Site icon Vistara News

Johnson and Johnson: ಹೊಸ ಲೋಗೋಗೆ ಬದಲಾದ ಜಾನ್ಸನ್ ಆ್ಯಂಡ್ ಜಾನ್ಸನ್

Johnson and Johnson

ನವದೆಹಲಿ: ಅಮೆರಿಕದ ದೈತ್ಯ ಫಾರ್ಮಸಿಟಿಕಲ್ ಜಾನ್ಸನ್ ಆ್ಯಂಡ್ ಜಾನ್ಸನ್(Johnson and Johnson), ತನ್ನ ಲೋಗೋ ಬದಲಾವಣೆ ಮಾಡಿರುವುದಾಗಿ ಸೆಪ್ಟೆಂಬರ್ 14ರಂದು ಮಾಹಿತಿ ನೀಡಿದೆ. ಸುಮಾರು 135 ವರ್ಷಗಳ ಬಿಸಿನೆಸ್‌ನಲ್ಲಿರುವ ಜಾನ್ಸನ್ ಆ್ಯಂಡ್ ಜಾನ್ಸನ್ ಬ್ರ್ಯಾಂಡ್‌ನೇಮ್‌ನಡಿ ತನ್ನ ಮೆಡಿಟೆಕ್ (Meidtech) ಮತ್ತು ಫಾರ್ಮಸಿಟಿಕಲ್ (pharmaceutical) ಬಿಸಿನೆಸ್ ಒಂದುಗೂಡಿಸಲಿದೆ. ಹೊಸ ಲೋಗೋ (New Logo) ಆಧುನಿಕತೆಯನ್ನು ಪ್ರತಿನಿಧಿಸುತ್ತದೆ ಮತ್ತು ಇದು ತನ್ನ ವ್ಯವಹಾರದ ಮುಂದಿನ ಅಧ್ಯಾಯದ ಉದಯವನ್ನು ಗುರುತಿಸುತ್ತದೆ. ಬ್ರ್ಯಾಂಡ್‌ನ ಸಾಂಪ್ರದಾಯಿಕ ಹಳೆಯ ಲೋಗೋ 1887ರಿಂದ ಬಳಕೆಯಲ್ಲಿದೆ. ವಾಸ್ತವದಲ್ಲಿ ಹಳೆ ಲೋಗೋ, ಕಂಪನಿಯ ಸಹ ಸಂಸ್ಥಾಪಕ ಜೇಮ್ಸ್ ವುಡ್ ಜಾನ್ಸನ್ ಸಹಿಯನ್ನು ಆಧರಿಸಿದೆ.

ಹೊಸ ಲೋಗೋದ ಪ್ರತಿ ಅಕ್ಷರವನ್ನು ಒಂದು ಪೆನ್ ಸ್ಟ್ರೋಕ್‌ನಲ್ಲಿ ಚಿತ್ರಿಸದಂತೆ ತೋರುತ್ತದೆ. ಅನಿರೀಕ್ಷಿತೆಯನ್ನು ಅರ್ಥವನ್ನು ನೀಡುವ ವ್ಯತಿರಿಕ್ತ ವಿರೋಧಾಭಾಸಭಾವನೆಯನ್ನು ವ್ಯಕ್ತಪಡಿಸುತ್ತದೆ ಎಂದು ಕಂಪನಿಯು ತನ್ನ ಹೇಳಿಕೆಯಲ್ಲಿ ಹೇಳಿದೆ.
ಕಂಪನಿಯು ಲೋಗೋದ ದೀರ್ಘ ಮತ್ತು ಕಿರು-ರೂಪದ ಆವೃತ್ತಿಯಾಗಿರುವ ಎರಡನ್ನೂ ಬಳಸಲು ಮುಂದಾಗಿದೆ. ಸಮಕಾಲೀನ ರೀತಿಯಲ್ಲಿ, ವಿಶೇಷವಾಗಿ ಡಿಜಿಟಲ್ ಇಂಟರ್ಫೇಸ್‌ಗಳಲ್ಲಿ ತೋರಿಸಲು ಕಿರು-ರೂಪದ ‘J&J’ಆಕರ್ಷಕವಾಗಿದೆ. ಈ ಹೊಸ ಲೋಗೋದಲ್ಲಿ ಹಳೆಯೋ ಲೋಗೋದ ಕೆಂಪು ಬಣ್ಣದ ಬಳಕೆಯನ್ನು ಮುಂದುವರಿಸಲಾಗಿದೆ. ಹೊಸ ಲೋಗೋ, ಬಣ್ಣ ಮತ್ತು ಫಾಂಟ್‌ಗಳನ್ನು ಕಂಪನಿಯ ಎಲ್ಲ ವಸ್ತುಗಳು, ಪ್ರಾಡಕ್ಟ್ ಪ್ಯಾಕೇಜಿಂಗ್ ಮತ್ತು ಬ್ರ್ಯಾಂಡಿಂಗ್‌ ಮಟಿರೀಯಲ್‌ಗಳಲ್ಲಿ ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಬಳಸಲಾಗುವುದು ಎಂದು ಕಂಪನಿ ತಿಳಿಸಿದೆ.

