ಜಕಾರ್ತ: ಸಾಮಾನ್ಯವಾಗಿ ಸಚಿವರು, ಶಾಸಕರು ಸೇರಿ ಯಾವುದೇ ರಾಜಕಾರಣಿಗಳು ಫ್ಯಾನ್ಸಿ ಶರ್ಟ್‌ಗಳನ್ನು ಧರಿಸುವುದಿಲ್ಲ. ಅದರಲ್ಲೂ, ಕೇಂದ್ರ ಸಚಿವರಂತೂ ಇಂತಹ ಉಡುಪುಗಳನ್ನು ಧರಿಸುವುದೇ ಇಲ್ಲ. ಭಾರತದ ವಿದೇಶಾಂಗ ಸೇವೆ 30ಕ್ಕೂ ಅಧಿಕ ವರ್ಷಗಳ ಕಾಲ ಸೇವೆ ಸಲ್ಲಿಸಿರುವ, ಈಗ ವಿದೇಶಾಂಗ ವ್ಯವಹಾರಗಳ ಸಚಿವರಾಗಿರುವ ಎಸ್.ಜೈಶಂಕರ್ ಅವರನ್ನಂತೂ ಫ್ಯಾನ್ಸಿ ಶರ್ಟ್ ಬಿಡಿ, ಟಿ ಶರ್ಟ್‌ನಲ್ಲಿಯೂ ನೋಡಿರುವ ಸಾಧ್ಯತೆ ಕಡಿಮೆ. ಆದರೆ, ಎಸ್. ಜೈಶಂಕರ್ ಅವರು (S Jaishankar) ಈಗ ಫ್ಯಾನ್ಸಿ ಶರ್ಟ್ ತೊಟ್ಟು ಇಂಡೋನೇಷ್ಯಾದ ಜಕಾರ್ತದಲ್ಲಿ ಮಿಂಚಿದ್ದಾರೆ.
ಇಂಡೋನೇಷ್ಯಾದ ಜಕಾರ್ತದಲ್ಲಿ ಆಸಿಯಾನ್ ಪ್ರಾದೇಶೀಕ ಫೋರಂ ಸಭೆ ನಡೆದಿದೆ. ಕಾರ್ಯಕ್ರಮದಲ್ಲಿ ಎಸ್. ಜೈಶಂಕರ್ ಅವರು ಕೂಡ ಭಾಗಿಯಾಗಿದ್ದಾರೆ. ಸಭೆಯ ಮಧ್ಯೆಯೇ ಅವರು ಅಮೆರಿಕ ವಿದೇಶಾಂಗ ವ್ಯವಹಾರಗಳ ಖಾತೆ ಸಚಿವ ಆ್ಯಂಟೋನಿ ಬ್ಲಿಂಕನ್ ಅವರನ್ನು ಭೇಟಿಯಾಗಿದ್ದಾರೆ. ಆದರೆ, ಇಬ್ಬರೂ ಫ್ಯಾನ್ಸಿ ಶರ್ಟ್‌ಗಳನ್ನು ಧರಿಸಿ, ಗಹನವಾಗಿ ಚರ್ಚಿಸುತ್ತಿರುವ ಫೋಟೊ ವೈರಲ್ ಆಗಿದೆ.
ಹೀಗಿದೆ ಜೈಶಂಕರ್ ಫ್ಯಾನ್ಸಿ ಲುಕ್
Pleasure to meet @SecBlinken.
— Dr. S. Jaishankar (@DrSJaishankar) July 14, 2023
Followed up on PM @narendramodi’s recent visit to the US. Also exchanged views on Ukraine, Myanmar and Indo-Pacific. pic.twitter.com/rFVUJ6aO6h
ಇದನ್ನೂ ಓದಿ: Indira Gandhi: ಇಂದಿರಾ ಗಾಂಧಿ ಹತ್ಯೆಗೆ ಕೆನಡಾದಲ್ಲಿ ಖಲಿಸ್ತಾನಿಗಳ ಸಂಭ್ರಮ; ಖಡಕ್ ಎಚ್ಚರಿಕೆ ಕೊಟ್ಟ ಜೈಶಂಕರ್
ಎಸ್.ಜೈಶಂಕರ್ ಅವರು ಹೆಚ್ಚಾಗಿ ಸೂಟು-ಬೂಟು ಧರಿಸಿರುತ್ತಾರೆ. ಭಾರತದಲ್ಲಿದ್ದರೆ ಸಾಮಾನ್ಯವಾಗಿ ಅವರು ಫಾರ್ಮಲ್ಸ್ ಧರಿಸುತ್ತಾರೆ. ಆದರೆ, ಇದೇ ಮೊದಲ ಬಾರಿಗೆ ಅವರು ಫ್ಯಾನ್ಸಿ ಅಂಗಿ ತೊಟ್ಟು ಜಾಗತಿಕ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ಅವರು ಟ್ವಿಟರ್‌ನಲ್ಲಿ ಈ ಫೋಟೊ ಅಪ್‌ಲೋಡ್ ಮಾಡುತ್ತಲೇ ಜನ ಅವರ ಮಾತುಕತೆಗಿಂತ, ಶರ್ಟ್ ಬಗ್ಗೆಯೇ ಹೆಚ್ಚು ಗಮನ ಹರಿಸಿದ್ದಾರೆ.
“ನಿಮ್ಮ ಶರ್ಟ್ ತುಂಬ ಚೆನ್ನಾಗಿದೆ ಸರ್. ಇದರ ಡಿಸೈನರ್ ಯಾರು ಎಂಬುದನ್ನು ತಿಳಿಸಿದರೆ ನಮಗೂ ಅಂತಹ ಶರ್ಟ್ ಕೊಳ್ಳಲು ಅನುಕೂಲವಾಗುತ್ತದೆ” ಎಂದು ವ್ಯಕ್ತಿಯೊಬ್ಬರು ಪ್ರತಿಕ್ರಿಯಿಸಿದ್ದಾರೆ. “ಫ್ಯಾನ್ಸಿ ಶರ್ಟ್‌ನಲ್ಲಿ ಇಬ್ಬರೂ ಚೆನ್ನಾಗಿ ಕಾಣಿಸುತ್ತಿದ್ದೀರಿ” ಎಂದು ಮತ್ತೊಬ್ಬರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಹೀಗೆ, ನೂರಾರು ಜನ ಇಬ್ಬರ ಶರ್ಟ್ ಬಗ್ಗೆಯೇ ಕಮೆಂಟ್ ಮಾಡಿದ್ದಾರೆ.
ಆಸಿಯಾನ್ ಸಭೆಯಲ್ಲಿ ಎಸ್.ಜೈಶಂಕರ್ ಅವರು ಇದೇ ಶರ್ಟ್‌ನಲ್ಲಿ ಪಾಲ್ಗೊಂಡಿದ್ದಾರೆ. ಬ್ಲಿಂಕೆನ್ ಜತೆಗೆ ಹಲವು ದೇಶಗಳ ವಿದೇಶಾಂಗ ಸಚಿವರೊಂದಿಗೂ ಜೈಶಂಕರ್ ಮಾತುಕತೆ ನಡೆಸಿದ್ದಾರೆ. ಜಾಗತಿಕ ಸವಾಲುಗಳಿಗೆ ದೆಹಲಿಯ ಪ್ರತಿಕ್ರಿಯೆ ಕುರಿತು ಅವರು ವಿವಿಧ ದೇಶಗಳಿಗೆ ಮನವರಿಕೆ ಮಾಡಿದ್ದಾರೆ ಎಂದು ತಿಳಿದುಬಂದಿದೆ.