B.S. Yediyurappa: ದೇವೇಗೌಡರಿಂದ ಕಲಿಯುವುದು ಸಾಕಷ್ಟಿದೆ; ಕಾಗೇರಿ ಮತ್ತೆ ಮಂತ್ರಿಯಾಗಬೇಕಿದೆ: ಬಿ.ಎಸ್‌. ಯಡಿಯೂರಪ್ಪ ವಿದಾಯ ಭಾಷಣ - Vistara News

ಪ್ರಮುಖ ಸುದ್ದಿ

B.S. Yediyurappa: ದೇವೇಗೌಡರಿಂದ ಕಲಿಯುವುದು ಸಾಕಷ್ಟಿದೆ; ಕಾಗೇರಿ ಮತ್ತೆ ಮಂತ್ರಿಯಾಗಬೇಕಿದೆ: ಬಿ.ಎಸ್‌. ಯಡಿಯೂರಪ್ಪ ವಿದಾಯ ಭಾಷಣ

ಮಾಜಿ ಪ್ರಧಾನಿ ಎಚ್‌.ಡಿ. ದೇವೇಘೌಡರು ಈ ವಯಸ್ಸಿನಲ್ಲಿಯೂ ರಾಜ್ಯ, ರಾಷ್ಟ್ರದ ಬಗ್ಗೆ ಯೋಚನೆ ಮಾಡುವುದನ್ನು ಎಲ್ಲರೂ ಕಲಿಯಬೇಕು ಎಂದು ಬಿ.ಎಸ್‌. ಯಡಿಯೂರಪ್ಪ ( B.S. Yediyurappa) ತಿಳಿಸಿದರು.

VISTARANEWS.COM


on

b-s-yediyurappa-says politicians have lot to learn from HD devegowda
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ವಿಧಾನಸಭೆ: ಮಾಜಿ ಸಿಎಂ ಹಾಗೂ ಬಿಜೆಪಿ ರಾಷ್ಟ್ರೀಯ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್‌. ಯಡಿಯೂರಪ್ಪ (B.S. Yediyurappa) ಅವರು 15ನೇ ವಿಧಾನಸಭೆಯ ಕಡೆಯ ದಿನವೂ ಆದ ಶುಕ್ರವಾರ ತಮ್ಮ ವಿದಾಯದ ಭಾಷಣವನ್ನು ಮಾಡಿದರು. ಮುಂದಿನ ಚುನಾವಣೆಯಲ್ಲಿ ಸ್ಪರ್ಧೆ ಮಾಡುವುದಿಲ್ಲ ಎಂದು ಈಗಾಗಲೆ ಘೊಷಣೆ ಮಾಡಿರುವ ಯಡಿಯೂರಪ್ಪ ತಮ್ಮ ಭಾಷಣದಲ್ಲಿ ಅನೇಕರನ್ನು ಸ್ಮರಿಸಿದರು,

ಸದನದ ಅತ್ಯಂತ ಹಿರಿಯ ಶಾಸಕರಾದವರು, 8 ಬಾರಿ ಗೆದ್ದು ಸದನದ ಎಲ್ಲ ಚಟುವಟಿಕೆಗಳಲ್ಲಿ ಸಕ್ರಿಯವಾಗಿರುವವರು ಬಿ.ಎಸ್‌. ಯಡಿಯೂರಪ್ಪ ಅವರು ನಮಗೆಲ್ಲ ಮಾರ್ಗದರ್ಶಕರು. ಅವರು ಮಾತನಾಡುತ್ತಾರೆ ಎಂದು ಸ್ಪೀಕರ್‌ ಕಾಗೇರಿ ತಿಳಿಸಿದರು.

ನಂತರ ಎದ್ದುನಿಂತ ಯಡಿಯೂರಪ್ಪ, ಮೊದಲಿಗೆ ಕಾಗೇರಿಯವರಿಂದಲೇ ಭಾಷಣ ಆರಂಭಿಸಿದರು. ಕಾಗೇರಿಯವರು ಸದನವನ್ನು ಅತ್ಯಂತ ಅಚ್ಚುಕಟ್ಟಾಗಿ ನಡೆಸಿದ್ದಾರೆ. ಮುಂದಿನ ಅಧಿವೇಶನದಲ್ಲಿ ವಿಶ್ವೇಶ್ವರ ಹೆಗಡೆ ಕಾಗೇರಿಯವರು ಸಚಿವರಾಗಿ ಸರ್ಕಾರಕ್ಕೆ ಮಾರ್ಗದರ್ಶನ ಮಾಡಲಿ ಎಂದರು. ಮಾತಿನ ಕೊನೆಯಲ್ಲೂ, ಸ್ಪೀಕರ್‌ ಕಾಗೇರಿ ಮತ್ತೊಮ್ಮೆ ಗೆದ್ದು ಬಂದು ಸಚಿವರಾಗಿ ಕೆಲಸ ಮಾಡಬೇಕು ಎಂದು ಆಶಿಸುತ್ತೇನೆ ಎಂದರು.

ಇದನ್ನೂ ಓದಿ: Assembly Session: ಇದು ಕೊನೆಯ ಸದನ; ಯಾರೂ ಮಿಸ್‌ ಮಾಡದೇ ಬನ್ನಿ: ಶಾಸಕರಿಗೆ ಮನವಿ ಮಾಡಿದ ಸ್ಪೀಕರ್‌ ಕಾಗೇರಿ

ಈ ಸದನಕ್ಕೆ ಹೆಚ್ಚಿನ ಮಹಿಳೆಯರು ಆಯ್ಕೆ ಆಗಿಬರಬೇಕು. ಇದಕ್ಕೆ ಪುರುಷ ಸದಸ್ಯರು ಅವಕಾಶ ಮಾಡಿಕೊಡಬೇಕು ಎಂದ ಯಡಿಯೂರಪ್ಪ, ರಾಜಕಾರಣಿಗಳಿಗೆ ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡರು ಆದರ್ಶ ಎಂದರು. ನಮಗೆಲ್ಲ ಆದರ್ಶ ಎಚ್‌.ಡಿ. ದೇವೇಗೌಡರು. ಈ ವಯಸ್ಸಿನಲ್ಲೂ ರಾಷ್ಟ್ರ, ರಾಜ್ಯದ ವಿಚಾರಗಳ ಕುರಿತು ಚಿಂತನೆ ಮಾಡುತ್ತಾರೆ ಎಂದರೆ ಅವರಿಂದ ಕಲಿಯುವುದು ಬಹಳಷ್ಟಿದೆ ಎಂದರು.

ಸಿದ್ದರಾಮಯ್ಯನವರು ಅನೇಕ ವಿಚಾರಗಳನ್ನು ಅಧ್ಯಯನ ನಡೆಸಿ ಮಾರ್ಗದರ್ಶನ ಮಾಡಿದ್ದಾರೆ, ಎ.ಟಿ. ರಾಮಸ್ವಾಮಿ ಸಹ ಮಾರ್ಗದರ್ಶನ ಮಾಡಿದ್ದಾರೆ. ಮುಂದೆ ನೀವೆಲ್ಲರೂ ಆಯ್ಕೆಯಾಗಿ ಬಂದು ಇನ್ನೂ ಹೆಚ್ಚು ಕೆಲಸ ಮಾಡಲು ಆಶಿಸುತ್ತೇನೆ ಎಂದು ಹೇಳಿದರು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ರಾಜಕೀಯ

Narendra Modi: ಕಾಂಗ್ರೆಸ್‌ ರಾಜ್ಯದಲ್ಲಿ ಹನುಮಾನ್‌ ಚಾಲೀಸಾ ಹೇಳುವುದೂ ಮಹಾಪರಾಧ; ರಾಜಸ್ಥಾನದಲ್ಲಿ ಮೋದಿಯಿಂದ ಸಿದ್ದರಾಮಯ್ಯ ಸರ್ಕಾರಕ್ಕೆ ತರಾಟೆ

ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ (Lok Sabha Election 2024) ದೇಶದ ಸಂಪತ್ತನ್ನು ಮುಸಲ್ಮಾನರಿಗೆ ಮೊದಲ ಆದ್ಯತೆಯಾಗಿ ಹಂಚುತ್ತದೆ ಎಂಬ ಆರೋಪವನ್ನು ಮತ್ತೊಮ್ಮೆ ಪ್ರಸ್ತಾಪ ಮಾಡಿದ ಮೋದಿ (Narendra Modi), ನಾನು ಸತ್ಯ ಹೇಳಿದರೆ ಕಾಂಗ್ರೆಸ್‌ಗೆ ಮೆಣಸಿನ ಉರಿ ಬಿದ್ದಂತಾಗುತ್ತದೆ. ಈ ದೇಶದ ಸಂಪತ್ತಿನಲ್ಲಿ ಮುಸಲ್ಮಾನರಿಗೆ ಮೊದಲ ಪಾಲು ಸಿಗಬೇಕು ಎಂದು ಮನಮೋಹನ್‌ ಸಿಂಗ್‌ ತಾವು ಪ್ರಧಾನಿಯಾಗಿದ್ದ ಹೇಳಿದ್ದನ್ನು ನೀವು ಮರೆಯಬೇಡಿ ಎಂದಿದ್ದಾರೆ.

