಂಪನಿಯಲ್ಲಿ ಉದ್ಯೋಗ ಕೊಡಿಸುವುದು, ಲಂಚ ನೀಡಿದ ಕಂಪನಿಗಳ ಜತೆ ಮಾತ್ರ ವ್ಯವಹಾರ ನಡೆಸುವುದು ಸೇರಿ ಅಧಿಕಾರಿಗಳು ಹಲವು ರೀತಿಯಲ್ಲಿ ಹಗರಣ ನಡೆಸಿದ್ದರು ಎಂಬುದಾಗಿ ತನಿಖೆಯಿಂದ ಬಹಿರಂಗವಾಗಿದೆ ಎಂದು ಕಂಪನಿಯ ಮೂಲಗಳು ತಿಳಿಸಿವೆ.

ಇದನ್ನೂ ಓದಿ: Google Layoffs: ಗೂಗಲ್‌ನಿಂದ ವಜಾಗೊಂಡ ನೌಕರರಿಗೆ ಸಿಗಲಿದೆ 2.6 ಕೋಟಿ ರೂ., ಇವರಿಗೆ ಬೇರೆ ನೌಕರಿಯೇ ಬೇಕಿಲ್ಲ

“ಉದ್ಯೋಗಿಗಳ ವಿರುದ್ಧ ಕೈಗೊಂಡ ವಿಸ್ತೃತ ತನಿಖೆಯು ಮುಗಿದಿದೆ. ಸಮಗ್ರ ತನಿಖೆಯ ಬಳಿಕ ಉದ್ಯೋಗಿಗಳು ಹಗರಣದಲ್ಲಿ ಭಾಗಿಯಾಗಿರುವುದು ಸಾಬೀತಾಗಿದೆ. ಕಂಪನಿಯ ನಿಯಮಗಳನ್ನು ಉಲ್ಲಂಘಿಸಿದ ಕಾರಣಕ್ಕಾಗಿ 16 ಉದ್ಯೋಗಿಗಳನ್ನು ವಜಾಗೊಳಿಸಲಾಗಿಗೆ. ಇಲ್ಲಿಗೆ ಪ್ರಕರಣ ಕ್ಲೋಸ್‌ ಆಗಿದೆ” ಎಂದು ಟಿಸಿಎಸ್‌ ಚೀಫ್‌ ಎಕ್ಸಿಕ್ಯೂಟಿವ್‌ ಕೆ. ಕೃತಿವಾಸನ್‌ ಮಾಹಿತಿ ನೀಡಿದ್ದಾರೆ.

Exit mobile version