ಮುಂಬಯಿ: ತೀವ್ರ ಆರ್ಥಿಕ ಬಿಕ್ಕಟ್ಟಿನಲ್ಲಿರುವ ಜೆಟ್ ಏರ್‌ವೇಸ್‌ನಲ್ಲಿ ಕೆಲ ಉದ್ಯೋಗಿಗಳ ವೇತನದಲ್ಲಿ 50% ತನಕ ಕಡಿತ ಮಾಡಲಾಗಿದೆ. (Jet Airways salaries cut ) ಕೆಲವರಿಗೆ ಡಿಸೆಂಬರ್ 1ರಿಂದ ವೇತನ ರಹಿತ ರಜೆ ನೀಡಲಾಗಿದೆ.
ವೆಚ್ಚ ಕಡಿತದ ಭಾಗವಾಗಿ ಈ ಕ್ರಮವನ್ನು ಕೈಗೊಳ್ಳಲಾಗಿದೆ ಎಂದು ಜೆಟ್ ಏರ್‌ವೇಸ್ ತಿಳಿಸಿದೆ. ಆದರೆ ಇದರಿಂದಾಗಿ ಸಿಬ್ಬಂದಿ ವರ್ಗ ಹಾಗೂ ಆಡಳಿತ ಮಂಡಳಿ ನಡುವೆ ಬಿಕ್ಕಟ್ಟು ಸೃಷ್ಟಿಯಾಗಿದೆ ಎಂದು ವರದಿಯಾಗಿದೆ.
ಈ ನಿರ್ಧಾರಗಳು ಜೆಟ್ ಏರ್‌ವೇಸ್‌ನಲ್ಲಿನ ಸುಮಾರು 250 ಉದ್ಯೋಗಿಗಳ ಮೇಲೆ ಪ್ರಭಾವ ಬೀರಲಿದೆ.