VISTARANEWS.COM


on

Narendra Modi and Siddaramaiah
Koo

ಕಾಂಗ್ರೆಸ್‌ ಆಡಳಿತ ಇರುವ ರಾಜ್ಯಗಳಲ್ಲಿ ಹನುಮಾನ್‌ ಚಾಲೀಸಾ ಹೇಳುವುದೂ ಮಹಾ ಅಪರಾಧ. ಶೋಭಾ ಯಾತ್ರೆ ನಡೆಸಲೂ ಅಲ್ಲಿ ಅವಕಾಶ ಇಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ರಾಜಸ್ಥಾನದಲ್ಲಿ ತಮ್ಮ ಚುನಾವಣಾ ಪ್ರಚಾರದ (Lok Sabha Election 2024) ವೇಳೆ ಕರ್ನಾಟಕದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.
ಕಾಂಗ್ರೆಸ್‌ ಎಂದೂ ಅಭಿವೃದ್ಧಿ ರಾಜಕಾರಣವನ್ನು ಮಾಡಿಯೇ ಇಲ್ಲ. ಅದು ಮಾಡುತ್ತಿರುವುದು ವೋಟ್‌ ಬ್ಯಾಂಕ್‌ ಪಾಲಿಟಿಕ್ಸ್‌, ಒಂದು ಸಮುದಾಯದ ಓಲೈಕೆ ರಾಜಕಾರಣ ಎಂದೂ ಮೋದಿ ಟೀಕಿಸಿದರು.
ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ದೇಶದ ಸಂಪತ್ತನ್ನು ಮುಸಲ್ಮಾನರಿಗೆ ಮೊದಲ ಆದ್ಯತೆಯಾಗಿ ಹಂಚುತ್ತದೆ ಎಂಬ ಆರೋಪವನ್ನು ಮತ್ತೊಮ್ಮೆ ಪ್ರಸ್ತಾಪ ಮಾಡಿದ ಮೋದಿ, ನಾನು ಸತ್ಯ ಹೇಳಿದರೆ ಕಾಂಗ್ರೆಸ್‌ಗೆ ಮೆಣಸಿನ ಉರಿ ಬಿದ್ದಂತಾಗುತ್ತದೆ. ಈ ದೇಶದ ಸಂಪತ್ತಿನಲ್ಲಿ ಮುಸಲ್ಮಾನರಿಗೆ ಮೊದಲ ಪಾಲು ಸಿಗಬೇಕು ಎಂದು ಮನಮೋಹನ್‌ ಸಿಂಗ್‌ ತಾವು ಪ್ರಧಾನಿಯಾಗಿದ್ದ ಹೇಳಿದ್ದನ್ನು ನೀವು ಮರೆಯಬೇಡಿ. ನಿಮ್ಮ ಕೊರಳಿನ ಮಂಗಳಸೂತ್ರವನ್ನೂ ಅವರು ಬಿಡುವುದಿಲ್ಲ ಎಂದು ಎಚ್ಚರಿಸಿದರು.

Modi in Karnataka Congress snatches Rs 4000 under Kisan Samman says PM Narendra Modi

ದಲಿತರ ಮೀಸಲು ಮುಸಲ್ಮಾನರಿಗೆ

ದಲಿತರು ಮತ್ತು ಆದಿವಾಸಿಗಳ ಮೀಸಲ ಪಾಲನ್ನು ಕಿತ್ತು ಕಾಂಗ್ರೆಸ್‌ ಮುಸಲ್ಮಾನರಿಗೆ ನೀಡಲು ಸದಾ ಪ್ರಯತ್ನಿಸುತ್ತಿರುತ್ತದೆ. ಕರ್ನಾಟಕದ ಕಾಂಗ್ರೆಸ್‌ ಸರ್ಕಾರ ಪರಿಶಿಷ್ಟರ ಮೀಸಲಿನ ಪಾಲನ್ನು ಕಿತ್ತು ಮುಸಲ್ಮಾನರಿಗೆ ನೀಡಿತ್ತು. ಮುಂದೆ ಅಲ್ಲಿ ಬಿಜೆಪಿ ಸರ್ಕಾರ ಬಂದಾಗ ಅದನ್ನು ರದ್ದುಪಡಿಸಿ ಎಸ್‌ಸಿ, ಎಸ್‌ಟಿಯವರಿಗೆ ನ್ಯಾಯ ದೊರಕಿಸಲಾಯಿತು. ಆಂಧ್ರ ಪ್ರದೇಶದ ಕಾಂಗ್ರೆಸ್‌ ಸರ್ಕಾರ ಕೂಡ ಎಸ್‌ಸಿ, ಎಸ್‌ಟಿ ಮೀಸಲು ಕಡಿಮೆ ಮಾಡಿ ಮುಸಲ್ಮಾನರ ಮೀಸಲು ಹೆಚ್ಚಿಸಲು ನಾಲ್ಕು ಬಾರಿ ವಿಧೇಯಕ ಮಂಡಿಸಿ ಕಾಯಿದೆ ರೂಪಿಸಿತ್ತು. ಆದರೆ ಕೋರ್ಟ್‌ ಮಧ್ಯಪ್ರವೇಶದ ಕಾರಣ ಅದು ಸಾಧ್ಯವಾಗಲಿಲ್ಲ. 2012ರಲ್ಲಿ ಕೇಂದ್ರದ ಕಾಂಗ್ರೆಸ್‌ ನೇತೃತ್ವದ ಸರ್ಕಾರ ಹೀಗೆಯೇ ಮಾಡಲು ಹೊರಟಿತ್ತು. ಎಸ್‌ಸಿ-ಎಸ್‌ಟಿ ಮತ್ತು ಆಸಿವಾಸಿಗಳಿಗೆ ನಾನು ಯಾವ ಕಾರಣಕ್ಕೂ ಮೀಸಲಿನಲ್ಲಿ ನಷ್ಟ ಮಾಡಲು ಬಿಡುವುದಿಲ್ಲ. ಇದು ಮೋದಿ ಗ್ಯಾರಂಟಿ ಎಂದು ಮೋದಿ ಘೋಷಿಸಿದರು.

ನುಸುಳುಕೋರರಿಗೆ ಸೌಲಭ್ಯ ಕೊಡಬೇಕೆ?

ನುಸುಳುಕೋರರಿಗೆ, ದೇಶದ್ರೋಹಿಗಳಿಗೆ ಕಾಂಗ್ರೆಸ್‌ ಈ ದೇಶದ ಸಂಪತ್ತು ಹಂಚಲು ಬಯಸುತ್ತದೆ ಎಂದು ತೀವ್ರ ವಾಗ್ದಾಳಿ ನಡೆಸಿದ ಮೋದಿ, ನೆರೆಯ ದೇಶದಿಂದ ಪದೇಪದೆ ದಾಳಿಗೆ ಒಳಗಾಗುವ ನಮ್ಮ ವೀರ ಸೈನಿಕರಿಗೆ ಯಾವುದೇ ನೆರವು ನೀಡುತ್ತಿರಲಿಲ್ಲ. ಆದರೆ ನಾವು ನಮ್ಮ ಯೋಧರಿಗೆ ಎಲ್ಲ ರೀತಿಯ ನೆರವು ನೀಡುತ್ತಿದ್ದೇವೆ. ಅವರ ಆತ್ಮಸ್ಥೈರ್ಯ ಹೆಚ್ಚಿಸುತ್ತಿದ್ದೇವೆ ಎಂದರು.
ಕಾಂಗ್ರೆಸ್‌ ಪ್ರಣಾಳಿಕೆಯನ್ನು ನೀವು ಎಚ್ಚರಿಕೆಯಿಂದ ಓದಿ. ಅವರು ಅಧಿಕಾರಕ್ಕೆ ಬಂದರೆ ನಿಮ್ಮ ಸಂಪತ್ತಿನ ಸರ್ವೆ ನಡೆಸುತ್ತಾರಂತೆ. ಆ ಬಳಿಕ ಅದನ್ನು ಅಗತ್ಯ ಇದ್ದವರಿಗೆ ಹಂಚುತ್ತಾರಂತೆ. ಆ ಅಗತ್ಯ ಇದ್ದವರು ಯಾರು ಎಂಬುದು ನಿಮಗೆ ಗೊತ್ತಿರಲಿ ಎಂದು ಮೋದಿ ಹೇಳಿದರು.