ಈ ಸುದ್ದಿಯನ್ನೂ ಓದಿ: Johnson and Johnson | ಭಾರತದಲ್ಲಿ ಜಾನ್ಸನ್‌ ಆ್ಯಂಡ್ ಜಾನ್ಸನ್‌ ಅತಿ ದೊಡ್ಡ ಘಟಕದ ಮಾರಾಟ

ಜಾನ್ಸನ್ ಆ್ಯಂಡ್ ಜಾನ್ಸನ್‍ ಬ್ರ್ಯಾಂಡ್ ಐಡೆಟಿಂಟಿಯು ಆರೋಗ್ಯ ರಕ್ಷಣೆಯಲ್ಲಿ ನಾವೀನ್ಯತೆಗೆ ನಮ್ಮ ದಿಟ್ಟ ವಿಧಾನವನ್ನು ತಿಳಿಸುತ್ತದೆ ಮತ್ತು ಪ್ರಪಂಚದಾದ್ಯಂತದ ನಮ್ಮ ರೋಗಿಗಳಿಗೆ ನಾವು ಹೊಂದಿರುವ ಕಾಳಜಿಯನ್ನು ಪ್ರತಿಫಲಿಸುತ್ತದೆ ಎಂದು ಜಾನ್ಸನ್ ಮತ್ತು ಜಾನ್ಸನ್‌ನ ಜಾಗತಿಕ ಕಾರ್ಪೊರೇಟ್ ವ್ಯವಹಾರಗಳ ಕಾರ್ಯನಿರ್ವಾಹಕ ಉಪಾಧ್ಯಕ್ಷ ವನೆಸ್ಸಾ ಬ್ರಾಡ್‌ಹರ್ಸ್ಟ್ ಹೇಳಿದ್ದಾರೆ.

ಭಾರತದಲ್ಲಿ ಜಾನ್ಸನ್‌ ಆ್ಯಂಡ್ ಜಾನ್ಸನ್‌ ಅತಿ ದೊಡ್ಡ ಘಟಕದ ಮಾರಾಟ

ಬೇಬಿ ಪೌಡರ್‌ ಉತ್ಪಾದಕ ಜಾನ್ಸನ್‌ & ಜಾನ್ಸನ್‌ ತನ್ನ ಉತ್ಪನ್ನಗಳಿಗೆ ಬೇಡಿಕೆ ಕುಸಿದಿರುವುದರಿಂದ ತೆಲಂಗಾಣದಲ್ಲಿರುವ ತನ್ನ ಅತಿ ದೊಡ್ಡ ಉತ್ಪಾದನಾ ಘಟಕವನ್ನು, ಔಷಧ ಉತ್ಪಾದಕ ಕಂಪನಿ ಹೆಟೆರೊಗೆ ಮಾರಾಟ ಮಾಡಿದೆ. ಹೆಟೆರೊ ಈ ಘಟಕಕ್ಕೆ ಹೆಚ್ಚುವರಿ 600 ಕೋಟಿ ರೂ. ಬಂಡವಾಳ ಹೂಡಿಕೆ ಮಾಡಲಿದೆ. ಘಟಕವನ್ನು 130 ಕೋಟಿ ರೂ.ಗೆ ಮಾರಾಟ ಮಾಡಲಾಗಿದೆ. ಇದರಿಂದ 2,000 ಮಂದಿಗೆ ಉದ್ಯೋಗ ಸಿಗಲಿದೆ. ಜಾನ್ಸನ್‌ ಘಟಕ 55.27 ಎಕರೆ ಸ್ಥಳದಲ್ಲಿ ಅಸ್ತಿತ್ವದಲ್ಲಿದೆ. 2016ರಲ್ಲಿ ಕನ್‌ಸ್ಯೂಮರ್‌ ಹೆಲ್ತ್‌ ಪ್ರಾಡಕ್ಟ್‌ ಗಳ ಉತ್ಪಾದನೆ ಆರಂಭಿಸಿತ್ತು. ಬೇಬಿಕೇರ್‌, ಸೌಂದರ್ಯವರ್ಧಕ, ತ್ವಚೆಯ ಆರೋಗ್ಯ ವರ್ಧಕ ಉತ್ಪನ್ನಗಳನ್ನು ಇಲ್ಲಿ ತಯಾರಿಸುತ್ತಿತ್ತು.

Exit mobile version