Site icon Vistara News

Jairam Ramesh: 150 ಡಿಸಿಗಳಿಗೆ ಅಮಿತ್‌ ಶಾ ಕರೆ; ಜೈರಾಮ್‌ ರಮೇಶ್‌ ಆರೋಪಕ್ಕೆ ಇಸಿ ಪ್ರತಿಕ್ರಿಯೆ- ಏನಿದು ವಿವಾದ?

Jairam Ramesh

ನವದೆಹಲಿ: ಲೋಕಸಭೆ ಚುನಾವಣೆ ಮುಗಿಯುತ್ತಿದ್ದಂತೆ(Lok Sabha Election 2024) ಎಲ್ಲರ ಚಿತ್ತ ಫಲಿತಾಂಶದ ಇದೆ. ಇದರ ನಡುವೆ ರಾಜಕೀಯ ನಾಯಕರ ವಿವಾದಾತ್ಮಕ ಹೇಳಿಕೆ, ಆರೋಪ-ಪ್ರತ್ಯಾರೋಪಗಳಂತೂ ನಿಲ್ಲುತ್ತಲೇ ಇಲ್ಲ. ಇದೀಗ ಚುನಾವಣಾ ಫಲಿತಾಂಶ(Election Result)ದ ಮೇಲೆ ಕೇಂದ್ರ ಗೃಹ ಸಚಿವ ಅಮಿತ್‌ ಶಾ(Amith Shah) ಚುನಾವಣಾ ಫಲಿತಾಂಶದ ಮೇಲೆ ಪ್ರಭಾವ ಬೀರುತ್ತಾರೆ ಎಂದು ಹೇಳಿಕೆ ನೀಡುವ ಮೂಲಕ ಕಾಂಗ್ರೆಸ್‌ ಮುಖಂಡ ಜೈರಾಮ್‌ ರಮೇಶ್‌(Jairam Ramesh) ಪಚೀತಿಗೆ ಬಿದ್ದಿದ್ದಾರೆ. ಈ ಬಗ್ಗೆ ದಾಖಲೆ ಒದಗಿಸುವಂತೆ ಚುನಾವಣಾ ಆಯೋಗ(EC) ಕೇಳಿದೆ.

ಜೈರಾಮ್‌ ರಮೇಶ್‌ ಆರೋಪ?

ಎಕ್ಸ್‌ನಲ್ಲಿ ಪೋಸ್ಟ್‌ವೊಂದನ್ನು ಮಾಡಿದ್ದ ಜೈರಾಮ್‌ ಶಂಕರ್‌, ಚುನಾವಣೆ ಫಲಿತಾಂಶಕ್ಕೂ ಮುನ್ನ ಅಮಿತ್‌ ಶಾ, ಜಿಲ್ಲಾ ಮ್ಯಾಜಿಸ್ಟ್ರೇಟ್‌ ಅಥವಾ ಜಿಲ್ಲಾಧಿಕಾರಿಗಳಿಗೆ ಕರೆ ಮಾಡಿದ್ದಾರೆ. ಇದುವರೆಗೆ ಅವರು 150 ಡಿಸಿಗಳ ಜೊತೆ ಮಾತನಾಡಿ, ಚುನಾವಣಾ ಫಲಿತಾಂಶದ ಮೇಲೆ ಪರಿಣಾಮ ಬೀರಲು ಯತ್ನಿಸಿದ್ದಾರೆ. ಇದರಿಂದ ಗೆಲುವಿನ ಬಗ್ಗೆ ಬಿಜೆಪಿ ಎಷ್ಟು ಹತಾಶೆಯಾಗಿದೆ ಎಂಬುದು ಬಯಲಾಗಿದೆ. ಅಧಿಕಾರಿಗಳ ಮೇಲೆ ಮೋದಿ ಮತ್ತು ಶಾ ಬಣ ಬಹಳ ಒತ್ತಡ ಹೇರುತ್ತಿದೆ. ಮತ ಎಣಿಕೆ ಪ್ರಕ್ರಿಯೆಯಲ್ಲಿ ಭಾರೀ ಮಧ್ಯಪ್ರವೇಶ ನಡೆಸುತ್ತಿದ್ದಾರೆ ಎಂದು ಅವರು ಆರೋಪಿಸಿದ್ದರು.

EC ಪ್ರತಿಕ್ರಿಯೆ ಏನು?

ಜೈರಾಮ್‌ ರಮೇಶ್‌ ಹೇಳಿಕೆ ಎಲ್ಲೆಡೆ ವೈರಲ್‌ ಆಗುತ್ತಿದ್ದಂತೆ ಈ ವಿಚಾರವನ್ನು ಚುನಾವಣಾ ಆಯೋಗ ಗಂಭೀರವಾಗಿ ಪರಿಗಣಿಸಿದೆ. ಅಲ್ಲದೇ ಈ ಬಗ್ಗೆ ದಾಖಲೆ ಸಮೇತ ಸಂಪೂರ್ಣ ಮಾಹಿತಿ ನೀಡುವಂತೆ ಸೂಚನೆ ನೀಡಿದೆ. ಇದುವರೆಗೆ ಯಾವುದೇ ಒಬ್ಬ ಜಿಲ್ಲಾಧಿಕಾರಿಯಾಗಲಿ ಅಥವಾ ಜಿಲ್ಲಾ ಮ್ಯಜಿಸ್ಟ್ರೇಟ್‌ ಆಗಲಿ ತಮ್ಮ ಮೇಲೆ ಒತ್ತಡ ಬರುತ್ತಿರುವ ಬಗ್ಗೆ ಯಾವುದೇ ಆರೋಪ ಮಾಡಿಲ್ಲ. ಮತ ಎಣಿಕೆ ಎಂಬುದು ಪ್ರಜಾಪ್ರಭುತ್ವ ವ್ಯವಸ್ಥೆಯ ಪವಿತ್ರ ಕಾರ್ಯ. ಜೈರಾಮ್‌ ರಮೇಶ್‌ರಂತಹ ಹಿರಿಯ ನಾಯಕರು ನೀಡುವಂ ಇಂತಹದ ಹೇಳಿಕೆಗಳಿಂದ ಮತ ಎಣಿಕೆ ಬಗ್ಗೆ ಜನರಲ್ಲಿ ಅನುಮಾನಗಳು ಮೂಡುತ್ತವೆ. ಹೀಗಾಗಿ ತಮ್ಮ ಆರೋಪಗಳಿಗೆ ಪುಷ್ಠಿ ನೀಡುವಂತಹ ದಾಖಲೆಗಳನ್ನು ತಕ್ಷಣ ಒದಗಿಸಿ ಎಂದು ಚುನಾವಣಾ ಆಯೋಗ ಆದೇಶಿಸಿದೆ.

ಇದನ್ನೋ ಓದಿ: CET Ranking : 3 ಸಾವಿರ ಅಭ್ಯರ್ಥಿಗಳಿಗೆ ಸಿಕ್ಕಿಲ್ಲ ಸಿಇಟಿ ರ‍್ಯಾಂಕ್‌! ಮುಂದೇನು ಮಾಡ್ಬೇಕು?

Exit mobile version