ಉತ್ತರ ಪ್ರದೇಶದಲ್ಲೂ ಮೋದಿ ಗುಡುಗಿದ್ದರು

ಚುನಾವಣಾ ಪ್ರಣಾಳಿಕೆಯಲ್ಲಿ ಕಾಂಗ್ರೆಸ್ ನೀಡಿದ್ದ ಸಂಪತ್ತು ಮರುಹಂಚಿಕೆಯ ವಿಚಾರದ ಬಗ್ಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಸೋಮವಾರ ಉತ್ತರ ಪ್ರದೇಶದ ಅಲಗಢದಲ್ಲೂ ಗುಡುಗಿದ್ದರು.
ಕಾಂಗ್ರೆಸ್‌ನವರಿಗೆ ಮಹಿಳೆಯರ ಮಂಗಳಸೂತ್ರದ ಮೇಲೂ ಕಣ್ಣು ಬಿದ್ದಿದೆ. ಮಾತೆಯರು, ಭಗಿನಿಯರ ಚಿನ್ನವನ್ನು ದೋಚುವ ದುರುದ್ದೇಶ ಇವರದ್ದು ಎಂದು ವಾಗ್ದಾಳಿ ನಡೆಸಿದ್ದರು.
“ಕಾಂಗ್ರೆಸ್ ಮತ್ತು ಅದರ ಮಿತ್ರಪಕ್ಷಗಳು ನಿಮ್ಮ ಆದಾಯ ಮತ್ತು ಆಸ್ತಿಯ ಮೇಲೆ ಕಣ್ಣಿಟ್ಟಿವೆ. ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಇದನ್ನು ಉಲ್ಲೇಖಿಸಿದೆ. ಮಹಿಳೆಯರು ಚಿನ್ನವನ್ನು ಆಭರಣಗಳ ರೂಪದಲ್ಲಿ ಧರಿಸಲು ಮಾತ್ರವಲ್ಲ, ಅದನ್ನು ರಸಕ್ಷಿಸಲು ಕಾನೂನಿನಲ್ಲಿ ಅವಕಾಶವಿದೆ. ಆದರೆ ಈಗ ಅವರ ಕಣ್ಣು ಮಹಿಳೆಯರ ಮಂಗಳಸೂತ್ರದ ಮೇಲೆ ನೆಟ್ಟಿದೆ. ತಾಯಿ ಮತ್ತು ಸಹೋದರಿಯರ ಚಿನ್ನವನ್ನು ದೋಚುವುದು ಇವರ ಉದ್ದೇಶ. ಹೀಗಾಗಿ ಅವರು ಅಧಿಕಾರಕ್ಕೆ ಬಂದರೆ ನಿಮ್ಮ ಮಂಗಳಸೂತ್ರವೂ ಸುರಕ್ಷಿತವಲ್ಲʼʼ ಎಂದು ಮೋದಿ ಹೇಳಿದ್ದರು.
ʼʼಒಂದು ವೇಳೆ ನೀವು ಹಳ್ಳಿಯಲ್ಲಿ ಪಿತ್ರಾರ್ಜಿತ ಮನೆಯನ್ನು ಹೊಂದಿದ್ದು, ನಗರದಲ್ಲಿ ಮಕ್ಕಳಿಗಾಗಿ ಚಿಕ್ಕ ಫ್ಲ್ಯಾಟ್‌ ಖರೀದಿಸಿದ್ದೀರಿ ಎಂದಿಟ್ಟುಕೊಳ್ಳೋಣ. ಆಗ ಅವರು ಎರಡರ ಪೈಕಿ ಒಂದನ್ನು ತಮ್ಮ ವಶಕ್ಕೆ ಪಡೆದುಕೊಳ್ಳಲಿದ್ದಾರೆ. ಇದು ಮಾವೋವಾದಿ ಮತ್ತು ಕಮ್ಯೂನಿಷ್ಟ್‌ ಮನೋಭಾವದ ಯೋಚನಾ ಲಹರಿ. ಹೀಗೆ ಮಾಡಿಯೇ ಅವರು ಹಲವು ದೇಶಗಳನ್ನು ನಾಶಪಡಿಸಿದ್ದಾರೆ. ಈಗ ಕಾಂಗ್ರೆಸ್‌ ಮತ್ತು ಪ್ರತಿಪಕ್ಷಗಳ ʼಒಂಡಿಯಾʼ ಒಕ್ಕೂಟ ಆ ನಿಯಮವನ್ನು ಭಾರತದಲ್ಲಿ ಜಾರಿಗೊಳಿಸಲು ಮುಂದಾಗಿದೆʼʼ ಎಂದು ಪ್ರಧಾನಮಂತ್ರಿ ದೂರಿದ್ದರು.
ದೇಶದ ಸಂಪತ್ತಿನಲ್ಲಿ ಮುಸ್ಲಿಮರಿಗೆ ಮೊದಲ ಹಕ್ಕು ಇದೆ ಎಂದು ಕಾಂಗ್ರೆಸ್ ಈ ಹಿಂದೆ ಹೇಳಿತ್ತು. ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ದೇಶದ ಆಸ್ತಿಯನ್ನು ವಿತರಿಸುವುದಾಗಿ ತಿಳಿಸಿತ್ತು. “”ಕಾಂಗ್ರೆಸ್ ಅಧಿಕಾರ ಬಂದರೆ, ಈ ದೇಶದಲ್ಲಿ ಯಾರು ಎಷ್ಟು ಆಸ್ತಿ ಹೊಂದಿದ್ದಾರೆ ಎಂದು ಸಮೀಕ್ಷೆ ಕೈಗೊಳ್ಳಲಾಗುವುದು. ಬಳಿಕ ಈ ಆಸ್ತಿಯನ್ನು ಮರು ಹಂಚಿಕೆ ಮಾಡಲು ಕ್ರಮ ಕೈಗೊಳ್ಳಲಾಗುವುದುʼʼ ಎಂದು ರಾಹುಲ್ ಗಾಂಧಿ ಹೇಳಿದ್ದರು. ಈ ಬಗ್ಗೆ ಮೋದಿ ತಮ್ಮ ಚುನಾವಣಾ ಭಾಷಣದಲ್ಲಿ ಪ್ರಸ್ತಾಪಿಸಿ ಕಾಂಗ್ರೆಸನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ.

ಇದನ್ನೂ ಓದಿ: Lok Sabha Election 2024: ವಿಧಾನ ಪರಿಷತ್‌ ಸ್ಥಾನಕ್ಕೆ ಕೆ.ಪಿ. ನಂಜುಂಡಿ ರಾಜೀನಾಮೆ; ಕಾಂಗ್ರೆಸ್‌ ಸೇರ್ಪಡೆ?

Continue Reading

ಕ್ರೀಡೆ

Gukesh D: ಡಿ.ಗುಕೇಶ್‌ ಸಾಧನೆಗಾಗಿ ವೈದ್ಯ ವೃತ್ತಿಯನ್ನೇ ತೊರೆದಿದ್ದ ತಂದೆ

Gukesh D: 12ನೇ ವರ್ಷದಲ್ಲೇ ಗ್ರ್ಯಾಂಡ್‌ಮಾಸ್ಟರ್‌ ಆಗಿ ಹೊರಹೊಮ್ಮಿದ್ದ ಗುಕೇಶ್‌, ಕ್ಯಾಂಡಿಡೇಟ್ಸ್‌ ಟೂರ್ನಿ ಗೆದ್ದ ವಿಶ್ವದ ಅತಿ ಕಿರಿಯ ಚೆಸ್‌ ಪಟು ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಈ ಪ್ರಶಸ್ತಿ ಗೆದ್ದ 2ನೇ ಭಾರತೀಯ ಎಂಬ ಕೀರ್ತಿಯೂ ಅವರದ್ದಾಗಿದೆ. ವಿಶ್ವನಾಥನ್‌ ಆನಂದ್‌ ಮೊದಲಿಗ. ಅವರು 2014ರಲ್ಲಿ ಕ್ಯಾಂಡಿಡೇಟ್ಸ್‌ ಪ್ರಶಸ್ತಿ ಗೆದ್ದಿದ್ದರು.

VISTARANEWS.COM


on

Gukesh D
Koo

ಬೆಂಗಳೂರು: ಭಾನುವಾರ ನಡೆದಿದ್ದ ಫಿಡೆ ಕ್ಯಾಂಡಿಡೇಟ್ಸ್‌ ಚೆಸ್‌ನಲ್ಲಿ ಅಮೋಘ ಪ್ರದರ್ಶನ ತೋರುವ ಮೂಲಕ ಚಾಂಪಿಯನ್​ ಪಟ್ಟ ಅಲಂಕರಿಸಿದ ಭಾರತದ ಚೆಸ್‌ ಗ್ರ್ಯಾಂಡ್‌ಮಾಸ್ಟರ್ ಡಿ.ಗುಕೇಶ್‌(Gukesh D) ಅವರ ಸಾಧನೆಯ ಹಿಂದೆ ಅವರ ತಂದೆಯ ಅಪಾರ ಶ್ರಮವಿದೆ. ಮಗನ ಚೆಸ್​ ಸಾಧನೆಗೆ ಯಾವುದೇ ಅಡೆತಡೆ ಉಂಟಾಗಬಾರದೆಂದು ತಂದೆ ತಂದೆ ಡಾ.ರಜನೀಕಾಂತ್‌(Rajinikanth) ಅವರು ತಮ್ಮ ವೈದ್ಯ ವೃತ್ತಿಯನ್ನೇ ತಾತ್ಕಾಲಿಕವಾಗಿ ತೊರೆದಿದ್ದರು.

