Site icon Vistara News

JDS Politics: ಶಾ ಬಾನೊ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ಆದೇಶವನ್ನು ವಿರೋಧಿಸಿದ್ದ ಕಾಂಗ್ರೆಸಿಗ ಜೆಡಿಎಸ್‌ ಸೇರ್ಪಡೆ

Obaidullah Khan Azmi Joins JDS

#image_title

ಬೆಂಗಳೂರು: ಎಪ್ಪತ್ತರ ದಶಕದಲ್ಲಿ ದೇಶಾದ್ಯಂತ ಸುದ್ದಿ ಮಾಡಿದ್ದ ಶಾ ಬಾನೊ ಪ್ರಕರಣದಲ್ಲಿ ಸುಪ್ರೀಂಕೋರ್ಟ್‌ ಆದೇಶದ ವಿರುದ್ಧ ಭಾಷಣಗಳನ್ನು ಮಾಡಿ ಪ್ರಸಿದ್ಧವಾಗಿದ್ದ ಮಾಜಿ ಕಾಂಗ್ರೆಸಿಗ, ಮಾಜಿ ರಾಜ್ಯಸಭಾ ಸದಸ್ಯ ಒಬೈದುಲ್ಲಾ ಖಾನ್‌ ಅಜ್ಮಿ (Obaidullah Khan Azmi) ಜೆಡಿಎಸ್‌ ಸೇರ್ಪಡೆಯಾಗಿದ್ದಾರೆ.

ಜೆಡಿಎಸ್‌ ರಾಷ್ಟ್ರೀಯ ಅಧ್ಯಕ್ಷ ಎಚ್‌.ಡಿ. ದೇವೇಗೌಡರ ಸಮ್ಮುಖದಲ್ಲಿ ಪದ್ಮನಾಭನಗರದ ಮನೆಯಲ್ಲಿ ಅಜ್ಮಿ ಜೆಡಿಎಸ್‌ ಸೇರ್ಪಡೆಯಾದರು. ಉತ್ತರ ಪ್ರದೇಶದವರಾದ ಅಜ್ಮಿ, ಕಾಂಗ್ರೆಸ್‌ ಹಾಗೂ ಜನತಾದಳದಿಂದ ಒಟ್ಟು ಮೂರು ಬಾರಿ ರಾಝ್ಯಸಭೆ ಸದಸ್ಯರಾಗಿದ್ದರು. ತೊಂಭತ್ತರ ದಶಕದಲ್ಲಿ ಜನತಾ ದಳದ ಹಿರಿಯ ಉಪಾಧ್ಯಕ್ಷರಾಗಿದ್ದರು.

ಶಾ ಬಾನೊ ಪ್ರಕರಣದಲ್ಲಿ, ವಿಚ್ಚೇದನ ನೀಡಿದ ಪತಿಯು ಜೀವನಾಂಶ ನೀಡಬೇಕು ಎಂದು ಸುಪ್ರೀಂಕೋರ್ಟ್‌ ಆದೇಶಿಸಿತ್ತು. ಸುಪ್ರೀಂಕೋರ್ಟ್‌ ತೀರ್ಪಿನ ವಿರುದ್ಧ ಅಜ್ಮಿ ಮಾಡಿದ ಭಾಷಣ ಬಹಳ ಪ್ರಸಿದ್ಧವಾಗಿದ್ದವು. ಅವರ ಭಾಷಣಗಳ ಕ್ಯಾಸೆಟ್‌ ಗಳು ಅತಿ ಹೆಚ್ಚು ಹಂಚಿಕೆ ಹಾಗೂ ಮಾರಾಟವಾಗಿದ್ದವು. ಮುಂಬೈನಲ್ಲೂ ಇವರ ಭಾಷಣ ಬಹಳ ವಿವಾದಕ್ಕೀಡಾಗಿದ್ದವು. ಅಜ್ಮಿ ವಿರುದ್ಧ ಮುಂಬೈ ಪೊಲೀಸ್‌ ಪ್ರಕರಣ ದಾಖಲಿಸಿ, ಮುಂಬೈಯಿಂದ ಹೊರತಳ್ಳಿತ್ತು.

ಎಚ್‌.ಡಿ. ದೇವೇಗೌಡರ ಸಮ್ಮುಖದಲ್ಲಿ ಪಕ್ಷ ಸೇರ್ಪಡೆ ನಂತರ ಮಾತನಾಡಿದ ಅಜ್ಮಿ, ನನ್ನ ಬಗ್ಗೆ ನಮ್ಮ ಸರ್ವೋಚ್ಚ ನಾಯಕ ದೇವೆಗೌಡ, ಸಿಎಂ ಇಬ್ರಾಹಿಂ ಅನೇಕ ವಿಚಾರ ಹೇಳಿದ್ದಾರೆ. ಜನತಾದಳದ ಮೂಲ ಉದ್ದೇಶ ಸಾಮಾಜಿಕ ನ್ಯಾಯ. ಜನತಾದಳ ಸರ್ಕಾರ ಕೇಂದ್ರದಲ್ಲಿ ಇದ್ದಾಗ ದೇಶದಲ್ಲಿ ಸಾಮಾಜಿಕ ನ್ಯಾಯ ಉಳಿಸಿದೆ.

