Site icon Vistara News

IT Raids: ಬಗೆದಷ್ಟು ಅಕ್ರಮ ದುಡ್ಡು; ಹಣ ಎಣಿಸಲು ಮತ್ತಷ್ಟು ಯಂತ್ರಗಳ ರವಾನೆ!

rs 353 crore cash Seized from IT Raids and Congress MP

ನವದೆಹಲಿ: ಒಡಿಶಾ ಮತ್ತು ಜಾರ್ಖಂಡ್‌ನಲ್ಲಿ (Odisha and Jharkhand) ಕಾರ್ಯಾಚರಣೆ ನಡೆಸುವ ಬೌದ್ ಡಿಸ್ಟಿಲರೀಸ್ ಪ್ರೈವೇಟ್ ಕಂಪನಿಯ (Boudh Distilleries Private Limited) ಕಚೇರಿಗಳ ಮೇಲೆ ಆದಾಯ ತೆರಿಗೆ ಇಲಾಖೆಯು ದಾಳಿ ನಡೆಸಿದೆ(IT Raids). ಈ ವೇಳೆ ವಶಪಡಿಸಿಕೊಂಡ 300 ಕೋಟಿ ರೂ.ಗಿಂತ ಅಧಿಕ ಮೌಲ್ಯದ ಕರೆನ್ಸಿ ನೋಟುಗಳ ಎಣಿಕೆಯನ್ನು ವೇಗಗೊಳಿಸುವ ಸಲುವಾಗಿ ಹೆಚ್ಚುವರಿ ಯಂತ್ರಗಳು, ಸಿಬ್ಬಂದಿ ಮತ್ತು ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಇತ್ತೀಚಿನ ಮಾಹಿತಿಯ ಪ್ರಕಾರ, ಒಡಿಶಾದ ಬಾಲಂಗೀರ್‌ನಲ್ಲಿರುವ ಬೌದ್ ಡಿಸ್ಟಿಲರೀಸ್ ಪ್ರೈವೇಟ್ ಲಿಮಿಟೆಡ್‌ನ ಆವರಣದ ಹೊರಗೆ ಸಿಐಎಸ್ಎಫ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಕಾಂಗ್ರೆಸ್ ರಾಜ್ಯಸಭಾ ಸಂಸದ ಧೀರಜ್ ಕುಮಾರ್ ಸಾಹು ಅವರಿಗೆ ಸಂಬಂಧಿಸಿದ ಡಿಸ್ಟಿಲರಿ ಗ್ರೂಪ್‌ನ ವಿವಿಧ ಆವರಣಗಳಿಂದ 300 ಕೋಟಿ ರೂ.ಗಿಂತ ಹೆಚ್ಚು ನಗದು ಮೊತ್ತವನ್ನು ವಶಪಡಿಸಿಕೊಳ್ಳಲಾಗಿದೆ.

ಕಾಂಗ್ರೆಸ್ ನಾಯಕನ ಆಸ್ತಿಯಲ್ಲಿ ‘ಲೆಕ್ಕವಿಲ್ಲದ ಹಣ’ ಪತ್ತೆಯಾಗಿರುವುದು ರಾಜ್ಯದಲ್ಲಿ ರಾಜಕೀಯ ಚರ್ಚೆ ಹುಟ್ಟು ಹಾಕಿದೆ. ಬಿಜೆಪಿ ವಾಗ್ದಾಳಿ ನಡೆಸಿ ಉತ್ತರಿಸುವಂತೆ ಕಾಂಗ್ರೆಸ್‌ ಬಳಿ ಆಗ್ರಹಿಸಿದೆ. ಈ ಹಣವನ್ನು ರೆಸಾರ್ಟ್ ರಾಜಕೀಯಕ್ಕಾಗಿ ಕಾಂಗ್ರೆಸ್‌ ಸಂಗ್ರಹಿಸಿಟ್ಟಿತ್ತು ಎಂದು ಎಂದು ಜಾರ್ಖಂಡ್ ಬಿಜೆಪಿ ಘಟಕ ಶನಿವಾರ ಹೇಳಿದೆ. ಸಾರ್ವಜನಿಕರಿಂದ ಲೂಟಿ ಮಾಡಿದ ಪ್ರತಿ ಪೈಸೆಯನ್ನೂ ವಸೂಲಿ ಮಾಡಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಕೂಡ ಹೇಳಿದ್ದಾರೆ. ಕಾಂಗ್ರೆಸ್ ಸಂಸದ ಧೀರಜ್ ಸಾಹು ಅವರ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿ 300 ಕೋಟಿ ರೂ.ಗೂ ಹೆಚ್ಚು ನಗದು ವಶಪಡಿಸಿಕೊಂಡಿದ್ದಾರೆ ಎಂಬ ವರದಿಯನ್ನು ಸಾಮಾಜಿಕ ಜಾಲತಾಣ ಎಕ್ಸ್‌ ಮೂಲಕ ಹಂಚಿಕೊಂಡ ಮೋದಿ ಈ ಹೇಳಿಕೆ ನೀಡಿದ್ದಾರೆ.