ಹೌದು, ಬಾಲ್ಯದಲ್ಲೇ ಚೆಸ್‌ ಮೇಲೆ ಒಲವು ಹೊಂದಿದ್ದ ಗುಕೇಶ್‌ಗೆ ಕೋಚಿಂಗ್‌, ಟೂರ್ನಿಯ ಸಿದ್ಧತೆ, ಪ್ರಯಾಣಕ್ಕಾಗಿ ಪೋಷಕರು ಆರ್ಥಿಕ ಸಮಸ್ಯೆ ಎದುರಿಸಿದ್ದರು. ಆದರೆ, ಮಗನ ಸಾಧನೆಗೆ ಹಣಕಾಸಿನ ಕೊರತೆ ಅಡ್ಡಿಯಾಗಬಾರದೆಂದು ತಂದೆ ಡಾ.ರಜನೀಕಾಂತ್‌, ತಾಯಿ ಪದ್ಮಾ ದೃಢನಿರ್ಧಾರ ಕೈಗೊಂಡಿದ್ದರು. ಹಣ ಹೊಂದಿಸಲು ಕ್ರೌಂಡ್‌ ಪಂಡಿಂಗ್ ಕೂಡಾ ನಡೆಸಿದ್ದರು. ಇದು ಮಾತ್ರವಲ್ಲದೆ ಗುಕೇಶ್‌ ಜತೆ ಟೂರ್ನಿಗಳಲ್ಲಿ ಪಾಲ್ಗೊಳ್ಳಲು ವಿದೇಶಕ್ಕೆ ಹೋಗುವ ಕಾರಣಕ್ಕಾಗಿ ಅವರ ತಂದೆ 2017-18ರಲ್ಲಿ ತಮ್ಮ ವೈದ್ಯ ವೃತ್ತಿಯನ್ನೇ ತಾತ್ಕಾಲಿಕವಾಗಿ ತೊರೆದಿದ್ದರು.

ಇದನ್ನೂ ಓದಿ D Gukesh: 17ನೇ ವಯಸ್ಸಿಗೇ ‘ಚೆಸ್‌ ಕ್ಯಾಂಡಿಡೇಟ್ಸ್‌’ ಗೆದ್ದು ಇತಿಹಾಸ ಸೃಷ್ಟಿಸಿದ ಭಾರತದ ಗುಕೇಶ್!

ಪೋಷಕರ ತ್ಯಾಗ ಮತ್ತು ಶ್ರಮಕ್ಕೆ ಇಂದು ಗುಕೇಶ್‌ ಚೆಸ್​ನಲ್ಲಿ ಮಿಂಚುವ ಮೂಲಕ ಅವರಿಗೂ ಕೀರ್ತಿ ತಂದಿದ್ದಾನೆ. 12ನೇ ವರ್ಷದಲ್ಲೇ ಗ್ರ್ಯಾಂಡ್‌ಮಾಸ್ಟರ್‌ ಆಗಿ ಹೊರಹೊಮ್ಮಿದ್ದ ಗುಕೇಶ್‌, ಕ್ಯಾಂಡಿಡೇಟ್ಸ್‌ ಟೂರ್ನಿ ಗೆದ್ದ ವಿಶ್ವದ ಅತಿ ಕಿರಿಯ ಚೆಸ್‌ ಪಟು ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಈ ಪ್ರಶಸ್ತಿ ಗೆದ್ದ 2ನೇ ಭಾರತೀಯ ಎಂಬ ಕೀರ್ತಿಯೂ ಅವರದ್ದಾಗಿದೆ. ವಿಶ್ವನಾಥನ್‌ ಆನಂದ್‌ ಮೊದಲಿಗ. ಅವರು 2014ರಲ್ಲಿ ಕ್ಯಾಂಡಿಡೇಟ್ಸ್‌ ಪ್ರಶಸ್ತಿ ಗೆದ್ದಿದ್ದರು.

ಡಿ.ಗುಕೇಶ್‌ ವಿಶ್ವ ಚಾಂಪಿಯನ್‌ ಎನಿಸಿಕೊಳ್ಳಲು ಇನ್ನೊಂದೇ ಹೆಜ್ಜೆ ಬಾಕಿ ಇದೆ. ಈ ಸ್ಪರ್ಧೆಯಲ್ಲಿ ಚೀನಾದ ಡಿಂಗ್‌ ಲಿರೆನ್‌ ವಿರುದ್ಧ ಅದೃಷ್ಟ ಪರೀಕ್ಷೆಗೆ ಇಳಿಯಲಿದ್ದಾರೆ. ವರ್ಷಾಂತ್ಯದಲ್ಲಿ ಪಂದ್ಯ ನಡೆಯಲಿದ್ದು, ವೇಳಾಪಟ್ಟಿ ಇನ್ನಷ್ಟೇ ಪ್ರಕಟಗೊಳ್ಳಬೇಕಿದೆ. ಭಾರತದಿಂದ ಈ ವರೆಗೂ ವಿಶ್ವನಾಥನ್‌ ಆನಂದ್ ಮಾತ್ರ ವಿಶ್ವ ಚಾಂಪಿಯನ್‌ ಆಗಿದ್ದಾರೆ. ಅವರು 5 ಬಾರಿ ಪ್ರಶಸ್ತಿ ಗೆದ್ದಿದ್ದಾರೆ.

ಭಾನುವಾರ ತಡರಾತ್ರಿ ಕೆನಡಾದ ಟೊರೊಂಟೊದಲ್ಲಿ ನಡೆದ ಮುಕ್ತ ವಿಭಾಗದ 14 ಹಾಗೂ ಕೊನೆ ಸುತ್ತಿನ ಹಣಾಹಣಿಯಲ್ಲಿ ಗುಕೇಶ್‌ ಅವರು ಅಮೆರಿಕದ ಹಿಕರು ನಕಮುರಾ ವಿರುದ್ಧ ಡ್ರಾ ಸಾಧಿಸಿದರು. ಇದರೊಂದಿಗೆ ಗುಕೇಶ್‌ ಅಂಕ ಗಳಿಕೆಯನ್ನು 9ಕ್ಕೆ ಹೆಚ್ಚಿಸಿ ಅಗ್ರಸ್ಥಾನ ಕಾಯ್ದುಕೊಂಡರು. ರಷ್ಯಾದ ಇಯಾನ್‌ ನೆಪೊಮ್ನಿಯಾಚಿ ಹಾಗೂ ಫ್ಯಾಬಿಯಾನೊ ಕರುನಾ ನಡುವಿನ ಪಂದ್ಯ ಡ್ರಾಗೊಳ್ಳುವುದರೊಂದಿಗೆ ಗುಕೇಶ್‌ ಚಾಂಪಿಯನ್‌ ಎನಿಸಿಕೊಂಡರು.

ಇದೇ ವೇಳೆ ಗುಕೇಶ್‌ 40 ವರ್ಷಗಳ ದಾಖಲೆಯನ್ನು ಅಳಿಸಿ ಹಾಕಿ, ನೂತನ ದಾಖಲೆಯನ್ನು ತಮ್ಮ ಹೆಸರಿಗೆ ಬರೆದುಕೊಂಡರು. ಗುಕೇಶ್‌ ಕ್ಯಾಂಡಿಡೇಟ್ಸ್‌ ಟೂರ್ನಿ ಗೆದ್ದ ವಿಶ್ವದ ಅತಿ ಕಿರಿಯ ಚೆಸ್‌ ಪಟು ಎಂಬ ಹೆಗ್ಗಳಿಕೆಗೆ ಪಾತ್ರರಾದರು. ರಷ್ಯಾದ ದಿಗ್ಗಜ ಚೆಸ್‌ ಪಟು ಗ್ಯಾರಿ ಕಾಸ್ಪರೋವ್‌ 1984ರಲ್ಲಿ ತಮ್ಮ 22ನೇ ವರ್ಷದಲ್ಲಿ ಕ್ಯಾಂಡಿಡೇಟ್ಸ್‌ ಟೂರ್ನಿ ಗೆದ್ದಿದ್ದರು. ಇದು ಈವರೆಗಿನ ಟೂರ್ನಿಯ ಇತಿಹಾಸವಾಗಿತ್ತು. ಆದರೆ ಗುಕೇಶ್‌ 17ನೇ ವಯಸ್ಸಿಗೆ ಚಾಂಪಿಯನ್​ ಆಗುವ ಮೂಲಕ ಕಾಸ್ಪರೋವ್‌ ದಾಖಲೆ ಮುರಿದರು.

Continue Reading

ಪ್ರಮುಖ ಸುದ್ದಿ

Patanjali Case: ಜಾಹೀರಾತು ಗಾತ್ರದಲ್ಲೇ ಕ್ಷಮಾಪಣೆ ಕೇಳಿ: ಬಾಬಾ ರಾಮ್‌ದೇವ್‌ ಬೆವರಿಳಿಸಿದ ಸುಪ್ರೀಂ ಕೋರ್ಟ್‌

Patanjali Case: ನ್ಯಾಯಾಲಯವು ಈ ಹಿಂದೆ ರಾಮ್‌ದೇವ್ ಮತ್ತು ಬಾಲಕೃಷ್ಣ ಸಲ್ಲಿಸಿದ್ದ ಕ್ಷಮೆ ಅರ್ಜಿಯನ್ನು ತಿರಸ್ಕರಿಸಿತ್ತು. “ಅದು ಹೃದಯಪೂರ್ವಕವಾಗಿಲ್ಲ” ಮತ್ತು “ತುಟಿಯ ಮೇಲಿನ ಮಾತು” ಎಂದು ಪೀಠ ಹೇಳಿತ್ತು. ಏಪ್ರಿಲ್ 16ರಂದು ನಡೆದ ವಿಚಾರಣೆಯಲ್ಲಿ, ಇಬ್ಬರೂ ಇಂದು ನೇರವಾಗಿ ಹಾಜರಾಗಲು ಮತ್ತು ಕ್ಷಮೆಯಾಚಿಸಲು ಆದೇಶಿಸಿತ್ತು.