ಹಿಂದೂ, ಮುಸ್ಲಿಂ ಎಲ್ಲರ ಒಗ್ಗೂಡಿಸಿ ದೇಶ ಒಂದೆ ಎಂಬ ಸಂದೇಶ ನೀಡಿದ್ದು ಜನತಾದಳ. ಜನತಾದಳ ಒಡೆದು ಅನೇಕ ಪಕ್ಷಗಳಾಯಿತು. ಆದ್ರೆ ದೇವೆಗೌಡರ ಮಾತ್ರ ಜನತಾದಳದ ನಿಜವಾದ ವಾರಸುದಾರರಾಗಿ ಉಳಿದುಕೊಂಡರು. ಜನತಾ ದಳ ಎಂದಿಗೂ ಕೂಡ ಭ್ರಷ್ಟರಾಗಲು ದೇವೆಗೌಡರ ಬಿಡಲಿಲ್ಲ.

ಸಿಎಂ ಇಬ್ರಾಹಿಂ ನನ್ನನ್ನು ಪಕ್ಷಕ್ಕೆ ಸೇರಿಕೊಳ್ಳಲು ಆಹ್ವಾನ ನೀಡಿದ್ರು. ನಾನು ದೇವೆಗೌಡರ ಜೊತೆಯಲ್ಲೇ ಇದ್ದೇನೆ ಇನ್ನೇನು ಹೇಳಲಿ ಎಂದು ಹೇಳಿದೆ. ಅಲ್ಪಸಂಖ್ಯಾತರಿಗೆ ಇಂದು ಏನೆ ಉಪಯೋಗ ಆಗಿದ್ರು, ಅಭಿವೃದ್ಧಿ ಆಗಿದ್ರು ಅದು ಜನತಾದಳ ಮತ್ತು ದೇವೆಗೌಡರಿಂದ ಮಾತ್ರ. ಭಾರತ ಜಾತ್ಯಾತೀತ ರಾಷ್ಟ್ರ. ಹಿಂದೂ ಮುಸ್ಲಿಂ ಎಲ್ಲರೂ ಸೇರಿ ದೇಶವನ್ನು ಒಂದೇ ಎಂದು ಹೇಳೋದು ಉದ್ದೇಶ. ಬಿಜೆಪಿ ಹಿಂದುತ್ವ, ಕಾಂಗ್ರೆಸ್ ಮೃದು ಹಿಂದುತ್ವದ ಹೆಸರಲ್ಲಿ ದೇಶವನ್ನು ಒಡೆಯುತ್ತಿದೆ. ಜನತಾದಳ ಒಗ್ಗೂಡಿಸುವ ಕೆಲಸ ಮಾಡಲಿದೆ ಎಂದರು.

ಇದನ್ನೂ ಓದಿ: B.S. Yediyurappa: ದೇವೇಗೌಡರಿಂದ ಕಲಿಯುವುದು ಸಾಕಷ್ಟಿದೆ; ಕಾಗೇರಿ ಮತ್ತೆ ಮಂತ್ರಿಯಾಗಬೇಕಿದೆ: ಬಿ.ಎಸ್‌. ಯಡಿಯೂರಪ್ಪ ವಿದಾಯ ಭಾಷಣ

ಜೆಡಿಎಸ್ ಅಧ್ಯಕ್ಷ ಸಿ.ಎಂ. ಇಬ್ರಾಹಿಂ ಮಾತನಾಡಿ, ಇಂದು ದೇವೇಗೌಡರ ಸಮ್ಮುಖದಲ್ಲಿ ಒಬೈದುಲ್ಲಾ ಅವರು ಸೇರ್ಪಡೆಯಾಗಿದ್ದಾರೆ. ಮುಸ್ಲಿಂ ಸಮುದಾಯದಲ್ಲಿ ತಮ್ಮದೇ ಆದ ಹೆಸರು ಮಾಡಿರುವವರು. ಸರ್ವ ಧರ್ಮ ಸಮನ್ವಯ ಮಾಡುವಲ್ಲಿ ಇವರು ಎತ್ತಿದ ಕೈ. ವಿಪಿ ಸಿಂಗ್, ಜಯಪ್ರಕಾಶ್ ನಾರಾಯಣ್ ಒಡನಾಡಿಯಾಗಿದ್ದವರು ಎಂದರು.

ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ ಮಾತನಾಡಿ, ಒಬೈದುಲ್ಲಾ ಅವರು ನನ್ನ ಹಳೆಯ ಸ್ನೇಹಿತರು. ಅವರು‌ ನಾವು ಒಟ್ಟಿಗೆ ಕೆಲಸ ಮಾಡಿದ್ದೇವೆ. ಸೀನಿಯರ್ ವೈಸ್ ಪ್ರೆಸಿಡೆಂಟ್ ಆಗಿ ಆಯ್ಕೆ ಮಾಡಿದ್ದೇವೆ ಎಂದು ತಿಳಿಸಿದರು.

Exit mobile version