ಹೊಸದಿಲ್ಲಿ: 2023-24ನೇ ಸಾಲಿನಲ್ಲಿ ಜುಲೈ 31ರವರೆಗೆ 6.77 ಕೋಟಿಯಷ್ಟು ಆದಾಯ ತೆರಿಗೆ ರಿಟರ್ನ್ಸ್ (ITR Filing) ಸಲ್ಲಿಸಲಾಗಿದೆ. ಇವರಲ್ಲಿ 53.67 ಲಕ್ಷ ಮಂದಿ ಮೊದಲ ಬಾರಿ ರಿಟರ್ನ್ ಸಲ್ಲಿಸಿದವರು.
ಸಂಬಳ ಪಡೆಯುವ ತೆರಿಗೆದಾರರು ಮತ್ತು ಇತರ ತೆರಿಗೆಯೇತರ ಆಡಿಟ್‌ಗಳಿಗೆ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸುವ ಕೊನೆಯ ದಿನಾಂಕ ಜುಲೈ 31 ಆಗಿತ್ತು. ಅಲ್ಲಿಯವರೆಗೆ ಈ ಬಾರಿ ದಾಖಲೆ ಸಂಖ್ಯೆಯ ITRಗಳನ್ನು ಸಲ್ಲಿಸಲಾಗಿದೆ. ಆದಾಯ ತೆರಿಗೆ ಇಲಾಖೆ ಮಂಗಳವಾರ ನೀಡಿದ ಪ್ರಕಟಣೆ ಪ್ರಕಾರ, 2023-24ರ ಮೌಲ್ಯಮಾಪನ ವರ್ಷದಲ್ಲಿ ದಾಖಲೆಯ 6.77 ಕೋಟಿ ಆದಾಯ ತೆರಿಗೆ ರಿಟರ್ನ್‌ಗಳನ್ನು ಸಲ್ಲಿಸಲಾಗಿದೆ. ಇದರಲ್ಲಿ 53.67 ಲಕ್ಷ ಮೊದಲ ಬಾರಿ ಸಲ್ಲಿಸುತ್ತಿರುವವರು.
2023 ಜುಲೈ 31ರವರೆಗೆ ಸಲ್ಲಿಸಿದ ಒಟ್ಟು ITRಗಳ ಸಂಖ್ಯೆ 6.77 ಕೋಟಿಗಿಂತ ಹೆಚ್ಚಿದೆ. ಇದು ಕಳೆದ ವರ್ಷ (2022-23) ಸಲ್ಲಿಸಿದ್ದಕ್ಕಿಂತ (5.83 ಕೋಟಿ) 16.1 ಶೇಕಡಾ ಹೆಚ್ಚು ಇದೆ ಎಂದು ಆದಾಯ ತೆರಿಗೆ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.
ಕೊನೆಯ ದಿನ ಭಾರಿ ಸಂಖ್ಯೆಯ ಮಂದಿ ಐಟಿಆರ್ ಸಲ್ಲಿಸಲು ಮುಂದಾದುದರಿಂದ ಭಾರಿ ಧಾವಂತ ಉಂಟಾಯಿತು. ಜುಲೈ 31ರಂದು ಒಂದೇ ದಿನದಲ್ಲಿ 64.33 ಲಕ್ಷ ಐಟಿಆರ್‌ಗಳನ್ನು ಸಲ್ಲಿಸಲಾಯಿತು. ಇದು ಐಟಿಆರ್ ಫೈಲಿಂಗ್‌ನ ಗರಿಷ್ಠ ಮಟ್ಟ. ಇದುವರೆಗೆ ಸಲ್ಲಿಸಿದವರಲ್ಲಿ 53.67 ಲಕ್ಷ ಐಟಿಆರ್‌ಗಳು ಮೊದಲ ಸಲ ಸಲ್ಲಿಸಿದವರದು.
6.77 ಕೋಟಿ ಐಟಿಆರ್‌ಗಳಲ್ಲಿ 5.63 ಕೋಟಿ ರಿಟರ್ನ್ಸ್‌ಗಳನ್ನು ಇ-ಪರಿಶೀಲಿಸಲಾಗಿದೆ. ಅದರಲ್ಲಿ 5.27 ಕೋಟಿಗೂ ಹೆಚ್ಚು ಆಧಾರ್ ಆಧಾರಿತ ಒಟಿಪಿ ಮೂಲಕ (ಶೇ. 94) ಎಂದು ಇಲಾಖೆ ತಿಳಿಸಿದೆ. ಇ-ಪರಿಶೀಲಿಸಿದ ಐಟಿಆರ್‌ಗಳಲ್ಲಿ 3.44 ಕೋಟಿಗೂ ಹೆಚ್ಚು ಐಟಿಆರ್‌ಗಳನ್ನು ಜುಲೈ 31ರೊಳಗೆ (ಶೇ. 61) ಅಂತಿಮ ಪ್ರಕ್ರಿಯೆಗೊಳಿಸಲಾಗಿದೆ.
ಇದನ್ನೂ ಓದಿ: ITR filing: ಐಟಿಆರ್ ಸಲ್ಲಿಸಲು ನಾಳೆ ಕೊನೆ ದಿನ! ಡೆಡ್‌ಲೈನ್ ಮುಗಿದ್ಮೇಲೂ ಫೈಲ್ ಮಾಡ್ಬಹುದಾ?