VISTARANEWS.COM


on

baba ramdev supreme court
Koo

ಹೊಸದಿಲ್ಲಿ: ತಪ್ಪುದಾರಿಗೆಳೆಯುವ ಜಾಹೀರಾತು (Advertisements) ಪ್ರಕರಣದಲ್ಲಿ ಪತಂಜಲಿ ಆಯುರ್ವೇದ (Patanjali Ayurved) ಸಂಸ್ಥೆ ಹಾಗೂ ಅದರ ಸಂಸ್ಥಾಪಕರಾದ ಬಾಬಾ ರಾಮ್‌ದೇವ್‌ (Baba Ramdev) ಅವರನ್ನು ಕಳೆದೊಂದು ತಿಂಗಳಿನಿಂದ ಹಿಗ್ಗಾಮುಗ್ಗಾ ತರಾಟೆಗೆ (Patanjali Case) ತೆಗೆದುಕೊಳ್ಳುತ್ತಿರುವ ಸುಪ್ರೀಂ ಕೋರ್ಟ್ (Supreme court), ಇಂದು ಮತ್ತೆ ಆ ಕೆಲಸವನ್ನು ಮುಂದುವರಿಸಿದೆ. ಪತಂಜಲಿ ಪತ್ರಿಕೆಗಳಲ್ಲಿ ಪ್ರಕಟಿಸಿರುವ ಕ್ಷಮಾಯಾಚನೆಯ (Apology) ಗಾತ್ರವು “ಅದರ ಉತ್ಪನ್ನಗಳ ಪೂರ್ಣ ಪುಟದ ಜಾಹೀರಾತುಗಳ ಗಾತ್ರದಲ್ಲೇ ಇದೆಯೇ?” ಎಂದು ಪ್ರಶ್ನಿಸಿದೆ. ಸರಿಪಡಿಸಿ ದೊಡ್ಡ ಗಾತ್ರದಲ್ಲಿ ಮರಳಿ ಪ್ರಕಟಿಸುವಂತೆ ತಾಕೀತು ಮಾಡಿದೆ.

ಪತಂಜಲಿ ಸಂಸ್ಥಾಪಕರಾದ ರಾಮ್‌ದೇವ್ ಮತ್ತು ಬಾಲಕೃಷ್ಣ ಪರ ವಾದ ಮಂಡಿಸಿದ ಹಿರಿಯ ವಕೀಲ ಮುಕುಲ್ ರೋಹಟಗಿ ಅವರು, ನ್ಯಾಯಾಲಯದ ಮುಂದೆ ಹೊಸದಾಗಿ ಅವರಿಬ್ಬರ ಕ್ಷಮಾಪಣೆಯನ್ನು ಮಂಡಿಸಿದ್ದಾರೆ. “ನಿನ್ನೆಯಷ್ಟೇ ಏಕೆ ಕ್ಷಮೆಯಾಚಿಸಲಾಯಿತು? ಮತ್ತು ಅದನ್ನು ಯಾಕೆ ಮೊದಲೇ ಮಾಡಲಿಲ್ಲ?” ಎಂದು ಪೀಠ ಕೇಳಿದೆ. ಕ್ಷಮಾಪಣೆಯನ್ನು ₹10 ಲಕ್ಷ ವೆಚ್ಚದಲ್ಲಿ 67 ಪತ್ರಿಕೆಗಳಲ್ಲಿ ಪ್ರಕಟಿಸಲಾಗಿದೆ ಎಂದು ರೋಹಟಗಿ ಹೇಳಿದರು. “ಕ್ಷಮೆಯಾಚನೆಯನ್ನು ದೊಡ್ಡದಾಗಿ ಪ್ರಕಟಿಸಲಾಗಿದೆಯೇ? ನಿಮ್ಮ ಹಿಂದಿನ ಜಾಹೀರಾತುಗಳಂತೆಯೇ ಅದೇ ಫಾಂಟ್ ಮತ್ತು ಗಾತ್ರದಲ್ಲಿ ಇದೆಯೇ?” ಎಂದು ನ್ಯಾಯಮೂರ್ತಿ ಹಿಮಾ ಕೊಹ್ಲಿ ಪ್ರಶ್ನಿಸಿದ್ದಾರೆ. “ಕಂಪನಿಯು ಇದಕ್ಕಾಗಿ ಲಕ್ಷಗಳಲ್ಲಿ ಖರ್ಚು ಮಾಡಿದೆ” ಎಂದು ರೋಹಟಗಿ ಹೇಳಿದಾಗ, ನ್ಯಾಯಾಲಯವು “ಅದಕ್ಕೂ ನಮಗೂ ಸಂಬಂಧವಿಲ್ಲ” ಎಂದು ಉತ್ತರಿಸಿತು.

ಪತಂಜಲಿ ವಿರುದ್ಧದ ಪ್ರಕರಣ ಹೂಡಿರುವ ಭಾರತೀಯ ವೈದ್ಯಕೀಯ ಸಂಘ (ಐಎಂಎ) ವಿರುದ್ಧ ₹1000 ಕೋಟಿ ದಂಡ ಹಾಕಲು ಕೋರಿದ ಅರ್ಜಿಯೊಂದನ್ನು ಸ್ವೀಕರಿಸಲಾಗಿದೆ ಎಂದು ನ್ಯಾಯಾಲಯ ಗಮನಿಸಿದ್ದು, “ಇದು ನಕಲಿ ಅರ್ಜಿಯೇ? ನಮಗೆ ಅನುಮಾನವಿದೆ” ಎಂದಿದೆ. “ತಮ್ಮ ಕಕ್ಷಿದಾರರಿಗೂ ಇದಕ್ಕೂ ಯಾವುದೇ ಸಂಬಂಧವಿಲ್ಲ” ಎಂದು ರೋಹಟಗಿ ಅವರು ಒತ್ತಿ ಹೇಳಿದರು.

ಪತ್ರಿಕೆಗಳಲ್ಲಿ ದೊಡ್ಡ ಕ್ಷಮಾಪಣೆಯನ್ನು ಪ್ರಕಟಿಸುವುದಾಗಿ ಬಾಬಾ ರಾಮ್‌ದೇವ್ ಹೇಳಿದ ನಂತರ ಸುಪ್ರೀಂ ಕೋರ್ಟ್ ಪ್ರಕರಣವನ್ನು ಒಂದು ವಾರಕ್ಕೆ ಮುಂದೂಡಿದೆ. ತಪ್ಪುದಾರಿಗೆಳೆಯುವ ಜಾಹೀರಾತು ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ವಿಚಾರಣೆಗೆ ಗಂಟೆಗಳ ಮೊದಲು, ಪತಂಜಲಿ ಆಯುರ್ವೇದ್ ರಾಷ್ಟ್ರೀಯ ದಿನಪತ್ರಿಕೆಗಳಲ್ಲಿ ಕ್ಷಮೆಯಾಚಿಸಿದೆ. ನ್ಯಾಯಾಲಯದ ಬಗ್ಗೆ ತನಗೆ ಹೆಚ್ಚಿನ ಗೌರವವಿದೆ ಮತ್ತು ತಪ್ಪುಗಳು ಪುನರಾವರ್ತನೆಯಾಗುವುದಿಲ್ಲ ಎಂದು ಹೇಳಿದೆ.

ಪತಂಜಲಿ ಸಂಸ್ಥಾಪಕರಾದ ಯೋಗ ಗುರು ರಾಮ್‌ದೇವ್ ಮತ್ತು ಅವರ ಸಹಾಯಕ ಬಾಲಕೃಷ್ಣ, ಮಧುಮೇಹ ಮತ್ತು ಅಧಿಕ ರಕ್ತದೊತ್ತಡದಂತಹ ಕಾಯಿಲೆಗಳನ್ನು ಕಂಪನಿಯ ಉತ್ಪನ್ನಗಳು ಗುಣಪಡಿಸುತ್ತವೆ ಎಂದು ಸಾರುವ ಜಾಹೀರಾತುಗಳನ್ನು ಪ್ರಕಟಿಸಿದ್ದರು. ಇದನ್ನು ಪ್ರಶ್ನಿಸಿ ವೈದ್ಯಕೀಯ ಸಂಘ ಕೋರ್ಟ್‌ಗೆ ಹೋಗಿತ್ತು. ನ್ಯಾಯಾಲಯವು ಈ ಹಿಂದೆ ರಾಮ್‌ದೇವ್ ಮತ್ತು ಬಾಲಕೃಷ್ಣ ಸಲ್ಲಿಸಿದ್ದ ಕ್ಷಮೆ ಅರ್ಜಿಯನ್ನು ತಿರಸ್ಕರಿಸಿತ್ತು. “ಅದು ಹೃದಯಪೂರ್ವಕವಾಗಿಲ್ಲ” ಮತ್ತು “ತುಟಿಯ ಮೇಲಿನ ಮಾತು” ಎಂದು ಪೀಠ ಹೇಳಿತ್ತು. ಏಪ್ರಿಲ್ 16ರಂದು ನಡೆದ ವಿಚಾರಣೆಯಲ್ಲಿ, ಇಬ್ಬರೂ ಇಂದು ನೇರವಾಗಿ ಹಾಜರಾಗಲು ಮತ್ತು ಕ್ಷಮೆಯಾಚಿಸಲು ಆದೇಶಿಸಿತ್ತು.