40 ಯಂತ್ರ ಬಳಕೆ

ಕರೆನ್ಸಿ ನೋಟುಗಳನ್ನು ಎಣಿಸಲು ತೆರಿಗೆ ಇಲಾಖೆ ಸುಮಾರು 40 ದೊಡ್ಡ ಮತ್ತು ಸಣ್ಣ ಯಂತ್ರಗಳನ್ನು ನಿಯೋಜಿಸಿದೆ. ಮಾತ್ರವಲ್ಲ ಬೌಧ್ ಡಿಸ್ಟಿಲರಿ ಪ್ರೈವೇಟ್ ಲಿಮಿಟೆಡ್ ಮತ್ತು ಇತರರ ವಿರುದ್ಧ ದಾಳಿಯ ನಂತರ ಡಿಸೆಂಬರ್ 6ರಂದು ಪ್ರಾರಂಭವಾದ ನೋಟು ಎಣಿಕೆ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಹೆಚ್ಚಿನ ಬ್ಯಾಂಕ್ ಸಿಬ್ಬಂದಿಯನ್ನು ಕರೆತಂದಿದೆ ಎಂದು ಮೂಲಗಳು ತಿಳಿಸಿವೆ. ಐಟಿ ಅಧಿಕಾರಿಗಳು ಶುಕ್ರವಾರ 156 ನಗದು ತುಂಬಿದ ಚೀಲಗಳನ್ನು ವಶಪಡಿಸಿಕೊಂಡು ಅವುಗಳನ್ನು ಎಣಿಕೆಗಾಗಿ ಬೋಲಾಂಗೀರ್‌ನ ಎಸ್‌ಬಿಐ ಮುಖ್ಯ ಶಾಖೆಗೆ ಸಾಗಿಸಿದ್ದರು. ಸಂಬಲ್ಪುರ, ರೂರ್ಕೆಲಾ, ಬೋಲಾಂಗೀರ್, ಸುಂದರ್ಗಢ್ ಮತ್ತು ಭುವನೇಶ್ವರಗಳಲ್ಲಿಯೂ ದಾಳಿ ನಡೆಸಲಾಗಿದೆ.

ಇದನ್ನೂ ಓದಿ: Income Tax Raid : ಭ್ರಷ್ಟರೊಳಗಿನ ದಾಖಲೆ ಶೂರ; ಒಬ್ಬನಿಂದಲೇ 290 ಕೋಟಿ ನಗದು ವಶ!

ಯಾರಿದು ಧೀರಜ್ ಕುಮಾರ್ ಸಾಹು?

ಐಟಿ ಮೂಲಗಳ ಪ್ರಕಾರ, ಒಡಿಶಾದ ಪಶ್ಚಿಮ ಜಿಲ್ಲೆಗಳಲ್ಲಿ ಕಾರ್ಯಾಚರಣೆ ನಡೆಸುತ್ತಿರುವ ಬಾಲ್ದೇವ್ ಸಾಹು ಮತ್ತು ಗ್ರೂಪ್ ಆಫ್ ಕಂಪನಿ ಲಿಮಿಟೆಡ್ ಧೀರಜ್ ಸಾಹು ಅವರೊಂದಿಗೆ ಸಂಪರ್ಕ ಹೊಂದಿದೆ. ಶೋಧದ ಭಾಗವಾಗಿ ಸಾಹು ಅವರಿಗೆ ಸಂಬಂಧಿಸಿದ ಆಸ್ತಿಗಳನ್ನೂ ಪರಿಶೀಲಿಸಲಾಗುತ್ತಿದೆ. 1977ರಲ್ಲಿ ರಾಜಕೀಯ ಪ್ರವೇಶಿಸಿದ ಅವರು ಮೂರು ಬಾರಿ ರಾಜ್ಯಸಭೆಗೆ ಆಯ್ಕೆಯಾಗಿದ್ದಾರೆ.

Exit mobile version