Site icon Vistara News

ITR filing: ಐಟಿಆರ್ ಸಲ್ಲಿಸಲು ನಾಳೆ ಕೊನೆ ದಿನ! ಡೆಡ್‌ಲೈನ್ ಮುಗಿದ್ಮೇಲೂ ಫೈಲ್ ಮಾಡ್ಬಹುದಾ?

ITR FIle

ನವದೆಹಲಿ: 2022-23ರ ಹಣಕಾಸು ಸಾಲಿನ ಆದಾಯ ತೆರಿಗೆ ರಿಟರ್ನ್(ITR – Income Tax Return) ಸಲ್ಲಿಸಲು ಜುಲೈ 31 ಕೊನೆಯ ದಿನವಾಗಿದೆ. ವೇತನದಾರರು, ಐಟಿಆರ್ ಸಲ್ಲಿಸಲು ನಿಗದಿಪಡಿಸಲಾದ ಗಡುವು ಮುಗಿದ ಮೇಲೂ ಐಟಿಆರ್ ಫೈಲ್ ಮಾಡಬಹುದಾಗಿದೆ. ಇದನ್ನು ತಡವಾದ ಐಟಿಆರ್ ಅಥವಾ ವಿಳಂಬ ಐಟಿಆರ್ ಸಲ್ಲಿಕೆ ಎಂದು ಕರೆಯಲಾಗುತ್ತದೆ. 2023ರ ಡಿಸೆಂಬರ್ 31ರವರೆಗೂ ವಿಳಂಬ ಐಟಿಆರ್ ಫೈಲ್ (ITR File) ಮಾಡಬಹುದಾಗಿದೆ. ಆದರೆ, ಇಲ್ಲೊಂದು ಟ್ವಿಸ್ಟ್ ಇದೆ, ಹೀಗೆ ತಡವಾಗಿ ಐಟಿಆರ್ ಫೈಲ್ ಮಾಡಿದರೆ ದಂಡವನ್ನು ಪಾವತಿಸಬೇಕಾಗುತ್ತದೆ(ITR filing).

1961ರ ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 234 ಎಫ್ ಪ್ರಕಾರ, ನಿಗದಿತ ಗಡುವು ಮೀರಿ ತಡವಾಗಿ ಆದಾಯ ತೆರಿಗೆ ರಿಟರ್ನ್ ಸಲ್ಲಿಸುವವರಿಗೆ 5000 ರೂ.ವರೆಗೂ ದಂಡ ವಿಧಿಸಲಾಗುತ್ತದೆ. ಒಂದು ಹಣಕಾಸು ವರ್ಷದಲ್ಲಿ ತೆರಿಗೆಗೆ ಒಳಪಡುವ ಆದಾಯವು 5 ಲಕ್ಷ ರೂಪಾಯಿಗಳನ್ನು ಮೀರದ ಸಣ್ಣ ತೆರಿಗೆದಾರರು 1,000 ರೂಪಾಯಿಗಳ ದಂಡವನ್ನು ಪಾವತಿಸಬೇಕಾಗುತ್ತದೆ.

ಜುಲೈ 31 ಫೈಲಿಂಗ್ ಗಡುವನ್ನು ಮೀರುವ ವ್ಯಕ್ತಿಗಳು ಕೇವಲ ದಂಡ ಮಾತ್ರವಲ್ಲದೇ ಬಡ್ಡಿಯನ್ನೂ ಕಟ್ಟಬೇಕಾಗುತ್ತದೆ. ಅಂತಹ ವ್ಯಕ್ತಿಯು ತೆರಿಗೆಯನ್ನು ಪಾವತಿಸಬೇಕಾದರೆ ಸೆಕ್ಷನ್ 234A, B ಅಥವಾ C ಅಡಿಯಲ್ಲಿ ದಂಡದ ಬಡ್ಡಿಯನ್ನು ವಿಧಿಸಲಾಗುತ್ತದೆ. ತೆರಿಗೆಯ ಮೇಲೆ ತಿಂಗಳಿಗೆ ಶೇ.1 ಬಡ್ಡಿ ಅಥವಾ ಮತ್ತು ಮುಂಗಡ ತೆರಿಗೆ ಪಾವತಿಯಲ್ಲಿ ಡೀಫಾಲ್ಟ್‌ಗೆ ಹೆಚ್ಚುವರಿ ಶೇ.1 ಬಡ್ಡಿಯನ್ನು ಐಟಿಆರ್ ಸಲ್ಲಿಸುವ ದಿನಾಂಕದವರೆಗೆ ವಿಧಿಸಲಾಗುತ್ತದೆ.

ಒಂದು ವೇಳೆ, ಆದಾಯ ತೆರಿಗೆ ಮರುಪಾವತಿ ಬಾಕಿ ಇದ್ದರೆ, ಐಟಿಆರ್ ಸಲ್ಲಿಸಿ ಪರಿಶೀಲಿಸಿದರೆ ಮಾತ್ರ ಅದನ್ನು ಪಾವತಿಸಬೇಕಾಗುತ್ತದೆ. ಆದಾಗ್ಯೂ, ತಡವಾಗಿ ಐಟಿಆರ್ ಸಲ್ಲಿಸಿದರೆ ಆದಾಯ ತೆರಿಗೆ ರಿಟರ್ನ್‌ಗೆ ಯಾವುದೇ ಬಡ್ಡಿಯನ್ನು ಪಾವತಿಸಲಾಗುವುದಿಲ್ಲ.

ಈ ಸುದ್ದಿಯನ್ನೂ ಓದಿ: ITR filing : ಯಾರಿಗೆ ಐಟಿಆರ್‌ ಫೈಲಿಂಗ್‌ ಕಡ್ಡಾಯ?

ಸೂಕ್ತ ಸಮಯಕ್ಕೆ ಯಾರು ಐಟಿಆರ್ ಫೈಲ್ ಮಾಡುವುದಿಲ್ಲವೋ ಕೆಲವು ಲಾಭಗಳನ್ನು ಕಳೆದುಕೊಳ್ಳುತ್ತಾರೆ. ಮ್ಯೂಚವಲ್ ಫಂಡ್ಸ್ ಅಥವಾ ಷೇರ್ ಮಾರಾಟ ವೇಳೆ ಅವರಿಗೆ ಯಾವುದೇ ಒಂದಿಷ್ಟು ಲಾಭ ದೊರೆಯುವುದಿಲ್ಲ. ಆದಾಯ ತೆರಿಗೆ ಕಾನೂನುಗಳು ವ್ಯಕ್ತಿಯೊಬ್ಬನಿಗೆ ವ್ಯವಹಾರ ಮತ್ತು ಇತರ ಮೂಲಗಳು ಸೇರಿದಂತೆ ಬಂಡವಾಳ ಲಾಭಗಳು, ಮನೆ ಆಸ್ತಿ, ವ್ಯಾಪಾರ ಮತ್ತು ವೃತ್ತಿಯಿಂದ ನಷ್ಟವನ್ನು ಮುಂದಕ್ಕೆ ಸಾಗಿಸಲು ಅನುವು ಮಾಡಿಕೊಡುತ್ತದೆ ಎಂಬುದನ್ನು ಮರೆಯಬಾರದು.

ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version