ರಾಷ್ಟ್ರೀಯ ಹಿಂದಿ ದೈನಿಕದಲ್ಲಿ ಸಣ್ಣದಾಗಿ ಪ್ರಕಟವಾದ ಜಾಹೀರಾತಿನಲ್ಲಿ, ಪತಂಜಲಿಯು ಸುಪ್ರೀಂ ಕೋರ್ಟ್‌ನ ಬಗ್ಗೆ ತಾವು ಅತ್ಯಂತ ಗೌರವವನ್ನು ಹೊಂದಿದ್ದೇವೆ ಎಂದು ಹೇಳಿದೆ. “ಜಾಹೀರಾತುಗಳನ್ನು ಪ್ರಕಟಿಸುವಲ್ಲಿ ಮತ್ತು ಪತ್ರಿಕಾಗೋಷ್ಠಿಗಳನ್ನು ನಡೆಸುವಲ್ಲಿ ಮಾಡಿದ ತಪ್ಪುಗಳಿಗಾಗಿ ನಾವು ನಮ್ಮ ಹೃತ್ಪೂರ್ವಕ ಕ್ಷಮೆಯಾಚಿಸುತ್ತೇವೆ. ಈ ತಪ್ಪನ್ನು ಪುನರಾವರ್ತಿಸದಿರಲು ನಾವು ಬದ್ಧರಾಗಿದ್ದೇವೆ” ಎಂದು ಜಾಹೀರಾತು ಹೇಳಿದೆ.

ಕಳೆದ ವಾರ ವಿಚಾರಣೆಯ ನಂತರ ಮಾಧ್ಯಮದವರ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ರಾಮ್‌ದೇವ್, “ನಾನು ಮಾಡಬೇಕಾಗಿದ್ದನ್ನು ಹೇಳಿದ್ದೇನೆ, ನನಗೆ ನ್ಯಾಯಾಂಗದ ಮೇಲೆ ಸಂಪೂರ್ಣ ನಂಬಿಕೆ ಇದೆ” ಎಂದು ಹೇಳಿದ್ದರು. ರಾಮ್‌ದೇವ್ ಮತ್ತು ಬಾಲಕೃಷ್ಣ ಅವರ ಹಿಂದಿನ ಕ್ಷಮೆಯಾಚನೆಯನ್ನು ತಿರಸ್ಕರಿಸಿದ ನ್ಯಾಯಾಲಯವು ಪತ್ರಗಳನ್ನು ಮೊದಲು ಮಾಧ್ಯಮಗಳಿಗೆ ಕಳುಹಿಸಲಾಗಿದೆ ಎಂದು ಗಮನಿಸಿತ್ತು. “ವಿಷಯವು ನ್ಯಾಯಾಲಯದ ಮೆಟ್ಟಿಲೇರುವವರೆಗೂ, ಅಫಿಡವಿಟ್‌ಗಳನ್ನು ನಮಗೆ ಕಳುಹಿಸಬೇಕಿಲ್ಲ ಎಂದು ಆರೋಪಿಗಳು ಕಂಡುಕೊಂಡರು. ಅವರು ಪ್ರಚಾರವನ್ನು ಸ್ಪಷ್ಟವಾಗಿ ನಂಬುತ್ತಾರೆ” ಎಂದು ನ್ಯಾಯಮೂರ್ತಿ ಹಿಮಾ ಕೊಹ್ಲಿ ಹೇಳಿದ್ದಾರೆ.

ಪೀಠದಲ್ಲಿದ್ದ ನ್ಯಾಯಮೂರ್ತಿ ಎ. ಅಮಾನುಲ್ಲಾ ಅವರು, “ಕ್ಷಮಾಪಣೆ ಸಲ್ಲಿಸುವುದು ಸಾಕಾಗುವುದಿಲ್ಲ. ನ್ಯಾಯಾಲಯದ ಆದೇಶವನ್ನು ಉಲ್ಲಂಘಿಸಿದ್ದಕ್ಕಾಗಿ ನೀವು ಪರಿಣಾಮಗಳನ್ನು ಅನುಭವಿಸಲೇಬೇಕು” ಎಂದು ಎಚ್ಚರಿಸಿದ್ದರು.

ಏನಿದು ಪ್ರಕರಣ?

ಪತಂಜಲಿ ಸಂಸ್ಥೆ ವಿರುದ್ಧ ಭಾರತೀಯ ವೈದ್ಯಕೀಯ ಸಂಘವು (IMA) ಅರ್ಜಿ ಸಲ್ಲಿಸಿದೆ. ಪತಂಜಲಿ ಸಂಸ್ಥೆಯು ಕೊರೊನಾ ನಿರೋಧಕ ಲಸಿಕೆ ಹಾಗೂ ಆಧುನಿಕ ಔಷಧ ಪದ್ಧತಿ ಬಗ್ಗೆ ಸುಳ್ಳು ಅಭಿಯಾನ ಆರಂಭಿಸಿದೆ. ಅಷ್ಟೇ ಅಲ್ಲ, ಅಲೋಪಥಿ ಸೇರಿ ಹಲವು ವಿಷಯಗಳಿಗೆ ಸಂಬಂಧಿಸಿದಂತೆ ಜನರ ದಾರಿ ತಪ್ಪಿಸುವ ರೀತಿ ಪತಂಜಲಿ ಸಂಸ್ಥೆಯು ಜಾಹೀರಾತುಗಳನ್ನು ನೀಡುತ್ತಿದೆ. ಇದು ಡ್ರಗ್ಸ್‌ ಆ್ಯಂಡ್‌ ಮ್ಯಾಜಿಕ್‌ ರೆಮೆಡೀಸ್‌ (ಆಕ್ಷೇಪಾರ್ಹ ಜಾಹೀರಾತುಗಳು) ಕಾಯ್ದೆಯ ಉಲ್ಲಂಘನೆಯಾಗಿದೆ ಎಂದು ಐಎಂಎ ಅರ್ಜಿ ಸಲ್ಲಿಸಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋರ್ಟ್‌ ವಿಚಾರಣೆ ನಡೆಸುವಾಗ ನ್ಯಾಯಮೂರ್ತಿಗಳಾದ ಹಿಮಾ ಕೊಹ್ಲಿ ಹಾಗೂ ಅಹ್ಸಾನುದ್ದೀನ್‌ ಅಮಾನುಲ್ಲಾ ಅವರು ಬಾಬಾ ರಾಮದೇವ್‌ ಹಾಗೂ ಆಚಾರ್ಯ ಬಾಲಕೃಷ್ಣ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು.

ಇದನ್ನೂ ಓದಿ: ಪತಂಜಲಿ ತಪ್ಪು ಮಾಡಿದ್ರೆ 1000 ಕೋಟಿ ದಂಡ ಹಾಕಿ; ಆದ್ರೆ ವೈದ್ಯರಿಗೆ ಯಾವ ಶಿಕ್ಷೆ? ಬಾಬಾ ರಾಮದೇವ ಕೆಂಡ

Continue Reading

Lok Sabha Election 2024

Lok Sabha Election 2024: ವಿಧಾನ ಪರಿಷತ್‌ ಸ್ಥಾನಕ್ಕೆ ಕೆ.ಪಿ. ನಂಜುಂಡಿ ರಾಜೀನಾಮೆ; ಕಾಂಗ್ರೆಸ್‌ ಸೇರ್ಪಡೆ?

Lok Sabha Election 2024: ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಬಣದಲ್ಲಿ ಕೆ.ಪಿ. ನಂಜುಂಡಿ ಗುರುತಿಸಿಕೊಂಡಿದ್ದರು. ಇವರು ಬಿಜೆಪಿ ರಾಜ್ಯ ಉಪಾಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದರು. ಪಕ್ಷದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಆದರೆ, ಇದೀಗ ದಿಢೀರ್‌ ಆಗಿ ರಾಜೀನಾಮೆ ನೀಡಿದ್ದಾರೆ. ಕೆಲವು ದಿನಗಳ ಹಿಂದಷ್ಟೇ ಡಿಸಿಎಂ ಡಿ.ಕೆ. ಶಿವಕುಮಾರ್‌ ಅವರು ಕೆ.ಪಿ. ನಂಜುಂಡಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದರು. ಈಗ ಭೇಟಿಯಾಗಿ 15 ದಿನದಲ್ಲೇ ನಂಜುಂಡಿ ರಾಜೀನಾಮೆ ನೀಡಿದ್ದಾರೆ.

VISTARANEWS.COM


on

Lok Sabha Election 2024 KP Nanjundi resigns from Legislative Council
Koo

ಹುಬ್ಬಳ್ಳಿ: ಲೋಕಸಭಾ ಚುನಾವಣೆ (Lok Sabha Election 2024) ಹೊತ್ತಿನಲ್ಲಿ ಬಿಜೆಪಿಗೆ ಮತ್ತೊಂದು ಆಘಾತ ಎದುರಾಗಿದೆ. ವಿಶ್ವಕರ್ಮ ಸಮುದಾಯದ ನಾಯಕ ಕೆ.ಪಿ‌. ನಂಜುಂಡಿ (KP Nanjundi) ಅವರು ತಮ್ಮ ವಿಧಾನ ಪರಿಷತ್ ಸ್ಥಾನಕ್ಕೆ (Legislative Council membership) ರಾಜೀನಾಮೆ ನೀಡಿದ್ದಾರೆ. ಇಲ್ಲಿನ ಸಭಾಪತಿ ಬಸವರಾಜ ಹೊರಟ್ಟಿ (Basavaraj Horatti) ಅವರ ನಿವಾಸಕ್ಕೆ ಆಗಮಿಸಿ ರಾಜೀನಾಮೆ‌ ಸಲ್ಲಿಸಿದ್ದಾರೆ. ಸ್ವ – ಇಚ್ಛೆಯಿಂದ ರಾಜಿನಾಮೆ ಸಲ್ಲಿಸುತ್ತಿರುವುದಾಗಿ ಕೆ.ಪಿ. ನಂಜುಂಡಿ ಹೇಳಿದ್ದಾರೆ.

ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಬಣದಲ್ಲಿ ಕೆ.ಪಿ. ನಂಜುಂಡಿ ಗುರುತಿಸಿಕೊಂಡಿದ್ದರು. ಇವರು ಬಿಜೆಪಿ ರಾಜ್ಯ ಉಪಾಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದರು. ಪಕ್ಷದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಆದರೆ, ಇದೀಗ ದಿಢೀರ್‌ ಆಗಿ ರಾಜೀನಾಮೆ ನೀಡಿದ್ದಾರೆ.

ಕಾಂಗ್ರೆಸ್‌ ಸೇರ್ಪಡೆ?

ಕೆ.ಪಿ. ನಂಜುಂಡಿ ಅವರ ನಿವಾಸಕ್ಕೆ ಈಚೆಗೆ ಕೆಪಿಸಿಸಿ ಅಧ್ಯಕ್ಷ, ಡಿಸಿಎಂ ಡಿ.ಕೆ. ಶಿವಕುಮಾರ್‌ ಭೇಟಿ ನೀಡಿ ಮಾತನಾಡಿದ್ದರು. ಬೆಳಗ್ಗಿನ ಉಪಾಹಾರ ಸೇವನೆ ಮಾಡಿದ್ದರು. ಹೀಗಾಗಿ ನಂಜುಂಡಿ ಕಾಂಗ್ರೆಸ್‌ ಸೇರ್ಪಡೆ ಬಗ್ಗೆ ಆಗಲೇ ವದಂತಿಗಳು ಹಬ್ಬಿದ್ದವು. ಈಗ ಅವರು ತಮ್ಮ ವಿಧಾನ ಪರಿಷತ್‌ ಅವಧಿ ಇರುವಾಗಲೇ ರಾಜೀನಾಮೆ ನೀಡಿರುವುದರಿಂದ ಕಾಂಗ್ರೆಸ್‌ ಸೇರ್ಪಡೆ ಬಹುತೇಕ ಖಚಿತ ಎಂದು ಹೇಳಲಾಗಿದೆ. ಆದರೆ, ಯಾವಾಗ ಸೇರಲಿದ್ದಾರೆ ಎಂಬ ಬಗ್ಗೆ ಇನ್ನೂ ಮಾಹಿತಿ ಸಿಕ್ಕಿಲ್ಲ.


Lok Sabha Election 2024 KP Nanjundi resigns from Legislative Council

ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ; ಡಿಕೆಶಿ ಜತೆ ಕಾಣಿಸಿಕೊಂಡಿದ್ದ ಸಹ ಶಿಕ್ಷಕ ಅಮಾನತು

ರಾಯಚೂರು: ಚುನಾವಣೆ ನೀತಿ ಸಂಹಿತೆ (Lok Sabha Election 2024) ಉಲ್ಲಂಘನೆ ಮಾಡಿದ ಹಿನ್ನೆಲೆಯಲ್ಲಿ ರಾಯಚೂರು ತಾಲೂಕಿನ ಉಡಮಗಲ್ ಖಾನಾಪುರ ಶಾಲೆ ಸಹ ಶಿಕ್ಷಕ ಕೆ.ರಾಮು ಅಮಾನತುಗೊಂಡಿದ್ದಾರೆ. ಚುನಾವಣೆ ನೀತಿ ಸಂಹಿತೆ ಪ್ರಕಾರ ಸರ್ಕಾರಿ ನೌಕರರು, ರಾಜಕೀಯ ವ್ಯಕ್ತಿಗಳೊಂದಿಗೆ ಗುರುತಿಸಿಕೊಳ್ಳಬಾರದು. ಆದರೆ, ಡಿಸಿಎಂ ಡಿ.ಕೆ. ಶಿವಕುಮಾರ್‌ ಜತೆ ಕಾಣಿಸಿಕೊಂಡು ನಿಯಮ ಉಲ್ಲಂಘಿಸಿದ್ದರಿಂದ ಕೆ.ರಾಮು ಅವರನ್ನು ಅಮಾನತು ಮಾಡಿ ಆದೇಶಿಸಲಾಗಿತ್ತು.

ನಂಜುಂಡಿ ಮನೆಯಲ್ಲಿ ಕಾಣಿಸಿಕೊಂಡಿದ್ದ ಶಿಕ್ಷಕ

ಏಪ್ರಿಲ್ 7ರಂದು ಬೆಂಗಳೂರಿನಲ್ಲಿ ಬಿಜೆಪಿ ಎಂಎಲ್‌ಸಿ ಕೆ.ಪಿ. ನಂಜುಂಡಿ ಅವರ ಮನೆಗೆ ಡಿಸಿಎಂ ಡಿ.ಕೆ. ಶಿವಕುಮಾರ್‌ ಭೇಟಿ ನೀಡಿದ್ದರು. ಈ ವೇಳೆ ಅಲ್ಲಿ ಪ್ರತ್ಯಕ್ಷವಾಗಿದ್ದ ಸಹ ಶಿಕ್ಷಕ ಕೆ.ರಾಮು ಅವರು, ಡಿ.ಕೆ. ಶಿವಕುಮಾರ್‌, ಕೆ.ಪಿ. ನಂಜುಂಡಿ ಸೇರಿ ವಿವಿಧ ರಾಜಕೀಯ ನಾಯಕರಿಗೆ ಉಪಾಹಾರ ಬಡಿಸಿದ್ದರು. ಶಿಕ್ಷಕ ಉಪಾಹಾರ ಬಡಿಸುವ ವಿಡಿಯೊ ಮತ್ತು ಫೋಟೊಗಳು ವೈರಲ್ ಆಗಿದ್ದವು. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಬಿಇಒ ಕಾರಣ ಕೇಳಿ ನೋಟಿಸ್ ನೀಡಿದ್ದರು. ಪ್ರಕರಣವನ್ನು ಕೂಲಂಕಷವಾಗಿ ತನಿಖೆ ನಡೆಸಿದ ಜಿಲ್ಲಾ ಚುನಾವಣಾ ಅಧಿಕಾರಿ ಎಲ್. ಚಂದ್ರಶೇಖರ್ ನಾಯಕ್ ಅವರು, ತನಿಖೆ ನಂತರ ಸಹ ಶಿಕ್ಷಕ ಕೆ ರಾಮು ಅವರನ್ನು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.

ಇದನ್ನೂ ಓದಿ: Drought In Karnataka : ಭೀಕರ ಬರ; ಆಹಾರ ಸಿಗದೆ ಪ್ಲಾಸ್ಟಿಕ್, ನಟ್ಟು ಬೋಲ್ಟು ತಿನ್ನುತ್ತಿರುವ ಹಸುಗಳು!

ವರದಿ ಪ್ರಸಾರ ಮಾಡಿದ್ದ ವಿಸ್ತಾರ

ಸಹ ಶಿಕ್ಷಕ ರಾಮು ಅವರು ನೀತಿ ಸಂಹಿತೆ ಉಲ್ಲಂಘನೆ ಮಾಡಿದ ಬಗ್ಗೆ ವಿಸ್ತಾರ ನ್ಯೂಸ್‌ ವಿಶೇಷ ವರದಿ ಪ್ರಸಾರ ಮಾಡಿತ್ತು. ಇದಕ್ಕೆ ಜಿಲ್ಲಾ ಚುನಾವಣಾ ಅಧಿಕಾರಿ ಸ್ಪಂದಿಸಿ ಕ್ರಮ ಕೈಗೊಂಡಿದ್ದಾರೆ.

ಚುನಾವಣಾ ಮಾದರಿ ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ ಎಂದು ಸಹ ಶಿಕ್ಷಕ ರಾಮು ಅವರ ವಿರುದ್ಧ ಬಿಜೆಪಿಯ ವಸಂತಕುಮಾರ್ ಹಾಗೂ ಇತರರು ಚುನಾವಣಾಧಿಕಾರಿಗೆ ದೂರು ನೀಡಿದ್ದರು. ಎಂಎಲ್‌ಸಿ ಕೆ.ಪಿ. ನಂಜುಂಡಿ ಅವರ ನಿವಾಸಕ್ಕೆ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಭೇಟಿ ನೀಡಿದಾಗ ಅವರಿಗೆ ಶಿಕ್ಷಕ ರಾಮು ಅವರು ಊಟ ಬಡಿಸುತ್ತಿರುವ ಬಗ್ಗೆ ವಿಸ್ತಾರ ವಾಹಿನಿಯಲ್ಲಿ ವರದಿ ಪ್ರಸಾರವಾಗಿರುವುದನ್ನು ಉಲ್ಲೇಖಿಸಿ, ದೂರು ಸಲ್ಲಿಸಿದ್ದರು. ಹೀಗಾಗಿ ಅನುಮತಿ ಪಡೆಯದೇ ಚುನಾವಣಾ ಮಾದರಿ ನೀತಿ ಸಂಹಿತೆ ಜಾರಿಯಾದ ಸಮಯದಲ್ಲಿ ಸಚಿವರ ಹಾಗೂ ರಾಜಕೀಯ ವ್ಯಕ್ತಿಗಳ ಜತೆಯಲ್ಲಿ ಇರುವುದು ಕಂಡುಬಂದ ಹಿನ್ನೆಲೆಯಲ್ಲಿ ಕೆ.ರಾಮು ಅವರನ್ನು ಅಮಾನತು ಮಾಡಿ ಜಿಲ್ಲಾ ಚುನಾವಣಾ ಅಧಿಕಾರಿ ಆದೇಶ ಹೊರಡಿಸಿದ್ದಾರೆ.

