ಚೆನ್ನೈ : ತಮಿಳುನಾಡಿನ ಮಾಜಿ ಸಿಎಂ ದಿ. ಜಯಲಲಿತಾ ಅವರ ಅಕ್ರಮ ಆಸ್ತಿ ಜಪ್ತಿ ಮಾಡಿ 26 ವರ್ಷಗಳಾಗಿದ್ದರೂ. ಅವರಿಗೆ ಸೇರಿರುವ ದುಬಾರಿ ಬೆಲೆಯ ವಸ್ತುಗಳು ಅಲ್ಲಿನ ವಿಧಾನಸೌಧದ ಖಜಾನೆಯಲ್ಲಿ ಕೊಳೆಯುತ್ತಿವೆ. ಅಕ್ರಮ ಹಣಗಳಿಕೆ ಪ್ರಕರಣದಲ್ಲಿ ಸಿಬಿಐ ದಾಳಿ ನಡೆಸಿದ್ದ ವೇಳೆ ಅವರು ಹೊಂದಿದ್ದ ಐಷಾರಾಮಿ ವಸ್ತುಗಳನ್ನು ವಶಕ್ಕೆ ಪಡೆದು ಅದನ್ನು ರಾಷ್ಟ್ರೀಯ ಸಂಪತ್ತು ಎಂದು ಘೋಷಿಸಿ ಖಜಾನೆಯಲ್ಲಿ ಇಡಲಾಗಿತ್ತು. ಈ ವಸ್ತುಗಳನ್ನು ಹರಾಜು ಹಾಕುವಂತೆ ಸಾಮಾಜಿಕ ಕಾರ್ಯಕರ್ತ ನರಸಿಂಹಮೂರ್ತಿಯವರು ಸುಪ್ರೀಂ ಕೋರ್ಟ್‌ಗೆ ಪತ್ರ ಬರೆದಿದ್ದಾರೆ.
1996ರಲ್ಲಿ ಜಯಲಲಿತಾ ಅವರು ಅಕ್ರಮ ಆಸ್ತಿಗಳಿಸಿದ್ದಾರೆಂಬ ಆರೋಪದಲ್ಲಿ ಸಿಬಿಐ ದಾಳಿ ನಡೆಸಿದ್ದರು. 1997ರಲ್ಲಿ ಪ್ರಕರಣದ ಚಾರ್ಜ್‌ಶೀಟ್ ಕೂಡ ಸಲ್ಲಿಕೆಯಾಗಿತ್ತು. ಇದರ ವಿಚಾರಣೆ ನಡೆದು ಶಿಕ್ಷೆ ಪ್ರಕಟವಾಗುವ ಮುನ್ನವೇ ಜಯಲಲಿತಾ ಅವರು 2016 ರಲ್ಲಿ ಮೃತಪಟ್ಟಿದ್ದರು. ಒಟ್ಟಾರೆ ದಾಳಿ ನಡೆದು ಬರೋಬ್ಬರಿ 26 ವರ್ಷಗಳೇ ಸಂದಿವೆ. ಆದಾಗ್ಯೂ ಅವರ ವಸ್ತುಗಳು ಈಗಲೂ ವಿಧಾನಸೌಧದ ಖಜಾನೆಯಲ್ಲಿ ಧೂಳು ಹಿಡಿಯುತ್ತಿವೆ.
ಇದನ್ನೂ ಓದಿ | Mekedatu | ಕೇಂದ್ರ ಸರಕಾರಕ್ಕೆ ತಮಿಳುನಾಡು ಸೂಚನೆ ನೀಡುವಂತಿಲ್ಲ: ಸಿಎಂ ಬೊಮ್ಮಾಯಿ ತಿರುಗೇಟು
ಖಜಾನೆಯಲ್ಲಿ 11, 334 ಸೀರೆಗಳು ,750 ಜೊತೆ ಚಪ್ಪಲಿ , 250 ಶಾಲ್‌ಗಳು, 27 ಗೋಡೆ ಗಡಿಯಾರಗಳು, 86 ಫ್ಯಾನ್‌ಗಳು, 33 ಟೆಲಿಫೋನ್ ಸೇರಿದಂತೆ ಹಲವು ವಸ್ತುಗಳು ಖಜಾನೆಯಲ್ಲಿವೆ. ಹೀಗಾಗಿ ಈ ವಸ್ತುಗಳನ್ನು ಸರ್ಕಾರ ಹರಾಜು ಹಾಕಿದರೆ ಅವರ ಅಭಿಮಾನಿಗಳು ಖರೀದಿಸಬಹುದು. ಇದರಿಂದ ಸರ್ಕಾರಕ್ಕೂ ಕೂಡ ಲಾಭ. ಹೀಗಾಗಿ ಈ ವಸ್ತುಗಳನ್ನು ಹರಾಜು ಹಾಕಲು ನರಸಿಂಹಮೂರ್ತಿಯವರು ಸುಪ್ರೀಂ ಕೋರ್ಟ್‌ಗೆ ಪತ್ರ ಬರೆದಿದ್ದಾರೆ.
ಇದನ್ನೂ ಓದಿ | ACB raid | ಬಿಡಿಎ ಗಾರ್ಡನರ್ ಕೂಡ ಕೋಟಿ ಕೋಟಿ ಕುಳ: 48 ಸಾವಿರ ಸಂಬಳ ಪಡೆಯುವವನ ಆಸ್ತಿ ಎಷ್ಟು ನೋಡಿ!