Continue Reading
Advertisement
Narendra Modi and Siddaramaiah
ರಾಜಕೀಯ4 mins ago

Narendra Modi: ಕಾಂಗ್ರೆಸ್‌ ರಾಜ್ಯದಲ್ಲಿ ಹನುಮಾನ್‌ ಚಾಲೀಸಾ ಹೇಳುವುದೂ ಮಹಾಪರಾಧ; ರಾಜಸ್ಥಾನದಲ್ಲಿ ಮೋದಿಯಿಂದ ಸಿದ್ದರಾಮಯ್ಯ ಸರ್ಕಾರಕ್ಕೆ ತರಾಟೆ

Gukesh D
ಕ್ರೀಡೆ5 mins ago

Gukesh D: ಡಿ.ಗುಕೇಶ್‌ ಸಾಧನೆಗಾಗಿ ವೈದ್ಯ ವೃತ್ತಿಯನ್ನೇ ತೊರೆದಿದ್ದ ತಂದೆ

baba ramdev supreme court
ಪ್ರಮುಖ ಸುದ್ದಿ5 mins ago

Patanjali Case: ಜಾಹೀರಾತು ಗಾತ್ರದಲ್ಲೇ ಕ್ಷಮಾಪಣೆ ಕೇಳಿ: ಬಾಬಾ ರಾಮ್‌ದೇವ್‌ ಬೆವರಿಳಿಸಿದ ಸುಪ್ರೀಂ ಕೋರ್ಟ್‌

Murder Case in raichur
ರಾಯಚೂರು10 mins ago

Murder Case : ಪತ್ನಿಗೆ ಮೆಸೇಜ್ ಮಾಡಿದ್ದಕ್ಕೆ ಮುಸ್ಲಿಂ ಯುವಕನ ಕೊಂದ ಅರ್ಚಕ

Lok Sabha Election-2024
Latest15 mins ago

Voter Slip by Mobile: ಮತಪಟ್ಟಿಯಲ್ಲಿ ಹೆಸರು ಪರಿಶೀಲನೆ, ವೋಟರ್ ಸ್ಲಿಪ್ ಡೌನ್‌ಲೋಡ್‌ ಮೊಬೈಲ್‌ನಲ್ಲೇ ಮಾಡಿ!

Lok Sabha Election 2024 KP Nanjundi resigns from Legislative Council
Lok Sabha Election 202435 mins ago

Lok Sabha Election 2024: ವಿಧಾನ ಪರಿಷತ್‌ ಸ್ಥಾನಕ್ಕೆ ಕೆ.ಪಿ. ನಂಜುಂಡಿ ರಾಜೀನಾಮೆ; ಕಾಂಗ್ರೆಸ್‌ ಸೇರ್ಪಡೆ?

gold rate today kajal
ಚಿನ್ನದ ದರ41 mins ago

Gold Rate Today: ಚಿನ್ನ ಕೊಳ್ಳೋಕೆ ಇಂದು ಸುಸಮಯ! 24 ಕ್ಯಾರಟ್‌ ಬಂಗಾರಕ್ಕೆ ₹1530 ಇಳಿಕೆ!

Bengaluru Karaga 2024
ಬೆಂಗಳೂರು48 mins ago

Bengaluru Karaga 2024: ಬೆಂಗಳೂರು ಕರಗ ಶಕ್ತ್ಸೋತ್ಸವಕ್ಕೆ ಕೌಂಟ್‌ ಡೌನ್‌; 8 ಲಕ್ಷ ಜನ ಭಾಗಿ!

balakot airstrike RKS bhadauria
ಪ್ರಮುಖ ಸುದ್ದಿ57 mins ago

Balakot Airstrike: ನಮ್ಮ ಯೋಧರ ಕೂದಲೂ ಕೊಂಕದಂತೆ ಪಾಕ್‌ ವಾಯುಪಡೆ ಭೇದಿಸಿ ದಾಳಿ ನಡೆಸಲಾಗಿತ್ತು: ಮಾಜಿ ಐಎಎಫ್‌ ಮುಖ್ಯಸ್ಥ

Viral Video
ಕ್ರೀಡೆ60 mins ago

Viral Video: ಐಪಿಎಲ್​​ ಪಂದ್ಯದ ವೇಳೆ ಪಾಕಿಸ್ತಾನ ಟಿ20 ವೀಕ್ಷಿಸಿದ ಅಭಿಮಾನಿ

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ6 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ6 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ4 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Dina Bhavishya
ಭವಿಷ್ಯ8 hours ago

Dina Bhavishya : ಈ ರಾಶಿಯವರು ತರಾತುರಿಯಲ್ಲಿ ಯಾವುದೇ ಹೂಡಿಕೆ ಮಾಡ್ಬೇಡಿ

Bengaluru karaga 2024
ಬೆಂಗಳೂರು19 hours ago

Bengaluru Karaga 2024 : ಅದ್ಧೂರಿಯಾಗಿ ನೆರವೇರಿದ ಹಸಿ ಕರಗ; ಐತಿಹಾಸಿಕ ಕರಗ ಶಕ್ತ್ಯೋತ್ಸವಕ್ಕೆ ಕ್ಷಣಗಣನೆ

Murder Case in yadagiri rakesh and fayas
ಯಾದಗಿರಿ21 hours ago

Murder Case : ಹಿಂದು ಯುವಕ ರೊಟ್ಟಿ ಕೇಳಿದ್ದಕ್ಕೆ ಗುಪ್ತಾಂಗಕ್ಕೆ ಒದ್ದು ಕೊಂದರು ಅನ್ಯಕೋಮಿನ ಯುವಕರು!

bomb Threat case in Bengaluru
ಬೆಂಗಳೂರು23 hours ago

Bomb Threat: ಬಾಂಬ್‌ ಇಟ್ಟಿರುವುದಾಗಿ ಬೆಂಗಳೂರಿನ ಕದಂಬ ಹೋಟೆಲ್‌ಗೆ ಬೆದರಿಕೆ ಪತ್ರ; ಪೊಲೀಸರು ದೌಡು

CET Exam 2024
ಬೆಂಗಳೂರು1 day ago

CET 2024 Exam : ಔಟ್‌ ಆಫ್‌ ಸಿಲಬಸ್‌ ಪ್ರಶ್ನೆಗೆ ಆಕ್ರೋಶ; ಕೈ ಕೈ ಮಿಲಾಯಿಸಿದ ಪೊಲೀಸರು- ಎವಿಬಿಪಿ ಕಾರ್ಯಕರ್ತರು

Dina Bhavishya
ಭವಿಷ್ಯ1 day ago

Dina Bhavishya : ಸಹೋದ್ಯೋಗಿಗಳು ನಿಮ್ಮ ವಿರುದ್ಧ ಪಿತೂರಿ ಮಾಡುವ ಸಾಧ್ಯತೆ; ಈ ರಾಶಿಯವರು ಎಚ್ಚರ

Dina Bhavishya
ಭವಿಷ್ಯ2 days ago

Dina Bhavishya : ಅಮೂಲ್ಯ ವಸ್ತುಗಳು ಕೈ ತಪ್ಪಬಹುದು; ಈ ರಾಶಿಯವರು ಇಂದು ಎಚ್ಚರವಹಿಸಿ

Modi in Karnataka Congress snatches Rs 4000 under Kisan Samman says PM Narendra Modi
ಪ್ರಮುಖ ಸುದ್ದಿ3 days ago

Modi in Karnataka: ಕಿಸಾನ್‌ ಸಮ್ಮಾನ್‌ ಅಡಿ 4 ಸಾವಿರ ರೂಪಾಯಿ ಕಿತ್ತುಕೊಂಡ ರೈತ ವಿರೋಧಿ ಸರ್ಕಾರ ಕಾಂಗ್ರೆಸ್‌: ಮೋದಿ ಕಿಡಿ

Modi in Karnataka HD Deve Gowda attack on Congess
Lok Sabha Election 20243 days ago

Modi in Karnataka: ಲೂಟಿ ಮಾಡಿ ಖಾಲಿ ಚೆಂಬು ಕೊಟ್ಟಿದ್ದು ಕಾಂಗ್ರೆಸ್‌; ಆ ಚೆಂಬನ್ನು ಅಕ್ಷಯ ಪಾತ್ರ ಮಾಡಿದ್ದು ಮೋದಿ: ಎಚ್‌.ಡಿ. ದೇವೇಗೌಡ ಗುಡುಗು

Modi in Karnataka Here live video of Modi rally in Chikkaballapur
Lok Sabha Election 20243 days ago

Modi in Karnataka: ಚಿಕ್ಕಬಳ್ಳಾಪುರದಲ್ಲಿ ಮೋದಿ ಮೇನಿಯಾ; ಇಲ್ಲಿದೆ LIVE ವಿಡಿಯೊ

ಟ್ರೆಂಡಿಂಗ್‌